< Jeremiás 19 >
1 Így szól az Örökkévaló: Menj és végy cserépkancsót a fazekastól, és néhánnyal a nép vénei közül és a papok vénei közül
೧ಯೆಹೋವನು ನನಗೆ ಹೀಗೆ ಹೇಳಿದನು, “ಹೊರಡು, ಕುಂಬಾರನು ಮಾಡಿದ ಮಣ್ಣಿನ ಮಡಕೆಯನ್ನು ಕೊಂಡುಕೊಂಡು, ಜನರ ಹಿರಿಯರಲ್ಲಿಯೂ ಮತ್ತು ಯಾಜಕರ ಹಿರಿಯರಲ್ಲಿಯೂ ಕೆಲವರನ್ನು ಆರಿಸಿಕೋ.
2 menj ki Ben-Hinnóm völgyébe, mely a Charszit-kapu bejáratánál van és hirdesd ott a szavakat, melyeket szólni fogok hozzád.
೨ನೀನು ಬೋಕಿಯ ಬಾಗಿಲಿನ ಸಮೀಪದಲ್ಲಿರುವ ಬೆನ್ ಹಿನ್ನೋಮ್ ತಗ್ಗಿಗೆ ಹೋಗಿ, ನಾನು ನಿನಗೆ ತಿಳಿಸುವ ಮಾತುಗಳನ್ನು ಸಾರು.
3 És mondjad: Halljátok az Örökkévaló igéjét, Jehúda királyai és Jeruzsálem lakói. Így szól az Örökkévaló, a seregek ura, Izrael Istene: íme én oly veszedelmet hozok e helyre, hogy bárki hallja megcsendülnek fülei.
೩ನೀನು ಅವರಿಗೆ, ‘ಯೆಹೂದದ ಅರಸರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವನ ಮಾತನ್ನು ಕೇಳಿರಿ! ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ಈ ಸ್ಥಳದ ಮೇಲೆ ಕೇಡನ್ನು ಬರಮಾಡುವೆನು; ಅದರ ಸುದ್ದಿಯನ್ನು ಕೇಳುವವರ ಎರಡು ಕಿವಿಗಳೂ ಗಿರುಗುಟ್ಟುವವು.
4 Mivelhogy elhagytak engem és idegenné tették ezt a helyet, füstölögtettek benne más isteneknek, amelyeket nem ismertek, ők és őseik és Jehúda királyai, és megtöltötték ezt a helyet ártatlanok vérével.
೪“‘ಈ ಜನರು ನನ್ನನ್ನು ತೊರೆದು ತಮಗಾಗಲಿ, ತಮ್ಮ ಪೂರ್ವಿಕರಿಗಾಗಲಿ ಅಥವಾ ಯೆಹೂದದ ಅರಸರಿಗಾಗಲಿ ತಿಳಿಯದ ಅನ್ಯದೇವತೆಗಳಿಗೆ ಧೂಪಹಾಕುತ್ತಾ, ಈ ಸ್ಥಳವನ್ನು ಅನ್ಯಸ್ಥಾನವನ್ನಾಗಿ ಮಾಡಿದ್ದಾರೆ.
5 És építették a Báal magaslatait, hogy fiaikat tűzben égessék el, égőáldozatokul a Báalnak, amit nem parancsoltam és nem mondtam és ami nem jutott eszembe.
೫ಅವರು ಅದನ್ನು ನಿರ್ದೋಷಿಗಳ ರಕ್ತದಿಂದ ತುಂಬಿಸಿ, ತಮ್ಮ ಮಕ್ಕಳನ್ನು ಬಾಳ್ ದೇವತೆಗೆ ಆಹುತಿ ಕೊಡುವುದಕ್ಕೆ ಬಾಳನ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡಿದ್ದಾರಲ್ಲಾ. ನಾನು ಇಂಥಾ ಆಚಾರವನ್ನು ವಿಧಿಸಲಿಲ್ಲ, ಅದರ ಮಾತನ್ನೇ ಆಡಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.
6 Azért íme napok jönnek, úgymond az Örökkévaló, és nem nevezik többé ezt a helyet Tófetnek és Hinnóm fia völgyének, hanem öldöklés völgyének.
೬ಆಹಾ, ಈ ಕಾರಣದಿಂದ ಈ ಸ್ಥಳಕ್ಕೆ ತೋಫೆತ್ ಮತ್ತು ಬೆನ್ ಹಿನ್ನೋಮಿನ ತಗ್ಗು ಎಂಬ ಹೆಸರುಗಳು ಹೋಗಿ ಕೊಲೆಯ ತಗ್ಗು ಎಂಬ ಹೆಸರಾಗುವ ಕಾಲ ಬರುವುದು.
7 Es kiürítem Jehúda és Jeruzsálem tanácsát ezen a helyen és elejtem őket kard által ellenségeik előtt és azok keze által, kik életükre törnek, és hullájukat eledelül adom az ég madarának és a föld vadjának.
೭ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇಮಿನವರ ಆಲೋಚನೆಯನ್ನು ಮಣ್ಣುಪಾಲುಮಾಡಿ, ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ, ಆ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು.
