< 1 שְׁמוּאֵל 10 >

וַיִּקַּ֨ח שְׁמוּאֵ֜ל אֶת־פַּ֥ךְ הַשֶּׁ֛מֶן וַיִּצֹ֥ק עַל־רֹאשׁ֖וֹ וַיִּשָּׁקֵ֑הוּ וַיֹּ֕אמֶר הֲל֗וֹא כִּֽי־מְשָׁחֲךָ֧ יְהוָ֛ה עַל־נַחֲלָת֖וֹ לְנָגִֽיד׃ 1
ಆಗ ಸಮುಯೇಲನು ಎಣ್ಣೆಕುಪ್ಪಿಯಿಂದ ಅವನ ತಲೆಯ ಮೇಲೆ ಸುರಿದು, ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವ ದೇವರು ನಿನ್ನನ್ನು ತಮ್ಮ ಆಸ್ತಿಯಾಗಿರುವ ಜನರ ಮೇಲೆ ನಾಯಕನಾಗಿರಲು ಅಭಿಷೇಕ ಮಾಡಿದ್ದಾರೆ.
בְּלֶכְתְּךָ֤ הַיּוֹם֙ מֵעִמָּדִ֔י וּמָצָאתָ֩ שְׁנֵ֨י אֲנָשִׁ֜ים עִם־קְבֻרַ֥ת רָחֵ֛ל בִּגְב֥וּל בִּנְיָמִ֖ן בְּצֶלְצַ֑ח וְאָמְר֣וּ אֵלֶ֗יךָ נִמְצְא֤וּ הָאֲתֹנוֹת֙ אֲשֶׁ֣ר הָלַ֣כְתָּ לְבַקֵּ֔שׁ וְהִנֵּ֨ה נָטַ֤שׁ אָבִ֙יךָ֙ אֶת־דִּבְרֵ֣י הָאֲתֹנ֔וֹת וְדָאַ֤ג לָכֶם֙ לֵאמֹ֔ר מָ֥ה אֶעֱשֶׂ֖ה לִבְנִֽי׃ 2
ನೀನು ಈ ಹೊತ್ತು ನನ್ನನ್ನು ಬಿಟ್ಟುಹೋದಾಗ, ಬೆನ್ಯಾಮೀನ್ಯರ ಮೇರೆಯಾದ ಚೆಲ್ಚಹಿನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವೆ. ಅವರು ನಿನಗೆ, ‘ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು, ನಿನಗೋಸ್ಕರ ಚಿಂತೆಪಟ್ಟು, ತನ್ನ ಮಗನಿಗೋಸ್ಕರ ಏನು ಮಾಡಲಿ? ಎನ್ನುತ್ತಾನೆ,’ ಎಂದು ಹೇಳುವರು.
וְחָלַפְתָּ֨ מִשָּׁ֜ם וָהָ֗לְאָה וּבָ֙אתָ֙ עַד־אֵל֣וֹן תָּב֔וֹר וּמְצָא֤וּךָ שָּׁם֙ שְׁלֹשָׁ֣ה אֲנָשִׁ֔ים עֹלִ֥ים אֶל־הָאֱלֹהִ֖ים בֵּֽית־אֵ֑ל אֶחָ֞ד נֹשֵׂ֣א ׀ שְׁלֹשָׁ֣ה גְדָיִ֗ים וְאֶחָד֙ נֹשֵׂ֗א שְׁלֹ֙שֶׁת֙ כִּכְּר֣וֹת לֶ֔חֶם וְאֶחָ֥ד נֹשֵׂ֖א נֵֽבֶל־יָֽיִן׃ 3
“ನೀನು ಆ ಸ್ಥಳವನ್ನು ಬಿಟ್ಟು, ಆ ಕಡೆ ದಾಟಿ, ತಾಬೋರಿನ ಹತ್ತಿರವಿರುವ ಅಲ್ಲೋನ್ ವೃಕ್ಷದ ಬಳಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ, ಮತ್ತೊಬ್ಬನು ಮೂರು ರೊಟ್ಟಿಗಳನ್ನೂ, ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವೆ.
