< הוֹשֵׁעַ 3 >
וַיֹּ֨אמֶר יְהוָ֜ה אֵלַ֗י ע֚וֹד לֵ֣ךְ אֱֽהַב־אִשָּׁ֔ה אֲהֻ֥בַת רֵ֖עַ וּמְנָאָ֑פֶת כְּאַהֲבַ֤ת יְהוָה֙ אֶת־בְּנֵ֣י יִשְׂרָאֵ֔ל וְהֵ֗ם פֹּנִים֙ אֶל־אֱלֹהִ֣ים אֲחֵרִ֔ים וְאֹהֲבֵ֖י אֲשִׁישֵׁ֥י עֲנָבִֽים׃ | 1 |
ತರುವಾಯ ಯೆಹೋವ ದೇವರು ನನಗೆ, “ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು, ದ್ರಾಕ್ಷಿ ಉಂಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವ ದೇವರು ಪ್ರೀತಿಸುವ ಪ್ರಕಾರ, ನೀನು ಹೋಗಿ ನಿನ್ನ ಹೆಂಡತಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ಪುನಃ ಪ್ರೀತಿಸು,” ಎಂದು ಹೇಳಿದನು.
וָאֶכְּרֶ֣הָ לִּ֔י בַּחֲמִשָּׁ֥ה עָשָׂ֖ר כָּ֑סֶף וְחֹ֥מֶר שְׂעֹרִ֖ים וְלֵ֥תֶךְ שְׂעֹרִֽים׃ | 2 |
ಅಂತೆಯೇ ನಾನು ಅವಳನ್ನು ನನಗಾಗಿ ಹದಿನೈದು ಶೆಕೆಲ್ ಬೆಳ್ಳಿ ಮತ್ತು ಸುಮಾರು ಒಂದು ಹೋಮೆರ್ ಹಾಗೂ ಒಂದು ಲೆಥೆಕ ಜವೆಗೋಧಿಗೂ ಕೊಂಡುಕೊಂಡೆನು.
וָאֹמַ֣ר אֵלֶ֗יהָ יָמִ֤ים רַבִּים֙ תֵּ֣שְׁבִי לִ֔י לֹ֣א תִזְנִ֔י וְלֹ֥א תִֽהְיִ֖י לְאִ֑ישׁ וְגַם־אֲנִ֖י אֵלָֽיִךְ׃ | 3 |
ನಾನು ಅವಳಿಗೆ, “ನನ್ನೊಂದಿಗೆ ಬಹಳ ದಿವಸಗಳು ನನಗಾಗಿ ಇರಬೇಕು. ನೀನು ವ್ಯಭಿಚಾರವನ್ನು ಮಾಡಬಾರದು. ನೀನು ಬೇರೆ ಪುರುಷನಿಗಾಗಿ ಇರಬಾರದು. ಆಗ ನಿನ್ನೊಂದಿಗೆ ಇರುವೆನು,” ಎಂದು ಹೇಳಿದೆನು.
כִּ֣י ׀ יָמִ֣ים רַבִּ֗ים יֵֽשְׁבוּ֙ בְּנֵ֣י יִשְׂרָאֵ֔ל אֵ֥ין מֶ֙לֶךְ֙ וְאֵ֣ין שָׂ֔ר וְאֵ֥ין זֶ֖בַח וְאֵ֣ין מַצֵּבָ֑ה וְאֵ֥ין אֵפ֖וֹד וּתְרָפִֽים׃ | 4 |
ಇಸ್ರಾಯೇಲರು ಬಹಳ ದಿವಸಗಳವರೆಗೆ ಅರಸನಿಲ್ಲದೆ, ರಾಜಕುಮಾರನಿಲ್ಲದೆ, ಬಲಿ ಇಲ್ಲದೆ, ಪವಿತ್ರ ಕಲ್ಲುಗಳಿಲ್ಲದೆ, ಏಫೋದ್ ಇಲ್ಲದೆ ಮತ್ತು ವಿಗ್ರಹಗಳು ಇಲ್ಲದೆ ಇರುವರು.
אַחַ֗ר יָשֻׁ֙בוּ֙ בְּנֵ֣י יִשְׂרָאֵ֔ל וּבִקְשׁוּ֙ אֶת־יְהוָ֣ה אֱלֹהֵיהֶ֔ם וְאֵ֖ת דָּוִ֣ד מַלְכָּ֑ם וּפָחֲד֧וּ אֶל־יְהוָ֛ה וְאֶל־טוּב֖וֹ בְּאַחֲרִ֥ית הַיָּמִֽים׃ פ | 5 |
ಆಮೇಲೆ ಇಸ್ರಾಯೇಲರು ತಿರುಗಿಕೊಂಡು ಅವರ ದೇವರಾದ ಯೆಹೋವ ದೇವರನ್ನು ಮತ್ತು ಅವರ ಅರಸನಾದ ದಾವೀದನನ್ನು ಹುಡುಕಿಕೊಂಡು, ಅಂತ್ಯ ದಿವಸಗಳಲ್ಲಿ ಯೆಹೋವ ದೇವರನ್ನೂ, ಆತನ ಒಳ್ಳೆಯತನವನ್ನೂ ಭಯಭಕ್ತಿಯಿಂದ ಪಡೆಯುವರು.