< 歴代誌Ⅰ 6 >

1 レビの子等はゲルシヨン、コハテ、メラリ
ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
2 コハテの子等はアムラム、イヅハル、ヘブロン、ウジエル
ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
3 アムラムの子等はアロン、モーセ、ミリアム、アロンの子等はナダブ、アビウ、エレアザル、イタマル
ಅಮ್ರಾಮನ ಮಕ್ಕಳು ಆರೋನ್, ಮೋಶೆ ಮತ್ತು ಮಿರ್ಯಾಮ್. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.
4 エレアザル、ピネハスを生み ピネハス、アビシユアを生み
ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು;
5 アビシユア、ブツキを生み ブツキ、ウジを生み
ಅಬೀಷೂವನು ಬುಕ್ಕೀಯನನ್ನು ಪಡೆದನು; ಬುಕ್ಕೀಯನು ಉಜ್ಜೀಯನನ್ನು ಪಡೆದನು.
6 ウジ、ゼラヒヤを生み ゼラヒヤ、メラヨテを生み
ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತನನ್ನು ಪಡೆದನು.
7 メラヨテ、アマリヤを生み アマリヤ、アヒトブを生み
ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
8 アヒトブ、ザドクを生み ザドク、アヒマアズを生み
ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು.
9 アヒマアズ、アザリヤを生み アザリヤ、ヨハナンを生み
ಅಹೀಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು.
10 ヨハナン、アザリヤを生り此アザリヤはヱルサレムなるソロモンの建たる宮にて祭司の職をなせし者なり
೧೦ಯೋಹಾನಾನನು ಅಜರ್ಯನನ್ನು ಪಡೆದನು. ಸೊಲೊಮೋನನು ಕಟ್ಟಿಸಿದ ಯೆರೂಸಲೇಮಿನ ದೇವಾಲಯದಲ್ಲಿ ಯಾಜಕ ಸೇವೆ ಮಾಡುತ್ತಿದ್ದವನು ಇವನೇ.
11 アザリヤ、アマリヤを生み アマリヤ、アヒトブを生み
೧೧ಅಜರ್ಯನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
12 アヒトブ、ザドクを生み ザドク、シヤルムを生み
೧೨ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು.
13 シヤルム、ヒルキヤを生み ヒルキヤ、アザリヤを生み
೧೩ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀಯನು ಅಜರ್ಯನನ್ನು ಪಡೆದನು.
14 アザリヤ、セラヤを生み セラヤ、ヨザダクを生む
೧೪ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾದಾಕನನ್ನು ಪಡೆದನು.
15 ヨザダグはヱホバ、ネブカデネザルの手をもてユダおよびヱルサレムの人を擄へうつしたまひし時に擄へられて往り
೧೫ನೆಬೂಕದ್ನೆಚ್ಚರನು ಯೆಹೋವನ ಪ್ರೇರಣೆಯಿಂದ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಸೆರೆಯೊಯ್ದಾಗ ಯೆಹೋಚಾದಾಕನು ಅವರೊಡನೆ ಇದ್ದನು.
16 レビの子等はゲルシヨン、コハテおよびメラリ
೧೬ಲೇವಿಯ ಮಕ್ಕಳು ಗೇರ್ಷೋಮ್, ಕೆಹಾತ್, ಮೆರಾರೀ.
17 ゲルシヨンの子等の名は左のごとしリブニおよびシメイ
೧೭ಗೇರ್ಷೋಮನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ.
18 コハテの子等はアムラム、イヅハル、ヘブロン、ウジエル
೧೮ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರೇ.
19 メラリの子等はマヘリおよびムシ、レビ人の宗族はその宗家によれば是のごとし
೧೯ಮೆರಾರಿಯ ಮಕ್ಕಳು ಮಹ್ಲೀ ಮತ್ತು ಮುಷೀ. ಇವರೆಲ್ಲರೂ ಲೇವಿ ಗೋತ್ರಗಳ ಮೂಲಪುರುಷರು.