וְשָׁאֲל֥וּ לְךָ֖ לְשָׁל֑וֹם וְנָתְנ֤וּ לְךָ֙ שְׁתֵּי־לֶ֔חֶם וְלָקַחְתָּ֖ מִיָּדָֽם׃ 4
ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ, ನಿನಗೆ ಎರಡು ರೊಟ್ಟಿಗಳನ್ನು ಕೊಡುವರು. ಅವುಗಳನ್ನು ನೀನು ಅವರ ಕೈಯಿಂದ ತೆಗೆದುಕೊಳ್ಳುವೆ.
אַ֣חַר כֵּ֗ן תָּבוֹא֙ גִּבְעַ֣ת הָאֱלֹהִ֔ים אֲשֶׁר־שָׁ֖ם נְצִבֵ֣י פְלִשְׁתִּ֑ים וִיהִי֩ כְבֹאֲךָ֨ שָׁ֜ם הָעִ֗יר וּפָגַעְתָּ֞ חֶ֤בֶל נְבִיאִים֙ יֹרְדִ֣ים מֵֽהַבָּמָ֔ה וְלִפְנֵיהֶ֞ם נֵ֤בֶל וְתֹף֙ וְחָלִ֣יל וְכִנּ֔וֹר וְהֵ֖מָּה מִֽתְנַבְּאִֽים׃ 5
“ತರುವಾಯ ಫಿಲಿಷ್ಟಿಯರ ತಾಣವಿರುವ ದೇವರ ಗಿಬೆಯ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣಕ್ಕೆ ಪ್ರವೇಶಿಸುವಾಗ, ನಿನಗೆದುರಾಗಿ ವೀಣೆ, ದಮ್ಮಡಿ, ಕೊಳಲು, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವುದು. ಅವರು ಪ್ರವಾದಿಸುವರು.
וְצָלְחָ֤ה עָלֶ֙יךָ֙ ר֣וּחַ יְהוָ֔ה וְהִתְנַבִּ֖יתָ עִמָּ֑ם וְנֶהְפַּכְתָּ֖ לְאִ֥ישׁ אַחֵֽר׃ 6
ಆಗ ಯೆಹೋವ ದೇವರ ಆತ್ಮವು ನಿನ್ನ ಮೇಲೆ ಬರುವುದು. ನೀನು ಅವರ ಸಂಗಡ ಪ್ರವಾದಿಸುವೆ, ಬೇರೆ ಮನುಷ್ಯನಾಗಿ ಮಾರ್ಪಡುವೆ.
וְהָיָ֗ה כִּ֥י תבאינה הָאֹת֥וֹת הָאֵ֖לֶּה לָ֑ךְ עֲשֵׂ֤ה לְךָ֙ אֲשֶׁ֣ר תִּמְצָ֣א יָדֶ֔ךָ כִּ֥י הָאֱלֹהִ֖ים עִמָּֽךְ׃ 7
ಈ ಗುರುತುಗಳೆಲ್ಲಾ ನಿನಗೆ ಸಂಭವಿಸಿದಾಗ, ದೇವರು ನಿನ್ನ ಸಂಗಡ ಇರುವುದರಿಂದ ನೀನು ಆ ವೇಳೆಯಲ್ಲಿ ನಿನಗೆ ಕೈಗೂಡಿದ ಹಾಗೆ ಮಾಡು.
וְיָרַדְתָּ֣ לְפָנַי֮ הַגִּלְגָּל֒ וְהִנֵּ֤ה אָֽנֹכִי֙ יֹרֵ֣ד אֵלֶ֔יךָ לְהַעֲל֣וֹת עֹל֔וֹת לִזְבֹּ֖חַ זִבְחֵ֣י שְׁלָמִ֑ים שִׁבְעַ֨ת יָמִ֤ים תּוֹחֵל֙ עַד־בּוֹאִ֣י אֵלֶ֔יךָ וְהוֹדַעְתִּ֣י לְךָ֔ אֵ֖ת אֲשֶׁ֥ר תַּעֲשֶֽׂה׃ 8
“ಆದರೆ ನೀನು ನನಗೆ ಮುಂದಾಗಿ ಗಿಲ್ಗಾಲಿಗೆ ಇಳಿದು ಹೋಗಬೇಕು. ನಾನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸುವುದಕ್ಕಾಗಿ ನಿನ್ನ ಬಳಿಗೆ ಬರುವೆನು. ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವವರೆಗೂ ನೀನು ಅಲ್ಲಿ ಏಳು ದಿವಸ ಕಾದುಕೊಳ್ಳಬೇಕು,” ಎಂದನು.
