< תהילים 131 >
שיר המעלות לדוד יהוה לא גבה לבי ולא רמו עיני ולא הלכתי בגדלות ובנפלאות ממני׃ | 1 |
ದಾವೀದನ ಯಾತ್ರಾ ಗೀತೆ. ಯೆಹೋವ ದೇವರೇ, ನನ್ನ ಹೃದಯವು ಗರ್ವದ್ದಲ್ಲ, ನನಗೆ ಸೊಕ್ಕಿನ ಕಣ್ಣಿಲ್ಲ ದೊಡ್ಡ ವಿಷಯಗಳಲ್ಲಿಯೂ ನನಗೆ ನಿಲುಕಲಾರದವುಗಳಲ್ಲಿಯೂ ನಾನು ಕೈ ಹಾಕುವುದಿಲ್ಲ.
אם לא שויתי ודוממתי נפשי כגמל עלי אמו כגמל עלי נפשי׃ | 2 |
ಆದರೆ ಹಾಲುಬಿಡಿಸಿದ ಕೂಸು ತನ್ನ ತಾಯಿಯ ಮಡಿಲಲ್ಲಿರುವಂತೆ ನನ್ನ ಪ್ರಾಣವನ್ನು ಸಮಾಧಾನ ಪಡಿಸಿದ್ದೇನೆ. ನಾನು ತಾಯಿಯ ಮಡಿಲಲ್ಲಿರುವ ಕೂಸಿನಂತೆ ಸಂತೃಪ್ತಿಯಿಂದ ಇದ್ದೇನೆ.
יחל ישראל אל יהוה מעתה ועד עולם׃ | 3 |
ಇಸ್ರಾಯೇಲೇ, ಯೆಹೋವ ದೇವರಲ್ಲಿ ನಿನ್ನ ನಿರೀಕ್ಷೆಯನ್ನಿಡು. ಈಗಲೂ, ಎಂದೆಂದಿಗೂ ನಿರೀಕ್ಷೆಯಿಂದಿರು.