< 歴代誌Ⅰ 25 >
1 ダビデと軍の長たちはまたアサフ、ヘマンおよびエドトンの子らを勤めのために分かち、琴と、立琴と、シンバルをもって預言する者にした。その勤めをなした人々の数は次のとおりである。
೧ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,
2 アサフの子たちはザックル、ヨセフ、ネタニヤ、アサレラであって、アサフの指揮のもとに王の命によって預言した者である。
೨ಆಸಾಫ್ಯರಲ್ಲಿ ಜಕ್ಕೂರ್, ಯೋಸೇಫ್, ನೆತನ್ಯ, ಅಶರೇಲ ಎಂಬವರು. ಇವರು ಅರಮನೆಯ ಗಾಯಕನಾದ ಆಸಾಫನ ಸಹಾಯಕರು.
3 エドトンについては、エドトンの子たちはゲダリヤ、ゼリ、エサヤ、ハシャビヤ、マッタテヤの六人で、琴をもって主に感謝し、かつほめたたえて預言したその父エドトンの指揮の下にあった。
೩ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ ಇವರೇ. ಕಿನ್ನರಿಯನ್ನು ನುಡಿಸುತ್ತಾ ಪರವಶರಾಗಿ ಯೆಹೋವನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನ್ಯನಿಗೆ ಈ ಆರು ಜನರೂ ಸಹಾಯಕರಾಗಿದ್ದರು.
4 ヘマンについては、ヘマンの子たちはブッキヤ、マッタニヤ、ウジエル、シブエル、エレモテ、ハナニヤ、ハナニ、エリアタ、ギダルテ、ロマムテ・エゼル、ヨシベカシャ、マロテ、ホテル、マハジオテである。
೪ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್ ಮತ್ತು ಮಹಜೀಯೋತ್.
5 これらは皆、神がご自身の約束にしたがって高くされた王の先見者ヘマンの子たちであった。神はヘマンに男の子十四人、女の子三人を与えられた。
೫ಇವರೆಲ್ಲರು ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಹೇಮಾನನಿಗೆ, “ನೀನು ಅಭಿವೃದ್ಧಿ ಹೊಂದುವಹಾಗೆ ಮಾಡುವೆನು” ಎಂಬುದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಗಂಡುಮಕ್ಕಳನ್ನೂ, ಮೂರು ಹೆಣ್ಣುಮಕ್ಕಳನ್ನೂ ದಯಪಾಲಿಸಿದನು.
6 これらの者は皆その父の指揮の下にあって、主の宮で歌をうたい、シンバルと立琴と琴をもって神の宮の務をした。アサフ、エドトンおよびヘマンは王の命の下にあった。
೬ದೇವರಾದ ಯೆಹೋವನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ಕೈಕೆಳಗಿದ್ದುಕೊಂಡು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ ಯೆದುತೂನ್ ಹೇಮಾನರು ಅರಸನ ಸೇವೆಯಲ್ಲಿದ್ದರು.
7 彼らおよび主に歌をうたうことのために訓練され、すべて熟練した兄弟たちの数は二百八十八人であった。
೭ಇವರು ಯೆಹೋವನ ಕೀರ್ತನೆಗಳನ್ನು ಕಲಿತ ಇವರ ಸಹೋದರರು ಒಟ್ಟು ಇನ್ನೂರ ಎಂಭತ್ತೆಂಟು ಜನರು. ಇವರೆಲ್ಲರೂ ಗಾಯಕ ಪ್ರವೀಣರಾಗಿದ್ದರು.
8 彼らは小なる者も、大なる者も、教師も生徒も皆ひとしくその務のためにくじを引いた。
೮ಇವರಲ್ಲಿ ಹಿರಿಯರು, ಕಿರಿಯರು, ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾ ಕ್ರಮವನ್ನು ಗೊತ್ತುಮಾಡಿಕೊಂಡರು.
9 第一のくじはアサフのためにヨセフに当り、第二はゲダリヤに当った。彼とその兄弟たちおよびその子たち、合わせて十二人。
೯ಚೀಟಿನ ಪ್ರಕಾರವಾಗಿ, ಮೊದಲನೆಯದಾಗಿ ಆಸಾಫ್ಯನಾದ ಯೋಸೇಫನು. ಎರಡನೆಯವನು ಗೆದಲ್ಯ. ಇವನೂ ಇವನ ಸಹೋದರರೂ, ಮಕ್ಕಳು ಒಟ್ಟು ಹನ್ನೆರಡು ಜನರು.