20 ゲシヨンの子はリブニ その子はヤハテ その子はジンマ
೨೦ಗೇರ್ಷೋಮನ ಗೋತ್ರ: ಗೇರ್ಷೋಮನ ಮಗ ಲಿಬ್ನೀ. ಇವನ ಮಗ ಯಹತ್, ಇವನ ಮಗ ಜಿಮ್ಮ. ಜಿಮ್ಮನ ಮಗ ಯೋವಾಹ,
21 その子はヨア その子はイド その子はゼラ その子はヤテライ
೨೧ಯೋವಾಹನ ಮಗ ಇದ್ದೋ, ಇವನ ಮಗ ಜೆರಹ. ಜೆರಹನ ಮಗ ಯೆವತ್ರೈ.
22 コハテの子はアミナダブ その子はコラ その子はアシル
೨೨ಕೆಹಾತನ ಸಂತಾನದವರು: ಇವನ ಮಗ ಅಮ್ಮೀನಾದಾಬ್, ಇವನ ಮಗ ಕೋರಹ. ಕೋರಹನ ಮಗ ಅಸ್ಸೀರ್,
23 その子はエルカナ その子はエビアサフ その子はアシル
೨೩ಇವನ ಮಗ ಎಲ್ಕಾನ. ಎಲ್ಕಾನನ ಮಗ ಎಬ್ಯಾಸಾಫ್. ಇವನ ಮಗ ಅಸ್ಸೀರ್.
24 その子はタハテ その子はウリエル その子はウジヤ その子はシヤウル
೨೪ಅಸ್ಸೀರನ ಮಗ ತಹತ್, ಇವನ ಮಗ ಊರೀಯೇಲ್. ಊರೀಯೇಲನ ಮಗ ಉಜ್ಜೀಯ, ಇವನ ಮಗ ಸೌಲ್.
25 エルカナの子等はアマサイおよびアヒモテ
೨೫ಎಲ್ಕಾನನ ಮಕ್ಕಳು; ಅಮಾಸೈ, ಅಹೀಮೋತ್ ಮತ್ತು ಎಲ್ಕಾನ್ ಎಂಬವರು.
26 エルカナについてはエルカナの子はゾバイ その子はナハテ
೨೬ಎಲ್ಕಾನನ ಸಂತಾನದವರು. ಇವನ ಮಗನು, ಚೋಫೈ, ಇವನ ಮಗ ನಹತ್.
27 その子はエリアブ その子はヱロハム その子はエルカナ
೨೭ನಹತನ ಮಗ ಎಲೀಯಾಬ್, ಇವನ ಮಗ ಯೆರೋಹಾಮ್, ಇವನ ಮಗ ಎಲ್ಕಾನ್.
28 サムエルの子等は長子はヨエル 次はアビヤ
೨೮ಸಮುವೇಲನ ಮಕ್ಕಳು ಯೋವೇಲ್ ಚೊಚ್ಚಲ ಮಗನು ಮತ್ತು ಅಬೀಯನು ಎರಡನೆಯವನು.
29 メラリの子はマヘリ その子はリブニ その子はシメイ その子はウザ
೨೯ಮೆರಾರೀಯ ಸಂತಾನದವರು. ಇವನ ಮಗ ಮಹ್ಲೀ. ಇವನ ಮಗ ಲಿಬ್ನೀ, ಇವನ ಮಗ ಶಿಮ್ಮೀ. ಶಿಮ್ಮೀಯ ಮಗನು ಉಜ್ಜ.
30 その子はシメア その子はハギヤ その子はアサヤなり
೩೦ಇವನ ಮಗನು ಶಿಮ್ಮಾ, ಇವನ ಮಗನು ಹಗ್ಗೀಯ, ಇವನ ಮಗನು ಅಸಾಯ.
