< בְּמִדְבַּר 3 >
וְאֵ֛לֶּה תּוֹלְדֹ֥ת אַהֲרֹ֖ן וּמֹשֶׁ֑ה בְּי֗וֹם דִּבֶּ֧ר יְהוָ֛ה אֶת־מֹשֶׁ֖ה בְּהַ֥ר סִינָֽי׃ | 1 |
೧ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತನಾಡಿದ ಕಾಲದಲ್ಲಿದ್ದ ಮೋಶೆ ಮತ್ತು ಆರೋನರ ವಂಶದವರು.
וְאֵ֛לֶּה שְׁמ֥וֹת בְּֽנֵי־אַהֲרֹ֖ן הַבְּכ֣וֹר ׀ נָדָ֑ב וַאֲבִיה֕וּא אֶלְעָזָ֖ר וְאִיתָמָֽר׃ | 2 |
೨ಆರೋನನ ಮಕ್ಕಳ ಹೆಸರುಗಳು: ಚೊಚ್ಚಲ ಮಗನಾದ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರೇ.
אֵ֗לֶּה שְׁמוֹת֙ בְּנֵ֣י אַהֲרֹ֔ן הַכֹּהֲנִ֖ים הַמְּשֻׁחִ֑ים אֲשֶׁר־מִלֵּ֥א יָדָ֖ם לְכַהֵֽן׃ | 3 |
೩ಇವರು ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಅಭಿಷೇಕಹೊಂದಿದವರಾಗಿ ಪ್ರತಿಷ್ಠಿತರಾದ ಆರೋನನ ಮಕ್ಕಳು.
וַיָּ֣מָת נָדָ֣ב וַאֲבִיה֣וּא לִפְנֵ֣י יְהוָ֡ה בְּֽהַקְרִבָם֩ אֵ֨שׁ זָרָ֜ה לִפְנֵ֤י יְהוָה֙ בְּמִדְבַּ֣ר סִינַ֔י וּבָנִ֖ים לֹא־הָי֣וּ לָהֶ֑ם וַיְכַהֵ֤ן אֶלְעָזָר֙ וְאִ֣יתָמָ֔ר עַל־פְּנֵ֖י אַהֲרֹ֥ן אֲבִיהֶֽם׃ פ | 4 |
೪ಆದರೆ ನಾದಾಬ್ ಮತ್ತು ಅಬೀಹೂ ಎಂಬುವವರು ಸೀನಾಯಿ ಮರುಭೂಮಿಯಲ್ಲಿ ಯೆಹೋವನು ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯಿಂದ ಧೂಪವನ್ನು ಸಮರ್ಪಿಸಿದ್ದರಿಂದ ಆತನ ಸನ್ನಿಧಿಯಲ್ಲೇ ಸತ್ತು ಹೋದರು. ಅವರಿಗೆ ಮಕ್ಕಳಿರಲಿಲ್ಲ. ಆದುದರಿಂದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬಿಬ್ಬರು ತಮ್ಮ ತಂದೆಯಾದ ಆರೋನನ ಕೈಕೆಳಗೆ ಯಾಜಕಧರ್ಮವನ್ನು ನಡೆಸಿದರು.
וַיְדַבֵּ֥ר יְהוָ֖ה אֶל־מֹשֶׁ֥ה לֵּאמֹֽר׃ | 5 |
೫ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ,
הַקְרֵב֙ אֶת־מַטֵּ֣ה לֵוִ֔י וְֽהַעֲמַדְתָּ֣ אֹת֔וֹ לִפְנֵ֖י אַהֲרֹ֣ן הַכֹּהֵ֑ן וְשֵׁרְת֖וּ אֹתֽוֹ׃ | 6 |
೬“ನೀನು ಲೇವಿಯ ಕುಲದವರನ್ನು ಹತ್ತಿರಕ್ಕೆ ಕರೆದು ಅವರು ದೇವರ ಸೇವಕಾರ್ಯಕ್ಕಾಗಿ ಯಾಜಕನಾದ ಆರೋನನ ಕೈಕೆಳಗಿರುವಂತೆ ಅವನ ಮುಂದೆ ನಿಲ್ಲಿಸು.
