< 2 Krónika 22 >
1 És királylyá tevék Jeruzsálem lakosai helyette az ő legkisebb fiát Akháziát; mert az idősebbeket mind megölték azok, a kik az Arábiabeliekkel jöttek vala a táborba. Uralkodék azért Akházia, Jórámnak a Júda királyának fia.
೧ಯೆರೂಸಲೇಮಿನವರು ಯೆಹೋರಾಮನ ಮರಣದ ನಂತರ, ಅವನ ಕಿರಿಯ ಮಗನಾದ ಅಹಜ್ಯನನ್ನು ಅರಸನನ್ನಾಗಿ ಮಾಡಿದರು. ಅರಬಿಯರೊಡನೆ ಯೆಹೋರಾಮನ ಪಾಳೆಯಕ್ಕೆ ಬಂದ ಕೊಳ್ಳೆಗಾರರು ಅವನ ಹಿರಿಯ ಮಕ್ಕಳನ್ನೆಲ್ಲಾ ಕೊಂದುಬಿಟ್ಟಿದ್ದರು. ಆದುದರಿಂದ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು.
2 Akházia negyvenkét esztendős volt, mikor királylyá lett, és egy esztendeig uralkodék Jeruzsálemben. Anyjának neve Athália volt, a ki az Omri leánya vala.
೨ಅಹಜ್ಯನು ಪಟ್ಟಕ್ಕೆ ಬಂದಾಗ ಅವನಿಗೆ ನಲ್ವತ್ತೆರಡು ವರ್ಷವಾಗಿತ್ತು. ಅವನು ಯೆರೂಸಲೇಮಿನಲ್ಲಿ ಒಂದು ವರ್ಷ ಆಡಳಿತ ನಡೆಸಿದನು. ಒಮ್ರಿಯನ ಮೊಮ್ಮಗಳಾದ ಅತಲ್ಯ ಎಂಬಾಕೆಯು ಇವನ ತಾಯಿ.
3 Ő is az Akháb házának útjain jára; mert az ő anyja vala néki tanácsadója az istentelen cselekedetre.
೩ತನ್ನ ತಾಯಿಯ ದುರ್ಬೋಧನೆಗೆ ಕಿವಿಗೊಟ್ಟು, ಇವನೂ ದುರಾಚಾರಿಯಾಗಿ ಅಹಾಬನ ಮನೆಯವರ ಮಾರ್ಗದಲ್ಲೇ ನಡೆದನು.
4 És gonoszul cselekedék az Úr szemei előtt, miképen az Akháb háznépe, mert azok voltak tanácsadói atyja halála után, az ő veszedelmére.
೪ಅವನ ತಂದೆ ತೀರಿಹೋದ ಮೇಲೆ ಅಹಾಬನ ಕುಟುಂಬದವರೇ, ಅವನಿಗೆ ತಪ್ಪಾದ ಸಲಹೆ ಕೊಡುವವರಾದರು. ಆದುದರಿಂದ ಅವನು ಯೆಹೋವನಿಗೆ ವಿರುದ್ಧವಾಗಿ ದ್ರೋಹಿಯಾಗಿ ನಡೆದನು.
5 Sőt azoknak tanácsa után indulva, hadba méne Jórámmal az Akháb fiával az Izráel királyával Hazáel ellen a Siriabeli király ellen, Rámóth Gileádba; de a Siriabeliek Jórámot megverék.
೫ಅವರ ಪ್ರೇರಣೆಯಿಂದಲೇ ಅವನು ಇಸ್ರಾಯೇಲರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ, ರಾಮೋತ್ ಗಿಲ್ಯಾದಿಗೆ ಹೋದನು. ಅರಾಮ್ಯರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಿದರು.
6 Visszatért azért Jórám, hogy meggyógyíttassa magát Jezréel városában; mert sebek valának rajta, melyekkel megsebesíttetett Rámában, mikor Hazáel ellen, Siria királya ellen harczolt. Akházia pedig, Jórámnak a Júda királyának fia, aláméne, hogy meglátogatná Jórámot, az Akháb fiát Jezréelben, mert beteg vala.
೬ಅರಾಮ್ಯರು ಯೋರಾಮನಿಗೆ ರಾಮದಲ್ಲಿ ಮಾಡಿದ ಗಾಯಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಾಗಿ ಅವನು ಇಜ್ರೇಲಿಗೆ ಬಂದನು. ಯೋರಾಮನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗನಾಗಿರುವ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.
7 Hogy Akházia Jórámhoz méne, Isten akaratából, az ő romlása vala, mert odaérkezvén, elméne Jórámmal Jéhu ellen, a ki a Nimsi fia volt, a kit az Úr felkenetett, hogy kiírtaná az Akháb háznépét.
