< 1 Királyok 18 >
1 Volt sok idő múlva, lett az Örökkévaló igéje Élijáhúhoz a harmadik évben, mondván: Menj, mutatkozzál Achábnak, hadd adok esőt a föld színére.
ಅನೇಕ ದಿವಸಗಳಾದ ತರುವಾಯ, ಮೂರನೆಯ ವರ್ಷದಲ್ಲಿ, ಯೆಹೋವ ದೇವರ ವಾಕ್ಯವು ಎಲೀಯನಿಗೆ ಬಂದಿತು, “ನೀನು ಹೋಗಿ ಅಹಾಬನಿಗೆ ನಿನ್ನನ್ನು ಪ್ರಕಟಿಸಿಕೋ. ಆಗ ನಾನು ಭೂಮಿಯ ಮೇಲೆ ಮಳೆಯನ್ನು ಕಳುಹಿಸುವೆನು,” ಎಂದು ಹೇಳಿದರು.
2 Ment tehát Élijáhú, hogy mutatkozzék Achábnak; az éhség pedig erős volt Sómrónban.
ಎಲೀಯನು ಅಹಾಬನಿಗೆ ತನ್ನನ್ನು ಪ್ರಕಟಿಸಿಕೊಳ್ಳಲು ಹೋದನು. ಆದರೆ ಸಮಾರ್ಯದಲ್ಲಿ ಬರವು ಘೋರವಾಗಿತ್ತು.
3 És szólította Acháb Óbadjáhút, ki a ház fölött volt – Óbadjáhú pedig nagyon félte az Örökkévalót;
ಅಹಾಬನು ತನ್ನ ಮನೆಯ ಉಗ್ರಾಣಿಕನಾದ ಓಬದ್ಯನನ್ನು ಕರೆದನು. ಓಬದ್ಯನು ಯೆಹೋವ ದೇವರಿಗೆ ಬಹಳ ಭಯಭಕ್ತಿವುಳ್ಳವನಾಗಿದ್ದನು.
4 és történt, mikor kiirtotta Ízébel az Örökkévaló prófétáit, vett Obadjáhú száz prófétát és elrejtette őket, ötven embert egy – egy barlangban és ellátta őket kenyérrel és vízzel –
ಈಜೆಬೆಲಳು ಯೆಹೋವ ದೇವರ ಪ್ರವಾದಿಗಳನ್ನು ಕೊಲ್ಲುತ್ತಿದ್ದಾಗ, ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು, ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು, ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.
5 és szólt Acháb Óbadjáhúhoz: Menj az országban mind a forrásokhoz és mind a patakokhoz, hátha találunk valami füvet, hogy életben tartsunk lovat és öszvért és ki ne fogyjunk a baromból.
ಅಹಾಬನು ಓಬದ್ಯನಿಗೆ, “ನೀನು ದೇಶದಲ್ಲಿರುವ ಎಲ್ಲಾ ನೀರಿನ ಬುಗ್ಗೆಗಳ ಬಳಿಗೂ, ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳೆದುಕೊಳ್ಳದ ಹಾಗೆ ಕುದುರೆಗಳನ್ನೂ, ಹೇಸರಗತ್ತೆಗಳನ್ನೂ ಜೀವದಿಂದ ಇರಿಸುವುದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು. ಆಗ ನಾವು ಅವುಗಳನ್ನು ಕೊಲ್ಲುವ ಅವಶ್ಯಕತೆ ಇರುವುದಿಲ್ಲ,” ಎಂದನು.
6 És fölosztották maguk közt az országot, hogy bejárják; Acháb ment az egyik úton egyedül, és Óbadjáhú ment a másik úton egyedül.
ಅವರು ದೇಶವನ್ನು ಹಾದು ಹೋಗಲು, ಅದನ್ನು ವಿಭಾಗ ಮಾಡಿಕೊಂಡು ಅಹಾಬನು ಒಂದು ಮಾರ್ಗದಲ್ಲಿಯೂ, ಓಬದ್ಯನು ಮತ್ತೊಂದು ಮಾರ್ಗದಲ್ಲಿಯೂ ಪ್ರತ್ಯೇಕವಾಗಿ ಹೋದರು.
