< Keluaran 13 >
1 TUHAN berkata kepada Musa,
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
2 "Persembahkanlah semua anak laki-laki yang sulung kepada-Ku. Setiap anak laki-laki sulung Israel, dan setiap ternak jantan yang pertama lahir, adalah milik-Ku."
“ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಮೀಸಲಾಗಿಡು. ಮನುಷ್ಯರಾಗಿರಲಿ, ಪಶುಪ್ರಾಣಿಗಳಾಗಿರಲಿ ಪ್ರಥಮ ಗರ್ಭಫಲವು ನನ್ನದಾಗಿದೆ,” ಎಂದರು.
3 Musa berkata kepada bangsa Israel, "Pada hari ini TUHAN membebaskan kamu dengan kuasa-Nya yang besar, sehingga kamu dapat keluar dari Mesir, tempat kamu diperbudak. Sebab itu, peringatilah hari ini. Janganlah makan roti yang beragi.
ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.
4 Pada hari ini, tanggal satu bulan Abib atau bulan satu, kamu meninggalkan negeri Mesir.
ಅಬೀಬ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
5 Dengan sumpah TUHAN menjanjikan kepada nenek moyangmu untuk menyerahkan kepadamu negeri bangsa Kanaan, Het, Amori, Hewi dan Yebus. Sesudah TUHAN membawa kamu ke negeri yang kaya dan subur itu, setiap tahun dalam bulan Abib, kamu harus mengadakan upacara ini.
ಆದ್ದರಿಂದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಹಿವ್ವಿಯರ, ಯೆಬೂಸಿಯರ ದೇಶಕ್ಕೆ ನಿಮ್ಮನ್ನು ಕರೆತಂದು ಅದನ್ನು ನಿಮಗೆ ಕೊಟ್ಟಾಗ ಈ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸಬೇಕು.
6 Selama tujuh hari kamu harus makan roti yang tidak beragi, dan pada hari yang ketujuh harus diadakan perayaan untuk menghormati TUHAN.
ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಯೆಹೋವ ದೇವರಿಗೆ ಹಬ್ಬವನ್ನಾಚರಿಸಬೇಕು.
7 Selama tujuh hari kamu tidak boleh makan roti yang beragi, dan di seluruh negerimu tidak boleh ada ragi atau sesuatu pun yang beragi.
ಆ ಏಳು ದಿನಗಳಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಅಲ್ಲದೆ ನಿಮ್ಮ ಬಳಿಯಲ್ಲಿ ಹುಳಿಯಾಗಲಿ ಇಲ್ಲವೆ ಹುಳಿಹಿಟ್ಟಾಗಲಿ ನಿಮ್ಮ ಯಾವ ಮೇರೆಯಲ್ಲೂ ಕಾಣಬಾರದು.
8 Pada permulaan perayaan itu kamu harus menceritakan kepada anakmu yang laki-laki bahwa semua itu kamu lakukan karena segala yang sudah diperbuat TUHAN bagimu pada waktu kamu meninggalkan negeri Mesir.
ಆ ದಿನದಲ್ಲಿ ನಿಮ್ಮ ಮಕ್ಕಳಿಗೆ, ‘ನಾವು ಈಜಿಪ್ಟಿನಿಂದ ಹೊರಗೆ ಬಂದಾಗ ಯೆಹೋವ ದೇವರು ನಮಗೆ ಮಾಡಿದ್ದನ್ನು ಸ್ಮರಿಸುವುದಕ್ಕಾಗಿ ಇದನ್ನು ಆಚರಿಸುತ್ತೇವೆ,’ ಎಂದು ತಿಳಿಸಬೇಕು.
9 Perayaan ini menjadi pengingat untukmu seperti tanda yang diikat pada tangan atau dahimu. Perayaan ini mengingatkan kamu untuk terus mengucapkan dan mempelajari Hukum-hukum TUHAN, sebab TUHAN mengeluarkan kamu dari Mesir dengan kuasa-Nya yang besar.
ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.
10 Rayakanlah pesta ini setiap tahun pada waktu yang ditentukan."
ಹೀಗಿರುವುದರಿಂದ ನೀವು ಪ್ರತಿ ವರುಷವು ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಗೊಳ್ಳಬೇಕು.
11 Musa berkata kepada bangsa Israel, "TUHAN akan mengantar kamu ke negeri Kanaan yang dijanjikan-Nya dengan sumpah kepadamu dan nenek moyangmu. Sesudah tanah itu menjadi milikmu,
“ಯೆಹೋವ ದೇವರು ನಿಮಗೂ ನಿಮ್ಮ ಪಿತೃಗಳಿಗೂ ಪ್ರಮಾಣ ಮಾಡಿದ ಪ್ರಕಾರ, ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ, ಅದನ್ನು ನಿಮಗೆ ಕೊಟ್ಟನಂತರ,
12 kamu harus mempersembahkan setiap anak lelaki yang sulung dan setiap ternak jantan yang pertama lahir. Semuanya itu milik TUHAN,
ನಿಮ್ಮಲ್ಲಿಯೂ ನಿಮ್ಮ ಪಶುಪ್ರಾಣಿಗಳಲ್ಲಿಯೂ ಹುಟ್ಟುವ ಪ್ರತಿಯೊಂದು ಗರ್ಭದ ಪ್ರಥಮ ಫಲವನ್ನು ನೀವು ಯೆಹೋವ ದೇವರಿಗೆ ಕೊಡಬೇಕು.
13 tetapi tiap keledai jantan yang pertama lahir harus ditebus dari TUHAN dengan mengurbankan seekor anak domba sebagai gantinya. Kalau kamu tidak mau menebus keledai itu, lehernya harus dipatahkan. Setiap anakmu laki-laki yang pertama lahir harus ditebus.
ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ವಿಮೋಚಿಸಿಕೊಳ್ಳಬೇಕು. ಹಾಗೆ ವಿಮೋಚಿಸಿಕೊಳ್ಳದೆ ಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರಲ್ಲಿ ಚೊಚ್ಚಲ ಗಂಡು ಮಕ್ಕಳನ್ನು ಬದಲುಕೊಟ್ಟು, ವಿಮೋಚಿಸಲೇಬೇಕು.
14 Kalau di kemudian hari anakmu bertanya apa arti semuanya itu, kamu harus menjawab begini, 'Dengan kuasa yang besar TUHAN membawa kita keluar dari negeri Mesir, tempat kita diperbudak.
“ಮುಂದೆ ಬರುವ ಕಾಲದಲ್ಲಿ ನಿಮ್ಮ ಪುತ್ರರು ನಿಮಗೆ, ‘ಇದರ ಅರ್ಥವೇನು?’ ಎಂದು ಕೇಳುವಾಗ, ನೀವು ಅವರಿಗೆ, ‘ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನ ದಾಸತ್ವದೊಳಗಿಂದ ಹೊರಗೆ ಬರಮಾಡಿದ್ದಾರೆ.
15 Ketika raja Mesir berkeras kepala dan tidak mau melepaskan kita pergi, TUHAN membunuh setiap anak laki-laki yang sulung di Mesir, baik anak manusia maupun anak hewan. Itulah sebabnya kita mengurbankan kepada TUHAN setiap ternak jantan yang pertama lahir, tetapi kita tebus anak-anak kita yang sulung.'
ಫರೋಹನು ಹಟಮಾರಿತನದಿಂದ ನಮ್ಮನ್ನು ಕಳುಹಿಸದೆ ಇದ್ದಾಗ, ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಎಂದರೆ, ಮನುಷ್ಯರ ಹಾಗೂ ಪಶುಪ್ರಾಣಿಗಳ ಚೊಚ್ಚಲಾದವುಗಳನ್ನು ಕೊಂದುಹಾಕಿದರು. ಆದ್ದರಿಂದ ಚೊಚ್ಚಲ ಗಂಡುಗಳನ್ನೆಲ್ಲಾ ಯೆಹೋವ ದೇವರಿಗೆ ಅರ್ಪಿಸುತ್ತೇವೆ. ನಮ್ಮ ಪುತ್ರರಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇವೆ,’
16 Kebiasaan itu menjadi pengingat bagi kita seperti tanda yang diikat pada tangan atau dahi kita. Dengan demikian kita akan tetap diingatkan bahwa TUHAN telah mengeluarkan kita dari Mesir dengan kuasa yang besar."
ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು.
17 Sesudah raja Mesir melepas bangsa Israel pergi, Allah tidak membawa mereka lewat jalan yang melalui negeri Filistin, walaupun itu jalan yang paling pendek. Allah berpikir, "Jangan-jangan orang-orang itu menyesal kalau melihat bahwa mereka harus berperang, lalu kembali ke Mesir."
ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ದಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು,” ಎಂದು ಹೇಳಿದರು.
18 Karena itu Allah membawa mereka lewat jalan putar melalui padang gurun menuju Laut Gelagah. Pada waktu meninggalkan Mesir, orang-orang Israel itu bersenjata seperti akan berperang.
ಹೀಗಿರುವುದರಿಂದ ಯೆಹೋವ ದೇವರು ಜನರನ್ನು ಕೆಂಪುಸಮುದ್ರದ ಮರುಭೂಮಿಯಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದರು. ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಈಜಿಪ್ಟ್ ದೇಶದೊಳಗಿಂದ ಹೋದರು.
19 Musa membawa tulang-tulang Yusuf, sebab semasa hidupnya Yusuf menyuruh orang Israel bersumpah untuk berbuat begitu. Begini pesan Yusuf, "Pada waktu Allah membebaskan kamu, jenazahku harus kamu bawa dari tempat ini."
ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. ಏಕೆಂದರೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಜವಾಗಿಯೂ ನಿಮ್ಮ ಸಹಾಯಕ್ಕೆ ಬರುವರು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು,” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು.
20 Orang Israel meninggalkan Sukot dan berkemah di kota Etam, di tepi padang gurun.
ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ, ಏತಾಮಿನ ಮರುಭೂಮಿಯ ಅಂಚಿನಲ್ಲಿ ಇಳಿದುಕೊಂಡರು.
21 Pada waktu siang TUHAN berjalan di depan mereka dalam tiang awan dan pada waktu malam Ia mendahului mereka dalam tiang api untuk menunjukkan jalan. Dengan demikian mereka dapat berjalan siang dan malam.
ಇದಲ್ಲದೆ ಅವರು ಹಗಲೂ ರಾತ್ರಿಯೂ ಪ್ರಯಾಣ ಮಾಡುವ ಹಾಗೆ ಯೆಹೋವ ದೇವರು ಹಗಲಲ್ಲಿ ಅವರಿಗೆ ದಾರಿ ತೋರಿಸುವುದಕ್ಕೆ ಮೇಘದ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವುದಕ್ಕೆ ಅಗ್ನಿಯ ಸ್ತಂಭದಲ್ಲಿಯೂ ಅವರ ಮುಂದೆ ಹೋದರು.
22 Sepanjang hari tiang awan berada di depan bangsa itu dan sepanjang malam tiang api menyertai mereka.
ದೇವರು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದುಬಿಡಲಿಲ್ಲ.