31 契約の櫃を安置せし後ダビデ左の人々を立てヱホバの家にて謳歌事を司どらせたり
೩೧ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.
32 彼等は集會の幕屋の住所の前にて謳歌事をおこなひ來りしがソロモン、ヱルサレムにヱホバの室を建るにおよびその次序に循ひてその職をつとめたり
೩೨ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.
33 立て奉事をなせるものおよびその子等は左のごとしコハテの子等の中ヘマンは謳歌師長たり ヘマンはヨルの子 ヨエルはサムエルの子
೩೩ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.
34 サムエルはエルカナの子 エルカナはヱロハムの子 ヱロハムはエリエルの子 エリエルはトアの子
೩೪ಸಮುವೇಲನು ಎಲ್ಕಾನನ ಮಗ. ಇವನು ಯೆರೋಹಾಮನ ಮಗ, ಯೆರೋಹಾಮನು ಎಲೀಯೇಲನ ಮಗ, ಇವನು ತೋಹನ ಮಗ.
35 トアはヅフの子 ヅフはエルカナの子 エルカナはマハテの子 マハテはアマサイの子
೩೫ತೋಹನು ಚೂಫನ ಮಗ, ಇವನು ಎಲ್ಕಾನನ ಮಗ, ಎಲ್ಕಾನನು ಮಹತನ ಮಗ, ಮಹತನನು ಅಮಾಸೈಯ ಮಗ, ಅಮಾಸೈಯನು ಎಲ್ಕಾನನ ಮಗ.
36 アマサイはヱルカナの子 エルカナはヨエルの子 ヨエルはアザリヤの子 アザリヤはゼパニヤの子
೩೬ಎಲ್ಕಾನನು ಯೋವೇಲನ ಮಗ, ಇವನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ,
37 ゼパニヤはタハテの子 タハテはアシルの子 アシルはエビアサフの子 エビアサフはコラの子
೩೭ಇವನು ತಹತನ ಮಗ. ತಹತನು ಅಸೀರನ ಮಗ, ಅಸ್ಸೀರನು ಎಬ್ಯಾಸಾಫನ ಮಗ, ಇವನು ಕೋರಹನ ಮಗ, ಕೋರಹನು ಇಚ್ಹಾರನ ಮಗ.
38 コラはイヅハルの子 イヅハルはコハテの子 コハテはレビの子 レビはイスラエルの子なり
೩೮ಇಚ್ಹಾರನು ಕೆಹಾತನ ಮಗ, ಇವನು ಲೇವಿಯನ ಮಗ, ಲೇವಿಯು ಇಸ್ರಾಯೇಲನ ಮಗ.
39 ヘマンの兄弟アサフ、ヘマンの右に立り アサフはベレキヤの子 ベレキヤはシメアの子
೩೯ಇವನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನಾದ ಆಸಾಫನು ಎರಡನೆಯವನು. ಇವನು ಬೆರೆಕ್ಯನ ಮಗ, ಇವನು ಶಿಮ್ಮನ ಮಗ.
40 シメアはミカエルの子 ミカエルはバアセヤの子 バアセヤはマルキヤの子
೪೦ಶಿಮ್ಮನು ಮೀಕಾಯೇಲನ ಮಗ, ಇವನು ಬಾಸೇಯನ ಮಗ, ಬಾಸೇಯನು ಮಲ್ಕೀಯನ ಮಗ.
41 マルキヤはエテニの子 エテニはゼラの子 ゼラはアダヤの子
೪೧ಮಲ್ಕೀಯನು ಎತ್ನಿಯ ಮಗ, ಇವನು ಜೆರಹನ ಮಗ, ಜೆರಹನು ಅದಾಯನ ಮಗನು.
42 アダヤはエタンの子 エタンはジンマの子 ジンマはシメイの子
೪೨ಅದಾಯನು ಏತಾನನ ಮಗ, ಇವನು ಜಿಮ್ಮನ ಮಗ, ಜಿಮ್ಮನು ಶಿಮ್ಮೀಯ ಮಗ.