7 Midőn Óbadjáhú az útban volt, íme elejébe jött Élijáhú; reáismert, arcra vetette magát és mondta: Te vagy-e az, uram Élijáhú?
ಓಬದ್ಯನು ಮಾರ್ಗದಲ್ಲಿ ಹೋಗುತ್ತಿರುವಾಗ, ಎಲೀಯನು ಅವನನ್ನು ಸಂಧಿಸಿದನು. ಓಬದ್ಯನು ಅವನನ್ನು ಗುರುತಿಸಿ ಸಾಷ್ಟಾಂಗ ನಮಸ್ಕಾರಮಾಡಿ, “ನೀನು ನನ್ನ ಒಡೆಯನಾದ ಎಲೀಯನಲ್ಲವೋ?” ಎಂದನು.
8 Mondta neki: Én vagyok! Menj, mondjad uradnak: itt van Élijáhú!
ಎಲೀಯನು ಅವನಿಗೆ, “ನಾನೇ, ನೀನು ಹೋಗಿ, ‘ಎಲೀಯನು ಇಲ್ಲಿದ್ದಾನೆ’ ಎಂದು ನಿನ್ನ ಯಜಮಾನನಿಗೆ ಹೇಳು,” ಎಂದನು.
9 És mondta: Mit vétettem, hogy Acháb kezébe akarod adni szolgádat, hogy megöljön engem?
ಅದಕ್ಕವನು, “ಅಹಾಬನು ನನ್ನನ್ನು ಕೊಂದುಹಾಕುವ ಹಾಗೆ ನೀನು ನಿನ್ನ ಸೇವಕನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲು ನಾನೇನು ಪಾಪಮಾಡಿದೆನು?
10 Él az Örökkévaló, a te Istened, nincsen nemzet és királyság, ahova nem küldött volna uram, hogy téged keressen, de azt mondták: nincs itt, akkor megeskette azt a királyságot és nemzetet arra, hogy csakugyan nem találnak téged.
ನಿನ್ನ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಯಜಮಾನನು ನಿನ್ನನ್ನು ಹುಡುಕಲು ಕಳುಹಿಸದ ಜನಾಂಗವೂ, ರಾಜ್ಯವೂ ಒಂದೂ ಇಲ್ಲ. ಅವರು, ‘ಎಲೀಯನು ನಮ್ಮಲ್ಲಿ ಇಲ್ಲ,’ ಎಂದು ಹೇಳಿದಾಗ, ಅಹಾಬನು ಆ ರಾಜ್ಯಕ್ಕೂ, ಜನಾಂಗಕ್ಕೂ ಆಣೆ ಇಡಿಸಿಕೊಂಡನು.
11 És most te azt mondod: menj, mondjad uradnak, itt van Élijáhú!
ಈಗ ನೀನು, ‘ಇಗೋ, ಎಲೀಯನು ಇಲ್ಲಿದ್ದಾನೆಂದು ನಿನ್ನ ಯಜಮಾನನಿಗೆ ತಿಳಿಸು,’ ಎಂದು ಹೇಳುತ್ತೀ.
12 És lészen, én majd elmegyek tőled, s az Örökkévaló szelleme elvisz téged, nem tudom hová, én meg odamegyek, hogy tudtára adjam Achábnak a hírt, de ő nem talál téged és megöl engem – pedig szolgád féli az Örökkévalót ifjúkoromtól fogva.
ನಾನು ನಿನ್ನನ್ನು ಬಿಟ್ಟು ಹೋಗುವಾಗ, ಯೆಹೋವ ದೇವರ ಆತ್ಮರು ನಾನರಿಯದ ಸ್ಥಳಕ್ಕೆ ನಿನ್ನನ್ನು ಒಯ್ಯುವರು. ನಾನು ಬಂದು ಅಹಾಬನಿಗೆ ತಿಳಿಸಿದಾಗ, ಅವನು ನಿನ್ನನ್ನು ಕಾಣದೆ ಹೋದರೆ ನನ್ನನ್ನು ಕೊಂದುಹಾಕುವನು. ಆದರೆ ನಿನ್ನ ಸೇವಕನಾದ ನಾನು ನನ್ನ ಚಿಕ್ಕಂದಿನಿಂದ ಯೆಹೋವ ದೇವರನ್ನು ಆರಾಧಿಸುತ್ತೇನೆ.
