< Salmi 115 >
1 Non a noi, Signore, non a noi, ma al tuo nome dà gloria, per la tua fedeltà, per la tua grazia.
ನಮಗಲ್ಲ ಯೆಹೋವ ದೇವರೇ, ನಮಗಲ್ಲ, ನಿಮ್ಮ ಹೆಸರಿಗೆ ಮಾತ್ರ ಮಹಿಮೆ, ನಿಮ್ಮ ಪ್ರೀತಿ ಮತ್ತು ಸತ್ಯತೆಯ ನಿಮಿತ್ತ ನಿಮಗೆ ಮಹಿಮೆಯಾಗಲಿ.
2 Perché i popoli dovrebbero dire: «Dov'è il loro Dio?».
“ಅವರ ದೇವರು ಎಲ್ಲಿ?” ಎಂದು ಜನಾಂಗಗಳು ಏಕೆ ಹೇಳಬೇಕು?
3 Il nostro Dio è nei cieli, egli opera tutto ciò che vuole.
ನಮ್ಮ ದೇವರು ಪರಲೋಕದಲ್ಲಿದ್ದಾರೆ; ಅವರು ಇಚ್ಛಿಸುವುದನ್ನೆಲ್ಲಾ ಮಾಡುತ್ತಾರೆ.
4 Gli idoli delle genti sono argento e oro, opera delle mani dell'uomo.
ಜನರ ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.
5 Hanno bocca e non parlano, hanno occhi e non vedono,
ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.
6 hanno orecchi e non odono, hanno narici e non odorano.
ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಮೂಗು ಉಂಟು, ಮೂಸುವದಿಲ್ಲ.
7 Hanno mani e non palpano, hanno piedi e non camminano; dalla gola non emettono suoni.
ಕೈಗಳುಂಟು, ಮುಟ್ಟುವುದಿಲ್ಲ; ಕಾಲುಗಳುಂಟು, ನಡೆಯುವುದಿಲ್ಲ; ಅವರ ಗಂಟಲಿನಿಂದ ಧ್ವನಿ ಉಚ್ಚರಿಸಲು ಸಾಧ್ಯವಿಲ್ಲ.
8 Sia come loro chi li fabbrica e chiunque in essi confida.
ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.
9 Israele confida nel Signore: egli è loro aiuto e loro scudo.
ಇಸ್ರಾಯೇಲರ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.
10 Confida nel Signore la casa di Aronne: egli è loro aiuto e loro scudo.
ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.
11 Confida nel Signore, chiunque lo teme: egli è loro aiuto e loro scudo.
ಯೆಹೋವ ದೇವರಿಗೆ ಭಯಪಡುವವರೇ, ನೀವು ಯೆಹೋವ ದೇವರಲ್ಲಿಯೇ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ ಗುರಾಣಿಯೂ ಆಗಿದ್ದಾರೆ.
12 Il Signore si ricorda di noi, ci benedice: benedice la casa d'Israele, benedice la casa di Aronne.
ಯೆಹೋವ ದೇವರು ನಮ್ಮನ್ನು ಜ್ಞಾಪಕ ಮಾಡಿಕೊಂಡಿದ್ದಾರೆ, ಅವರು ನಮ್ಮನ್ನು ಆಶೀರ್ವದಿಸುವರು; ಇಸ್ರಾಯೇಲರ ಮನೆಯನ್ನು ಆಶೀರ್ವದಿಸುವರು; ಆರೋನನ ಮನೆಯನ್ನು ಆಶೀರ್ವದಿಸುವರು.
13 Il Signore benedice quelli che lo temono, benedice i piccoli e i grandi.
ಯೆಹೋವ ದೇವರಿಗೆ ಭಯ ಪಡುವವರಾದ ಹಿರಿಯರನ್ನೂ ಕಿರಿಯರನ್ನೂ ಬೇಧವಿಲ್ಲದೇ ಆಶೀರ್ವದಿಸುವರು.
14 Vi renda fecondi il Signore, voi e i vostri figli.
ಯೆಹೋವ ದೇವರು ನಿಮ್ಮನ್ನು ಅಭಿವೃದ್ಧಿಪಡಿಸುವರು ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವರು.
15 Siate benedetti dal Signore che ha fatto cielo e terra.
ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದ ನೀವು ಆಶೀರ್ವಾದ ಹೊಂದಿದವರು.
16 I cieli sono i cieli del Signore, ma ha dato la terra ai figli dell'uomo.
ಉನ್ನತ ಆಕಾಶಗಳು ಯೆಹೋವ ದೇವರದೇ, ಆದರೆ ಅವರು ಭೂಮಿಯನ್ನು ಮಾನವರಿಗೆ ಕೊಟ್ಟಿದ್ದಾರೆ.
17 Non i morti lodano il Signore, né quanti scendono nella tomba.
ಸತ್ತವರೂ ಮೌನಲೋಕವನ್ನು ಇಳಿದವರೆಲ್ಲರೂ ಯೆಹೋವ ದೇವರನ್ನು ಸ್ತುತಿಸುವುದಿಲ್ಲ.
18 Ma noi, i viventi, benediciamo il Signore ora e sempre.
ಆದರೆ ನಾವು ಈಗಲೂ ಯುಗಯುಗಕ್ಕೂ ಯೆಹೋವ ದೇವರನ್ನು ಸ್ತುತಿಸುವೆವು. ಯೆಹೋವ ದೇವರನ್ನು ಸ್ತುತಿಸಿರಿ.