וְהָיָ֗ה כְּהַפְנֹת֤וֹ שִׁכְמוֹ֙ לָלֶ֙כֶת֙ מֵעִ֣ם שְׁמוּאֵ֔ל וַיַּהֲפָךְ־ל֥וֹ אֱלֹהִ֖ים לֵ֣ב אַחֵ֑ר וַיָּבֹ֛אוּ כָּל־הָאֹת֥וֹת הָאֵ֖לֶּה בַּיּ֥וֹם הַהֽוּא׃ ס 9
ಅವನು ಸಮುಯೇಲನನ್ನು ಬಿಟ್ಟುಹೋಗಲು ಹಿಂದಿರುಗಿದಾಗ, ದೇವರು ಅವನಿಗೆ ಹೊಸ ಹೃದಯವನ್ನು ಕೊಟ್ಟರು. ಆ ಸಮಸ್ತ ಗುರುತುಗಳು ಆ ದಿವಸದಲ್ಲಿ ಅವನಿಗೆ ಸಂಭವಿಸಿದವು.
וַיָּבֹ֤אוּ שָׁם֙ הַגִּבְעָ֔תָה וְהִנֵּ֥ה חֶֽבֶל־נְבִאִ֖ים לִקְרָאת֑וֹ וַתִּצְלַ֤ח עָלָיו֙ ר֣וּחַ אֱלֹהִ֔ים וַיִּתְנַבֵּ֖א בְּתוֹכָֽם׃ 10
ಅವನು ಗಿಬೆಯದ ಗುಡ್ಡಕ್ಕೆ ಬಂದಾಗ, ಪ್ರವಾದಿಗಳ ಗುಂಪು ಅವನೆದುರಿಗೆ ಬಂತು. ಆಗ ದೇವರ ಆತ್ಮವು ಅವನ ಮೇಲೆ ಬಂದದ್ದರಿಂದ, ಅವರಲ್ಲಿದ್ದು ಪ್ರವಾದಿಸಿದನು.
וַיְהִ֗י כָּל־יֽוֹדְעוֹ֙ מֵאִתְּמ֣וֹל שִׁלְשׁ֔וֹם וַיִּרְא֕וּ וְהִנֵּ֥ה עִם־נְבִאִ֖ים נִבָּ֑א וַיֹּ֨אמֶר הָעָ֜ם אִ֣ישׁ אֶל־רֵעֵ֗הוּ מַה־זֶּה֙ הָיָ֣ה לְבֶן־קִ֔ישׁ הֲגַ֥ם שָׁא֖וּל בַּנְּבִיאִֽים׃ 11
ಅದಕ್ಕೆ ಮುಂಚೆ ಅವನನ್ನು ತಿಳಿದವರೆಲ್ಲರು, ಅವನು ಪ್ರವಾದಿಗಳ ಸಂಗಡವಿದ್ದು ಪ್ರವಾದಿಸುವುದನ್ನು ಕಂಡಾಗ, ಅವರು ಒಬ್ಬರ ಸಂಗಡ ಒಬ್ಬರು, “ಕೀಷನ ಮಗನಿಗೆ ಆದದ್ದೇನು? ಸೌಲನೂ ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂದರು.
וַיַּ֨עַן אִ֥ישׁ מִשָּׁ֛ם וַיֹּ֖אמֶר וּמִ֣י אֲבִיהֶ֑ם עַל־כֵּן֙ הָיְתָ֣ה לְמָשָׁ֔ל הֲגַ֥ם שָׁא֖וּל בַּנְּבִאִֽים׃ 12
ಅದಕ್ಕೆ ಅಲ್ಲಿಯವನೊಬ್ಬನು, “ಹಾಗಾದರೆ ಅವರ ನಾಯಕರು ಯಾರು?” ಎಂದನು. ಆದ್ದರಿಂದ, “ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂಬ ಗಾದೆ ಉಂಟಾಯಿತು.
וַיְכַל֙ מֵֽהִתְנַבּ֔וֹת וַיָּבֹ֖א הַבָּמָֽה׃ 13
ಅವನು ಪ್ರವಾದಿಸಿದ ತರುವಾಯ ಗುಡ್ಡದ ಮೇಲಕ್ಕೆ ಬಂದನು.
