< תהילים 76 >

למנצח בנגינת מזמור לאסף שיר נודע ביהודה אלהים בישראל גדול שמו׃ 1
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ಆಸಾಫನ ಕೀರ್ತನೆ. ಒಂದು ಗೀತೆ. ಯೆಹೂದ ಪ್ರದೇಶದಲ್ಲಿ ದೇವರು ಸುಪ್ರಸಿದ್ಧರಾಗಿದ್ದಾರೆ. ಇಸ್ರಾಯೇಲಿನಲ್ಲಿ ದೇವರ ಹೆಸರು ಪ್ರಖ್ಯಾತವಾಗಿದೆ.
ויהי בשלם סכו ומעונתו בציון׃ 2
ಸಾಲೇಮಿನಲ್ಲಿ ದೇವರ ಗುಡಾರವೂ ಚೀಯೋನಿನಲ್ಲಿ ಅವರ ವಾಸಸ್ಥಾನವೂ ಉಂಟು.
שמה שבר רשפי קשת מגן וחרב ומלחמה סלה׃ 3
ದೇವರು ಅಲ್ಲಿಯೇ ಬಿಲ್ಲಿನ ಉರಿಬಾಣಗಳನ್ನೂ ಗುರಾಣಿಯನ್ನೂ ಖಡ್ಗವನ್ನೂ ಯುದ್ಧಾಯುಧಗಳನ್ನು ಮುರಿದುಬಿಟ್ಟರು.
נאור אתה אדיר מהררי טרף׃ 4
ನೀವು ಪ್ರಕಾಶಮಾನ ಬೆಳಕಿಗಿಂತ ಪ್ರಕಾಶಮಾನವಾಗಿರುತ್ತೀರಿ, ನೈಸರ್ಗಿಕ ಸಂಪತ್ತು ತುಂಬಿದ ಪರ್ವತಗಳಿಗಿಂತ ಹೆಚ್ಚು ಶ್ರೇಷ್ಠ ಆಗಿದ್ದೀರಿ.
אשתוללו אבירי לב נמו שנתם ולא מצאו כל אנשי חיל ידיהם׃ 5
ಧೀರಹೃದಯದವರು ಸುಲಿಗೆಯಾಗಿ, ಅಂತಿಮ ನಿದ್ರೆ ಹೊಂದಿದ್ದಾರೆ. ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗಳನ್ನೆತ್ತಲು ಶಕ್ತನಲ್ಲ.
מגערתך אלהי יעקב נרדם ורכב וסוס׃ 6
ಯಾಕೋಬನ ದೇವರೇ, ನಿಮ್ಮ ಗದರಿಕೆಯಿಂದ ರಥವೂ ಕುದುರೆಯೂ ಚಲನೆಯಿಲ್ಲದೆ ಬಿದ್ದಿವೆ.
אתה נורא אתה ומי יעמד לפניך מאז אפך׃ 7
ನೀವು ಭಯಭಕ್ತಿಗೆ ಪಾತ್ರರು, ನೀವು ಒಂದು ಸಾರಿ ಬೇಸರಗೊಂಡರೆ, ನಿಮ್ಮ ಮುಂದೆ ನಿಲ್ಲುವವನ್ಯಾರು?
משמים השמעת דין ארץ יראה ושקטה׃ 8
ಪರಲೋಕದಿಂದ ನ್ಯಾಯ ನಿರ್ಣಯವನ್ನು ಮಾಡಿದ್ದೀರಿ. ದೇವರೇ, ನ್ಯಾಯತೀರಿಸುವುದಕ್ಕೂ
בקום למשפט אלהים להושיע כל ענוי ארץ סלה׃ 9
ಭೂಮಿಯ ದೀನರೆಲ್ಲರನ್ನು ರಕ್ಷಿಸುವುದಕ್ಕೂ ನೀವು ಪ್ರಾರಂಭಿಸುವಾಗ ಭೂಮಿಯು ಭಯಗೊಂಡು ಮೌನವಾಯಿತು.
כי חמת אדם תודך שארית חמת תחגר׃ 10
ಮನುಷ್ಯರ ವಿರುದ್ಧ ನಿಮ್ಮ ಕೋಪವು ನಿಮಗೆ ಘನವನ್ನು ತರುವುದು. ಉಳಿದಿರುವವರು ಕೋಪಕ್ಕೆ ತುತ್ತಾಗುವುದಿಲ್ಲ.
נדרו ושלמו ליהוה אלהיכם כל סביביו יובילו שי למורא׃ 11
ನಿಮ್ಮ ದೇವರಾದ ಯೆಹೋವ ದೇವರಿಗೆ ಹರಕೆಮಾಡಿ ಸಲ್ಲಿಸಿರಿ. ದೇವರ ಸುತ್ತಲಿರುವವರೆಲ್ಲರು ಭಯಭಕ್ತಿಗೆ ಪಾತ್ರರಾದವರಿಗೆ ಕಾಣಿಕೆಗಳನ್ನು ತರಲಿ.
יבצר רוח נגידים נורא למלכי ארץ׃ 12
ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ.

< תהילים 76 >