< Atti 28 >

1 E dopo che fummo scampati, riconoscemmo che l’isola si chiamava Malta.
ನಾವು ಸುರಕ್ಷಿತವಾಗಿ ದಡ ಸೇರಿದ ಮೇಲೆ, ಆ ದ್ವೀಪವು ಮಾಲ್ಟ ದ್ವೀಪವೆಂದು ಕಂಡುಕೊಂಡೆವು.
2 E i barbari usarono verso noi umanità non comune; poiché, acceso un gran fuoco, ci accolsero tutti, a motivo della pioggia che cadeva, e del freddo.
ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು.
3 Or Paolo, avendo raccolto una quantità di legna secche e avendole poste sul fuoco, una vipera, sentito il caldo, uscì fuori, e gli si attaccò alla mano.
ಪೌಲನು ಕಟ್ಟಿಗೆ ಕೂಡಿಸಿ ಹೊರೆಯನ್ನು ತಂದು ಬೆಂಕಿಯಲ್ಲಿ ಹಾಕಲು ಶಾಖದಿಂದ ಒಂದು ಸರ್ಪವು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
4 E quando i barbari videro la bestia che gli pendeva dalla mano, dissero fra loro: Certo, quest’uomo e un’omicida, perché essendo scampato dal mare, pur la Giustizia divina non lo lascia vivere.
ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
5 Ma Paolo, scossa la bestia nel fuoco, non ne risentì male alcuno.
ಆದರೆ ಪೌಲನು ಸರ್ಪವನ್ನು ಬೆಂಕಿಯೊಳಗೆ ಝಾಡಿಸಿ ಬಿಟ್ಟನು. ಅವನಿಗೆ ಯಾವ ಕೇಡೂ ಆಗಲಿಲ್ಲ.
6 Or essi si aspettavano ch’egli enfierebbe o cadrebbe di subito morto; ma dopo aver lungamente aspettato, veduto che non gliene avveniva alcun male, mutarono parere, e cominciarono a dire ch’egli era un dio.
ಅವನು ಬಾತುಹೋಗುತ್ತಾನೆ ಅಥವಾ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ ಎಂದು ಜನರು ಕಾದಿದ್ದರು. ಆದರೆ ಬಹಳ ಹೊತ್ತು ಕಾದು ನೋಡಿದ ಮೇಲೆ, ಅವನಿಗೆ ಕೆಟ್ಟದ್ದೇನೂ ಆಗದಿರುವುದನ್ನು ಕಂಡು ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿಕೊಂಡು, “ಇವನೊಬ್ಬ ದೇವರು” ಎಂದು ಹೇಳಿಕೊಂಡರು.
7 Or ne’ dintorni di quel luogo v’erano dei poderi dell’uomo principale dell’isola, chiamato Publio, il quale ci accolse, e ci albergò tre giorni amichevolmente.
ದ್ವೀಪದ ಮುಖ್ಯ ಅಧಿಕಾರಿ ಪೊಪ್ಲಿಯನೆಂಬುವನಿಗೆ ಸೇರಿದ ಹೊಲವು ಸಮೀಪದಲ್ಲಿಯೇ ಇತ್ತು. ಅವನು ನಮ್ಮನ್ನು ತನ್ನ ಮನೆಗೆ ಆಮಂತ್ರಿಸಿ ಮೂರು ದಿನ ನಮ್ಮನ್ನು ಉಪಚರಿಸಿದನು.
8 E accadde che il padre di Publio giacea malato di febbre e di dissenteria. Paolo andò a trovarlo; e dopo aver pregato, gl’impose le mani e lo guarì.
ಪೊಪ್ಲಿಯನ ತಂದೆ ಅಸ್ವಸ್ಥತೆಯಿಂದ ಮಲಗಿದ್ದನು. ಅವನು ಜ್ವರ ಮತ್ತು ರಕ್ತ ಭೇದಿಯಿಂದ ಬಾಧೆಗೊಳಗಾಗಿದ್ದನು. ಪೌಲನು ಅವನನ್ನು ಸಂದರ್ಶಿಸಿ, ಪ್ರಾರ್ಥನೆಮಾಡಿ, ಅವನ ಮೇಲೆ ತನ್ನ ಹಸ್ತಗಳನ್ನಿಟ್ಟು ಅವನನ್ನು ಗುಣಪಡಿಸಿದನು.
