< תהילים 90 >
תפלה למשה איש האלהים אדני מעון אתה היית לנו בדר ודר׃ | 1 |
ದೇವರ ಮನುಷ್ಯನಾದ ಮೋಶೆಯ ಪ್ರಾರ್ಥನೆ. ಯೆಹೋವ ದೇವರೇ, ತಲತಲಾಂತರಗಳಲ್ಲಿ ನೀವು ನಮ್ಮ ವಾಸಸ್ಥಾನವಾಗಿದ್ದೀರಿ.
בטרם הרים ילדו ותחולל ארץ ותבל ומעולם עד עולם אתה אל׃ | 2 |
ಬೆಟ್ಟಗಳು ಹುಟ್ಟುವುದಕ್ಕಿಂತ ಮುಂಚೆಯೂ ನೀವು ಲೋಕವನ್ನೂ ನಿರ್ಮಿಸುವುದಕ್ಕಿಂತ ಮುಂಚೆಯೂ ಯುಗಯುಗಾಂತರಕ್ಕೂ ನೀವು ದೇವರಾಗಿದ್ದೀರಿ.
תשב אנוש עד דכא ותאמר שובו בני אדם׃ | 3 |
ನೀವು ಮನುಷ್ಯರನ್ನು ಪುನಃ ಮಣ್ಣಿಗೆ ಸೇರಿಸುತ್ತೀರಿ. “ಮನುಷ್ಯ ಪುತ್ರರೇ, ಮಣ್ಣಿಗೆ ಮರಳಿರಿ,” ಎಂದು ಹೇಳುತ್ತೀರಿ.
כי אלף שנים בעיניך כיום אתמול כי יעבר ואשמורה בלילה׃ | 4 |
ಸಾವಿರ ವರ್ಷಗಳು ನಿಮ್ಮ ದೃಷ್ಟಿಗೆ ಕಳೆದುಹೋದ ಒಂದು ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಇವೆ.
זרמתם שנה יהיו בבקר כחציר יחלף׃ | 5 |
ನೀವು ಜನರನ್ನು ಮರಣ ನಿದ್ರೆಯ ಪ್ರವಾಹದಂತೆ ಹೋಗಲು ಅನುಮತಿಸುತ್ತೀರಿ. ಅವರು ಬೆಳಿಗ್ಗೆ ಬೆಳೆಯುವ ಹುಲ್ಲಿನ ಹಾಗೆ ಇದ್ದಾರೆ.
בבקר יציץ וחלף לערב ימולל ויבש׃ | 6 |
ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಒಣಗಿ ಬಿದ್ದು ಹೋಗುತ್ತದೆ.
כי כלינו באפך ובחמתך נבהלנו׃ | 7 |
ನಾವು ನಿಮ್ಮ ಬೇಸರದಿಂದ ಬಾಧಿತರಾಗಿದ್ದೇವೆ. ನಿಮ್ಮ ಖಂಡನೆಯಿಂದ ತಲ್ಲಣಿಸುತ್ತೇವೆ.
שת עונתינו לנגדך עלמנו למאור פניך׃ | 8 |
ನಮ್ಮ ಅಕ್ರಮಗಳನ್ನು ನಿಮ್ಮ ಮುಂದೆ ಇಟ್ಟಿದ್ದೀರಿ. ನಾವು ಮುಚ್ಚಿಟ್ಟುಕೊಂಡಿರುವ ಪಾಪಗಳು ನಿಮ್ಮ ಸನ್ನಿಧಿಯಲ್ಲಿವೆ.
כי כל ימינו פנו בעברתך כלינו שנינו כמו הגה׃ | 9 |
ನಮ್ಮ ದಿವಸಗಳೆಲ್ಲಾ ನಿಮ್ಮ ಖಂಡನೆಯಿಂದಲೇ ದಾಟಿಹೋದವು. ನಮ್ಮ ವರ್ಷಗಳನ್ನು ನಿಟ್ಟುಸಿರಿನಲ್ಲಿ ಕಳೆಯುತ್ತಿದ್ದೇವೆ.
