< 1 Krónika 4 >
1 Jehúda fiai: Pérec, Checrón, Karmi, Chúr és Sóbál.
೧ಯೆಹೂದನ ಸಂತಾನದವರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.
2 És Reája, Sóbál fia, nemzette Jáchatot, és Jáchat nemzette Achúmajt és Láhadot. Ezek a Coreabeliek családjai.
೨ಶೋಬಾಲನ ಮಗನಾದ ರೆವಾಯನು ಯಹತನನ್ನು ಪಡೆದನು. ಯಹತನು ಅಹೂಮೈ ಮತ್ತು ಲಹದ್ ಇವರನ್ನು ಪಡೆದನು. ಇವರು ಚೊರ್ರದ ಕುಟುಂಬದವರು.
3 És ezek Étám atyjáéi: Jizreél, Jismá, és Jidbás; és nővérük neve Hacelelpóni;
೩ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಇವರು ಎಟಾಮಿನವರ ಮೂಲಪುರುಷರು. ಹಚೆಲೆಲ್‌ಪೋನೀ ಎಂಬವಳು ಇವರ ತಂಗಿ.
4 és Penúél, Gedór atyja, és Ézer, Chúsa atyja; ezek fiai Chúrnak, Efráta elsőszülöttjének, Bét-Léchem atyjának.
೪ಗೆದೋರಿನ ಮೂಲಪುರುಷನು ಪೆನೂವೇಲನು. ಹೂಷಾಹ್ಯರ ಮೂಲಪುರುಷನು ಏಜೆರ್. ಇವರು ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು. ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು.
5 És Aschúrnak, Tekóa atyjának, két felesége volt: Chelea, Náara.
೫ತೆಕೋವದವರ ಮೂಲಪುರುಷನಾದ ಅಷ್ಹೂರನಿಗೆ ಹೆಲಾಹ ಮತ್ತು ನಾರ ಎಂಬ ಇಬ್ಬರು ಹೆಂಡತಿಯರಿದ್ದರು.
6 És szülte neki Náara Achuzzámot, Chéfert, Témnit és az Achastárit; ezek Náara fiai.
೬ಅಹುಜ್ಜಾಮ್, ಹೇಫೆರ್ ತೇಮಾನ್ಯರೂ ಮತ್ತು ಅಹಷ್ಟಾರ್ಯರೂ ಎಂಬುವವರು ನಾರಳ ಸಂತಾನದವರು.
7 Chelea, fiai pedig: Céret, Cóchar és Etnán.
೭ಹೆಲಾಹಳ ಮಕ್ಕಳು: ಚೆರೆತ್ ಇಚ್ಹಾರ್ ಮತ್ತು ಎತ್ನಾನ್ ಎಂಬುವವರು.
8 És Kóc nemzette Anúbot és Hacóbébát és Acharchélnak, Hárúm fiának családjait.
೮ಕೋಚನಿಂದ ಅನೂಬ್ ಮತ್ತು ಚೊಬೇಬ್ ಹುಟ್ಟಿದರು. ಅಹರ‍್ಹೇಲನು ಹಾರುಮನ ಮಗನು. ಕೋಚನು ಇವರ ವಂಶದ ಮೂಲ ಪುರುಷ.
9 És Jábéc tiszteltebb volt a testvéreinél; anyja pedig Jábécnak nevezte őt, mondván mert fájdalomban szültem.
೯ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಗೌರವವುಳ್ಳವನಾಗಿದ್ದನು. ಇವನನ್ನು ಬಹು ವೇದನೆಯಿಂದ ಹೆತ್ತೆನೆಂದು ಇವನ ತಾಯಿ ಇವನಿಗೆ ಯಾಬೇಚನೆಂದು ಹೆಸರಿಟ್ಟಳು.
10 És szólította Jábéc Izrael Istenét, mondván: Ha áldva megáldasz engem s gyarapítod határomat s kezed velem lesz és azt teszed, hogy baj ne legyen, meg nem búsítva engemet. És meghozta Isten amit kért.
೧೦ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ, ನನ್ನ ಪ್ರಾಂತ್ಯವನ್ನು ವಿಸ್ತರಿಸಿ, ನಿನ್ನ ಕೃಪಾಹಸ್ತದಲ್ಲಿ ನನ್ನನ್ನು ಇರಿಸಿ ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ಕೇಡಿನಿಂದ ರಕ್ಷಿಸಬಾರದೇ?” ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು.
11 És Kelúb, Súcha testvére, nemzette Mechírt; ez Estón atyja.