43 シメイはヤハテの子 ヤハテはゲルシヨンの子 ゲルシヨンはレビの子なり
೪೩ಶಿಮ್ಮೀಯು ಯಹತನ ಮಗ, ಇವನು ಗೇರ್ಷೋಮನ ಮಗ, ಗೇರ್ಷೋಮನು ಲೇವಿಯ ಮಗ.
44 また彼らの兄弟なるメラリ人等その左に立り 其中のエタンはキシの子なり キシはアブデの子 アブデはマルクの子
೪೪ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ, ಮೆರಾರಿಯನೂ ಆದ ಏತಾನನು ಮೂರನೆಯವನು. ಇವನು ಕೀಷೀಯ ಮಗ, ಇವನು ಅಬ್ದೀಯನ ಮಗ, ಇವನು ಮಲ್ಲೂಕನ ಮಗ.
45 マルクはハシヤビヤの子 ハシヤビヤはアマジヤの子 アマジヤはヒルキヤの子
೪೫ಮಲ್ಲೂಕನು ಹಷಬ್ಯನ ಮಗ, ಇವನು ಅಮಚ್ಯನ ಮಗ, ಇವನು ಹಿಲ್ಕೀಯನ ಮಗ.
46 ヒルキヤはアムジの子 アムジはバニの子 バニはセメルの子
೪೬ಹಿಲ್ಕೀಯನು ಅಮ್ಚೀಯನ ಮಗ, ಇವನು ಬಾನೀಯನ ಮಗ, ಬಾನೀಯು ಶೆಮೆರನ ಮಗ.
47 セメルはマヘリの子 マヘリはムシの子 ムシはメラリの子 メラリはレビの子なり
೪೭ಶೆಮೆರನು ಮಹ್ಲೀಯ ಮಗ, ಇವನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ, ಮೆರಾರಿಯು ಲೇವಿಯ ಮಗನು.
48 彼らの兄弟なるレビ人等は神の室の幕屋の諸の職に任ぜられたり
೪೮ಅವರ ಸಹೋದರರಾದ ಇತರ ಲೇವಿಯರು ದೇವಾಲಯದ ಗುಡಾರದ ಸೇವೆಗಾಗಿ ನೇಮಿಸಲ್ಪಟ್ಟರು.
49 アロンおよびその子等は燔祭の壇と香壇の上に物を献ぐることを司どりまた至聖所の諸の工をなし且イスラエルのために贖をなすことを司どれり凡て神の僕モーセの命じたるごとし
೪೯ದೇವರ ಸೇವಕನಾದ ಮೋಶೆಯ ಎಲ್ಲಾ ಆಜ್ಞೆಗಳಿಗೆ ಅನುಸಾರವಾಗಿ ಆರೋನನೂ, ಅವನ ಮಕ್ಕಳೂ ಇಸ್ರಾಯೇಲರಿಗೋಸ್ಕರ ಯಜ್ಞವೇದಿ, ಧೂಪವೇದಿ ಇವುಗಳ ಮೇಲೆ ಹೋಮ ಮಾಡುತ್ತಾ, ಧೂಪ ಹಾಕುತ್ತಾ, ದೇವಾಲಯದ ಅತಿಪರಿಶುದ್ಧ ಸ್ಥಳದ ಎಲ್ಲಾ ಸೇವೆಯನ್ನು ಮಾಡುತ್ತಾ, ದೋಷಪರಿಹಾರ ಮಾಡುತ್ತಾ ಇದ್ದರು.
50 アロンの子孫は左のごとし アロンの子はエレアザル その子はピネハス その子はアビシユア
೫೦ಆರೋನನ ಸಂತಾನದವರು: ಆರೋನನ ಮಗ ಎಲ್ಲಾಜಾರ್, ಇವನ ಮಗ ಫೀನೆಹಾಸ್, ಫೀನೆಹಾಸನ ಮಗ ಅಬೀಷೂವ.
