< יִרְמְיָהוּ 26 >

בְּרֵאשִׁ֗ית מַמְלְכ֛וּת יְהוֹיָקִ֥ים בֶּן־יֹאשִׁיָּ֖הוּ מֶ֣לֶךְ יְהוּדָ֑ה הָיָה֙ הַדָּבָ֣ר הַזֶּ֔ה מֵאֵ֥ת יְהוָ֖ה לֵאמֹֽר׃ 1
ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆಹೋವನಿಂದ ಯೆರೆಮೀಯನಿಗೆ ಈ ಅಪ್ಪಣೆಯಾಯಿತು.
כֹּ֣ה ׀ אָמַ֣ר יְהוָ֗ה עֲמֹד֮ בַּחֲצַ֣ר בֵּית־יְהוָה֒ וְדִבַּרְתָּ֞ עַל־כָּל־עָרֵ֣י יְהוּדָ֗ה הַבָּאִים֙ לְהִשְׁתַּחֲוֺ֣ת בֵּית־יְהוָ֔ה אֵ֚ת כָּל־הַדְּבָרִ֔ים אֲשֶׁ֥ר צִוִּיתִ֖יךָ לְדַבֵּ֣ר אֲלֵיהֶ֑ם אַל־תִּגְרַ֖ע דָּבָֽר׃ 2
“ಯೆಹೋವನು ಇಂತೆನ್ನುತ್ತಾನೆ, ನೀನು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತು ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಯೆಹೂದದ ಎಲ್ಲಾ ಊರಿನವರಿಗೆ ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದು ಮಾತನ್ನೂ ಬಿಡಬೇಡ.
אוּלַ֣י יִשְׁמְע֔וּ וְיָשֻׁ֕בוּ אִ֖ישׁ מִדַּרְכּ֣וֹ הָרָעָ֑ה וְנִחַמְתִּ֣י אֶל־הָרָעָ֗ה אֲשֶׁ֨ר אָנֹכִ֤י חֹשֵׁב֙ לַעֲשׂ֣וֹת לָהֶ֔ם מִפְּנֵ֖י רֹ֥עַ מַעַלְלֵיהֶֽם׃ 3
ಅವರು ಒಂದು ವೇಳೆ ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಾಗೆ ಮಾಡಿದರೆ ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.
וְאָמַרְתָּ֣ אֲלֵיהֶ֔ם כֹּ֖ה אָמַ֣ר יְהוָ֑ה אִם־לֹ֤א תִשְׁמְעוּ֙ אֵלַ֔י לָלֶ֙כֶת֙ בְּת֣וֹרָתִ֔י אֲשֶׁ֥ר נָתַ֖תִּי לִפְנֵיכֶֽם׃ 4
ನೀನು ಅವರಿಗೆ, ‘ಯೆಹೋವನು ಇಂತೆನ್ನುತ್ತಾನೆ, ನೀವು ನನ್ನ ಕಡೆಗೆ ಕಿವಿಗೊಡದೆ ನಾನು ನಿಮ್ಮ ಮುಂದೆ ಇಟ್ಟಿರುವ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯಬೇಕೆಂಬ ಮಾತನ್ನು ಕೇಳದೆ,
לִשְׁמֹ֗עַ עַל־דִּבְרֵ֨י עֲבָדַ֣י הַנְּבִאִ֔ים אֲשֶׁ֥ר אָנֹכִ֖י שֹׁלֵ֣חַ אֲלֵיכֶ֑ם וְהַשְׁכֵּ֥ם וְשָׁלֹ֖חַ וְלֹ֥א שְׁמַעְתֶּֽם׃ 5
ನಿಮ್ಮ ಬಳಿಗೆ ನಾನು ತಪ್ಪದೆ ಕಳುಹಿಸುತ್ತಾ ಬಂದಿರುವ ನನ್ನ ಸೇವಕರಾದ ಪ್ರವಾದಿಗಳ ಮಾತುಗಳನ್ನು ಕೇಳದೆಯೂ ಇದ್ದರೆ,
וְנָתַתִּ֛י אֶת־הַבַּ֥יִת הַזֶּ֖ה כְּשִׁלֹ֑ה וְאֶת־הָעִ֤יר הזאתה אֶתֵּ֣ן לִקְלָלָ֔ה לְכֹ֖ל גּוֹיֵ֥י הָאָֽרֶץ׃ ס 6
ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ತಂದು, ಈ ಪಟ್ಟಣವು ಲೋಕದ ಸಮಸ್ತ ಜನಾಂಗಗಳಲ್ಲಿ ಶಾಪದ ಮಾತಾಗುವಂತೆ ಮಾಡುವೆನು’” ಎಂದು ಹೇಳು ಎಂದನು.