13 Hiszen tudtára adták uramnak azt, amit tettem, mikor Ízébel megölte az Örökkévaló prófétáit? Elrejtettem az Örökkévaló prófétái közül száz embert, ötven ötven embert egy barlangban és elláttam őket kenyérrel és vízzel.
ಈಜೆಬೆಲಳು ಪ್ರವಾದಿಗಳನ್ನು ಕೊಲ್ಲುತ್ತಿದ್ದ ಸಮಯದಲ್ಲಿ ಯೆಹೋವ ದೇವರ ಪ್ರವಾದಿಗಳನ್ನು ನೂರು ಮಂದಿಯನ್ನು, ಐವತ್ತು ಐವತ್ತು ಮಂದಿಯಾಗಿ ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು ಸಂರಕ್ಷಿಸಿದ್ದು ನನ್ನ ಯಜಮಾನನಾದ ನೀನು ಕೇಳಿಸಿಕೊಳ್ಳಲಿಲ್ಲವೇ?
14 És most te azt mondod: menj, mondjad uradnak: itt van Élijáhú, hogy megöljön!
ಆದರೆ ಈಗ ನನ್ನ ಯಜಮಾನನು ನನ್ನನ್ನು ಕೊಂದುಹಾಕುವ ಹಾಗೆ, ‘ಎಲೀಯನು ಇದ್ದಾನೆ ಎಂದು ನೀನು ಹೋಗಿ ಅವನಿಗೆ ಹೇಳು,’ ಎಂಬುದಾಗಿ ನೀನು ಹೇಳುತ್ತೀ,” ಎಂದನು.
15 Mondta Élijáhú: Él az Örökkévaló, a seregek ura, ki előtt én álltam, bizony ma mutatkozom neki.
ಅದಕ್ಕೆ ಎಲೀಯನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸೇನಾಧೀಶ್ವರ ಯೆಹೋವ ದೇವರಾಣೆ, ಇಂದು ನನ್ನನ್ನು ಅವನಿಗೆ ತೋರಿಸಿಕೊಳ್ಳುವೆನು,” ಎಂದನು.
16 Ment tehát Óbadjahú Acháb elejébe és tudtára adta neki; erre elment Acháb Élíjáhú elejébe.
ಹೀಗೆ ಓಬದ್ಯನು ಅಹಾಬನೆದುರಿಗೆ ಹೋಗಿ ತಿಳಿಸಿದ್ದರಿಂದ ಅಹಾಬನು ಎಲೀಯನನ್ನು ಎದುರುಗೊಳ್ಳಲು ಹೋದನು.
17 És volt, amint meglátta Acháb Élijáhút, így szólt hozzá Acháb: Te vagy-e az, Izraél megzavarója?
ಅಹಾಬನು ಎಲೀಯನನ್ನು ಕಂಡಾಗ ಅವನಿಗೆ, “ಇಸ್ರಾಯೇಲನ್ನು ಕಷ್ಟಕ್ಕೆ ಒಳಪಡಿಸುವವನು ನೀನಲ್ಲವೋ?” ಎಂದನು.
18 Mondta: Nem én zavartam meg Izraélt, hanem te és atyád háza azzal, hogy elhagytátok az Örökkévaló parancsolatait és jártál a Báalok után.
ಅದಕ್ಕೆ ಅವನು, “ನಾನು ಇಸ್ರಾಯೇಲನ್ನು ಕಳವಳಪಡಿಸುವುದಿಲ್ಲ. ಆದರೆ ನೀನೂ, ನಿನ್ನ ತಂದೆಯ ಕುಟುಂಬದವರೂ ಯೆಹೋವ ದೇವರ ಆಜ್ಞೆಯನ್ನು ತೊರೆದುಬಿಟ್ಟು, ಬಾಳನನ್ನು ಹಿಂಬಾಲಿಸುವ ನೀವೇ ಕಳವಳಪಡಿಸುವವರು.
