< תהילים 46 >
למנצח לבני קרח על עלמות שיר אלהים לנו מחסה ועז עזרה בצרות נמצא מאד׃ | 1 |
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರ ಸಂಯೋಜನೆ. ಅಲಾಮೊತ್ ರಾಗವನ್ನು ಆಧಾರಿಸಿದ ಒಂದು ಗೀತೆ. ದೇವರು ನಮ್ಮ ಆಶ್ರಯವೂ ಬಲವೂ ಆಗಿದ್ದಾರೆ; ಇಕ್ಕಟ್ಟಿನಲ್ಲಿ ವಿಶೇಷ ಸಹಾಯಕರಾಗಿದ್ದಾರೆ.
על כן לא נירא בהמיר ארץ ובמוט הרים בלב ימים׃ | 2 |
ಆದ್ದರಿಂದ ಭೂಮಿಯು ಕಂಪಿಸಿದರೂ ಬೆಟ್ಟಗಳು ಸಮುದ್ರದಲ್ಲಿ ಮುಳುಗಿದರೂ,
יהמו יחמרו מימיו ירעשו הרים בגאותו סלה׃ | 3 |
ಅದರ ಸಮುದ್ರವು ಘೋಷಿಸಿ ನೊರೆಕಾರಿದರೂ, ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು.
נהר פלגיו ישמחו עיר אלהים קדש משכני עליון׃ | 4 |
ಒಂದು ನದಿ ಇದೆ; ಅದರ ಕಾಲುವೆಗಳು ದೇವರು ವಾಸಿಸುವ ಮಹೋನ್ನತ ಪರಿಶುದ್ಧ ಸ್ಥಳವನ್ನೂ ಸಂತೋಷಪಡಿಸುತ್ತವೆ.
אלהים בקרבה בל תמוט יעזרה אלהים לפנות בקר׃ | 5 |
ದೇವರು ಅದರ ಮಧ್ಯದಲ್ಲಿ ಇದ್ದಾರೆ, ಅದು ಕದಲದು; ದೇವರು ಉದಯಕಾಲದಲ್ಲಿ ಅದಕ್ಕೆ ಸಹಾಯ ಮಾಡುವರು.
המו גוים מטו ממלכות נתן בקולו תמוג ארץ׃ | 6 |
ರಾಷ್ಟ್ರಗಳು ಕೋಲಾಹಲದಲ್ಲಿವೆ ರಾಜ್ಯಗಳು ಬೀಳುತ್ತವೆ. ದೇವರು ತಮ್ಮ ಧ್ವನಿಯನ್ನೆತ್ತಲು ಭೂಮಿಯು ಕರಗುತ್ತದೆ.
יהוה צבאות עמנו משגב לנו אלהי יעקב סלה׃ | 7 |
ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ. ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.
לכו חזו מפעלות יהוה אשר שם שמות בארץ׃ | 8 |
ಬನ್ನಿರಿ, ಯೆಹೋವ ದೇವರ ಕಾರ್ಯಗಳನ್ನು ನೋಡಿರಿ. ಅವರು ಭೂಮಿಯಲ್ಲಿ ಎಂಥಾ ಅತಿಶಯಗಳನ್ನು ಉಂಟುಮಾಡಿದ್ದಾರೆ.
משבית מלחמות עד קצה הארץ קשת ישבר וקצץ חנית עגלות ישרף באש׃ | 9 |
ದೇವರು ಯುದ್ಧಗಳನ್ನು ಭೂಮಿಯ ಅಂತ್ಯದವರೆಗೆ ನಿಲ್ಲಿಸುತ್ತಾರೆ. ಬಿಲ್ಲನ್ನೂ ಭಲ್ಲೆಯನ್ನೂ ಮುರಿದು ಹಾಕಿದ್ದಾರೆ. ರಥಗಳನ್ನು ಬೆಂಕಿಯಿಂದ ಸುಡುತ್ತಾರೆ.
הרפו ודעו כי אנכי אלהים ארום בגוים ארום בארץ׃ | 10 |
“ಶಾಂತವಾಗಿರಿ, ನಾನೇ ದೇವರಾಗಿದ್ದೇನೆಂದು ತಿಳಿದುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ಉನ್ನತನಾಗಿರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
יהוה צבאות עמנו משגב לנו אלהי יעקב סלה׃ | 11 |
ಸೇನಾಧೀಶ್ವರ ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ; ಯಾಕೋಬನ ದೇವರು ನಮಗೆ ಭದ್ರಕೋಟೆಯಾಗಿದ್ದಾರೆ.