וַֽיִּשְׁמְע֛וּ הַכֹּהֲנִ֥ים וְהַנְּבִאִ֖ים וְכָל־הָעָ֑ם אֶֽת־יִרְמְיָ֔הוּ מְדַבֵּ֛ר אֶת־הַדְּבָרִ֥ים הָאֵ֖לֶּה בְּבֵ֥ית יְהוָֽה׃ 7
ಯೆರೆಮೀಯನು ಯೆಹೋವನ ಆಲಯದಲ್ಲಿ ಹೀಗೆ ಮಾತನಾಡುವುದನ್ನು ಯಾಜಕರೂ, ಪ್ರವಾದಿಗಳು ಮತ್ತು ಸಕಲ ಜನರೂ ಕೇಳಿದರು.
וַיְהִ֣י ׀ כְּכַלּ֣וֹת יִרְמְיָ֗הוּ לְדַבֵּר֙ אֵ֣ת כָּל־אֲשֶׁר־צִוָּ֣ה יְהוָ֔ה לְדַבֵּ֖ר אֶל־כָּל־הָעָ֑ם וַיִּתְפְּשׂ֨וּ אֹת֜וֹ הַכֹּהֲנִ֧ים וְהַנְּבִאִ֛ים וְכָל־הָעָ֥ם לֵאמֹ֖ר מ֥וֹת תָּמֽוּת׃ 8
ಸಮಸ್ತಜನರಿಗೆ ಹೇಳಬೇಕೆಂದು ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಯೆರೆಮೀಯನು ಹೇಳಿ ಮುಗಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ ಎಲ್ಲಾ ಜನರೂ ಅವನನ್ನು ಹಿಡಿದು, “ನೀನು ಸಾಯಲೇಬೇಕು!
מַדּוּעַ֩ נִבֵּ֨יתָ בְשֵׁם־יְהוָ֜ה לֵאמֹ֗ר כְּשִׁלוֹ֙ יִֽהְיֶה֙ הַבַּ֣יִת הַזֶּ֔ה וְהָעִ֥יר הַזֹּ֛את תֶּחֱרַ֖ב מֵאֵ֣ין יוֹשֵׁ֑ב וַיִּקָּהֵ֧ל כָּל־הָעָ֛ם אֶֽל־יִרְמְיָ֖הוּ בְּבֵ֥ית יְהוָֽה׃ 9
ನೀನು ಯೆಹೋವನ ಹೆಸರೆತ್ತಿ ಪ್ರವಾದಿಸುತ್ತಾ, ‘ಈ ಆಲಯವು ಶಿಲೋವಿನ ಗತಿಗೆ ಬರುವುದು, ಈ ಪಟ್ಟಣವು ಒಕ್ಕಲಿಲ್ಲದೆ ಹಾಳುಬೀಳುವುದು’ ಎಂದು ಏಕೆ ಹೇಳಿದೆ” ಎಂದರು. ಆಗ ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನ ಸುತ್ತಲು ಸುತ್ತಿಕೊಂಡಿದ್ದರು.