וַיֹּאמֶר֩ דּ֨וֹד שָׁא֥וּל אֵלָ֛יו וְאֶֽל־נַעֲר֖וֹ אָ֣ן הֲלַכְתֶּ֑ם וַיֹּ֕אמֶר לְבַקֵּשׁ֙ אֶת־הָ֣אֲתֹנ֔וֹת וַנִּרְאֶ֣ה כִי־אַ֔יִן וַנָּב֖וֹא אֶל־שְׁמוּאֵֽל׃ 14
ಆಗ ಸೌಲನ ಚಿಕ್ಕಪ್ಪನು, “ನೀವು ಎಲ್ಲಿಗೆ ಹೋದಿರಿ?” ಎಂದು ಅವನನ್ನೂ, ಅವನ ಸೇವಕನನ್ನೂ ಕೇಳಿದನು. ಅದಕ್ಕವನು, “ಕತ್ತೆಗಳನ್ನು ಹುಡುಕುವುದಕ್ಕೆ, ಅವುಗಳನ್ನು ಕಾಣದೆ ಹೋದುದರಿಂದ ಸಮುಯೇಲನ ಬಳಿಗೆ ಹೋದೆವು,” ಎಂದನು.
וַיֹּ֖אמֶר דּ֣וֹד שָׁא֑וּל הַגִּֽידָה־נָּ֣א לִ֔י מָֽה־אָמַ֥ר לָכֶ֖ם שְׁמוּאֵֽל׃ 15
ಅದಕ್ಕೆ ಸೌಲನ ಚಿಕ್ಕಪ್ಪನು, “ಸಮುಯೇಲನು ನಿನಗೆ ಏನು ಹೇಳಿದನು? ದಯಮಾಡಿ ನನಗೆ ತಿಳಿಸು,” ಎಂದನು.
וַיֹּ֤אמֶר שָׁאוּל֙ אֶל־דּוֹד֔וֹ הַגֵּ֤ד הִגִּיד֙ לָ֔נוּ כִּ֥י נִמְצְא֖וּ הָאֲתֹנ֑וֹת וְאֶת־דְּבַ֤ר הַמְּלוּכָה֙ לֹֽא־הִגִּ֣יד ל֔וֹ אֲשֶׁ֖ר אָמַ֥ר שְׁמוּאֵֽל׃ פ 16
ಸೌಲನು ತನ್ನ ಚಿಕ್ಕಪ್ಪನಿಗೆ, “ಕತ್ತೆಗಳು ದೊರಕಿದವೆಂದು ಅವನು ನಮಗೆ ಸ್ಪಷ್ಟವಾಗಿ ತಿಳಿಸಿದನು,” ಎಂದನು. ಆದರೆ ಅವನು ಸಮುಯೇಲನು ಹೇಳಿದ ರಾಜ್ಯಭಾರದ ಮಾತನ್ನು ಅವನಿಗೆ ತಿಳಿಸಲಿಲ್ಲ.
וַיַּצְעֵ֤ק שְׁמוּאֵל֙ אֶת־הָעָ֔ם אֶל־יְהוָ֖ה הַמִּצְפָּֽה׃ 17
ಸಮುಯೇಲನು ಇಸ್ರಾಯೇಲರನ್ನು ಮಿಚ್ಪೆಯಲ್ಲಿ ಯೆಹೋವ ದೇವರ ಬಳಿಗೆ ಒಟ್ಟಾಗಿ ಕರೆದು ಅವರಿಗೆ,
וַיֹּ֣אמֶר ׀ אֶל־בְּנֵ֣י יִשְׂרָאֵ֗ל פ כֹּֽה־אָמַ֤ר יְהוָה֙ אֱלֹהֵ֣י יִשְׂרָאֵ֔ל אָנֹכִ֛י הֶעֱלֵ֥יתִי אֶת־יִשְׂרָאֵ֖ל מִמִּצְרָ֑יִם וָאַצִּ֤יל אֶתְכֶם֙ מִיַּ֣ד מִצְרַ֔יִם וּמִיַּד֙ כָּל־הַמַּמְלָכ֔וֹת הַלֹּחֲצִ֖ים אֶתְכֶֽם׃ 18
“ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮನ್ನು ಈಜಿಪ್ಟಿನವರ ಕೈಯಿಂದಲೂ, ನಿಮ್ಮನ್ನು ಬಾಧೆಪಡಿಸಿದ ಸಮಸ್ತ ರಾಜ್ಯಗಳ ಕೈಯಿಂದಲೂ ಬಿಡಿಸಿದೆನು.’
