< 歴代誌Ⅱ 2 >

1 さてソロモンは主の名のために一つの宮を建て、また自分のために一つの王宮を建てようと思った。
ಸೊಲೊಮೋನನು ಯೆಹೋವನಿಗೋಸ್ಕರ ಒಂದು ಆಲಯವನ್ನೂ ಮತ್ತು ತನಗೋಸ್ಕರ ಒಂದು ಅರಮನೆಯನ್ನೂ ಕಟ್ಟಿಸಲು ತೀರ್ಮಾನಿಸಿದನು.
2 そしてソロモンは荷を負う者七万人、山で石を切り出す者八万人、これらを監督する者三千六百人を数え出した。
ಅದಕ್ಕಾಗಿ ಹೊರೆ ಹೊರುವ ಎಪ್ಪತ್ತು ಸಾವಿರ ಜನರನ್ನು, ಎಂಭತ್ತು ಸಾವಿರ ಜನರು ಕಲ್ಲುಗಣಿಗಳಲ್ಲಿ ಕೆಲಸ ಮಾಡುವವರನ್ನು, ಇವರ ಮೇಲ್ವೀಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿ ಮೇಲ್ವೀಚಾರಕರನ್ನು ಸೊಲೊಮೋನನು ನೇಮಿಸಿದನು.
3 ソロモンはまずツロのヒラムに人をつかわして言わせた、「あなたはわたしの父ダビデに、その住むべき家を建てるために香柏を送られました。どうぞ彼にされたように、わたしにもして下さい。
ಇದಲ್ಲದೆ, ಸೊಲೊಮೋನನು ದೂತರ ಮುಖಾಂತರವಾಗಿ ತೂರಿನ ಅರಸನಾದ ಹೀರಾಮನಿಗೆ, “ನನ್ನ ತಂದೆಯಾದ ದಾವೀದನಿಗೆ ವಾಸಮಾಡುವುದಕ್ಕಾಗಿ ಅರಮನೆಯನ್ನು ಕಟ್ಟಿಸಲು ದೇವದಾರು ಮರಗಳನ್ನು ಕಳುಹಿಸಿ, ಅವನಿಗೋಸ್ಕರ ಹೇಗೆ ಸಹಾಯ ಮಾಡಿದೆಯೋ ಹಾಗೆಯೇ ನನಗೂ ಮಾಡು.
4 見よ、わたしはわが神、主の名のために一つの家を建て、これを聖別して彼にささげ、彼の前にこうばしい香をたき、常供のパンを供え、また燔祭を安息日、新月、およびわれらの神、主の定めの祭に朝夕ささげ、これをイスラエルのながく守るべき定めにしようとしています。
ಈಗ ನಾನು ನನ್ನ ದೇವರಾದ ಯೆಹೋವನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಿ, ಇಸ್ರಾಯೇಲರಿಗಿರುವ ಶಾಶ್ವತ ನಿಯಮದ ಪ್ರಕಾರ, ಆತನ ಸನ್ನಿಧಿಯಲ್ಲಿ ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೂ, ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡುವುದಕ್ಕೂ, ಉದಯಕಾಲದಲ್ಲಿಯೂ, ಸಾಯಂಕಾಲದಲ್ಲಿಯೂ, ಸಬ್ಬತ್ ದಿನಗಳಲ್ಲಿಯೂ, ಅಮಾವಾಸ್ಯೆಯ ದಿನಗಳಲ್ಲಿಯೂ, ನಮ್ಮ ದೇವರಾದ ಯೆಹೋವನ ಹಬ್ಬಗಳಲ್ಲಿಯೂ ಇವುಗಳಲ್ಲಿ ಸರ್ವಾಂಗಹೋಮವನ್ನರ್ಪಿಸುವುದಕ್ಕೂ ಈ ಆಲಯವನ್ನು ಆತನಿಗೋಸ್ಕರ ಪ್ರತಿಷ್ಠಿಸಬೇಕೆಂದಿದ್ದೇನೆ.
5 またわたしの建てる家は大きな家です。われらの神はすべての神よりも大いなる神だからです。
ನಾನು ಕಟ್ಟಿಸುವ ಆಲಯವೂ ದೊಡ್ಡದಾಗಿರಬೇಕು. ಏಕೆಂದರೆ ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ.