೭ಅಹಜ್ಯನು ಯೋರಾಮನ ಬಳಿಗೆ ಹೋದದ್ದು ದೈವಸಂಕಲ್ಪದಿಂದಲೇ. ಅವನು ಅಲ್ಲಿ ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗನಾದ ಯೇಹುವನ್ನು ಎದುರುಗೊಳ್ಳುವುದಕ್ಕೆ ಹೋದನು. ಯೆಹೋವನು ಅಹಾಬನ ಮನೆಯನ್ನು ನಿರ್ನಾಮ ಮಾಡುವುದಕ್ಕಾಗಿಯೇ ಯೇಹುವಿಗೆ ಪಟ್ಟಾಭಿಷೇಕ ಮಾಡಿಸಿದ್ದನು.
8 Lőn azért, mikor Jéhu az Akháb házán bosszút álla, rátalált a Júda fejedelmeire és az Akházia testvéreinek fiaira, a kik Akháziának szolgálnak vala, és megölé őket.
೮ಯೇಹುವು, ಅಹಾಬನ ಮನೆಯವರ ಮೇಲೆ ಆ ನಿರ್ಣಯವನ್ನು ನೆರವೇರಿಸುತ್ತಿರುವಾಗ, ತನಗೆ ಸಿಕ್ಕಿದ ಯೆಹೂದ್ಯ ಪ್ರಧಾನರನ್ನೂ, ಅಹಜ್ಯನಿಗೆ ಸೇವೆಮಾಡುತ್ತಿದ್ದ, ಅವನ ಅಣ್ಣತಮ್ಮಂದಿರ ಮಕ್ಕಳನ್ನೂ ಕೊಲ್ಲಿಸಿದನು.
9 Akháziát is keresé és megfogák őt, (ki Samariában rejtőzött vala el) és vivék őt Jéhuhoz, a ki megöleté őt. De eltemették, mert ezt mondják róla: Mégis a Jósafát fia volt, a ki teljes szívvel keresé az Urat. És nem vala immár senki az Akházia háznépe közül a ki képes lett volna a királyságra.
೯ಆಮೇಲೆ ಅಹಜ್ಯನನ್ನು ಹುಡುಕಿಸಿದನು; ಅವನು ಸಮಾರ್ಯದಲ್ಲಿ ಅಡಗಿಕೊಂಡಿದ್ದನು. ಜನರು ಅವನನ್ನು ಯೇಹುವಿನ ಬಳಿಗೆ ಹಿಡಿದು ತಂದು ಕೊಂದರು, “ಇವನು ಪೂರ್ಣಹೃದಯದಿಂದ ಯೆಹೋವನನ್ನು ಹುಡುಕಿದ, ಯಥಾರ್ಥಭಕ್ತನಾದ ಯೆಹೋಷಾಫಾಟನ ಮೊಮ್ಮಗನಲ್ಲವೇ” ಎಂದುಕೊಂಡು ಅವನನ್ನು ಸಮಾಧಿಮಾಡಿದರು. ರಾಜ್ಯಾಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಅಹಜ್ಯನ ಮನೆಯವರಲ್ಲಿ ಸಮರ್ಥರಾರೂ ಉಳಿಯಲಿಲ್ಲ.
10 És Athália az Akházia anyja, látván, hogy az ő fia meghalt: felkele és megölé a Júda háznépének minden királyi sarját.
೧೦ಅಹಜ್ಯನು ಮರಣ ಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದ ಕೂಡಲೆ ಯೆಹೂದ ರಾಜ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.
11 De Jósabát a király leánya vevé Joást az Akházia fiát, és kivivé őt titkon a király fiai közül, a kik megölettek, és elrejté őt és az ő dajkáját az ágyasházban. És elrejté őt Jósabát, a Jórám király leánya, a ki a Jójada pap felesége volt, (mert Akháziának huga vala) Athália elől, hogy őt meg ne ölhesse.
೧೧ಆದರೆ ರಾಜಪುತ್ರಿಯಾದ ಯೆಹೋಷಬತ್ ಎಂಬಾಕೆಯು, ಹತರಾಗುತ್ತಿದ್ದ ರಾಜಪುತ್ರರ ಮಧ್ಯದಿಂದ ಅಹಜ್ಯನ ಮಗನಾದ ಯೆಹೋವಾಷನನ್ನು, ಯಾರಿಗೂ ತಿಳಿಯದಂತೆ ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು. ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ಸಹೋದರಿಯೂ, ಯಾಜಕನಾದ ಯೆಹೋಯಾದನ ಹೆಂಡತಿಯೂ, ಆಗಿದ್ದ ಯೆಹೋಷಬತಳು ಹೀಗೆ ಅವನನ್ನು ಅತಲ್ಯಳಿಂದ ಹತನಾಗದಂತೆ ರಕ್ಷಿಸಿದಳು.
12 És náluk vala az Úr házában elrejtve hat esztendeig. Athália pedig uralkodék az ország felett.
೧೨ಅವನು ಆರು ವರ್ಷಗಳವರೆಗೂ ಅವರೊಡನೆ ಗುಪ್ತವಾಗಿ ದೇವಾಲಯದಲ್ಲಿ ಇದ್ದನು. ಆಗ ಅತಲ್ಯಳೇ ದೇಶವನ್ನಾಳುತ್ತಿದ್ದಳು.