10 第三はザックルに当った。その子たちおよびその兄弟たち、合わせて十二人。
೧೦ಮೂರನೆಯವನು ಜಕ್ಕೂರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
11 第四はイヅリに当った。その子たちおよびその兄弟たち、合わせて十二人。
೧೧ನಾಲ್ಕನೆಯವನು ಇಚ್ರೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
12 第五はネタニヤに当った。その子たちおよびその兄弟たち、合わせて十二人。
೧೨ಐದನೆಯವನು ನೆತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
13 第六はブッキヤに当った。その子たちおよびその兄弟たち、合わせて十二人。
೧೩ಆರನೆಯವನು ಬುಕ್ಕೀಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
14 第七はアサレラに当った。その子たちおよびその兄弟たち、合わせて十二人。
೧೪ಏಳನೇಯವನು ಯೆಸರೇಲ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
15 第八はエサヤに当った。その子たちおよびその兄弟たち、合わせて十二人。
೧೫ಎಂಟನೆಯವನು ಯೆಶಾಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
16 第九はマッタニヤに当った。その子たちおよびその兄弟たち、合わせて十二人。
೧೬ಒಂಬತ್ತನೆಯದು ಮತ್ತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
17 第十はシメイに当った。その子たちおよびその兄弟たち、合わせて十二人。
೧೭ಹತ್ತನೆಯವನು ಶಿಮ್ಮೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
18 第十一はアザリエルに当った。その子たちおよびその兄弟たち、合わせて十二人。
೧೮ಹನ್ನೊಂದನೆಯವನು ಅಜರೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
19 第十二はハシャビヤに当った。その子たちおよびその兄弟たち、合わせて十二人。
೧೯ಹನ್ನೆರಡನೆಯವನು ಹಷಬ್ಯ. ಇವನೂ ಇವನ ಸಹೋದರರೂ ಮಕ್ಕಳು ಒಟ್ಟು ಹನ್ನೆರಡು ಜನರು.
20 第十三はシュバエルに当った。その子たちおよびその兄弟たち、合わせて十二人。
೨೦ಹದಿಮೂರನೆಯದು ಶೂಬಾಯೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
21 第十四はマッタテヤに当った。その子たちおよびその兄弟たち、合わせて十二人。
೨೧ಹದಿನಾಲ್ಕನೆಯವನು ಮತ್ತಿತ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳೂ ಒಟ್ಟು ಹನ್ನೆರಡು ಜನರು.
22 第十五はエレモテに当った。その子たちおよびその兄弟たち、合わせて十二人。
೨೨ಹದಿನೈದನೆಯವನು ಯೆರೆಮೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
23 第十六はハナニヤに当った。その子たちおよびその兄弟たち、合わせて十二人。
೨೩ಹದಿನಾರನೆಯವನು ಹನನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
24 第十七はヨシベカシャに当った。その子たちおよびその兄弟たち、合わせて十二人。
೨೪ಹದಿನೇಳನೆಯವನು ಯೊಷ್ಬೆಕಾಷ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
25 第十八はハナニに当った。その子たちおよびその兄弟たち、合わせて十二人。
೨೫ಹದಿನೆಂಟನೆಯವನು ಹನಾನೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
26 第十九はマロテに当った。その子たちおよびその兄弟たち、合わせて十二人。
೨೬ಹತ್ತೊಂಬತ್ತನೆಯವನು ಮಲ್ಲೋತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
27 第二十はエリアタに当った。その子たちおよびその兄弟たち、合わせて十二人。
೨೭ಇಪ್ಪತ್ತನೆಯವನು ಎಲೀಯಾತ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
28 第二十一はホテルに当った。その子たちおよびその兄弟たち、合わせて十二人。
೨೮ಇಪ್ಪತ್ತೊಂದನೆಯವನು ಹೋತೀರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
29 第二十二はギダルテに当った。その子たちおよびその兄弟たち、合わせて十二人。
೨೯ಇಪ್ಪತ್ತೆರಡನೆಯವನು ಗಿದ್ದಲ್ತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
30 第二十三はマハジオテに当った。その子たちおよびその兄弟たち、合わせて十二人。
೩೦ಇಪ್ಪತ್ತಮೂರನೆಯವನು ಮಹಜೀಯೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
31 第二十四はロマムテ・エゼルに当った。その子たちおよびその兄弟たち、合わせて十二人であった。
೩೧ಇಪ್ಪತ್ತನಾಲ್ಕನೆಯವನು ರೋಮಮ್ತಿಯೆಜೆರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.