19 Most pedig küldj el, gyűjtsd hozzám egész Izraélt a Karmel hegyére, meg Báal prófétáit, négyszázötvenet és az Aséra prófétáit, négyszázat, az Ízébel asztalánál evőket.
ಆದ್ದರಿಂದ ನೀನು ಕರ್ಮೆಲು ಬೆಟ್ಟದ ಬಳಿಯಲ್ಲಿ ಸಮಸ್ತ ಇಸ್ರಾಯೇಲನ್ನೂ, ಬಾಳನ ನಾನೂರ ಐವತ್ತು ಮಂದಿ ಪ್ರವಾದಿಗಳನ್ನೂ, ಈಜೆಬೆಲಳ ಮೇಜಿನ ಹತ್ತಿರ ಭೋಜನಮಾಡುವ ಅಶೇರನ ನಾನೂರು ಮಂದಿ ಪ್ರವಾದಿಗಳನ್ನೂ ನನ್ನ ಬಳಿಗೆ ಕೂಡಿಸು,” ಎಂದನು.
20 Ekkor küldött Acháb mind az Izraél fiaihoz, és a Karmel hegyére gyűjtötte a prófétákat.
ಹೀಗೆ ಅಹಾಬನು ಇಸ್ರಾಯೇಲರೆಲ್ಲರನ್ನೂ ಕರೆಯಿಸಿ, ಕರ್ಮೆಲು ಬೆಟ್ಟದ ಬಳಿಯಲ್ಲಿ ಪ್ರವಾದಿಗಳನ್ನು ಕೂಡಿಸಿದನು.
21 Odalépett Élijáhu az egész néphez és mondta: Meddig akartok ti ugrálni két ágon? Ha az Örökkévaló az Isten, járjatok ő utána, ha pedig a Báal, járjatok ő utána! De nem felelt neki a nép semmit.
ಆಗ ಎಲೀಯನು ಸಕಲ ಜನರ ಬಳಿಗೆ ಬಂದು, “ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರವರೆಗೂ ನಿಂತುಕೊಂಡಿರುವಿರಿ? ಯೆಹೋವ ದೇವರು ದೇವರಾಗಿದ್ದರೆ, ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ,” ಎಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.
22 Ekkor szólt Élijáhú a néphez: Én egyedül maradtam meg prófétául az Örökkévalónak, a Báal prófétái pedig négyszázötvenen vannak.
ಆಗ ಎಲೀಯನು ಜನರಿಗೆ, “ಯೆಹೋವ ದೇವರ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ. ಆದರೆ ಬಾಳನ ಪ್ರವಾದಿಗಳು ನಾನೂರ ಐವತ್ತು ಮಂದಿಯಿದ್ದಾರೆ.
23 Adjanak nekünk két tulkot, válasszák ők maguknak az egyik tulkot, darabolják el ég tegyék a fára, de tüzet ne tegyenek alája; én meg elkészítem a másik tulkot, ráteszem a fára, de tüzet nem teszek alája.
ಈಗ ಎರಡು ಹೋರಿಗಳನ್ನು ಅವರು ನಮಗೆ ಕೊಡಲಿ. ಒಂದು ಹೋರಿಯನ್ನು ಅವರು ಆಯ್ದುಕೊಂಡು, ಅದನ್ನು ತುಂಡುತುಂಡಾಗಿ ಕಡಿದು, ಬೆಂಕಿ ಹಾಕದೆ, ಕಟ್ಟಿಗೆಗಳ ಮೇಲೆ ಇಡಲಿ. ನಾನು ಇನ್ನೊಂದು ಹೋರಿಯನ್ನು ಹಾಗೆ ಮಾಡಿ, ಬೆಂಕಿ ಹಾಕದೆ ಕಟ್ಟಿಗೆಗಳ ಮೇಲೆ ಇಡುವೆನು.
