< Esodo 27 >
1 Farai l'altare di legno di acacia: avrà cinque cubiti di lunghezza e cinque cubiti di larghezza. L'altare sarà quadrato e avrà l'altezza di tre cubiti.
“ಇದಲ್ಲದೆ ಜಾಲಿ ಮರದಿಂದ ಬಲಿಪೀಠವನ್ನು ಮಾಡಬೇಕು. ಅದರ ಎತ್ತರವು ಸುಮಾರು ಒಂದು ಮೀಟರ್ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್ ಚಚ್ಚೌಕವಾಗಿರಬೇಕು.
2 Farai ai suoi quattro angoli quattro corni e saranno tutti di un pezzo. Lo rivestirai di rame.
ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಬೇಕು.
3 Farai i suoi recipienti per raccogliere le ceneri, le sue pale, i suoi vasi per la aspersione, le sue forchette e i suoi bracieri. Farai di rame tutti questi accessori.
ಅದರ ಬೂದಿಯನ್ನು ತೆಗೆಯುವದಕ್ಕಾಗಿ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಮತ್ತು ಬಲಿಪೀಠದ ಉಪಕರಣಗಳನ್ನೆಲ್ಲಾ ಕಂಚಿನಿಂದ ಮಾಡಬೇಕು.
4 Farai per esso una graticola di rame alle sue quattro estremità.
ಅದಕ್ಕೆ ಹೆಣಿಗೆ ಕೆಲಸದಿಂದ ಕಂಚಿನ ಜಾಳಿಗೆಯನ್ನು ಮಾಡಿ, ಆ ಜಾಳಿಗೆಯ ನಾಲ್ಕು ಮೂಲೆಗಳಿಗೆ ಕಂಚಿನ ನಾಲ್ಕು ಬಳೆಗಳನ್ನು ಮಾಡಬೇಕು.
5 La porrai sotto la cornice dell'altare, in basso: la rete arriverà a metà dell'altezza dell'altare.
ಆ ಜಾಳಿಗೆಯು ಬಲಿಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಅದನ್ನು ಬಲಿಪೀಠದ ಕೆಳಭಾಗದಿಂದ ಮಧ್ಯದವರೆಗೆ ಇರುವಂತೆ ಮಾಡಬೇಕು.
6 Farai anche stanghe per l'altare: saranno stanghe di legno di acacia e le rivestirai di rame.
ಬಲಿಪೀಠಕ್ಕೆ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳನ್ನು ಕಂಚಿನಿಂದ ಹೊದಿಸಬೇಕು.
7 Si introdurranno queste stanghe negli anelli e le stanghe saranno sui due lati dell'altare quando lo si trasporta.
ಆ ಕೋಲುಗಳನ್ನು ಬಳೆಗಳಲ್ಲಿ ಸೇರಿಸಬೇಕು. ಅವುಗಳು ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಇರಬೇಕು.
8 Lo farai di tavole, vuoto nell'interno: lo si farà come ti fu mostrato sul monte.
ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಬೇಕು.
9 Farai poi il recinto della Dimora. Sul lato meridionale, verso sud, il recinto avrà tendaggi di bisso ritorto, per la lunghezza di cento cubiti sullo stesso lato.
“ಗುಡಾರದ ಅಂಗಳವನ್ನು ಮಾಡಬೇಕು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಬೇಕು. ಅವು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು.
10 Vi saranno venti colonne con venti basi di rame. Gli uncini delle colonne e le loro aste trasversali saranno d'argento.
ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಬೇಕು.
11 Allo stesso modo sul lato rivolto a settentrione: tendaggi per cento cubiti di lunghezza, le relative venti colonne con le venti basi di rame, gli uncini delle colonne e le aste trasversali d'argento.
ಹಾಗೆಯೇ ಉತ್ತರ ದಿಕ್ಕಿನ ಪರದೆಗಳು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು, ಇಪ್ಪತ್ತು ಸ್ತಂಭಗಳು ಮತ್ತು ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಆ ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಬೇಕು.
12 La larghezza del recinto verso occidente avrà cinquanta cubiti di tendaggi, con le relative dieci colonne e le dieci basi.