9 Avvenuto questo, anche gli altri che aveano delle infermità nell’isola, vennero, e furon guariti;
ಹೀಗಾದ ತರುವಾಯ ಆ ದ್ವೀಪದಲ್ಲಿಯೇ ಉಳಿದ ರೋಗಿಗಳು ಸಹ ಬಂದು ಗುಣಹೊಂದಿದರು.
10 ed essi ci fecero grandi onori; e quando salpammo, ci portarono a bordo le cose necessarie.
ಅವರು ಅನೇಕ ವಿಧವಾಗಿ ನಮ್ಮನ್ನು ಗೌರವಿಸಿದರು. ನಾವು ಪ್ರಯಾಣಕ್ಕೆ ಸಿದ್ಧರಾದಾಗ ನಮಗೆ ಅಗತ್ಯವಿದ್ದವುಗಳನ್ನೆಲ್ಲಾ ತಂದು ಒದಗಿಸಿಕೊಟ್ಟರು.
11 Tre mesi dopo, partimmo sopra una nave alessandrina che avea per insegna Castore e Polluce, e che avea svernato nell’isola.
ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು.
12 E arrivati a Siracusa, vi restammo tre giorni.
ಸುರಕೂಸ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ಮೂರು ದಿನ ಇದ್ದೆವು.
13 E di là, costeggiando, arrivammo a Reggio. E dopo un giorno, levatosi un vento di scirocco, in due giorni arrivammo a Pozzuoli.
ಅಲ್ಲಿಂದ ಸಮುದ್ರ ಪ್ರಯಾಣ ಮುಂದುವರಿಸಿ ರೇಗಿಯ ಪಟ್ಟಣಕ್ಕೆ ಬಂದೆವು. ಮರುದಿನ ದಕ್ಷಿಣ ಗಾಳಿ ಬೀಸುತ್ತಿದ್ದುದರಿಂದ ಎರಡನೆಯ ದಿನ ಪೊತಿಯೋಲ ರೇವನ್ನು ತಲುಪಿದೆವು.
14 E avendo quivi trovato de’ fratelli, fummo pregati di rimanere presso di loro sette giorni. E così venimmo a Roma.
ಅಲ್ಲಿ ಕೆಲವು ಸಹೋದರರು ನಮ್ಮನ್ನು ಕಂಡು ಒಂದು ವಾರ ತಮ್ಮೊಂದಿಗೆ ಕಳೆಯಬೇಕೆಂದು ಆಮಂತ್ರಿಸಿದರು. ಕೊನೆಗೆ ನಾವು ರೋಮ್ ಸೇರಿದೆವು.
15 Or i fratelli, avute nostre notizie, di là ci vennero incontro sino al Foro Appio e alle Tre Taverne; e Paolo, quando li ebbe veduti, rese grazie a Dio e prese animo.
ಅಲ್ಲಿದ್ದ ಸಹೋದರರು ನಾವು ಬರುತ್ತೇವೆಂಬ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ಅಪ್ಪಿಯ ಪೇಟೆಗೂ ತ್ರಿಛತ್ರದ ಬಳಿಗೂ ಬಂದರು. ಪೌಲನು ಅವರನ್ನು ನೋಡಿ ದೇವರ ಸ್ತುತಿ ಮಾಡಿ ಧೈರ್ಯ ತಂದುಕೊಂಡನು.
16 E giunti che fummo a Roma, a Paolo fu concesso d’abitar da sé col soldato che lo custodiva.
ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.
17 E tre giorni dopo, Paolo convocò i principali fra i Giudei; e quando furon raunati, disse loro: Fratelli, senza aver fatto nulla contro il popolo né contro i riti de’ padri, io fui arrestato in Gerusalemme e di là dato in man de’ Romani.