וְאַתֶּ֨ם הַיּ֜וֹם מְאַסְתֶּ֣ם אֶת־אֱלֹהֵיכֶ֗ם אֲשֶׁר־ה֣וּא מוֹשִׁ֣יעַ לָכֶם֮ מִכָּל־רָעוֹתֵיכֶ֣ם וְצָרֹֽתֵיכֶם֒ וַתֹּ֣אמְרוּ ל֔וֹ כִּי־מֶ֖לֶךְ תָּשִׂ֣ים עָלֵ֑ינוּ וְעַתָּ֗ה הִֽתְיַצְּבוּ֙ לִפְנֵ֣י יְהוָ֔ה לְשִׁבְטֵיכֶ֖ם וּלְאַלְפֵיכֶֽם׃ 19
ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಅವರಿಗೆ, ‘ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು,’ ಎಂದು ಹೇಳಿದಿರಿ. ಆದ್ದರಿಂದ ಈಗ ಯೆಹೋವ ದೇವರ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ, ನಿಮ್ಮ ಕುಲಗಳ ಪ್ರಕಾರವಾಗಿಯೂ ಬನ್ನಿರಿ,” ಎಂದನು.
וַיַּקְרֵ֣ב שְׁמוּאֵ֔ל אֵ֖ת כָּל־שִׁבְטֵ֣י יִשְׂרָאֵ֑ל וַיִּלָּכֵ֖ד שֵׁ֥בֶט בִּנְיָמִֽן׃ 20
ಸಮುಯೇಲನು ಇಸ್ರಾಯೇಲಿನ ಗೋತ್ರಗಳನ್ನೆಲ್ಲಾ ಸಮೀಪಕ್ಕೆ ಬರಮಾಡಿದಾಗ, ಬೆನ್ಯಾಮೀನನ ಗೋತ್ರಕ್ಕೆ ಚೀಟು ಬಿದ್ದಿತು.
וַיַּקְרֵ֞ב אֶת־שֵׁ֤בֶט בִּנְיָמִן֙ למשפחתו וַתִּלָּכֵ֖ד מִשְׁפַּ֣חַת הַמַּטְרִ֑י וַיִּלָּכֵד֙ שָׁא֣וּל בֶּן־קִ֔ישׁ וַיְבַקְשֻׁ֖הוּ וְלֹ֥א נִמְצָֽא׃ 21
ಅವನು ಬೆನ್ಯಾಮೀನನ ಗೋತ್ರವನ್ನು ಅದರ ಕುಲಗಳ ಹಾಗೆಯೇ ಹತ್ತಿರಕ್ಕೆ ಬರಮಾಡಿದಾಗ, ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಆದರೆ ಅವನನ್ನು ಹುಡುಕುವಾಗ, ಅವನು ಸಿಕ್ಕಲಿಲ್ಲ.
וַיִּשְׁאֲלוּ־עוֹד֙ בַּֽיהוָ֔ה הֲבָ֥א ע֖וֹד הֲלֹ֣ם אִ֑ישׁ ס וַיֹּ֣אמֶר יְהוָ֔ה הִנֵּה־ה֥וּא נֶחְבָּ֖א אֶל־הַכֵּלִֽים׃ 22
ಆದ್ದರಿಂದ ಅವರು, “ಅವನು ಇನ್ನು ಇಲ್ಲಿ ಬರುವನೋ?” ಎಂದು ಯೆಹೋವ ದೇವರನ್ನು ವಿಚಾರಿಸಿದರು. ಯೆಹೋವ ದೇವರು, “ಇಗೋ, ಅವನು ಸಲಕರಣೆಗಳಲ್ಲಿ ಅಡಗಿಕೊಂಡಿದ್ದಾನೆ,” ಎಂದು ಹೇಳಿದರು.
וַיָּרֻ֙צוּ֙ וַיִּקָּחֻ֣הוּ מִשָּׁ֔ם וַיִּתְיַצֵּ֖ב בְּת֣וֹךְ הָעָ֑ם וַיִּגְבַּהּ֙ מִכָּל־הָעָ֔ם מִשִּׁכְמ֖וֹ וָמָֽעְלָה׃ 23
ಆಗ ಅವರು ಓಡಿಹೋಗಿ ಅಲ್ಲಿಂದ ಅವನನ್ನು ಕರೆತಂದರು. ಅವನು ಜನರ ಮಧ್ಯದಲ್ಲಿ ನಿಲ್ಲುವಾಗ ಅವನು ತನ್ನ ಭುಜದಿಂದ ಎಲ್ಲಾ ಜನರಿಗಿಂತ ಎತ್ತರವಾಗಿದ್ದನು.