וַֽיִּשְׁמְע֣וּ ׀ שָׂרֵ֣י יְהוּדָ֗ה אֵ֚ת הַדְּבָרִ֣ים הָאֵ֔לֶּה וַיַּעֲל֥וּ מִבֵּית־הַמֶּ֖לֶךְ בֵּ֣ית יְהוָ֑ה וַיֵּֽשְׁב֛וּ בְּפֶ֥תַח שַֽׁעַר־יְהוָ֖ה הֶחָדָֽשׁ׃ ס 10
೧೦ಯೆಹೂದದ ಸರದಾರರು ಈ ವರ್ತಮಾನವನ್ನು ಕೇಳಿ ಅರಮನೆಯಿಂದ ಯೆಹೋವನ ಆಲಯಕ್ಕೆ ಬಂದು ಆ ಮಂದಿರದ ಹೊಸ ಬಾಗಿಲಿನಲ್ಲಿ ಕುಳಿತುಕೊಂಡರು.
וַיֹּ֨אמְר֜וּ הַכֹּהֲנִ֤ים וְהַנְּבִאִים֙ אֶל־הַשָּׂרִ֔ים וְאֶל־כָּל־הָעָ֖ם לֵאמֹ֑ר מִשְׁפַּט־מָ֙וֶת֙ לָאִ֣ישׁ הַזֶּ֔ה כִּ֤י נִבָּא֙ אֶל־הָעִ֣יר הַזֹּ֔את כַּאֲשֶׁ֥ר שְׁמַעְתֶּ֖ם בְּאָזְנֵיכֶֽם׃ 11
೧೧ಆಗ ಯಾಜಕರೂ ಮತ್ತು ಪ್ರವಾದಿಗಳೂ, “ಇವನು ಮರಣದಂಡನೆಗೆ ತಕ್ಕವನು; ಇವನು ಈ ಪಟ್ಟಣಕ್ಕೆ ಅಹಿತ ನುಡಿದದ್ದನ್ನು ನೀವು ಕಿವಿಯಾರೆ ಕೇಳಿದಿರೀ” ಎಂದು ಸರದಾರರಿಗೂ ಎಲ್ಲಾ ಜನರಿಗೂ ಹೇಳಿದರು.
וַיֹּ֤אמֶר יִרְמְיָ֙הוּ֙ אֶל־כָּל־הַשָּׂרִ֔ים וְאֶל־כָּל־הָעָ֖ם לֵאמֹ֑ר יְהוָ֣ה שְׁלָחַ֗נִי לְהִנָּבֵ֞א אֶל־הַבַּ֤יִת הַזֶּה֙ וְאֶל־הָעִ֣יר הַזֹּ֔את אֵ֥ת כָּל־הַדְּבָרִ֖ים אֲשֶׁ֥ר שְׁמַעְתֶּֽם׃ 12
೧೨ಆಗ ಯೆರೆಮೀಯನು ಸಕಲ ಸರದಾರರಿಗೂ ಸಮಸ್ತ ಜನರಿಗೂ, “ನೀವು ಕೇಳಿದ ಮಾತುಗಳನ್ನೆಲ್ಲಾ ಈ ಆಲಯಕ್ಕೂ ಈ ಪಟ್ಟಣಕ್ಕೂ ಪ್ರತಿಕೂಲವಾಗಿ ನುಡಿಯಬೇಕೆಂದು ಯೆಹೋವನು ನನ್ನನ್ನು ಕಳುಹಿಸಿದನು.
וְעַתָּ֗ה הֵיטִ֤יבוּ דַרְכֵיכֶם֙ וּמַ֣עַלְלֵיכֶ֔ם וְשִׁמְע֕וּ בְּק֖וֹל יְהוָ֣ה אֱלֹהֵיכֶ֑ם וְיִנָּחֵ֣ם יְהוָ֔ה אֶל־הָ֣רָעָ֔ה אֲשֶׁ֥ר דִּבֶּ֖ר עֲלֵיכֶֽם׃ 13
೧೩ಈಗಲೇ ನಿಮ್ಮ ಮಾರ್ಗಗಳನ್ನೂ ಕೃತ್ಯಗಳನ್ನೂ ತಿದ್ದಿಕೊಂಡು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡಿರಿ; ಹಾಗೆ ಮಾಡಿದರೆ ಯೆಹೋವನು ನಿಮ್ಮ ವಿಷಯವಾಗಿ ನುಡಿದಿರುವ ಕೇಡನ್ನು ಮನಮರುಗಿ ಮಾಡದಿರುವನು.