ಮೂರು ದಿನಗಳಾದ ಮೇಲೆ ಪೌಲನು ಯೆಹೂದ್ಯರ ನಾಯಕರನ್ನು ಕರೆಯಿಸಿದನು. ಅವರೆಲ್ಲರೂ ಬಂದಾಗ ಅವರಿಗೆ, “ನನ್ನ ಸಹೋದರರೇ, ನಮ್ಮ ಜನರಿಗೂ ನಮ್ಮ ಪೂರ್ವಜರಿಗೂ ವಿರೋಧವಾಗಿ ನಾನು ಏನನ್ನೂ ಮಾಡಲಿಲ್ಲ. ಆದರೂ ನನ್ನನ್ನು ಯೆರೂಸಲೇಮಿನಲ್ಲಿ ಬಂಧಿಸಿ ರೋಮನ್ನರ ವಶಕ್ಕೆ ಒಪ್ಪಿಸಲಾಯಿತು.
18 I quali, avendomi esaminato, volevano rilasciarmi perché non era in me colpa degna di morte.
ಅವರು ನನ್ನನ್ನು ವಿಚಾರಣೆ ಮಾಡಿ, ನಾನು ಮರಣಶಿಕ್ಷೆ ಹೊಂದಲು ಯಾವ ಅಪರಾಧವೂ ಇಲ್ಲದಿರುವುದನ್ನು ಕಂಡು ನನ್ನನ್ನು ಬಿಡುಗಡೆ ಮಾಡಲಿದ್ದರು.
19 Ma opponendovisi i Giudei, fui costretto ad appellarmi a Cesare, senza però aver in animo di portare alcuna accusa contro la mia nazione.
ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ.
20 Per questa ragione dunque vi ho chiamati per vedervi e per parlarvi; perché egli è a causa della speranza d’Israele ch’io sono stretto da questa catena.
ಈ ಕಾರಣದಿಂದಲೇ ನಾನು ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲರ ನಿರೀಕ್ಷೆಯ ನಿಮಿತ್ತವಾಗಿಯೇ ನಾನು ಈ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
21 Ma essi gli dissero: Noi non abbiamo ricevuto lettere dalla Giudea intorno a te, né è venuto qui alcuno de’ fratelli a riferire o a dir male di te.
ಅದಕ್ಕೆ ಅವರು, “ನಿನ್ನ ವಿಷಯದಲ್ಲಿ ಯೂದಾಯದಿಂದ ನಮಗೆ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರಲ್ಲಿ ಯಾರೂ ನಿನ್ನ ವಿಷಯದಲ್ಲಿ ಏನನ್ನೂ ವರದಿ ಮಾಡಿಲ್ಲ. ನಿನ್ನ ಬಗ್ಗೆ ಯಾವ ಕೆಟ್ಟದ್ದನ್ನೂ ಹೇಳಿಲ್ಲ.
22 Ben vorremmo però sentir da te quel che tu pensi; perché, quant’è a cotesta setta, ci è noto che da per tutto essa incontra opposizione.
ಆದರೆ ನಿನ್ನ ಅಭಿಪ್ರಾಯಗಳೇನೆಂಬುದನ್ನು ಕೇಳಲು ನಮಗೆ ಮನಸ್ಸಿದೆ. ಏಕೆಂದರೆ ಈ ಪಂಥದ ವಿರುದ್ಧವಾಗಿ ಎಲ್ಲಾ ಕಡೆಗಳಲ್ಲಿ ಜನರು ಮಾತನಾಡುತ್ತಿರುವುದನ್ನು ನಾವು ಬಲ್ಲೆವು,” ಎಂದರು.
23 E avendogli fissato un giorno, vennero a lui nel suo alloggio in gran numero; ed egli da mane a sera esponeva loro le cose, testimoniando del regno di Dio e persuadendoli di quel che concerne Gesù, con la legge di Mosè e coi profeti.
ಅವರು ಒಂದು ದಿನ ಪೌಲನೊಂದಿಗಿರಲು ಏರ್ಪಡಿಸಿ, ಅವನಿದ್ದ ಸ್ಥಳಕ್ಕೆ ಬಹುಮಂದಿ ಕೂಡಿಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನು ದೇವರ ರಾಜ್ಯದ ಬಗ್ಗೆ ಖಚಿತವಾಗಿ ಸಾಕ್ಷಿ ಕೊಡುತ್ತಾ, ಮೋಶೆಯ ನಿಯಮ ಮತ್ತು ಪ್ರವಾದಿಗಳ ಗ್ರಂಥಗಳಿಂದ ಯೇಸುವಿನ ಬಗ್ಗೆ ವಿವರಿಸಿ ಅವರ ಮನವೊಲಿಸಲು ಪ್ರಯತ್ನಿಸಿದನು.