ימי שנותינו בהם שבעים שנה ואם בגבורת שמונים שנה ורהבם עמל ואון כי גז חיש ונעפה׃ | 10 |
ನಮ್ಮ ಜೀವನದ ದಿನಗಳು ಎಪ್ಪತ್ತು ವರ್ಷ, ಬಲದಿಂದಿದ್ದರೆ ಎಂಬತ್ತು ವರ್ಷ. ಆದಾಗ್ಯೂ ಅವುಗಳ ಉತ್ತಮ ವರ್ಷಗಳು ಕಷ್ಟವೂ ಪ್ರಯಾಸವೂ ಆಗಿವೆ. ನಮ್ಮ ದಿನಗಳು ಬೇಗ ತೀರಿಹೋಗುತ್ತವೆ. ನಾವು ಹಾರಿಹೋಗುತ್ತೇವೆ.
מי יודע עז אפך וכיראתך עברתך׃ | 11 |
ನಿಮ್ಮ ಕೋಪದ ಶಕ್ತಿಯನ್ನು ತಿಳಿದವರ‍್ಯಾರು? ನಿಮ್ಮ ಮೇಲಿನ ಭಯಭಕ್ತಿಗೆ ಕಾರಣವಾಗಿರುವ ನಿಮ್ಮ ಖಂಡನೆಯನ್ನು ಗ್ರಹಿಸುವವರ‍್ಯಾರು?
למנות ימינו כן הודע ונבא לבב חכמה׃ | 12 |
ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.
שובה יהוה עד מתי והנחם על עבדיך׃ | 13 |
ಯೆಹೋವ ದೇವರೇ, ಮನಸ್ಸು ಮಾರ್ಪಡಿಸಿಕೊಳ್ಳಿರಿ. ನೀವು ಎಷ್ಟರವರೆಗೆ ಬೇಸರಗೊಳ್ಳುವಿರಿ? ನಿಮ್ಮ ಸೇವಕರ ವಿಷಯದಲ್ಲಿ ಅನುಕಂಪ ತೋರಿಸಿರಿ.
שבענו בבקר חסדך ונרננה ונשמחה בכל ימינו׃ | 14 |
ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಮ್ಮನ್ನು ತೃಪ್ತಿಪಡಿಸಿರಿ. ಆಗ ನಮ್ಮ ದಿನಗಳೆಲ್ಲಾ ಉತ್ಸಾಹ ಧ್ವನಿಗೈದು ನಿಮ್ಮಲ್ಲಿ ಸಂತೋಷಪಡುವೆವು.
שמחנו כימות עניתנו שנות ראינו רעה׃ | 15 |
ನೀವು ನಮ್ಮನ್ನು ಬಾಧಿಸಿದಷ್ಟು ಕಾಲ ಹರ್ಷಗೊಳಿಸಿರಿ. ನಾವು ತೊಂದರೆಯನ್ನು ನೋಡಿದಷ್ಟು ವರ್ಷಗಳು ನಮ್ಮನ್ನು ಸಂತೋಷಪಡಿಸಿರಿ.
יראה אל עבדיך פעלך והדרך על בניהם׃ | 16 |
ನಿಮ್ಮ ಸೇವಕರಿಗೆ ನಿಮ್ಮ ಕೃತ್ಯಗಳನ್ನು ಪ್ರಕಟಿಸಿರಿ. ಅವರ ಮಕ್ಕಳಿಗೆ ನಿಮ್ಮ ಪ್ರಭೆಯೂ ತೋರಿ ಬರಲಿ.
ויהי נעם אדני אלהינו עלינו ומעשה ידינו כוננה עלינו ומעשה ידינו כוננהו׃ | 17 |
ನಮ್ಮ ದೇವರಾದ ಯೆಹೋವ ದೇವರ ಮೆಚ್ಚುಗೆಯು ನಮ್ಮ ಮೇಲೆ ಇರಲಿ. ನಮ್ಮ ಕೈಗಳ ಕೆಲಸವನ್ನು ಸ್ಥಿರಪಡಿಸಿರಿ. ಹೌದು, ನಮ್ಮ ಕೈಗಳ ಕೆಲಸವನ್ನು ಸ್ಥಾಪಿಸಿರಿ.