೧೧ಶೂಹನ ಸಹೋದರನಾದ ಕೆಲೂಬನು ಮೆಹೀರನನ್ನು ಪಡೆದನು. ಮೆಹೀರನು ಎಷ್ಟೋನನ ತಂದೆ.
12 És Estón nemzette Bét Ráfát, Pászéachot és Techinnát, Ir-Náchás atyját; ezek Rékha emberei.
೧೨ಎಷ್ಟೋನನಿಂದ ಬೇತ್ರಾಫ, ಪಾಸೇಹ, ತೆಹಿನ್ನ ಎಂಬ ಮೂರು ಗಂಡು ಮಕ್ಕಳಿದ್ದರು. ಇವರು ರೇಕಾಹ್ಯರು. ತೆಹಿನ್ನನು ನಾಹಷ್ ಪಟ್ಟಣದವರ ಮೂಲಪುರುಷನು.
13 És Kenaz fiai: Otniél és Szerája; és Otniél fiai: Chatát.
೧೩ಕೆನಜನ ಮಕ್ಕಳು ಒತ್ನೀಯೇಲ್ ಮತ್ತು ಸೆರಾಯ ಎಂಬುವವರು. ಒತ್ನೀಯೇಲನ ಮಕ್ಕಳು ಹತತ್ ಮತ್ತು ಮೆಯೋನೋತೈ.
14 És Meónótaj nemzette Ofrát, és Szerája nemzette Jóábot, atyját a mesteremberek völgyének; mert mesteremberek voltak.
೧೪ಮೆಯೋನೊತೈಯು ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗಳಾದ ಗೇಹರಾಷೀಮ್ಯರ ಮೂಲಪುರುಷನಾದ ಯೋವಾಬನನ್ನು ಪಡೆದನು.
15 És Kálébnek, Jefunne fiának fiai: Irú, Éla és Náam és Éla fiai és Kenaz.
೧೫ಯೆಫುನ್ನೆಯ ಮಗನಾದ ಕಾಲೇಬನ ಸಂತಾನದವರು ಈರು, ಏಲಹ್ ಮತ್ತು ನಾಮ್. ಏಲನ ಮಗನಾದ ಕೆನಜ್.
16 És Jehallelél fiai: Zíf, Zífa, Tírja és Aszarél.
೧೬ಯೆಹಲ್ಲೆಲೇಲನ ಮಕ್ಕಳು: ಜೀಫ್, ಜೀಫಾ, ತೀರ್ಯ ಮತ್ತು ಅಸರೇಲ್ ಎಂಬುವವರು.
17 És Ezra fiai: Jéter meg Méred, Éfer és Jálón. És szülte Mirjámot, Sammájt és Jisbáchot, Estemóa atyját.
೧೭ಎಜ್ರನ ಮಕ್ಕಳು: ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್ ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯೆಳನ್ನು ಮದುವೆಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.
18 És Jehúdabeli felesége szülte Jéredet, Gedór atyját, és Chébert, Szókhó atyját és Jekútíélt, Zánóach atyját. És ezek fiai Bitjának, Fáraó leányának, akit elvett Méred.
೧೮ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿಯು ಗೆದೋರ್ಯರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್ ಮತ್ತು ಜಾನೋಹದವರ ಮೂಲಪುರುಷನಾದ ಯೆಕೂತೀಯೇಲ್ ಇವರನ್ನು ಹೆತ್ತಳು.
19 És Hódíja feleségének, Nácham nővérének fiai: Keíla atyja, a Gérembeli és Estemóa, a Máakhabeli.
೧೯ನಹಮನ ತಂಗಿಯೂ, ಹೋದೀಯನ ಹೆಂಡತಿಯ ಇಬ್ಬರು ಮಕ್ಕಳಲ್ಲಿ ಒಬ್ಬನು ಗರ್ಮ್ಯದ ಕೆಯೀಲದವರ ಮೂಲಪುರುಷನಾದನು, ಮತ್ತೊಬ್ಬನು ಎಷ್ಟೆಮೋವದವರ ಮಾಕಾತ್ಯ ಸಂತಾನದ ಮೂಲಪುರುಷನಾದನು.
20 És Símón fiai: Amnón, Rinna, Ben-Chánán és Tílón; és Jisei fiai: Zóchét és Ben-Zóchét.
೨೦ಶೀಮೋನನ ಮಕ್ಕಳು: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್. ಇಷ್ಷೀಯನ ಮಕ್ಕಳು: ಜೋಹೇತ್ ಮತ್ತು ಬೆನ್ಜೊಹೇತ್.
21 Sélának, Jehúda fiának fiai: Ér, Lékha atyja, Láeda, Márésa atyja és a byssus feldolgozása házának családjai, Asbéa házából.
೨೧ಯೆಹೂದನ ಮಗನಾದ ಶೇಲಹನ ಸಂತಾನದವರು: ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು,
22 És Jókím meg Kózéba emberei és Jóás meg Száráf, akik urakká lettek Móábon és Jásúbi-Léchem. S a dolgok régiek.
೨೨ಯೊಕೀಮನು ಕೋಜೇಬದವರು ಮೋವಾಬ್ ದೇಶದಲ್ಲಿ ದೊರೆತನ ನಡಿಸಿ ಬೇತ್ಲೆಹೇಮಿಗೆ ತಿರುಗಿ ಬಂದ ಯೋವಾಷ್ ಮತ್ತು ಸಾರಾಫ್ ಇವರೇ. (ಇವು ಪೂರ್ವಕಾಲದಲ್ಲಿ ನಡೆದ ಸಂಗತಿಗಳು.)
23 Ők a fazekasok s az Ültetvények meg Aklok lakói; a királynál az ő munkája végett laktak ott.
೨೩ಮೇಲೆ ಕಂಡ ಜನರು ಕುಂಬಾರರು. ಅವರು ನೆಟಾಯಿಮ್ ಮತ್ತು ಗೆದೇರ ಎಂಬ ಊರುಗಳಲ್ಲಿ ವಾಸಿಸುತ್ತಾ ಅರಸನ ಸೇವೆಯನ್ನು ಮಾಡುತ್ತಿದ್ದರು.
24 Simeón fiai: Nemúél, Jámín, Járíb, Zérach, Sául.
೨೪ಸಿಮೆಯೋನನ ಮಕ್ಕಳು: ನೆಮೂವೇಲ್, ಯಾಮೀನ್, ಯಾರೀಬ್, ಜೆರಹ ಮತ್ತು ಸೌಲ.
25 Sallúm a fia, Mibszám a fia, Mismá a fia.
೨೫ಸೌಲನ ಮಗ ಶಲ್ಲುಮ್. ಇವನ ಮಗ ಮಿಬ್ಸಾಮ್. ಮಿಬ್ಸಾಮನ ಮಗ ಮಿಷ್ಮ.
26 És Mismá fiai: Chammúél a fia, Zakkúr a fia, Simeí a fia.
೨೬ಮಿಷ್ಮಾನ ಸಂತಾನದವರು: ಇವನ ಮಗ ಹಮ್ಮೂವೇಲ್, ಇವನ ಮೊಮ್ಮಗ ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ.
27 Simeínek pedig volt tizenhat fia és hat leánya, de testvéreinek nem volt sok gyermeke; és egész nemzetségük nem sokasodott annyira, mint Jehúda fiai.
೨೭ಶಿಮ್ಮೀಗೆ ಹದಿನಾರು ಜನರು ಗಂಡು ಮಕ್ಕಳೂ ಮತ್ತು ಆರು ಜನರು ಹೆಣ್ಣು ಮಕ್ಕಳೂ ಇದ್ದರು. ಅವನ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಆದುದರಿಂದ ಅವರ ಕುಲವು ಯೆಹೂದ ಕುಲದಷ್ಟು ಅಭಿವೃದ್ಧಿಯಾಗಲಿಲ್ಲ.
28 És laktak Beér-Sébában, Móládában, Chacár-Súálban;
೨೮ದಾವೀದನ ಆಳ್ವಿಕೆಯ ತನಕ ಅವರು ವಾಸವಾಗಿದ್ದ ಪಟ್ಟಣಗಳು ಇವು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ,
29 Bilhában, Écemben, Toládban;
೨೯ಬಿಲ್ಹ, ಎಚೆಮ್, ತೋಲಾದ್,
30 Betúélben, Chormában, Ciklágban;
೩೦ಬೆತೂವೇಲ್, ಹೊರ್ಮ, ಚಿಕ್ಲಗ್,
31 Bet-Markábótban, Chacár-Szúszimban, Bét-Bireíben és Sáarájimban – ezek a városaik, míg nem Dávid király lett –
೩೧ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೆತ್ ಬಿರೀ ಮತ್ತು ಶಾರಯಿಮ್.
32 és tanyáik Étám, Ájin, Rimmón, Tókhen és Ásán, öt város,
೩೨ಇವುಗಳಲ್ಲಿ ಸೇರಿದ ಐದು ಗ್ರಾಮಗಳು ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್.