וְשָׁמְר֣וּ אֶת־מִשְׁמַרְתּ֗וֹ וְאֶת־מִשְׁמֶ֙רֶת֙ כָּל־הָ֣עֵדָ֔ה לִפְנֵ֖י אֹ֣הֶל מוֹעֵ֑ד לַעֲבֹ֖ד אֶת־עֲבֹדַ֥ת הַמִּשְׁכָּֽן׃ | 7 |
೭“ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು, ಆರೋನನಿಗೋಸ್ಕರವೂ ಸರ್ವಸಮೂಹದವರಿಗೋಸ್ಕರವೂ ದೇವಸ್ಥಾನದ ಸೇವಾಕಾರ್ಯವನ್ನು ನಡೆಸಬೇಕು.
וְשָׁמְר֗וּ אֶֽת־כָּל־ כְּלֵי֙ אֹ֣הֶל מוֹעֵ֔ד וְאֶת־מִשְׁמֶ֖רֶת בְּנֵ֣י יִשְׂרָאֵ֑ל לַעֲבֹ֖ד אֶת־עֲבֹדַ֥ת הַמִּשְׁכָּֽן׃ | 8 |
೮ಅವರು ದೇವದರ್ಶನದ ಗುಡಾರದ ಸಾಮಾನುಗಳನ್ನು ಕಾಯಬೇಕು. ಇಸ್ರಾಯೇಲರಿಗೋಸ್ಕರ ದೇವಸ್ಥಾನದ ಸೇವಕಾರ್ಯವನ್ನು ನಡೆಸಬೇಕು.
וְנָתַתָּה֙ אֶת־הַלְוִיִּ֔ם לְאַהֲרֹ֖ן וּלְבָנָ֑יו נְתוּנִ֨ם נְתוּנִ֥ם הֵ֙מָּה֙ ל֔וֹ מֵאֵ֖ת בְּנֵ֥י יִשְׂרָאֵֽל׃ | 9 |
೯“ನೀನು ಲೇವಿಯರನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಒಪ್ಪಿಸಬೇಕು. ಇಸ್ರಾಯೇಲರಲ್ಲಿ ಆರೋನನಿಗೆ ಸಂಪೂರ್ಣವಾಗಿ ಒಪ್ಪಿಸಲ್ಪಟ್ಟವರು ಇವರೇ.
וְאֶת־אַהֲרֹ֤ן וְאֶת־בָּנָיו֙ תִּפְקֹ֔ד וְשָׁמְר֖וּ אֶת־כְּהֻנָּתָ֑ם וְהַזָּ֥ר הַקָּרֵ֖ב יוּמָֽת׃ פ | 10 |
೧೦ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನು ಮತ್ತು ಅವನ ಮಕ್ಕಳನ್ನು ನೇಮಿಸಬೇಕು. ಇತರರು ಆ ಕೆಲಸಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು” ಎಂದು ಹೇಳಿದನು.
וַיְדַבֵּ֥ר יְהוָ֖ה אֶל־מֹשֶׁ֥ה לֵּאמֹֽר׃ | 11 |
೧೧ಯೆಹೋವನು ಮೋಶೆಯ ಸಂಗಡ ಮಾತನಾಡಿ ಅವನಿಗೆ ಹೇಳಿದ್ದೇನೆಂದರೆ,
וַאֲנִ֞י הִנֵּ֧ה לָקַ֣חְתִּי אֶת־הַלְוִיִּ֗ם מִתּוֹךְ֙ בְּנֵ֣י יִשְׂרָאֵ֔ל תַּ֧חַת כָּל־בְּכ֛וֹר פֶּ֥טֶר רֶ֖חֶם מִבְּנֵ֣י יִשְׂרָאֵ֑ל וְהָ֥יוּ לִ֖י הַלְוִיִּֽם׃ | 12 |
೧೨“ನಾನು ಇಸ್ರಾಯೇಲರಲ್ಲಿ ಚೊಚ್ಚಲಾದ ಗಂಡಸರಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿದುಕೋ. ಆದುದರಿಂದ ಲೇವಿಯರು ನನ್ನ ಸೊತ್ತು.