“ಅಂಗಳದ ಪಶ್ಚಿಮ ಭಾಗದಲ್ಲಿ ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾದ ಪರದೆಗಳು, ಹತ್ತು ಸ್ತಂಭಗಳು ಮತ್ತು ಆ ಸ್ತಂಭಗಳಿಗೆ ಹತ್ತು ಗದ್ದಿಗೇ ಕಲ್ಲುಗಳಿರಬೇಕು.
13 La larghezza del recinto sul lato orientale verso levante sarà di cinquanta cubiti:
ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಅಂಗಳದ ಅಗಲವು ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾಗಿರಬೇಕು.
14 quindici cubiti di tendaggi con le relative tre colonne e le tre basi alla prima ala;
ದ್ವಾರದ ಒಂದು ಬದಿಯ ಪರದೆಗಳು ಸುಮಾರು ಆರುವರೆ ಮೀಟರ್ ಉದ್ದವಾಗಿರಬೇಕು. ಅವುಗಳಿಗೆ ಮೂರು ಸ್ತಂಭಗಳು, ಆ ಸ್ತಂಭಗಳಿಗೆ ಮೂರು ಕಾಲು ಗದ್ದಿಗೇ ಕಲ್ಲುಗಳು ಇರಬೇಕು.
15 all'altra ala quindici cubiti di tendaggi, con le tre colonne e le tre basi.
ಎರಡೂ ಕಡೆಗಳಲ್ಲಿ ಸುಮಾರು ಆರುವರೆ ಮೀಟರ್ ಉದ್ದವಾದ ಪರದೆಗಳು, ಅವುಗಳಿಗೆ ಮೂರು ಸ್ತಂಭಗಳು ಮತ್ತು ಮೂರು ಗದ್ದಿಗೇ ಕಲ್ಲುಗಳಿರಬೇಕು.
16 Alla porta del recinto vi sarà una cortina di venti cubiti, lavoro di ricamatore, di porpora viola, porpora rossa, scarlatto e bisso ritorto, con le relative quattro colonne e le quattro basi.
“ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ, ಅದಕ್ಕೆ ನಾಲ್ಕು ಸ್ತಂಭಗಳು ಮತ್ತು ನಾಲ್ಕು ಗದ್ದಿಗೇ ಕಲ್ಲುಗಳಿರಬೇಕು.
17 Tutte le colonne intorno al recinto saranno fornite di aste trasversali d'argento: i loro uncini saranno d'argento e le loro basi di rame.
ಅಂಗಳದ ಸುತ್ತಲಿರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಂಡಿಗಳು ಮತ್ತು ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿರಬೇಕು.
18 La lunghezza del recinto sarà di cento cubiti, la larghezza di cinquanta, l'altezza di cinque cubiti; di bisso ritorto, con le basi di rame.
ಅಂಗಳದ ಉದ್ದ ಸುಮಾರು ನಲವತ್ತೈದು ಮೀಟರ್, ಅಗಲ ಸುಮಾರು ಇಪ್ಪತ್ತಮೂರು ಮೀಟರ್, ಅದರ ಎತ್ತರ ಸುಮಾರು ಎರಡು ಮೀಟರ್ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು, ಅವುಗಳ ಕುಳಿಗಳನ್ನು ಕಂಚಿನಿಂದ ಮಾಡಿಸಬೇಕು.
19 Tutti gli arredi della Dimora per tutti i suoi servizi e tutti i picchetti come anche i picchetti del recinto saranno di rame.
ಗುಡಾರದ ಕೆಲಸಕ್ಕೆ ಬೇಕಾಗುವ ಎಲ್ಲಾ ಉಪಕರಣಗಳು, ಅಂಗಳದ ಸುತ್ತಲೂ ಇರುವ ಎಲ್ಲಾ ಗೂಟಗಳೂ ಕಂಚಿನಿಂದ ಮಾಡಿದ್ದವುಗಳಾಗಿರಬೇಕು.
20 Tu ordinerai agli Israeliti che ti procurino olio puro di olive schiacciate per il candelabro, per tener sempre accesa una lampada.
“ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.
21 Nella tenda del convegno, al di fuori del velo che sta davanti alla Testimonianza, Aronne e i suoi figli la prepareranno, perché dalla sera alla mattina essa sia davanti al Signore: rito perenne presso gli Israeliti di generazione in generazione.
ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ಇಸ್ರಾಯೇಲರಿಗೆ ಮತ್ತು ಅವರ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರಬೇಕು.