< תהילים 80 >
למנצח אל ששנים עדות לאסף מזמור רעה ישראל האזינה נהג כצאן יוסף ישב הכרובים הופיעה׃ | 1 |
೧ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಶೋಶನ್ನೀಮ್ ಎದೂತೆಂಬ ರಾಗ. ಆಸಾಫನ ಕೀರ್ತನೆ. ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು.
לפני אפרים ובנימן ומנשה עוררה את גבורתך ולכה לישעתה לנו׃ | 2 |
೨ಎಫ್ರಾಯೀಮ್, ಬೆನ್ಯಾಮೀನ್ ಮತ್ತು ಮನಸ್ಸೆ ಕುಲಗಳ ಮುಂದೆ ಹೋಗುವವನಾಗಿ, ನಿನ್ನ ಶೌರ್ಯವನ್ನು ತೋರ್ಪಡಿಸು; ಬಂದು ನಮಗೆ ಜಯಪ್ರದನಾಗು.
אלהים השיבנו והאר פניך ונושעה׃ | 3 |
೩ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.
יהוה אלהים צבאות עד מתי עשנת בתפלת עמך׃ | 4 |
೪ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನ ಪ್ರಜೆಗಳು ಪ್ರಾರ್ಥಿಸುವಾಗ ನೀನು ಇನ್ನೆಷ್ಟರವರೆಗೆ ಕೋಪಿಸಿಕೊಳ್ಳುವಿ?
האכלתם לחם דמעה ותשקמו בדמעות שליש׃ | 5 |
೫ರೋದನವೇ ಅವರ ಆಹಾರವಾಗುವಂತೆಯೂ, ಅಶ್ರುಧಾರೆಯೇ ಅವರ ಪಾನವಾಗುವಂತೆಯೂ ಮಾಡಿದಿ.
תשימנו מדון לשכנינו ואיבינו ילעגו למו׃ | 6 |
೬ನಮ್ಮನ್ನು ಸುತ್ತಣ ಜನಾಂಗಗಳ ದಿಕ್ಕಾರಕ್ಕೂ, ಶತ್ರುಗಳ ನಿಂದೆಗೂ ಗುರಿಯನ್ನಾಗಿ ಮಾಡಿದಿ.
אלהים צבאות השיבנו והאר פניך ונושעה׃ | 7 |
೭ಸೇನಾಧೀಶ್ವರನಾದ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.
גפן ממצרים תסיע תגרש גוים ותטעה׃ | 8 |
೮ನೀನು ಐಗುಪ್ತ ದೇಶದಿಂದ ಒಂದು ದ್ರಾಕ್ಷಾಲತೆಯನ್ನು ತಂದು, ಜನಾಂಗಗಳನ್ನು ಹೊರಗೆ ಹಾಕಿ, ಅದನ್ನು ನೆಟ್ಟಿದ್ದಿ.
פנית לפניה ותשרש שרשיה ותמלא ארץ׃ | 9 |
೯ಅದಕ್ಕೋಸ್ಕರ ನೆಲವನ್ನು ಹಸನುಮಾಡಿದ ಮೇಲೆ, ಅದು ಬೇರುಬಿಟ್ಟು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
כסו הרים צלה וענפיה ארזי אל׃ | 10 |
೧೦ಅದರ ನೆರಳಿನಿಂದ ಗುಡ್ಡಗಳೆಲ್ಲಾ ಕವಿಯಲ್ಪಟ್ಟವು. ಅದರ ಕುಡಿಗಳು ದೇವದಾರುವೃಕ್ಷಗಳ ಮೇಲೆ ಹಬ್ಬಿ ಅವುಗಳನ್ನು ಮುಚ್ಚಿಬಿಟ್ಟವು.
תשלח קצירה עד ים ואל נהר יונקותיה׃ | 11 |
೧೧ಅದರ ಕೊಂಬೆಗಳು ಸಮುದ್ರದವರೆಗೂ, ಅದರ ಚಿಗುರುಗಳು ಮಹಾನದಿಯವರೆಗೂ ಹರಡಿಕೊಂಡವು.
למה פרצת גדריה וארוה כל עברי דרך׃ | 12 |
೧೨ನೀನು ಅದರ ಬೇಲಿಯನ್ನೇಕೆ ಮುರಿದುಹಾಕಿದಿ? ದಾರಿಗರೆಲ್ಲರು ಅದರ ಫಲವನ್ನು ಕಿತ್ತುಬಿಡುತ್ತಾರೆ.
יכרסמנה חזיר מיער וזיז שדי ירענה׃ | 13 |
೧೩ಕಾಡುಹಂದಿಯು ಅದನ್ನು ನಿರ್ಮೂಲಮಾಡುತ್ತದೆ; ಅರಣ್ಯಮೃಗಗಳು ಅದನ್ನು ತಿಂದುಹಾಕುತ್ತವೆ.
אלהים צבאות שוב נא הבט משמים וראה ופקד גפן זאת׃ | 14 |
೧೪ಸೇನಾಧೀಶ್ವರನಾದ ದೇವರೇ, ಅಭಿಮುಖನಾಗಬೇಕು; ನೀನು ಪರಲೋಕದಿಂದ ಕಟಾಕ್ಷಿಸಿ, ಈ ದ್ರಾಕ್ಷಾಲತೆಯನ್ನು ಪರಾಂಬರಿಸು.
וכנה אשר נטעה ימינך ועל בן אמצתה לך׃ | 15 |
೧೫ನಿನ್ನ ಬಲಗೈ ನೆಟ್ಟು, ಸಾಕಿ, ಬೆಳೆಸಿದ ಸಸಿಯನ್ನು ಕಾಪಾಡು.
שרפה באש כסוחה מגערת פניך יאבדו׃ | 16 |
೧೬ಅದು ಕಡಿದು ಬೆಂಕಿಯಿಂದ ಸುಡಲ್ಪಟ್ಟಿದೆ. ಅವರು ನಿನ್ನ ಗದರಿಕೆಯಿಂದ ನಾಶವಾಗುತ್ತಾರೆ.
תהי ידך על איש ימינך על בן אדם אמצת לך׃ | 17 |
೧೭ನಿನ್ನ ಬಲಗೈ ಉದ್ಧರಿಸಿದ ಪುರುಷನೂ, ನೀನು ನಿನಗೋಸ್ಕರ ಸಾಕಿ ಬೆಳೆಸಿದ ನರಪುತ್ರನೂ ಆಗಿರುವವನನ್ನು, ನಿನ್ನ ಹಸ್ತದಿಂದ ಹಿಡಿದಿರು.
ולא נסוג ממך תחינו ובשמך נקרא׃ | 18 |
೧೮ಆಗ ನಾವು ನಿನ್ನಿಂದ ಅಗಲುವುದಿಲ್ಲ. ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನ್ನು ಚೈತನ್ಯಗೊಳಿಸು.
יהוה אלהים צבאות השיבנו האר פניך ונושעה׃ | 19 |
೧೯ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ತಿರುಗಿ ಉನ್ನತಸ್ಥಿತಿಗೇರಿಸು. ಪ್ರಸನ್ನಮುಖದಿಂದ ನೋಡು; ಆಗ ಉದ್ಧಾರವಾಗುವೆವು.