וַאֲנִ֖י הִנְנִ֣י בְיֶדְכֶ֑ם עֲשׂוּ־לִ֛י כַּטּ֥וֹב וְכַיָּשָׁ֖ר בְּעֵינֵיכֶֽם׃ 14
೧೪ನಾನೋ ನಿಮ್ಮ ಕೈಯಲ್ಲಿದ್ದೇನಲ್ಲಾ; ನಿಮಗೆ ಒಳ್ಳೆಯದಾಗಿಯೂ, ನ್ಯಾಯವಾಗಿಯೂ ತೋರುವುದನ್ನು ನನಗೆ ಮಾಡಿರಿ.
אַ֣ךְ ׀ יָדֹ֣עַ תֵּדְע֗וּ כִּ֣י אִם־מְמִתִ֣ים אַתֶּם֮ אֹתִי֒ כִּי־דָ֣ם נָקִ֗י אַתֶּם֙ נֹתְנִ֣ים עֲלֵיכֶ֔ם וְאֶל־הָעִ֥יר הַזֹּ֖את וְאֶל־יֹשְׁבֶ֑יהָ כִּ֣י בֶאֱמֶ֗ת שְׁלָחַ֤נִי יְהוָה֙ עֲלֵיכֶ֔ם לְדַבֵּר֙ בְּאָזְנֵיכֶ֔ם אֵ֥ת כָּל־הַדְּבָרִ֖ים הָאֵֽלֶּה׃ ס 15
೧೫ಆದರೆ ನೀವು ನನ್ನನ್ನು ಕೊಂದು ಹಾಕಿದ ಪಕ್ಷಕ್ಕೆ, ನೀವೂ, ಈ ಪಟ್ಟಣವೂ ಮತ್ತು ಇದರ ನಿವಾಸಿಗಳೂ ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ಪಾತ್ರರಾಗುವಿರಿ ಎಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ. ಈ ಮಾತುಗಳನ್ನೆಲ್ಲಾ ನಿಮ್ಮ ಕಿವಿಗೆ ಮುಟ್ಟಿಸುವಂತೆ ಯೆಹೋವನು ನನ್ನನ್ನು ಕಳುಹಿಸಿರುವುದು ಖಂಡಿತ” ಎಂದು ಹೇಳಿದನು.
וַיֹּאמְר֤וּ הַשָּׂרִים֙ וְכָל־הָעָ֔ם אֶל־הַכֹּהֲנִ֖ים וְאֶל־הַנְּבִיאִ֑ים אֵין־לָאִ֤ישׁ הַזֶּה֙ מִשְׁפַּט־מָ֔וֶת כִּ֗י בְּשֵׁ֛ם יְהוָ֥ה אֱלֹהֵ֖ינוּ דִּבֶּ֥ר אֵלֵֽינוּ׃ 16
೧೬ಇದನ್ನು ಕೇಳಿ ಸರದಾರರೂ ಸಕಲ ಜನರೂ ಯಾಜಕ ಪ್ರವಾದಿಗಳಿಗೆ, “ಇವನು ಮರಣ ದಂಡನೆಗೆ ತಕ್ಕವನಲ್ಲ; ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಇದನ್ನು ನಮಗೆ ನುಡಿದಿದ್ದಾನಷ್ಟೆ” ಎಂದು ಹೇಳಿದರು.