51 その子はブツキ その子はウジ その子はゼラヒヤ
೫೧ಅಬೀಷೂವನ ಮಗ ಬುಕ್ಕೀ, ಬುಕ್ಕೀಯ ಮಗ ಉಜ್ಜೀ, ಇವನ ಮಗ ಜೆರಹ್ಯಾಹ, ಇವನ ಮಗ ಮೆರಾಯೋತ್.
52 その子はメラヨテ その子はアマリヤ その子はアヒトブ
೫೨ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ್.
53 その子はザドク その子はアヒマアズ
೫೩ಅಹೀಟೂಬನ ಮಗ ಚಾದೋಕ್, ಇವನ ಮಗ ಅಹಿಮಾಚ್.
54 アロンの子孫の住處は四方の境の内にありその閭里に循ひていはば左の如し先コハテ人の宗族が籤によりて得たるところは是なり
೫೪ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು: ಆರೋನನ ಸಂತಾನದವರಾದ ಕೇಹಾತನ ಗೋತ್ರದವರಿಗೆ ಚೀಟು ಮೊದಲು ಬಿದ್ದಿತು.
55 すなはちユダの地の中よりはヘブロンとその周圍の郊地を得たり
೫೫ಆದುದರಿಂದ ಇಸ್ರಾಯೇಲರು ಅವರಿಗೆ ಯೆಹೂದ ಸೀಮೆಯ ಹೆಬ್ರೋನ್ ಪಟ್ಟಣವನ್ನೂ ಮತ್ತು ಅದರ ಸುತ್ತಲಿನ ಗೋಮಾಳಗಳನ್ನು ಕೊಟ್ಟರು.
56 但しその邑の田野と村々はヱフンネの子カレブに歸せり
೫೬ಆದರೆ ಅದರ ಹೊಲಗಳನ್ನೂ ಅದಕ್ಕೆ ಸೇರಿದ ಗ್ರಾಮಗಳನ್ನೂ, ಯೆಫುನ್ನೆಯನ ಮಗನಾದ ಕಾಲೇಬನಿಗೆ ಕೊಟ್ಟರು.
57 すなはちアロンの子孫の得たる邑は逃遁邑なるヘブロン、リブナとその郊地 ヤツテルおよびエシテモアとそれらの郊地
೫೭ಆರೋನನ ವಂಶದವರಿಗೆ ಹೆಬ್ರೋನ್ ಎಂಬ ಆಶ್ರಯ ನಗರವನ್ನು, ಲಿಬ್ನ ಮತ್ತು ಅದರ ಗೋಮಾಳಗಳು, ಯತ್ತೀರ್, ಎಷ್ಟೆಮೋವ, ಅವುಗಳ ಉಪನಗರಗಳೂ,
58 ホロンとその郊地 デビルとその郊地
೫೮ಹೀಲೇನ್, ದೆಬೀರ್
59 アシヤンとその郊地 ベテシメシとその郊地なり
೫೯ಆಷಾನ್, ಬೇತ್‌ಷೆಮೆಷ್‌ ಎಂಬ ಗೋಮಾಳ ಸಹಿತವಾದ ಪಟ್ಟಣಗಳನ್ನೂ,
60 またベニヤミンの支派の中よりはゲバとその郊地 アレメテとその郊地 アナトテとその郊地を得たり 彼らの邑はその宗族の中に都合十三ありき
೬೦ಬೆನ್ಯಾಮೀನನ ಕುಲದಿಂದ ಗೆಬ, ಅಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಒಟ್ಟು ಪಟ್ಟಣಗಳು ಹದಿಮೂರು.