וַיֹּ֨אמֶר שְׁמוּאֵ֜ל אֶל־כָּל־הָעָ֗ם הַרְּאִיתֶם֙ אֲשֶׁ֣ר בָּֽחַר־בּ֣וֹ יְהוָ֔ה כִּ֛י אֵ֥ין כָּמֹ֖הוּ בְּכָל־הָעָ֑ם וַיָּרִ֧עוּ כָל־הָעָ֛ם וַיֹּאמְר֖וּ יְחִ֥י הַמֶּֽלֶךְ׃ פ 24
ಆಗ ಸಮುಯೇಲನು, “ಯೆಹೋವ ದೇವರು ಆಯ್ದುಕೊಂಡವನನ್ನು ನೋಡಿರಿ, ಸಮಸ್ತ ಜನರಿಗೆ ಎಲ್ಲಾ ಜನರಲ್ಲಿ ಇವನಿಗೆ ಸಮಾನವಾದವನು ಯಾವನೂ ಇಲ್ಲವಲ್ಲ,” ಎಂದನು. ಜನರೆಲ್ಲರು ಆರ್ಭಟಿಸಿ, “ಅರಸ ಬಾಳಲಿ,” ಎಂದರು.
וַיְדַבֵּ֨ר שְׁמוּאֵ֜ל אֶל־הָעָ֗ם אֵ֚ת מִשְׁפַּ֣ט הַמְּלֻכָ֔ה וַיִּכְתֹּ֣ב בַּסֵּ֔פֶר וַיַּנַּ֖ח לִפְנֵ֣י יְהוָ֑ה וַיְשַׁלַּ֧ח שְׁמוּאֵ֛ל אֶת־כָּל־הָעָ֖ם אִ֥ישׁ לְבֵיתֽוֹ׃ 25
ಸಮುಯೇಲನು ರಾಜ್ಯದ ಪದ್ಧತಿಯನ್ನು ಜನರಿಗೆ ಹೇಳಿಕೊಟ್ಟು, ಒಂದು ಪುಸ್ತಕದಲ್ಲಿ ಬರೆದು, ಯೆಹೋವ ದೇವರ ಮುಂದೆ ಇಟ್ಟನು. ಆಗ ಸಮುಯೇಲನು ಜನರನ್ನೆಲ್ಲಾ ಅವರವರ ಮನೆಗೆ ಕಳುಹಿಸಿಬಿಟ್ಟನು.
וְגַ֨ם־שָׁא֔וּל הָלַ֥ךְ לְבֵית֖וֹ גִּבְעָ֑תָה וַיֵּלְכ֣וּ עִמּ֔וֹ הַחַ֕יִל אֲשֶׁר־נָגַ֥ע אֱלֹהִ֖ים בְּלִבָּֽם׃ 26
ಸೌಲನು ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು. ದೇವರು ಯಾರ ಹೃದಯವನ್ನು ಮುಟ್ಟಿದರೋ, ಅವರ ಒಂದು ಗುಂಪು ಅವನ ಸಂಗಡ ಹೋಯಿತು.
וּבְנֵ֧י בְלִיַּ֣עַל אָמְר֗וּ מַה־יֹּשִׁעֵ֙נוּ֙ זֶ֔ה וַיִּבְזֻ֕הוּ וְלֹֽא־הֵבִ֥יאוּ ל֖וֹ מִנְחָ֑ה וַיְהִ֖י כְּמַחֲרִֽישׁ׃ פ 27
ಆದರೆ ಕೆಲವು ಪುಂಡಪೋಕರಿಗಳು, “ಇವನು ನಮ್ಮನ್ನು ರಕ್ಷಿಸುವುದೇನು?” ಎಂದು ಅವನನ್ನು ತಿರಸ್ಕರಿಸಿದರು. ಅವರು ಅವನಿಗೆ ಕಾಣಿಕೆಯನ್ನು ತೆಗೆದುಕೊಂಡು ಬರಲಿಲ್ಲ. ಅವನು ಕೇಳದ ಹಾಗೆ ಇದ್ದನು.

< 1 שְׁמוּאֵל 10 >