כִּ֣י לִי֮ כָּל־בְּכוֹר֒ בְּיוֹם֩ הַכֹּתִ֨י כָל־בְּכ֜וֹר בְּאֶ֣רֶץ מִצְרַ֗יִם הִקְדַּ֨שְׁתִּי לִ֤י כָל־בְּכוֹר֙ בְּיִשְׂרָאֵ֔ל מֵאָדָ֖ם עַד־בְּהֵמָ֑ה לִ֥י יִהְי֖וּ אֲנִ֥י יְהוָֽה׃ ס | 13 |
೧೩ಇಸ್ರಾಯೇಲರಲ್ಲಿ ಚೊಚ್ಚಲಾದವರು ನನ್ನ ಸೊತ್ತು. ಐಗುಪ್ತ ದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹಾರಮಾಡಿದಾಗ ಇಸ್ರಾಯೇಲರಲ್ಲಿರುವ ಚೊಚ್ಚಲಾದ ಮನುಷ್ಯರನ್ನೂ, ಪಶುಗಳನ್ನೂ ನನ್ನ ಸ್ವಂತವಾಗಿ ಪ್ರತಿಷ್ಠಿಸಿಕೊಂಡೆನು; ಅವರು ನನ್ನವರಾಗಿರಬೇಕು. ನಾನೇ ಯೆಹೋವನು” ಎಂದು ಹೇಳಿದನು.
וַיְדַבֵּ֤ר יְהוָה֙ אֶל־מֹשֶׁ֔ה בְּמִדְבַּ֥ר סִינַ֖י לֵאמֹֽר׃ | 14 |
೧೪ಯೆಹೋವನು ಸೀನಾಯಿ ಮರುಭೂಮಿಯಲ್ಲಿ ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
פְּקֹד֙ אֶת־בְּנֵ֣י לֵוִ֔י לְבֵ֥ית אֲבֹתָ֖ם לְמִשְׁפְּחֹתָ֑ם כָּל־זָכָ֛ר מִבֶּן־חֹ֥דֶשׁ וָמַ֖עְלָה תִּפְקְדֵֽם׃ | 15 |
೧೫“ನೀನು ಲೇವಿಯರಲ್ಲಿ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರನ್ನೆಲ್ಲಾ ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.
וַיִּפְקֹ֥ד אֹתָ֛ם מֹשֶׁ֖ה עַל־פִּ֣י יְהוָ֑ה כַּאֲשֶׁ֖ר צֻוָּֽה׃ | 16 |
೧೬ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಅವರನ್ನು ಲೆಕ್ಕಿಸಿದನು.
וַיִּֽהְיוּ־אֵ֥לֶּה בְנֵֽי־לֵוִ֖י בִּשְׁמֹתָ֑ם גֵּרְשׁ֕וֹן וּקְהָ֖ת וּמְרָרִֽי׃ | 17 |
೧೭ಲೇವಿಯ ಮಕ್ಕಳು ಯಾರೆಂದರೆ: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ ಇವರೇ.
וְאֵ֛לֶּה שְׁמ֥וֹת בְּֽנֵי־גֵרְשׁ֖וֹן לְמִשְׁפְּחֹתָ֑ם לִבְנִ֖י וְשִׁמְעִֽי׃ | 18 |
೧೮ಗೋತ್ರಸ್ಥಾಪಕರಾದ ಗೇರ್ಷೋನನ ಮಕ್ಕಳು: ಲಿಬ್ನೀ, ಶಿಮ್ಮೀ ಇವರೇ.
וּבְנֵ֥י קְהָ֖ת לְמִשְׁפְּחֹתָ֑ם עַמְרָ֣ם וְיִצְהָ֔ר חֶבְר֖וֹן וְעֻזִּיאֵֽל׃ | 19 |
೧೯ಗೋತ್ರಸ್ಥಾಪಕರಾದ ಕೆಹಾತನ ಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್, ಎಂಬುವವರು.
וּבְנֵ֧י מְרָרִ֛י לְמִשְׁפְּחֹתָ֖ם מַחְלִ֣י וּמוּשִׁ֑י אֵ֥לֶּה הֵ֛ם מִשְׁפְּחֹ֥ת הַלֵּוִ֖י לְבֵ֥ית אֲבֹתָֽם׃ | 20 |
೨೦ಗೋತ್ರಸ್ಥಾಪಕರಾದ ಮೆರಾರೀಯ ಮಕ್ಕಳು: ಮಹ್ಲೀ, ಮೂಷೀ ಎಂಬುವವರು. ಗೋತ್ರಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು.
לְגֵ֣רְשׁ֔וֹן מִשְׁפַּ֙חַת֙ הַלִּבְנִ֔י וּמִשְׁפַּ֖חַת הַשִּׁמְעִ֑י אֵ֣לֶּה הֵ֔ם מִשְׁפְּחֹ֖ת הַגֵּרְשֻׁנִּֽי׃ | 21 |
೨೧ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರೂ ಶಿಮ್ಮೀ ಗೋತ್ರದವರೂ ಇದ್ದರು.