6 しかし、天も、諸天の天も彼を入れることができないのに、だれが彼のために家を建てることができましょうか。わたしは何者ですか、彼のために家を建てるというのも、ただ彼の前に香をたく所に、ほかならないのです。
ಆದರೆ ಆತನಿಗೋಸ್ಕರ ಆಲಯವನ್ನು ಕಟ್ಟುವುದಕ್ಕೆ ಶಕ್ತರಾರು! ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲದಿರುವಾಗ ಆತನಿಗಾಗಿ ಆಲಯ ಕಟ್ಟಲು ಸಾಧ್ಯವಿಲ್ಲ. ಆತನ ಸನ್ನಿಧಿಯಲ್ಲಿ ಯಜ್ಞವನ್ನು ಅರ್ಪಿಸುವುದಕ್ಕೆ ಒಂದು ಆಲಯವನ್ನು ಕಟ್ಟಬಹುದೇ ಹೊರತು ಆತನಿಗೆ ಮನೆಯನ್ನು ಕಟ್ಟಿಸಲು ನಾನು ಎಷ್ಟರವನು!
7 それで、どうぞ金、銀、青銅、鉄の細工および紫糸、緋糸、青糸の織物にくわしく、また彫刻の術に巧みな工人ひとりをわたしに送って、父ダビデが備えておいたユダとエルサレムのわたしの工人たちと一緒に働かせてください。
ಹೀಗಿರಲು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಇವುಗಳ ಕೆಲಸ ಮಾಡುವುದರಲ್ಲಿಯೂ, ರಕ್ತವರ್ಣ, ಕಡುಗೆಂಪುವರ್ಣ, ನೀಲವರ್ಣಗಳ ಬಟ್ಟೆಯನ್ನು ನೇಯುವುದರಲ್ಲಿಯೂ ಚಿತ್ರ ಕೆತ್ತುವುದರಲ್ಲಿಯೂ ನಿಪುಣನಾದ ಒಬ್ಬ ವ್ಯಕ್ತಿಯನ್ನು ನನ್ನ ಬಳಿಗೆ ಕಳುಹಿಸು; ನನ್ನ ತಂದೆಯಾದ ದಾವೀದನು ಗೊತ್ತುಮಾಡಿದಂಥ ಮತ್ತು ನನ್ನೊಡನೆ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ, ಇರುವಂಥ ಕುಶಲಕರ್ಮಿಗಳೊಂದಿಗೆ ಅವನು ಕೆಲಸ ಮಾಡಲಿ.
8 またどうぞレバノンから香柏、いとすぎ、びゃくだんを送ってください。わたしはあなたのしもべたちがレバノンで木を切ることをよくわきまえているのを知っています。わたしのしもべたちも、あなたのしもべたちと一緒に働かせ、
ಲೆಬನೋನಿನಿಂದ ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಸುಗಂಧದ ಮರಗಳನ್ನೂ ನನ್ನ ಬಳಿಗೆ ಕಳುಹಿಸಬೇಕು. ಲೆಬನೋನಿನ ಮರಗಳನ್ನು ಕಡಿಯುವುದರಲ್ಲಿ ನಿನ್ನ ಆಳುಗಳು ಸಮರ್ಥರೆಂದು ನನಗೆ ಗೊತ್ತಿದೆ. ನಿನ್ನ ಆಳುಗಳ ಜೊತೆಯಲ್ಲಿ ನನ್ನ ಆಳುಗಳೂ ಇರುವರು.
9 わたしのためにたくさんの材木を備えさせてください。わたしの建てる家は非常に広大なものですから。
ನಾನು ಬೃಹದಾಕಾರವಾದ, ಭವ್ಯವಾದ ದೇವಾಲಯವನ್ನು ಕಟ್ಟಿಸುವುದರಿಂದ ನನಗೋಸ್ಕರ ಹೆಚ್ಚು ಮರಗಳನ್ನು ಸಿದ್ಧಪಡಿಸಬೇಕು.