וַיָּקֻ֣מוּ אֲנָשִׁ֔ים מִזִּקְנֵ֖י הָאָ֑רֶץ וַיֹּ֣אמְר֔וּ אֶל־כָּל־קְהַ֥ל הָעָ֖ם לֵאמֹֽר׃ 17
೧೭ತರುವಾಯ ದೇಶದ ಹಿರಿಯರಲ್ಲಿ ಕೆಲವರು ಎದ್ದು ನಿಂತು,
מיכיה הַמּ֣וֹרַשְׁתִּ֔י הָיָ֣ה נִבָּ֔א בִּימֵ֖י חִזְקִיָּ֣הוּ מֶֽלֶךְ־יְהוּדָ֑ה וַיֹּ֣אמֶר אֶל־כָּל־עַם֩ יְהוּדָ֨ה לֵאמֹ֜ר כֹּֽה־אָמַ֣ר ׀ יְהוָ֣ה צְבָא֗וֹת צִיּ֞וֹן שָׂדֶ֤ה תֵֽחָרֵשׁ֙ וִירוּשָׁלַ֙יִם֙ עִיִּ֣ים תִּֽהְיֶ֔ה וְהַ֥ר הַבַּ֖יִת לְבָמ֥וֹת יָֽעַר׃ 18
೧೮“ಯೆಹೂದದ ಅರಸನಾದ ಹಿಜ್ಕೀಯನ ಕಾಲದಲ್ಲಿ ಮೋರೆಷೆತ್ ಊರಿನವನಾದ ಮೀಕಾಯನು ಯೆಹೂದ್ಯರೆಲ್ಲರಿಗೆ, ‘ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳಿರಿ, ಚೀಯೋನ್ ಪಟ್ಟಣವು ಹೊಲದಂತೆ ಉಳಲಾಗುವುದು, ಯೆರೂಸಲೇಮು ಹಾಳುದಿಬ್ಬಗಳಾಗಿ ಬೀಳುವುದು, ಯೆಹೋವನ ಆಲಯದ ಪರ್ವತವು ಕಾಡು ಗುಡ್ಡಗಳಂತಾಗುವುದು’ ಎಂದು ಹೇಳಲಾಗಿ
הֶהָמֵ֣ת הֱ֠מִתֻהוּ חִזְקִיָּ֨הוּ מֶֽלֶךְ־יְהוּדָ֜ה וְכָל־יְהוּדָ֗ה הֲלֹא֮ יָרֵ֣א אֶת־יְהוָה֒ וַיְחַל֙ אֶת־פְּנֵ֣י יְהוָ֔ה וַיִּנָּ֣חֶם יְהוָ֔ה אֶל־הָרָעָ֖ה אֲשֶׁר־דִּבֶּ֣ר עֲלֵיהֶ֑ם וַאֲנַ֗חְנוּ עֹשִׂ֛ים רָעָ֥ה גְדוֹלָ֖ה עַל־נַפְשׁוֹתֵֽינוּ ׃ 19
೧೯ಯೆಹೂದದ ಅರಸನಾದ ಹಿಜ್ಕೀಯನೂ ಎಲ್ಲಾ ಯೆಹೂದ್ಯರೂ ಅವನನ್ನು ಕೊಂದುಹಾಕಿದರೋ? ಇಲ್ಲವೇ ಇಲ್ಲ. ಆ ಅರಸನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ದಯೆಯನ್ನು ಬೇಡಿಕೊಳ್ಳಲು ಯೆಹೋವನು ಅವರ ವಿಷಯವಾಗಿ ನುಡಿದಿದ್ದ ಕೇಡನ್ನು ಮನಮರುಗಿ ಮಾಡದೆ ಬಿಟ್ಟನಲ್ಲಾ. ನಾವಾದರೋ ಇವನನ್ನು ಕೊಂದು ಹಾಕಿ ನಮಗೆ ದೊಡ್ಡ ಕೇಡನ್ನು ಉಂಟು ಮಾಡಿಕೊಳ್ಳುವವರಾಗಿದ್ದೇವೆ” ಎಂಬುದಾಗಿ ಸಕಲಜನ ಸಮೂಹಕ್ಕೆ ಹೇಳಿದರು.