פְּקֻדֵיהֶם֙ בְּמִסְפַּ֣ר כָּל־זָכָ֔ר מִבֶּן־חֹ֖דֶשׁ וָמָ֑עְלָה פְּקֻ֣דֵיהֶ֔ם שִׁבְעַ֥ת אֲלָפִ֖ים וַחֲמֵ֥שׁ מֵאֽוֹת׃ | 22 |
೨೨ಅವರಲ್ಲಿ ಲೆಕ್ಕಿಸಲ್ಪಟ್ಟ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 7,500 ಮಂದಿ.
מִשְׁפְּחֹ֖ת הַגֵּרְשֻׁנִּ֑י אַחֲרֵ֧י הַמִּשְׁכָּ֛ן יַחֲנ֖וּ יָֽמָּה׃ | 23 |
೨೩ಗೇರ್ಷೋನ್ಯರ ಗೋತ್ರದವರು ದೇವದರ್ಶನದ ಗುಡಾರದ ಹಿಂದೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
וּנְשִׂ֥יא בֵֽית־אָ֖ב לַגֵּרְשֻׁנִּ֑י אֶלְיָסָ֖ף בֶּן־לָאֵֽל׃ | 24 |
೨೪ಗೇರ್ಷೋನ್ಯರ ಗೋತ್ರಗಳ ಪ್ರಧಾನಪುರುಷನು ಲಾಯೇಲನ ಮಗನಾದ ಎಲ್ಯಾಸಾಫ್.
וּמִשְׁמֶ֤רֶת בְּנֵֽי־גֵרְשׁוֹן֙ בְּאֹ֣הֶל מוֹעֵ֔ד הַמִּשְׁכָּ֖ן וְהָאֹ֑הֶל מִכְסֵ֕הוּ וּמָסַ֕ךְ פֶּ֖תַח אֹ֥הֶל מוֹעֵֽד׃ | 25 |
೨೫ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವುದೆಂದರೆ: ಗುಡಾರ ಅದರ ಮೇಲಣ ಡೇರೆಯ ಬಟ್ಟೆ, ಅದರ ಮೇಲ್ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆಗಳು,
וְקַלְעֵ֣י הֶֽחָצֵ֗ר וְאֶת־מָסַךְ֙ פֶּ֣תַח הֶֽחָצֵ֔ר אֲשֶׁ֧ר עַל־הַמִּשְׁכָּ֛ן וְעַל־הַמִּזְבֵּ֖חַ סָבִ֑יב וְאֵת֙ מֵֽיתָרָ֔יו לְכֹ֖ל עֲבֹדָתֽוֹ׃ | 26 |
೨೬ಗುಡಾರದ ಮತ್ತು ಯಜ್ಞವೇದಿಯ ಸುತ್ತಲಿರುವ ಅಂಗಳದ ತೆರೆಗಳೂ, ಅಂಗಳದ ಬಾಗಿಲಿನ ಪರದೆಗಳು, ಇವುಗಳ ಹಗ್ಗಗಳೂ ಇವೇ. ಇಂತಹ ಸಕಲವಿಧವಾದ ಸೇವಕಾರ್ಯವನ್ನು ಗೇರ್ಷೋನ್ಯರು ಮಾಡಬೇಕು.
וְלִקְהָ֗ת מִשְׁפַּ֤חַת הַֽעַמְרָמִי֙ וּמִשְׁפַּ֣חַת הַיִּצְהָרִ֔י וּמִשְׁפַּ֙חַת֙ הַֽחֶבְרֹנִ֔י וּמִשְׁפַּ֖חַת הָֽעָזִּיאֵלִ֑י אֵ֥לֶּה הֵ֖ם מִשְׁפְּחֹ֥ת הַקְּהָתִֽי׃ | 27 |
೨೭ಕೆಹಾತ್ ವಂಶದವರಲ್ಲಿ ಅಮ್ರಾಮ್ ಗೋತ್ರದವರು, ಇಚ್ಹಾರ್ ಗೋತ್ರದವರೂ, ಹೆಬ್ರೋನ್ ಗೋತ್ರದವರೂ, ಉಜ್ಜೀಯೇಲ್ ಗೋತ್ರದವರೂ ಇದ್ದರು.
בְּמִסְפַּר֙ כָּל־זָכָ֔ר מִבֶּן־חֹ֖דֶשׁ וָמָ֑עְלָה שְׁמֹנַ֤ת אֲלָפִים֙ וְשֵׁ֣שׁ מֵא֔וֹת שֹׁמְרֵ֖י מִשְׁמֶ֥רֶת הַקֹּֽדֶשׁ׃ | 28 |
೨೮ಅವರಲ್ಲಿ ದೇವಸ್ಥಾನವನ್ನು ನೋಡಿಕೊಳ್ಳತಕ್ಕವರು ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 8,600 ಮಂದಿ.