24 Akkor szólítsátok a ti istenteknek nevét, én pedig szólítom az Örökkévaló nevét; és lészen, amely isten tűzben felel, az az Isten! Erre felelt az egész nép és mondták: Jól van így!
ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಅನಂತರ ನಾನು ಯೆಹೋವ ದೇವರ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ, ಬೆಂಕಿಯನ್ನು ಕಳುಹಿಸುವರೋ, ಅವರೇ ದೇವರೆಂದು ನಿಶ್ಚಯಿಸೋಣ,” ಎಂದನು. ಅದಕ್ಕೆ ಜನರೆಲ್ಲರು ಉತ್ತರವಾಗಿ, “ಈ ಮಾತು ಸರಿ,” ಎಂದರು.
25 És mondta Élijáhú a Báal prófétáinak: Válasszátok magatoknak az egyik tulkot és készítsétek el elébb ti, mert ti vagytok többen; szólítsátok istenteknek nevét, de tüzet ne tegyetek alá.
ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಅನೇಕರಾಗಿರುವುದರಿಂದ ಒಂದು ಹೋರಿಯನ್ನು ಆಯ್ದುಕೊಂಡು, ಅದನ್ನು ಮೊದಲು ಸಿದ್ಧಮಾಡಿ, ನಿಮ್ಮ ದೇವರುಗಳ ಹೆಸರನ್ನು ಕರೆಯಿರಿ. ಆದರೆ ಬೆಂಕಿಯನ್ನು ಹೊತ್ತಿಸಬೇಡಿರಿ,” ಎಂದನು.
26 Vették tehát a tulkot, melyet adtak nekik, elkészítették azt és szólították a Báal nevét reggeltől délig, mondván: Oh Báal, hallgass meg minket! De se szó, se válasz. Ekkor ugrándoztak az oltárra, melyet készítettek.
ಅವರು ತಮಗೆ ಕೊಟ್ಟ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. “ಬಾಳನೇ, ನಮಗೆ ಕಿವಿಗೊಡು,” ಎಂದು ಉದಯದಿಂದ ಮಧ್ಯಾಹ್ನದವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ, ಉತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು.
27 És volt déltájt, kicsúfolta őket Élijáhú és mondta: Kiáltsatok fennhangon, mert isten ő, talán beszélni valója, talán akadálya van, talán útja van; hátha alszik, majd fölébred!
ಮಧ್ಯಾಹ್ನದಲ್ಲಿ ಎಲೀಯನು ಅವರನ್ನು ಗೇಲಿಮಾಡಿ ಅವರಿಗೆ, “ದೊಡ್ಡ ಶಬ್ದದಿಂದ ಕೂಗಿರಿ, ಏಕೆಂದರೆ ಅವನು ಒಬ್ಬ ದೇವರಲ್ಲವೇ? ಒಂದು ವೇಳೆ ಅವನು ಧ್ಯಾನದಲ್ಲಿರಬಹುದು; ಇಲ್ಲವೆ ಯಾವುದೋ ಕೆಲಸದಲ್ಲಿರಬಹುದು; ಇಲ್ಲವೆ ಪ್ರಯಾಣದಲ್ಲಿದ್ದಾನೆ; ಇಲ್ಲವೆ ಅವನು ನಿದ್ದೆಯಲ್ಲಿದ್ದಾನೆ; ಈಗ ಅವನು ಎಚ್ಚರವಾಗಬೇಕು,” ಎಂದನು.
28 Erre kiáltottak fennhangon és megvagdalták magukat szokásuk szerint kardokkal éa lándzsákkal, míg vér omlott el rajtuk.
ಅವರು ದೊಡ್ಡ ಶಬ್ದದಿಂದ ಕೂಗಿ, ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಖಡ್ಗಗಳಿಂದಲೂ, ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು.
29 És volt, mikor elmúlt a dél, prófétáztak a lisztáldozat bemutatása idejéig; de se hang, se válasz, se figyelem.
ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸುವ ವೇಳೆಯವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೆ ಶಬ್ದವಾದರೂ, ಉತ್ತರ ಕೊಡುವವನಾದರೂ, ಲಕ್ಷಿಸುವವನಾದರೂ ಇರಲಿಲ್ಲ.