24 E alcuni restaron persuasi delle cose dette; altri invece non credettero.
ಕೆಲವರಿಗೆ ಅವನು ಹೇಳಿದ್ದರ ಬಗ್ಗೆ ಮನದಟ್ಟಾಯಿತು.
25 E non essendo d’accordo fra loro, si ritirarono, dopo che Paolo ebbe detta quest’unica parola: Ben parlò lo Spirito Santo ai vostri padri per mezzo del profeta Isaia dicendo:
ಆದರೆ ಬೇರೆಯವರು ನಂಬಲಿಲ್ಲ. ಅವರು ತಮ್ಮತಮ್ಮಲ್ಲಿಯೇ ಭಿನ್ನಾಭಿಪ್ರಾಯ ಉಳ್ಳವರಾಗಿರಲು ಪೌಲನು ಅವರಿಗೆ, “ಪವಿತ್ರಾತ್ಮ ದೇವರು ನಿಮ್ಮ ಪಿತೃಗಳಿಗೆ ಪ್ರವಾದಿ ಯೆಶಾಯನ ಮುಖಾಂತರ ಈ ಮಾತುಗಳನ್ನು ಸರಿಯಾಗಿಯೇ ಹೇಳಿದ್ದಾರೆ:
26 Va’ a questo popolo e di’: Voi udrete coi vostri orecchi e non intenderete; guarderete coi vostri occhi, e non vedrete;
“‘ಈ ಜನರ ಬಳಿಗೆ ಹೋಗಿ ಹೇಳು, “ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.”
27 perché il cuore di questo popolo s’è fatto insensibile, son divenuti duri di orecchi, e hanno chiuso gli occhi, che talora non veggano con gli occhi, e non odano con gli orecchi, e non intendano col cuore, e non si convertano, ed io non li guarisca.
ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ಅವರು ತಮ್ಮ ಕಣ್ಣುಗಳಿಂದ ನೋಡಿ, ಕಿವಿಗಳಿಂದ ಕೇಳಿಸಿಕೊಂಡು, ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
28 Sappiate dunque che questa salvazione di Dio è mandata ai Gentili; ed essi presteranno ascolto.
“ಆದ್ದರಿಂದ ದೇವರ ರಕ್ಷಣೆಯು ಯೆಹೂದ್ಯರಲ್ಲದವರಿಗೆ ಒದಗಿ ಬಂದಿದೆ ಎಂಬುದು ನಿಮಗೆ ತಿಳಿದಿರಲಿ. ಅವರು ಅದಕ್ಕೆ ಕಿವಿಗೊಡುವರು,” ಎಂದನು.
29 Quand’ebbe detto questo, i Giudei se ne andarono discutendo vivamente fra loro.
ಪೌಲನು ಇದನ್ನು ಹೇಳಿದ ತರುವಾಯ ಯೆಹೂದ್ಯರು ತಮ್ಮತಮ್ಮಲ್ಲಿಯೇ ಕಟುವಾಗಿ ಚರ್ಚಿಸಿಕೊಳ್ಳುತ್ತಾ ಹೊರಟು ಹೋದರು.
30 E Paolo dimorò due anni interi in una casa da lui presa a fitto, e riceveva tutti coloro che venivano a trovarlo,
ಪೌಲನು ತಾನು ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಎರಡು ವರ್ಷಗಳ ಕಾಲವಿದ್ದು ತನ್ನ ಬಳಿಗೆ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದನು.
31 predicando il regno di Dio, e insegnando le cose relative al Signor Gesù Cristo con tutta franchezza e senza che alcuno glielo impedisse.
ಅವನು ಧೈರ್ಯದಿಂದ ಯಾವ ಅಡ್ಡಿ ಆತಂಕಗಳಿಲ್ಲದೇ ದೇವರ ರಾಜ್ಯವನ್ನು ಪ್ರಕಟಿಸುತ್ತಾ, ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿ ಉಪದೇಶ ಮಾಡುತ್ತಾ ಇದ್ದನು.

< Atti 28 >