מִשְׁפְּחֹ֥ת בְּנֵי־קְהָ֖ת יַחֲנ֑וּ עַ֛ל יֶ֥רֶךְ הַמִּשְׁכָּ֖ן תֵּימָֽנָה׃ | 29 |
೨೯ಕೆಹಾತ್ಯರ ಗೋತ್ರಗಳವರು ದೇವದರ್ಶನದ ಗುಡಾರದ ದಕ್ಷಿಣ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
וּנְשִׂ֥יא בֵֽית־אָ֖ב לְמִשְׁפְּחֹ֣ת הַקְּהָתִ֑י אֶלִיצָפָ֖ן בֶּן־עֻזִּיאֵֽל׃ | 30 |
೩೦ಕೆಹಾತ್ಯರ ಗೋತ್ರಗಳ ಪ್ರಧಾನಪುರುಷನು ಉಜ್ಜೀಯೇಲನ ಮಗನಾದ ಎಲೀಚಾಫಾನ್.
וּמִשְׁמַרְתָּ֗ם הָאָרֹ֤ן וְהַשֻּׁלְחָן֙ וְהַמְּנֹרָ֣ה וְהַֽמִּזְבְּחֹ֔ת וּכְלֵ֣י הַקֹּ֔דֶשׁ אֲשֶׁ֥ר יְשָׁרְת֖וּ בָּהֶ֑ם וְהַ֨מָּסָ֔ךְ וְכֹ֖ל עֲבֹדָתֽוֹ׃ | 31 |
೩೧ಅವರು ನೋಡಿಕೊಳ್ಳಬೇಕಾದವುಗಳು ಯಾವುದೆಂದರೆ: ಮಂಜೂಷವು, ಮೇಜು, ದೀಪಸ್ತಂಭಗಳು, ಯಜ್ಞವೇದಿಗಳು, ದೇವಸ್ಥಾನದ ಸೇವೆಯ ಉಪಕರಣಗಳು, ಒಳಗಣ ತೆರೆಗಳು ಇವುಗಳೇ. ಇವುಗಳ ಸಕಲವಿಧವಾದ ಸೇವಕಾರ್ಯವನ್ನು ಅವರು ಮಾಡಬೇಕು.
וּנְשִׂיא֙ נְשִׂיאֵ֣י הַלֵּוִ֔י אֶלְעָזָ֖ר בֶּן־אַהֲרֹ֣ן הַכֹּהֵ֑ן פְּקֻדַּ֕ת שֹׁמְרֵ֖י מִשְׁמֶ֥רֶת הַקֹּֽדֶשׁ׃ | 32 |
೩೨ಅದಲ್ಲದೆ ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಪ್ರಧಾನಪುರುಷರ ಅಧ್ಯಕ್ಷನಾಗಿ ದೇವಸ್ಥಾನವನ್ನು ನೋಡಿಕೊಳ್ಳುವವರ ಮೇಲ್ವಿಚಾರಕನಾಗಿರಬೇಕು.
לִמְרָרִ֕י מִשְׁפַּ֙חַת֙ הַמַּחְלִ֔י וּמִשְׁפַּ֖חַת הַמּוּשִׁ֑י אֵ֥לֶּה הֵ֖ם מִשְׁפְּחֹ֥ת מְרָרִֽי׃ | 33 |
೩೩ಮೆರಾರೀ ವಂಶದವರಲ್ಲಿ ಮಹ್ಲೀ ಗೋತ್ರದವರೂ, ಮೂಷೀ ಗೋತ್ರದವರೂ ಇದ್ದರು.
וּפְקֻדֵיהֶם֙ בְּמִסְפַּ֣ר כָּל־זָכָ֔ר מִבֶּן־חֹ֖דֶשׁ וָמָ֑עְלָה שֵׁ֥שֶׁת אֲלָפִ֖ים וּמָאתָֽיִם׃ | 34 |
೩೪ಅವರಲ್ಲಿ ಲೆಕ್ಕಿಸಲ್ಪಟ್ಟ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 6,200 ಮಂದಿ.