61 またコハテの子孫の支派の中此他なる者はかの半支派の中即ちマナセの半支派の中より籤によりて十の邑を得たり
೬೧ಕೆಹಾತ್ಯರ ಉಳಿದ ಕುಟುಂಬಗಳಿಗೆ ಚೀಟು ಹಾಕುವುದರ ಮೂಲಕ ಮನಸ್ಸೆ ಕುಲದ ಸ್ವತ್ತಿನಿಂದ ಹತ್ತು ಪಟ್ಟಣಗಳು ದೊರಕಿದವು.
62 またゲルシヨンの子孫の宗族はイツサカルの支派アセルの支派ナフタリの支派及びバシヤンなるマナセの支派の中より十三の邑を得たり
೬೨ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಮನಸ್ಸೆ ಕುಲಗಳ ಸ್ವತ್ತಿನಿಂದ ಹದಿಮೂರು ಪಟ್ಟಣಗಳು ದೊರಕಿದವು.
63 またメラリの子孫の宗族はルベンの支派ガドの支派およびゼブルンの支派の中より籤によりて十二の邑を得たり
೬೩ಮೆರಾರೀ ಕುಟುಂಬಗಳಿಗೆ ರೂಬೇನ್, ಗಾದ್, ಜೆಬುಲೂನ್ ಕುಲಗಳ ಸ್ವತ್ತಿನಿಂದ ಹನ್ನೆರಡು ಪಟ್ಟಣಗಳು ಚೀಟು ಹಾಕುವುದರಿಂದ ದೊರಕಿದವು.
64 イスラエルの子孫は邑とその郊地とをレビ人に與へたり
೬೪ಇಸ್ರಾಯೇಲರು ಲೇವಿಯರಿಗೆ ಆ ಪಟ್ಟಣಗಳನ್ನಲ್ಲದೆ ಅವುಗಳಿಗೆ ಸೇರಿದ ಗೋಮಾಳುಗಳನ್ನೂ ಕೊಟ್ಟರು.
65 即ちユダの子孫の支派とシメオンの子孫の支派とベニヤミンの子孫の支派の中よりして此に名を擧たる是等の邑を籤によりて之に與へたり
೬೫ಅವರು ಚೀಟು ಹಾಕಿ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನನ ಕುಲಗಳಿಂದ ಮೇಲೆ ಹೇಳಿದ ಪಟ್ಟಣಗಳನ್ನೂ ಕೊಟ್ಟರು.
66 コハテの子孫の宗族はまたエフライムの支派の中よりも邑を得てその領地となせり
೬೬ಕೆಹಾತ್ಯರ ಕುಟುಂಬಗಳಿಗೆ ಎಫ್ರಾಯೀಮ್ಯರ ಸ್ವತ್ತಿನಿಂದ
67 即ちその得たる逃遁邑はエフライム山のシケムとその郊地およびゲゼルとその郊地
೬೭ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
68 ヨクメアムとその郊地 ベテホロンとその郊地
೬೮ಯೊಕ್ಮೆಯಾಮ್ ಮತ್ತು ಅದರ ಗೋಮಾಳಗಳು, ಬೇತ್ ಹೋರೋನ್ ಮತ್ತು ಅದರ ಉಪನಗರಗಳು,
69 アヤロンとその郊地 ガテリンモンとその郊地なり
೬೯ಅಯ್ಯಾಲೋನ್, ಗತ್ರಿಮ್ಮೋನ್, ಎಂಬ ಗೋಮಾಳ ಸಹಿತವಾದ ಪಟ್ಟಣಗಳು ಚೀಟಿಹಾಕುವುದರ ಮೂಲಕ ದೊರಕಿದವು.
70 またマナセの半支派の中よりはアネルとその郊地 ビレアムとその郊地是みなコハテの子孫の遺れる宗族に歸せり
೭೦ಮನಸ್ಸೆ ಕುಲದ ಸ್ವತ್ತಿನ ಆನೇರ್, ಬಿಳ್ಳಾಮ್ ಎಂಬ ಹುಲ್ಲುಗಾವಲು ಸಹಿತವಾದ ಪಟ್ಟಣಗಳು ಕೆಹಾತ್ಯರ ಉಳಿದ ಕುಟುಂಬಗಳ ಪಾಲಿಗೆ ಬಂದವು.