30 Ekkor mondta Élijáhú az egész népnek: Lépjetek ide hozzám! És odalépett hozzá az egész nép; és helyreállította az Örökkévalónak lerombolt oltárát.
ಆಗ ಎಲೀಯನು ಸಮಸ್ತ ಜನರಿಗೂ, “ನನ್ನ ಬಳಿಗೆ ಬನ್ನಿರಿ,” ಎಂದನು. ಜನರೆಲ್ಲರು ಅವನ ಬಳಿಗೆ ಬಂದರು. ಕಿತ್ತು ಹಾಕಿದ ಯೆಹೋವ ದೇವರ ಬಲಿಪೀಠವನ್ನು ಅವನು ದುರಸ್ತಿ ಮಾಡಿದನು.
31 Vett Élijáhú tizenkét követ – Jákób fiai törzseinek száma szerint, akihez volt az Örökkévaló igéje, mondván: Izraél legyen a neved –
“ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವುದು,” ಎಂದು ಯೆಹೋವ ದೇವರ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ, ಎಲೀಯನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,
32 oltárt épített a kövekből az Örökkévaló nevére és az oltár körül csinált mintegy két mértéknyi vetőmagnak helyét.
ಆ ಕಲ್ಲುಗಳಿಂದ ಯೆಹೋವ ದೇವರ ಹೆಸರಿಗೆ ಬಲಿಪೀಠವನ್ನು ಕಟ್ಟಿ, ಆ ಬಲಿಪೀಠದ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗೆಸಿ, ಒಂದು ಕಾಲುವೆಯನ್ನು ಮಾಡಿದನು.
33 Elrendezte a fát, szétdarabolta a tulkot és rátette a fára.
ತರುವಾಯ ಅವನು ಕಟ್ಟಿಗೆಗಳನ್ನು ಪೀಠದ ಮೇಲೆ ಇಟ್ಟು, ಹೋರಿಯನ್ನು ತುಂಡುತುಂಡಾಗಿ ಕಡಿದು, ಕಟ್ಟಿಗೆಗಳ ಮೇಲೆ ಇಟ್ಟು, “ನೀವು ನಾಲ್ಕು ಕೊಡ ನೀರು ತುಂಬಿಕೊಂಡು ದಹನಬಲಿಯ ಮೇಲೆಯೂ, ಕಟ್ಟಿಗೆಗಳ ಮೇಲೆಯೂ ಹೊಯ್ಯಿರಿ,” ಎಂದನು.
34 És mondta: Töltsetek meg négy vödröt vízzel és öntsétek az égő áldozatra és a fára. Mondta: tegyétek másodszor. És tették másodszor. Mondta: tegyétek harmadszor. És tették harmadszor.
ಅವರು ಅವನು ಹೇಳಿದಂತೆ ಮಾಡಿದರು. ಆಗ ಎಲೀಯನು, “ಎರಡನೆಯ ಸಾರಿ ಹೊಯ್ಯಿರಿ,” ಎಂದನು. ಅವರು ಎರಡನೆಯ ಸಾರಿಯೂ ಹೊಯ್ದರು. ಮೂರನೆಯ ಸಾರಿ, “ಹೊಯ್ಯಿರಿ,” ಎಂದನು. ಮೂರನೆಯ ಸಾರಿಯೂ ಹೊಯ್ದರು.
35 És folyt a víz az oltár körül; és az árkot is megtöltötte vízzel.
ಆದ್ದರಿಂದ ನೀರು ಬಲಿಪೀಠದ ಸುತ್ತಲೂ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು.
36 És volt a lisztáldozat bemutatása idejében, odalépett Élijáhú próféta és mondta: Oh Örökkévaló, Ábrahám, Izsák és Izraél Istene, ma tudassék meg, hogy te vagy Isten Izraélben és hogy én vagyok a szolgád és hogy a te igéd szerint cselekedtem mind e dolgokat.
ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆಯಲ್ಲಿ ಪ್ರವಾದಿಯಾದ ಎಲೀಯನು ಬಲಿಪೀಠದ ಸಮೀಪಕ್ಕೆ ಬಂದು, “ಅಬ್ರಹಾಮನಿಗೂ, ಇಸಾಕನಿಗೂ, ಇಸ್ರಾಯೇಲಿಗೂ ದೇವರಾದ ಯೆಹೋವ ದೇವರೇ, ಇಸ್ರಾಯೇಲಿನಲ್ಲಿ ನೀವೇ ದೇವರೆಂದೂ, ನಾನು ನಿಮ್ಮ ಸೇವಕನೆಂದೂ, ನಾನು ಈ ಕಾರ್ಯಗಳನ್ನೆಲ್ಲಾ ನಿಮ್ಮ ಮಾತಿನ ಹಾಗೆಯೇ ಮಾಡಿದ್ದೇನೆಂದೂ ಇಂದು ತೋರಿಸಿಕೊಡಿರಿ.
37 Hallgass meg engem, Örökkévaló, hallgass meg engem, hogy megtudja e nép, hogy te, Örökkévaló, vagy az Isten; hiszen te engedted hátra fordulni szívüket.
ನೀವು ದೇವರಾದ ಯೆಹೋವ ದೇವರೆಂದೂ, ನೀವು ಅವರ ಹೃದಯವನ್ನು ತಿರುಗಿಸಿದ್ದೀರೆಂದೂ ಈ ಜನರು ತಿಳಿಯುವ ಹಾಗೆ ನನಗೆ ಉತ್ತರಕೊಡಿರಿ. ಯೆಹೋವ ದೇವರೇ, ನನಗೆ ಉತ್ತರಕೊಡಿರಿ” ಎಂದು ಬೇಡಿದನು.
38 Erre lehullott tűz az Örökkévalótól és megemésztette az égőáldozatot és a fát, meg a köveket és a földet; az árokban levő vizet pedig fölnyalta.
ಕೂಡಲೇ ಯೆಹೋವ ದೇವರ ಬೆಂಕಿಯು ಇಳಿದುಬಂದು, ದಹನಬಲಿಯನ್ನೂ, ಕಟ್ಟಿಗೆಗಳನ್ನೂ, ಕಲ್ಲುಗಳನ್ನೂ, ಮಣ್ಣನ್ನೂ ಸುಟ್ಟುಬಿಟ್ಟು, ಕಾಲುವೆಯಲ್ಲಿದ್ದ ನೀರನ್ನು ಹೀರಿಬಿಟ್ಟಿತು.
39 Látta az egész nép, arcukra vetették magukat és mondták: Az Örökkévaló az Isten, az Örökkévaló az Isten!
ಜನರೆಲ್ಲರು ಇದನ್ನು ಕಂಡಾಗ ಬೋರಲು ಬಿದ್ದು, “ಯೆಹೋವ ದೇವರೇ ದೇವರು! ಯೆಹೋವ ದೇವರೇ ದೇವರು!” ಎಂದರು.
40 Ekkor mondta nekik Élijáhú: Fogjátok meg a Báal prófétáit, senki se meneküljön közülök! És megfogták őket. És levitte őket Élijáhú a Kísón patakhoz és levágta ott őket.
ಆಗ ಎಲೀಯನು ಅವರಿಗೆ, “ನೀವು ಬಾಳನ ಪ್ರವಾದಿಗಳನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದೆ ಇರಲಿ,” ಎಂದನು. ಇವರು ಅವರನ್ನು ಹಿಡಿದರು. ಎಲೀಯನು ಅವರನ್ನು ಕೀಷೋನು ಹಳ್ಳದ ಬಳಿಗೆ ತೆಗೆದುಕೊಂಡುಹೋಗಿ ಅಲ್ಲಿ ಅವರನ್ನು ಕೊಂದುಹಾಕಿದನು.
41 És mondta Élijáhú Achábnak: Menj föl, egyél és igyál, mert hallom már az eső zúgását.
ಅನಂತರ ಎಲೀಯನು ಅಹಾಬನಿಗೆ, “ನೀನು ಹೋಗಿ ತಿಂದು, ಕುಡಿ. ಏಕೆಂದರೆ ದೊಡ್ಡಮಳೆಯ ಶಬ್ದವು ಕೇಳಿಸುತ್ತದೆ,” ಎಂದನು.