וּנְשִׂ֤יא בֵֽית־אָב֙ לְמִשְׁפְּחֹ֣ת מְרָרִ֔י צוּרִיאֵ֖ל בֶּן־אֲבִיחָ֑יִל עַ֣ל יֶ֧רֶךְ הַמִּשְׁכָּ֛ן יַחֲנ֖וּ צָפֹֽנָה׃ | 35 |
೩೫ಮೆರಾರೀಯರ ಗೋತ್ರಗಳ ಪ್ರಧಾನಪುರುಷನು ಅಬೀಹೈಲನ ಮಗನಾದ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
וּפְקֻדַּ֣ת מִשְׁמֶרֶת֮ בְּנֵ֣י מְרָרִי֒ קַרְשֵׁי֙ הַמִּשְׁכָּ֔ן וּבְרִיחָ֖יו וְעַמֻּדָ֣יו וַאֲדָנָ֑יו וְכָל־כֵּלָ֔יו וְכֹ֖ל עֲבֹדָתֽוֹ׃ | 36 |
೩೬ಮೆರಾರೀ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವುವೆಂದರೆ: ಗುಡಾರದ ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು, ಇವುಗಳ ಉಪಕರಣಗಳು,
וְעַמֻּדֵ֧י הֶחָצֵ֛ר סָבִ֖יב וְאַדְנֵיהֶ֑ם וִיתֵדֹתָ֖ם וּמֵֽיתְרֵיהֶֽם׃ | 37 |
೩೭ಅಂಗಳದ ಸುತ್ತಲಿರುವ ಕಂಬಗಳು, ಇವುಗಳ ಗದ್ದಿಗೆಕಲ್ಲುಗಳು, ಗೂಟಗಳು, ಹಗ್ಗಗಳು ಇವುಗಳೇ. ಇವುಗಳ ಸಕಲ ವಿಧವಾದ ಸೇವಕಾರ್ಯವನ್ನು ಇವರೇ ಮಾಡಬೇಕು.
וְהַחֹנִ֣ים לִפְנֵ֣י הַמִּשְׁכָּ֡ן קֵ֣דְמָה לִפְנֵי֩ אֹֽהֶל־מוֹעֵ֨ד ׀ מִזְרָ֜חָה מֹשֶׁ֣ה ׀ וְאַהֲרֹ֣ן וּבָנָ֗יו שֹֽׁמְרִים֙ מִשְׁמֶ֣רֶת הַמִּקְדָּ֔שׁ לְמִשְׁמֶ֖רֶת בְּנֵ֣י יִשְׂרָאֵ֑ל וְהַזָּ֥ר הַקָּרֵ֖ב יוּמָֽת׃ | 38 |
೩೮ದೇವದರ್ಶನದ ಗುಡಾರದ ಪೂರ್ವ ದಿಕ್ಕಿನಲ್ಲಿ ಅಂದರೆ ಸೂರ್ಯೋದಯವಾಗುವ ದಿಕ್ಕಿನಲ್ಲಿ ಮೋಶೆ, ಆರೋನನೂ ಮತ್ತು ಅವನ ಮಕ್ಕಳೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರು ಇಸ್ರಾಯೇಲರಿಗೋಸ್ಕರವಾಗಿ ದೇವಸ್ಥಾನವನ್ನು ನೋಡಿಕೊಳ್ಳಬೇಕು. ಇತರರು ಆ ಕೆಲಸಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು.
כָּל־פְּקוּדֵ֨י הַלְוִיִּ֜ם אֲשֶׁר֩ פָּקַ֨ד מֹשֶׁ֧ה וְׄאַׄהֲׄרֹ֛ׄןׄ עַל־פִּ֥י יְהוָ֖ה לְמִשְׁפְּחֹתָ֑ם כָּל־זָכָר֙ מִבֶּן־חֹ֣דֶשׁ וָמַ֔עְלָה שְׁנַ֥יִם וְעֶשְׂרִ֖ים אָֽלֶף׃ ס | 39 |
೩೯ಮೋಶೆ ಮತ್ತು ಆರೋನರು ಯೆಹೋವನ ಅಪ್ಪಣೆಯ ಮೇರೆಗೆ ಗೋತ್ರಗಳ ಪ್ರಕಾರ ಲೆಕ್ಕಿಸಿದ ಲೇವಿಯರ ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಒಟ್ಟು ಸಂಖ್ಯೆ 22,000 ಮಂದಿ.