10 わたしは木を切るあなたのしもべたちに砕いた小麦二万コル、大麦二万コル、ぶどう酒二万バテ、油二万バテを与えます」。
೧೦ಮರ ಕಡಿಯುವ ನಿನ್ನ ಆಳುಗಳಿಗಾಗಿ ಇಪ್ಪತ್ತು ಸಾವಿರ ಕೋರ್ (ಎರಡು ಸಾವಿರ ಟನ್) ಗೋದಿಯನ್ನೂ, ಇಪ್ಪತ್ತು ಸಾವಿರ ಕೋರ್ (ಎರಡು ಸಾವಿರ ಟನ್) ಜವೆಗೋದಿಯನ್ನೂ, ಇಪ್ಪತ್ತು ಸಾವಿರ ಬತ್ (ನಾಲ್ಕು ಲಕ್ಷ ಲೀಟರ್) ದ್ರಾಕ್ಷಾರಸವನ್ನೂ, ಇಪ್ಪತ್ತು ಸಾವಿರ ಬತ್ (ನಾಲ್ಕು ಲಕ್ಷ ಲೀಟರ್) ಎಣ್ಣೆಯನ್ನೂ ಕೊಡುವೆನು” ಎಂದನು.
11 そこでツロの王ヒラムは手紙をソロモンに送って答えた、「主はその民を愛するゆえに、あなたを彼らの王とされました」。
೧೧ತೂರಿನ ಅರಸನಾದ ಹೂರಾಮನು ಸೊಲೊಮೋನನಿಗೆ ಪತ್ರದ ಮೂಲಕ ತನ್ನ ಒಪ್ಪಿಗೆ ಸೂಚಿಸಿದನು. “ಯೆಹೋವನು ತನ್ನ ಪ್ರಜೆಗಳನ್ನು ಪ್ರೀತಿಸುವವನಾಗಿರುವುದರಿಂದ ನಿನ್ನನ್ನು ಅವರ ಅರಸನನ್ನಾಗಿ ನೇಮಿಸಿದ್ದಾನೆ.”
12 ヒラムはまた言った、「天地を造られたイスラエルの神、主はほむべきかな。彼はダビデ王に賢い子を与え、これに分別と知恵を授けて、主のために宮を建て、また自分のために、王宮を建てることをさせられた。
೧೨ಇದಲ್ಲದೆ, “ಭೂಮ್ಯಾಕಾಶಗಳನ್ನು ಉಂಟುಮಾಡಿದ ಇಸ್ರಾಯೇಲ್ ದೇವರಾದ ಯೆಹೋವನು ತನಗೋಸ್ಕರ ದೇವಾಲಯವನ್ನೂ, ರಾಜನಿಗೋಸ್ಕರ ಅರಮನೆಯನ್ನೂ ಕಟ್ಟಿಸತಕ್ಕ ಬುದ್ಧಿ, ಜ್ಞಾನ, ವಿವೇಕವುಳ್ಳ ಮಗನನ್ನು ಅರಸನಾದ ದಾವೀದನಿಗೆ ಕೊಟ್ಟಿದ್ದರಿಂದ ಆತನಿಗೆ ಸ್ತೋತ್ರವಾಗಲಿ.
13 いまわたしは達人ヒラムという知恵のある工人をつかわします。
೧೩ಈಗ ನಾನು ಜ್ಞಾನಿಯು, ಕಲಾ ಪ್ರವೀಣನೂ ಆದ ಹೂರಾಮಾಬೀ ಎಂಬುವವನನ್ನು ಕಳುಹಿಸುತ್ತೇನೆ.