וְגַם־אִ֗ישׁ הָיָ֤ה מִתְנַבֵּא֙ בְּשֵׁ֣ם יְהוָ֔ה אֽוּרִיָּ֙הוּ֙ בֶּֽן־שְׁמַעְיָ֔הוּ מִקִּרְיַ֖ת הַיְּעָרִ֑ים וַיִּנָּבֵ֞א עַל־הָעִ֤יר הַזֹּאת֙ וְעַל־הָאָ֣רֶץ הַזֹּ֔את כְּכֹ֖ל דִּבְרֵ֥י יִרְמְיָֽהוּ׃ 20
೨೦ಅದೇ ಸಮಯದಲ್ಲಿ ಶಮಾಯನ ಮಗನೂ ಕಿರ್ಯತ್ ಯಾರೀಮ್ ಊರಿನವನೂ ಆದ ಊರೀಯನೆಂಬ ಒಬ್ಬ ಮನುಷ್ಯನು ಯೆಹೋವನ ಹೆಸರಿನಲ್ಲಿ ಪ್ರವಾದಿಸುವವನಾಗಿದ್ದು ಯೆರೆಮೀಯನು ನುಡಿದಂತೆಯೇ ಈ ಪಟ್ಟಣಕ್ಕೂ ಈ ದೇಶಕ್ಕೂ ಅಹಿತವನ್ನು ನುಡಿಯುತ್ತಿದ್ದನು.
וַיִּשְׁמַ֣ע הַמֶּֽלֶךְ־יְ֠הוֹיָקִים וְכָל־גִּבּוֹרָ֤יו וְכָל־הַשָּׂרִים֙ אֶת־דְּבָרָ֔יו וַיְבַקֵּ֥שׁ הַמֶּ֖לֶךְ הֲמִית֑וֹ וַיִּשְׁמַ֤ע אוּרִיָּ֙הוּ֙ וַיִּרָ֔א וַיִּבְרַ֖ח וַיָּבֹ֥א מִצְרָֽיִם׃ 21
೨೧ಅರಸನಾದ ಯೆಹೋಯಾಕೀಮನೂ, ಅವನ ಎಲ್ಲಾ ಪ್ರಸಿದ್ಧ ಶೂರರೂ ಮತ್ತು ಸರದಾರರೂ ಇವನ ಮಾತುಗಳನ್ನು ಕೇಳಿದಾಗ ಅರಸನು ಇವನನ್ನು ಕೊಂದುಹಾಕಲು ಮನಸ್ಸು ಮಾಡಿದನು; ಆದರೆ ಊರೀಯನು ಆ ಸುದ್ದಿಯನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತವನ್ನು ಸೇರಿಕೊಂಡನು.
וַיִּשְׁלַ֞ח הַמֶּ֧לֶךְ יְהוֹיָקִ֛ים אֲנָשִׁ֖ים מִצְרָ֑יִם אֵ֣ת אֶלְנָתָ֧ן בֶּן־עַכְבּ֛וֹר וַאֲנָשִׁ֥ים אִתּ֖וֹ אֶל־מִצְרָֽיִם׃ 22
೨೨ಆಗ ಅರಸನಾದ ಯೆಹೋಯಾಕೀಮನು ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನು ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.
וַיּוֹצִ֨יאוּ אֶת־אוּרִיָּ֜הוּ מִמִּצְרַ֗יִם וַיְבִאֻ֙הוּ֙ אֶל־הַמֶּ֣לֶךְ יְהוֹיָקִ֔ים וַיַּכֵּ֖הוּ בֶּחָ֑רֶב וַיַּשְׁלֵךְ֙ אֶת־נִבְלָת֔וֹ אֶל־קִבְרֵ֖י בְּנֵ֥י הָעָֽם׃ 23
೨೩ಅವರು ಊರೀಯನನ್ನು ಐಗುಪ್ತದಿಂದ ಎಳೆದು ಅರಸನಾದ ಯೆಹೋಯಾಕೀಮನ ಬಳಿಗೆ ತರಲು ಅವನು ಇವನನ್ನು ಕತ್ತಿಯಿಂದ ಕಡಿಸಿ, ಶವವನ್ನು ಸಾಧಾರಣ ಜನರ ಗೋರಿಗಳ ನಡುವೆ ಹಾಕಿಸಿದನು.
אַ֗ךְ יַ֚ד אֲחִיקָ֣ם בֶּן־שָׁפָ֔ן הָיְתָ֖ה אֶֽת־יִרְמְיָ֑הוּ לְבִלְתִּ֛י תֵּת־אֹת֥וֹ בְיַד־הָעָ֖ם לַהֲמִיתֽוֹ׃ פ 24
೨೪ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಒದಗಿತು.

< יִרְמְיָהוּ 26 >