< Példabeszédek 18 >
1 A maga kivánsága után megy az agyas ember, minden igaz bölcseség ellen dühösködik.
೧ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ, ಸಮಸ್ತ ಸುಜ್ಞಾನಕ್ಕೂ ರೇಗುವನು.
2 Nem gyönyörködik a bolond az értelemben, hanem abban, hogy az ő elméje nyilvánvalóvá legyen.
೨ಮೂಢನಿಗೆ ವಿವೇಕವು ಅನಿಷ್ಟ; ಸ್ವಭಾವವನ್ನು ಹೊರಪಡಿಸಿಕೊಳ್ಳುವುದೇ ಅವನಿಗಿಷ್ಟ.
3 Mikor eljő az istentelen, eljő a megútálás; és a szidalommal a gyalázat.
೩ದುರಾಚಾರವಿದ್ದಲ್ಲಿ ತಾತ್ಸಾರ; ಅವಮಾನವಿದ್ದಲ್ಲಿ ಧಿಕ್ಕಾರ.
4 Mély víz az ember szájának beszéde, buzogó patak a bölcseségnek kútfeje.
೪ಸತ್ಪುರುಷನ ನುಡಿಯು ಆಳವಾದ ನೀರು, ಜ್ಞಾನದ ಬುಗ್ಗೆ, ಹರಿಯುವ ತೊರೆ.
5 A gonosz személyének kedvezni nem jó, elfordítani az igazat az ítéletben.
೫ದುಷ್ಟನಿಗೆ ಪ್ರಸನ್ನನಾಗಿ ಶಿಷ್ಟನಿಗೆ ನ್ಯಾಯತಪ್ಪಿಸುವುದು ಅಧರ್ಮ.
6 A bolondnak beszédei szereznek versengést, és az ő szája ütésekért kiált.
೬ಜ್ಞಾನಹೀನನ ತುಟಿಗಳು ಜಗಳವನ್ನು ಉಂಟುಮಾಡುತ್ತವೆ, ಅವನ ಬಾಯಿ ಪೆಟ್ಟುತಿನ್ನುವುದಕ್ಕೆ ಕೂಗಿಕೊಳ್ಳುತ್ತದೆ.
7 A bolondnak szája az ő romlása, és az ő beszédei az ő életének tőre.
೭ಜ್ಞಾನಹೀನನಿಗೆ ಬಾಯಿ ನಾಶ, ತುಟಿಗಳು ಪಾಶ.
8 A susárlónak beszédei hizelkedők; és azok a szív belsejét áthatják.
೮ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು, ಹೊಟ್ಟೆಯೊಳಕ್ಕೇ ಇಳಿಯುವವು.
9 A ki lágyan viseli magát az ő dolgában, testvére annak, a ki tönkre tesz.
೯ಕೆಲಸಗಳ್ಳನು ಕೆಡುಕನಿಗೆ ತಮ್ಮ.
10 Erős torony az Úrnak neve, ahhoz folyamodik az igaz, és bátorságos lészen.
೧೦ಯೆಹೋವನ ನಾಮವು ಬಲವಾದ ಬುರುಜು, ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.
11 A gazdagnak vagyona az ő erős városa, és mint a magas kőfal, az ő gondolatja szerint.
೧೧ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದು, ಎತ್ತರವಾದ ಗೋಡೆಯೆಂದು ಭಾವಿಸಿಕೊಳ್ಳುತ್ತಾನೆ.
12 A megromlás előtt felfuvalkodik az ember elméje; a tisztesség előtt pedig alázatosság van.
೧೨ಭಂಗಕ್ಕೆ ಮೊದಲು ಗರ್ವದ ಹೃದಯ, ಮಾನಕ್ಕೆ ಮುಂಚೆ ದೀನತೆ.
13 A ki felel valamit, míg meg nem hallja, ez bolondság és gyalázatos rá nézve.
೧೩ಗಮನಿಸದೆ ಉತ್ತರಕೊಡುವವನು, ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.
14 A férfiú lelke elviseli a maga erőtlenségét; de a megtört lelket ki viseli el?
೧೪ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು?
15 Az eszesnek elméje tudományt szerez, és a bölcseknek füle tudományt keres.
೧೫ವಿವೇಕಿಯ ಹೃದಯವು ತಿಳಿವಳಿಕೆಯನ್ನು ಸಂಪಾದಿಸುವುದು, ಜ್ಞಾನಿಯ ಕಿವಿಯು ತಿಳಿವಳಿಕೆಯನ್ನು ಹುಡುಕುವುದು.
16 Az embernek ajándéka szabad útat szerez néki, és a nagyoknak orczája elé viszi őt.
೧೬ಕಾಣಿಕೆಯು ಅನುಕೂಲತೆಗೂ, ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನ.
17 Igaza van annak, a ki első a perben; mígnem eljő az ő peresfele, és megvizsgálja őt.
೧೭ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು, ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವುದು.
18 A versengéseket megszünteti a sorsvetés, és az erőseket elválasztja.
೧೮ಚೀಟು ಹಾಕುವುದರಿಂದ ವ್ಯಾಜ್ಯಶಮನವೂ, ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವುದು.
19 A felingerelt atyafiú erősb az erős városnál, és az ilyen versengések olyanok, mint a vár zárja.
೧೯ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಅನ್ಯಾಯಹೊಂದಿದ ಸಹೋದರನನ್ನು ಗೆಲ್ಲುವುದು ಅಸಾಧ್ಯ, ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.
20 A férfi szájának hasznával elégedik meg az ő belseje; az ő beszédének jövedelmével lakik jól.
೨೦ಮನುಷ್ಯನು ತನ್ನ ಬಾಯಿಯ ಬೆಳೆಯನ್ನು ಹೊಟ್ಟೆ ತುಂಬಾ ಉಣ್ಣುವನು, ತನ್ನ ತುಟಿಗಳ ಫಲವನ್ನು ಸಾಕಷ್ಟು ತಿನ್ನುವನು.
21 Mind a halál, mind az élet a nyelv hatalmában van, és a miképen kiki szeret azzal élni, úgy eszi annak gyümölcsét.
೨೧ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,
22 Megnyerte a jót, a ki talált feleséget, és vett jóakaratot az Úrtól!
೨೨ಪತ್ನಿಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ.
23 Alázatos kérést szól a szegény; a gazdag pedig keményen felel.
೨೩ಬಡವನು ಬಿನ್ನೈಸುವನು, ಬಲ್ಲಿದನು ಉತ್ತರವನ್ನು ಉಗ್ರವಾಗಿ ಕೊಡುವನು.
24 Az ember, a kinek sok barátja van, széttöretik; de van barát, a ki ragaszkodóbb a testvérnél.
೨೪ಬಹಳ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ, ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.