71 ゲルシヨンの子孫に歸せし者はマナセの半支派の宗族の中よりはバシヤンのゴランとその郊地 アシタロテとその郊地
೭೧ಗೇರ್ಷೊಮ್ಯರಿಗೆ ಮನಸ್ಸೆ ಕುಲದ ಸ್ವತ್ತಿನಿಂದ ಬಾಷಾನಿನ ಗೋಲಾನ್, ಅಷ್ಟಾರೋಟ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
72 イツサカルの支派の中よりはゲデシとその郊地 ダベラテとその郊地
೭೨ಇಸ್ಸಾಕಾರ್ಯರ ಸ್ವತ್ತಿನಿಂದ ಕೆದೆಷ್, ದಾಬೆರತ್,
73 ラモテとその郊地 アネムとその郊地
೭೩ರಾಮೋತ್, ಅನೇಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
74 アセル支派の中よりはミシアルとその郊地 アブドンとその郊地
೭೪ಅಶೇರನ ಕುಲದ ಸ್ವತ್ತಿನಿಂದ ಮಾಷಾಲ್, ಅಬ್ದೋನ್.
75 ホコクとその郊地レホブとその郊地
೭೫ಹೂಕೋಕ್, ರೆಹೋಬ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
76 ナフタリの支派の中よりはガリラヤのゲデシとその郊地 ハンモンとその郊地 キリアタイムとその郊地
೭೬ನಫ್ತಾಲಿ ಕುಲದ ಸ್ವತ್ತಿನಿಂದ ಗಲಿಲಾಯದ ಕೆದೆಷ್, ಹಮ್ಮೋನ್, ಕಿರ್ಯಾತಯಿಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
77 比外の者すなはちメラリの子孫に歸せし者はゼブルンの支派の中よりはリンモンとその郊地 タボルとその郊地
೭೭ಮಿಕ್ಕ ಲೇವಿಯರಾದ ಮೆರಾರಿಯರಿಗೆ ಜೆಬುಲೋನ್ ಕುಲದ ಸ್ವತ್ತಿನಿಂದ ರಿಮ್ಮೋನೋ, ತಾಬೋರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ,
78 ヱリコに對するヨルダンの彼旁すなはちヨルダンの東においてルベンの支派の中よりは曠野のベゼルとその郊地 ヤザとその郊地
೭೮ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ ಬೆಚೆರ್ ಮತ್ತು ಅದರ ಗೋಮಾಳಗಳು, ಯಹಚ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
79 ケデモテとその郊地 メバアテとその郊地
೭೯ಕೆದೇಮೋತ್ ಮತ್ತು ಅದರ ಗೋಮಾಳಗಳು, ಮೇಫಾತ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
80 ガドの支派の中よりはギレアデのラモテとその郊地 マハナイムとその郊地
೮೦ಗಾದ್ ಕುಲದ ಸ್ವತ್ತಿನಿಂದ ಗಿಲ್ಯಾದಿನ ರಾಮೋತ್ ಮತ್ತು ಅದರ ಗೋಮಾಳಗಳು ಮಹನಯಿಮ್,
81 ヘシボンとその郊地 ヤゼルとその郊地
೮೧ಹೆಷ್ಬೋನ್ ಮತ್ತು ಅದರ ಗೋಮಾಳಗಳು, ಯಗ್ಜೇರ್ ಮತ್ತು ಅದರ ಗೋಮಾಳಗಳು ಸಹಿತವಾದ ಪಟ್ಟಣಗಳು ದೊರಕಿದವು.

< 歴代誌Ⅰ 6 >