8 És teszem ezt a várost iszonyattá és pisszegéssé; bárki elmegy mellette, eliszonyodik és pisszeg mind a csapásai miatt.
೮ನಾನು ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.
9 És megetetem velük fiaik húsát és leányaik húsát és kiki felebarátjának húsát eszi a körülzárásban és a szorongatásban, mellyel szorongatják őket ellenségeik és azok, kik életükre törnek.
೯ಅವರು ತಮ್ಮ ಗಂಡು ಹೆಣ್ಣು ಮಕ್ಕಳ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಅವರ ಪ್ರಾಣವನ್ನು ಹುಡುಕುವ ಶತ್ರುಗಳು ಅವರನ್ನು ಮುತ್ತಿ, ಸಂಕಟಕ್ಕೆ ಗುರಿಮಾಡುವಾಗ, ಅವರು ತಮ್ಮ ಇಷ್ಟ ಮಿತ್ರರ ಮಾಂಸವನ್ನೂ ತಿನ್ನುವಂತೆ ಮಾಡುವೆನು. ಇದು ಯೆಹೋವನಾದ ನನ್ನ ನುಡಿ.’”
10 Erre törd el a kancsót azon emberek szeme láttára, kik veled mennek.
೧೦ಆಗ ನೀನು ನಿನ್ನ ಸಂಗಡ ಬಂದವರ ಕಣ್ಣೆದುರಿಗೆ ಆ ಮಡಿಕೆಯನ್ನು ಒಡೆದುಬಿಟ್ಟು ಅವರಿಗೆ ಹೀಗೆ ಹೇಳು,
11 És szólj hozzájuk: Így szól az Örökkévaló, a seregek ura: Úgy fogom eltörni ezt a népet és ezt a várost, amint eltörik a fazekas edényét, amely többé helyre nem állítható; és majd Tófetben temetnek, mert nincs hely temetésre.
೧೧“ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಕುಂಬಾರನು ಒಡೆದು ಸರಿಪಡಿಸಲಾಗದ ಮಣ್ಣಿನ ಪಾತ್ರೆಯಂತೆ ನಾನು ಈ ಜನವನ್ನು ಮತ್ತು ಪಟ್ಟಣವನ್ನು ಒಡೆದುಬಿಡುವೆನು; ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಶವಗಳನ್ನು ತೋಫೆತಿನಲ್ಲಿ ಹೂಣುವರು.
12 Így fogok tenni e hellyel, úgymond az Örökkévaló, és lakóival, hogy olyanná teszem ezt a várost, mint Tófet.
೧೨ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಹೀಗೆ ನಾಶಪಡಿಸಿ, ಈ ಪಟ್ಟಣವನ್ನು ತೋಫೆತಿನ ಸ್ಥಿತಿಗೆ ತರುವೆನು.
13 Olyanok lesznek ugyanis Jeruzsálem házai és Jehúda királyainak házai, mint Tófet helye, tisztátalanok, mindama házak, amelyeknek tetőin füstölögtettek az ég egész seregének és öntőáldozatokat öntöttek más isteneknek.
೧೩ಯೆರೂಸಲೇಮಿನ ಮನೆಗಳೂ, ಯೆಹೂದದ ಅರಸರ ಮನೆಗಳೂ ಅಂದರೆ ಯಾವ ಯಾವ ಮನೆಗಳ ಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಹಾಕಿ, ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ, ಆ ಮನೆಗಳೆಲ್ಲಾ ಹೊಲಸಾಗಿ ತೋಫೆತ್ ಎಂಬ ಸ್ಥಳಕ್ಕೆ ಸಮಾನವಾಗುವವು.’”
14 És jött Jirmejáhú Tófetből, ahová őt az Örökkévaló küldötte volt, hogy prófétáljon, és megállt az Örökkévaló házának udvarában és szólt az egész néphez:
೧೪ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತುಕೊಂಡು,
15 Így szól az Örökkévaló, a seregek ura, Izrael Istene: Íme én elhozom a városra és mind a városaira azt az egész veszedelmet, melyet kimondtam ellene, mert megkeményítették nyakukat, nem hallgatva szavamra.
೧೫“ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ಈ ಪಟ್ಟಣದವರೂ ಮತ್ತು ಇದರ ಸುತ್ತಣ ಎಲ್ಲಾ ಊರುಗಳವರೂ ನನ್ನ ಮಾತುಗಳನ್ನೂ ಕೇಳದೆ, ತಮ್ಮ ಮನಸ್ಸನ್ನು ಕಠಿಣಮಾಡಿಕೊಂಡ ಕಾರಣ, ನಾನು ಈ ಪಟ್ಟಣಕ್ಕೆ ಕೊಟ್ಟ ಶಾಪದ ಕೇಡನ್ನೆಲ್ಲಾ ಇವರಿಗೆ ಬರಮಾಡುವೆನು” ಎಂದು ಸಮಸ್ತ ಜನರಿಗೆ ಸಾರಿದನು.