וַיֹּ֨אמֶר יְהוָ֜ה אֶל־מֹשֶׁ֗ה פְּקֹ֨ד כָּל־בְּכֹ֤ר זָכָר֙ לִבְנֵ֣י יִשְׂרָאֵ֔ל מִבֶּן־חֹ֖דֶשׁ וָמָ֑עְלָה וְשָׂ֕א אֵ֖ת מִסְפַּ֥ר שְׁמֹתָֽם׃ | 40 |
೪೦ಇದಲ್ಲದೆ ಯೆಹೋವನು ಮೋಶೆಗೆ, “ನೀನು ಇಸ್ರಾಯೇಲರಲ್ಲಿ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಚೊಚ್ಚಲು ಗಂಡಸರನ್ನು ಹೆಸರು ಹಿಡಿದು ಎಣಿಕೆಮಾಡು.
וְלָקַחְתָּ֨ אֶת־הַלְוִיִּ֥ם לִי֙ אֲנִ֣י יְהוָ֔ה תַּ֥חַת כָּל־בְּכֹ֖ר בִּבְנֵ֣י יִשְׂרָאֵ֑ל וְאֵת֙ בֶּהֱמַ֣ת הַלְוִיִּ֔ם תַּ֣חַת כָּל־בְּכ֔וֹר בְּבֶהֱמַ֖ת בְּנֵ֥י יִשְׂרָאֵֽל׃ | 41 |
೪೧ಇಸ್ರಾಯೇಲರಲ್ಲಿರುವ ಚೊಚ್ಚಲಾದವರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲರ ಚೊಚ್ಚಲು ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನೂ ನನಗೋಸ್ಕರ ತೆಗೆದುಕೋ, ನಾನೇ ಯೆಹೋವನು” ಎಂದನು.
וַיִּפְקֹ֣ד מֹשֶׁ֔ה כַּאֲשֶׁ֛ר צִוָּ֥ה יְהוָ֖ה אֹת֑וֹ אֶֽת־כָּל־בְּכֹ֖ר בִּבְנֵ֥י יִשְׂרָאֵֽל׃ | 42 |
೪೨ಯೆಹೋವನ ಅಪ್ಪಣೆಯ ಮೇರೆಗೆ ಮೋಶೆಯು, ಇಸ್ರಾಯೇಲರಲ್ಲಿದ್ದ ಚೊಚ್ಚಲಾದವರನ್ನು ಲೆಕ್ಕಿಸಿದನು.
וַיְהִי֩ כָל־בְּכ֨וֹר זָכָ֜ר בְּמִסְפַּ֥ר שֵׁמ֛וֹת מִבֶּן־חֹ֥דֶשׁ וָמַ֖עְלָה לִפְקֻדֵיהֶ֑ם שְׁנַ֤יִם וְעֶשְׂרִים֙ אֶ֔לֶף שְׁלֹשָׁ֥ה וְשִׁבְעִ֖ים וּמָאתָֽיִם׃ פ | 43 |
೪೩ಹೆಸರು ಹಿಡಿದು ಎಣಿಕೆ ಮಾಡಲ್ಪಟ್ಟ ಚೊಚ್ಚಲಾದವರು ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 22,273 ಮಂದಿ.
וַיְדַבֵּ֥ר יְהוָ֖ה אֶל־מֹשֶׁ֥ה לֵּאמֹֽר׃ | 44 |
೪೪ಪುನಃ ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ,
קַ֣ח אֶת־הַלְוִיִּ֗ם תַּ֤חַת כָּל־בְּכוֹר֙ בִּבְנֵ֣י יִשְׂרָאֵ֔ל וְאֶת־בֶּהֱמַ֥ת הַלְוִיִּ֖ם תַּ֣חַת בְּהֶמְתָּ֑ם וְהָיוּ־לִ֥י הַלְוִיִּ֖ם אֲנִ֥י יְהוָֽה׃ | 45 |
೪೫“ನೀನು ಇಸ್ರಾಯೇಲರ ಚೊಚ್ಚಲಾದವರಿಗೆ ಬದಲಾಗಿ ಲೇವಿಯರನ್ನು, ಅವರ ಚೊಚ್ಚಲಾದ ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನು ತೆಗೆದುಕೋ. ಲೇವಿಯರೇ ನನ್ನ ಸೊತ್ತಾಗಿರುವರು; ನಾನೇ ಯೆಹೋವನು.