42 Fölment tehát Acháb, hogy egyék és igyék; Élijáhú pedig fölment a Karmel csúcsára, lehajolt a földre és térdei közé tette az arcát.
ಅಹಾಬನು ತಿಂದು, ಕುಡಿಯುವುದಕ್ಕೆ ಹೋದನು. ಎಲೀಯನು ಕರ್ಮೆಲಿನ ಶಿಖರವನ್ನು ಏರಿ, ನೆಲದ ಮೇಲೆ ಬಿದ್ದು, ತನ್ನ ಮೊಣಕಾಲಿನ ಮಧ್ಯೆ ತಲೆಯನ್ನಿಟ್ಟನು.
43 És szólt a legényéhez: Menj csak föl, tekints a tenger felé! Fölment, odatekintett és mondta: Nincsen semmi! Mondta: Menj vissza, hétszer.
ತನ್ನ ಸೇವಕನಿಗೆ, “ನೀನು ಹೋಗಿ ಸಮುದ್ರದ ಕಡೆಗೆ ನೋಡು,” ಎಂದನು. ಅವನು ಹೋಗಿ ನೋಡಿ, “ಏನೂ ಇಲ್ಲ,” ಎಂದನು. ಅವನು, “ಏಳು ಸಾರಿ ತಿರುಗಿ ಹೋಗಿ ನೋಡು,” ಎಂದನು.
44 Volt pedig hetedízben, mondta: Íme, kis felhő, akkora mint egy embernek tenyere, száll föl a tengerből. Mondta: Menj föl, szólj Achabhoz: fogass be és menj le, hogy vissza ne tartson az eső!
ಏಳನೆಯ ಸಾರಿ ಇವನು ಹೋಗಿ ನೋಡಿದಾಗ, “ಇಗೋ, ಸಮುದ್ರದಿಂದ ಒಂದು ಮನುಷ್ಯನ ಅಂಗೈಯಷ್ಟು ಚಿಕ್ಕ ಮೇಘವು ಏಳುತ್ತಿದೆ,” ಎಂದನು. ಆಗ, “ನೀನು ಹೋಗಿ ಅಹಾಬನಿಗೆ ಬೇಗನೇ ರಥವನ್ನು ತೆಗೆದುಕೊಂಡು ಮಳೆಯು ನಿನ್ನನ್ನು ತಡೆಯದಂತೆ ಇಳಿದುಹೋಗೆಂದು ಹೇಳು,” ಎಂದನು.
45 És volt míg ide meg oda fordult, az ég már is besötétült felhőktől és széltől, éa volt nagy eső. Szekérre ült Acháb és elment Jizreélbe.
ಆಗ ಇದ್ದಕ್ಕಿದ್ದ ಹಾಗೆ ಆಕಾಶವು ಮೇಘಗಳಿಂದಲೂ, ಗಾಳಿಯಿಂದಲೂ ಕಪ್ಪಾಗಿ ದೊಡ್ಡಮಳೆಯು ಉಂಟಾಯಿತು. ಅಹಾಬನು ರಥದಲ್ಲಿ ಏರಿ ಇಜ್ರೆಯೇಲ್ ಪಟ್ಟಣಕ್ಕೆ ಹೋದನು.
46 Az Örökkévaló keze pedig volt Élijáhún: felövezte a derekát és futott Acháb előtt egészen Jizreél felé.
ಯೆಹೋವ ದೇವರ ಕೈ ಎಲೀಯನ ಮೇಲೆ ಇದ್ದುದರಿಂದ ಅವನು ತನ್ನ ಸಡಿಲವಾದ ಬಟ್ಟೆಗಳನ್ನು ನಡುಕಟ್ಟಿಕೊಂಡು ಇಜ್ರೆಯೇಲ್ ಪಟ್ಟಣದವರೆಗೂ ಅಹಾಬನಿಗೆ ಮುಂದಾಗಿ ಓಡಿದನು.