14 彼はダンの子孫である女を母とし、ツロの人を父とし、金銀、青銅、鉄、石、木の細工および紫糸、青糸、亜麻糸、緋糸の織物にくわしく、またよくもろもろの彫刻をし、意匠を凝らしてもろもろの工作をします。彼を用いてあなたの工人およびあなたの父、わが主ダビデの工人と一緒に働かせなさい。
೧೪ಅವನು ದಾನ್ ಕುಲದ ಸ್ತ್ರೀಯರಲ್ಲಿ ಒಬ್ಬಳ ಮಗನಾಗಿದ್ದಾನೆ. ಅವನ ತಂದೆ ತೂರಿನವನು. ಅವನು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಕಲ್ಲು, ಮರ ಇವುಗಳ ಕೆಲಸವನ್ನು ಮಾಡುವುದಕ್ಕೂ, ಕಡುಗೆಂಪುವರ್ಣ ನೀಲರಕ್ತವರ್ಣಗಳುಳ್ಳ ಅಮೂಲ್ಯರತ್ನಗಳನ್ನು ಕೆತ್ತುವುದಕ್ಕೂ, ನಯವಾದ ನಾರು ವಸ್ತ್ರಗಳನ್ನು ನೇಯುವುದಕ್ಕೂ, ತನಗೆ ಒಪ್ಪಿಸಲ್ಪಟ್ಟ ಎಲ್ಲಾ ಕೆಲಸಗಳನ್ನು ನಡಿಸುವುದಕ್ಕೂ, ಎಲ್ಲಾ ತರದ ಕೆತ್ತನೆಯ ಕೆಲಸವನ್ನು ಮಾಡುವುದಕ್ಕೂ ತನಗೆ ಒಪ್ಪಿಸಲ್ಪಟ್ಟ ಎಲ್ಲಾ ಚಮತ್ಕಾರವಾದ ಕೆಲಸಗಳನ್ನು ನಡಿಸುವುದಕ್ಕೂ ಸಮರ್ಥನು, ನೀನೂ ನಿನ್ನ ತಂದೆಯು, ನನ್ನ ಒಡೆಯನು ಆದ ದಾವೀದನೂ ಗೊತ್ತುಮಾಡಿದ ಕುಶಲಕರ್ಮಿಗಳೊಡನೆ ಅವನು ಕೆಲಸ ಮಾಡಲಿ
15 それでいまわが主の言われた小麦、大麦、油およびぶどう酒をそのしもべどもに送ってください。
೧೫ಈಗ ನನ್ನ ಒಡೆಯನು ಹೇಳಿದ ಮೇರೆಗೆ ಆ ಗೋದಿಯನ್ನು, ಜವೆಗೋದಿಯನ್ನು, ಎಣ್ಣೆಯನ್ನು, ದ್ರಾಕ್ಷಾರಸವನ್ನು ತನ್ನ ಸೇವಕರಿಗೆ ಕಳುಹಿಸಿಕೊಡಲಿ.
16 あなたの求められる材木はレバノンから切りだし、いかだに組んで、海からヨッパに送ります。あなたはそれをエルサレムに運び上げなさい」。
೧೬ನಾವಾದರೋ ನಿನಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು ತೆಪ್ಪಗಳಾಗಿ ಕಟ್ಟಿ, ಸಮುದ್ರ ಮಾರ್ಗವಾಗಿ ಯೊಪ್ಪಕ್ಕೆ ತೆಗೆದುಕೊಂಡು ಬರುತ್ತೇವೆ. ಅಲ್ಲಿಂದ ನೀನು ಅವುಗಳನ್ನು ಯೆರೂಸಲೇಮಿಗೆ ತರಿಸಿಕೊಳ್ಳಬಹುದು” ಎಂಬುದಾಗಿ ಉತ್ತರ ಕೊಟ್ಟನು.
17 そこでソロモンはその父ダビデが数えたようにイスラエルの国にいるすべての他国人を数えたが、合わせて十五万三千六百人あった。
೧೭ಆಮೇಲೆ ಸೊಲೊಮೋನನು ತನ್ನ ತಂದೆಯಾದ ದಾವೀದನು ಮಾಡಿಸಿದ ಜನಗಣತಿಯ ಆಧಾರದ ಮೇರೆಗೆ, ಇಸ್ರಾಯೇಲ್ ದೇಶದಲ್ಲಿ ಪ್ರವಾಸಿಗಳಾಗಿದ್ದ ಎಲ್ಲಾ ಅನ್ಯಜನರನ್ನು ಲೆಕ್ಕ ಮಾಡಿದಾಗ ಒಂದು ಲಕ್ಷದ ಐವತ್ತು ಮೂರು ಸಾವಿರದ ಆರುನೂರು ಮಂದಿ ಸಿಕ್ಕಿದರು.
18 彼はその七万人を荷を負う者とし、八万人を山で木や石を切る者とし、三千六百人を民を働かせる監督者とした。
೧೮ಅವರಲ್ಲಿ ಹೊರೆಹೊರುವುದಕ್ಕಾಗಿ ಎಪ್ಪತ್ತು ಸಾವಿರ ಮಂದಿಯನ್ನೂ, ಕಲ್ಲುಗಣಿಗಳಲ್ಲಿ ಕೆಲಸಮಾಡುವುದಕ್ಕಾಗಿ ಎಂಭತ್ತು ಸಾವಿರ ಮಂದಿಯನ್ನೂ, ಕೆಲಸದವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿಯನ್ನೂ ನೇಮಿಸಿದನು.

< 歴代誌Ⅱ 2 >