33 és mind a tanyáik, melyek e városok körül vannak Báalig. Ezek az ő lakóhelyeik, és származási följegyzéseik voltak.
೩೩ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲ್ ಊರಿನ ವರೆಗಿರುವ ಗ್ರಾಮಗಳೂ ಅವರ ನಿವಾಸಸ್ಥಾನಗಳಾಗಿದ್ದವು. ಅವರು ವಂಶಾವಳಿಯ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.
34 És Mesóbáb, Jamlékh, Jósa, Amacjáh fia;
೩೪ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ,
35 Jóél és Jéhú, Jósibja fia, Szerája fia, Aszíél fia;
೩೫ಯೋವೇಲ್, ಯೊಷಿಬ್ಯನ ಮಗನೂ, ಸೆರಾಯನ ಮೊಮ್ಮಗನೂ, ಅಸಿಯೇಲನ ಮರಿಮಗನೂ ಆಗಿರುವ ಯೇಹೂ,
36 Eljóénaj, Jáakóba, Jesóchája, Aszája, Adíél, Jeszímiél és Benája;
೩೬ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು
37 Zíza, Sifeí fia, Allón fia, Jedája fia, Simrí fia, Semája fia:
೩೭ಶೆಮಾಯನ ಮಗನಾದ ಶಿಮ್ರಿಯಿಂದ ಹುಟ್ಟಿದ ಯೆದಾಯನ ಮರಿಮಗನೂ, ಅಲ್ಲೋನನ ಮೊಮ್ಮಗನೂ, ಶಿಪ್ಫಿಯ ಮಗನು ಆದ ಜೀಜ ಎಂಬ ಹೆಸರುಳ್ಳವರು ತಮ್ಮ ತಮ್ಮ ಗೋತ್ರಗಳಲ್ಲಿ ಪ್ರಮುಖರಾಗಿದ್ದರು.
38 Ezek a névszerint felsoroltak fejedelmek voltak családjaikban, és atyai házaik megsokasodva elterjedtek.
೩೮ಅವರ ಕುಟುಂಬಗಳು ಬೆಳೆಯುತ್ತಾ ಅಭಿವೃದ್ಧಿಯಾದವು.
39 És mentek Gedór tájéka felé egészen a Völgytől keletre, hogy legelőt keressenek juhaiknak.
೩೯ಅವರು ತಮ್ಮ ಆಡು, ಕುರಿಗಳಿಗೋಸ್ಕರ ಹುಲ್ಲುಗಾವಲುಗಳನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ, ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ ಅಲ್ಲಿ ಶ್ರೇಷ್ಠವಾದ ಹಸಿರು ಹುಲ್ಲುಗಾವಲುಗಳನ್ನು ಕಂಡರು.
40 És találtak kövér s jó legelőt, az ország pedig széles határú volt, nyugodt és boldog, mert Chámtól valók azok, akik azelőtt ott laktak.
೪೦ದೇಶವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದು ಸುಖ ಸಮಾಧಾನಗಳಿಂದ ಕೂಡಿತ್ತು. ಅಲ್ಲಿ ಮೊದಲಿನಿಂದಲೂ ವಾಸವಾಗಿದ್ದವರು ಹಾಮ್ಯರೇ.
41 És eljöttek ezek a név szerint felsoroltak Chizkijáhúnak, Jehúda királyának napjaiban s megverték sátraikat s a Meúnbelieket, akik ott találtattak és kipusztították mind a mai napig s letelepednek helyibük, mert legelő volt ott a juhaik számára.
೪೧ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ ಆ ಹಾಮ್ಯರ ಪಾಳೆಯಗಳನ್ನೂ, ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಗೆದ್ದು, ಎಲ್ಲರನ್ನೂ ನಿರ್ನಾಮಮಾಡಿದರು. ಅವರು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದ್ದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಯಾರೂ ಉಳಿಯಲಿಲ್ಲ.
42 És közülük, Simeón fiai közül, ment Széír hegyére ötszáz férfiú és Pelatja, Nearja, Refája és Uzzíél, Jisei fiai az élükön;
೪೨ಇದಲ್ಲದೆ ಸಿಮೆಯೋನನ ಕುಲದ ಐನೂರು ಜನರು ಸೇಯೀರ್ ಪರ್ವತಕ್ಕೆ ಹೋದರು. ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್ ಎಂಬುವವರು ಅವರ ಮುಖ್ಯಸ್ಥರು.
43 és megverték Amálék menekült részének maradékát s ott laktak mind e mai napig.
೪೩ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಅಲ್ಲೇ ನೆಲೆಸಿದರು.