וְאֵת֙ פְּדוּיֵ֣י הַשְּׁלֹשָׁ֔ה וְהַשִּׁבְעִ֖ים וְהַמָּאתָ֑יִם הָעֹֽדְפִים֙ עַל־הַלְוִיִּ֔ם מִבְּכ֖וֹר בְּנֵ֥י יִשְׂרָאֵֽל׃ | 46 |
೪೬“ಲೇವಿಯರ ಸಂಖ್ಯೆಗಿಂತ ಹೆಚ್ಚಾಗಿ 273 ಮಂದಿ ಚೊಚ್ಚಲರು ಹೆಚ್ಚಾಗಿ ಇಸ್ರಾಯೇಲರಲ್ಲಿ ಇರುವುದರಿಂದ ಅವರನ್ನು ಬಿಡಿಸುವುದಕ್ಕಾಗಿ ಒಬ್ಬೊಬ್ಬರಿಗೆ ಐದೈದು ಶೆಕೆಲ್ ಮೇರೆಗೆ ಈಡು ತೆಗೆದುಕೊಳ್ಳಬೇಕು.
וְלָקַחְתָּ֗ חֲמֵ֧שֶׁת חֲמֵ֛שֶׁת שְׁקָלִ֖ים לַגֻּלְגֹּ֑לֶת בְּשֶׁ֤קֶל הַקֹּ֙דֶשׁ֙ תִּקָּ֔ח עֶשְׂרִ֥ים גֵּרָ֖ה הַשָּֽׁקֶל׃ | 47 |
೪೭ದೇವಸ್ಥಾನದ ಸೇವೆಗೆ ನೇಮಕವಾದ ಶೆಕೆಲ್ ಗಳ ಮೇರೆಯ ಪ್ರಕಾರ ಒಬ್ಬೊಬ್ಬನಿಗೆ ಐದು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಳ್ಳಬೇಕು.
וְנָתַתָּ֣ה הַכֶּ֔סֶף לְאַהֲרֹ֖ן וּלְבָנָ֑יו פְּדוּיֵ֕י הָעֹדְפִ֖ים בָּהֶֽם׃ | 48 |
೪೮ಅವರೊಳಗೆ ಹೆಚ್ಚಾಗಿರುವವರ ಬಿಡುಗಡೆಗೋಸ್ಕರ ಅವರು ಕೊಡುವ ಹಣವನ್ನು ನೀನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಕೊಡಬೇಕು” ಎಂದನು.
וַיִּקַּ֣ח מֹשֶׁ֔ה אֵ֖ת כֶּ֣סֶף הַפִּדְי֑וֹם מֵאֵת֙ הָעֹ֣דְפִ֔ים עַ֖ל פְּדוּיֵ֥י הַלְוִיִּֽם׃ | 49 |
೪೯ಅದಕ್ಕೆ ಅನುಸಾರವಾಗಿ ಮೋಶೆ ಲೇವಿಯರಿಗಿಂತ ಹೆಚ್ಚಾದ ಚೊಚ್ಚಲರನ್ನು ಬಿಡಿಸುವುದಕ್ಕಾಗಿ ಹಣವನ್ನು ತೆಗೆದುಕೊಂಡನು.
מֵאֵ֗ת בְּכ֛וֹר בְּנֵ֥י יִשְׂרָאֵ֖ל לָקַ֣ח אֶת־הַכָּ֑סֶף חֲמִשָּׁ֨ה וְשִׁשִּׁ֜ים וּשְׁלֹ֥שׁ מֵא֛וֹת וָאֶ֖לֶף בְּשֶׁ֥קֶל הַקֹּֽדֶשׁ׃ | 50 |
೫೦ಇಸ್ರಾಯೇಲರಲ್ಲಿ ಚೊಚ್ಚಲಾದವರಿಂದ ದೇವಸ್ಥಾನದ ಸೇವೆಗೆ ನೇಮಕವಾದ ರೂಪಾಯಿಯಲ್ಲಿ 1,365 ಶೆಕೆಲ್ ಗಳನ್ನು ತೆಗೆದುಕೊಂಡನು.
וַיִּתֵּ֨ן מֹשֶׁ֜ה אֶת־כֶּ֧סֶף הַפְּדֻיִ֛ם לְאַהֲרֹ֥ן וּלְבָנָ֖יו עַל־פִּ֣י יְהוָ֑ה כַּאֲשֶׁ֛ר צִוָּ֥ה יְהוָ֖ה אֶת־מֹשֶֽׁה׃ פ | 51 |
೫೧ಯೆಹೋವನ ಆಜ್ಞೆಯಂತೆ ಮೋಶೆ ಆ ಬಿಡುಗಡೆಯ ಹಣವನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಕೊಟ್ಟನು.