< רות 3 >
וַתֹּאמֶר לָהּ נָעֳמִי חֲמוֹתָהּ בִּתִּי הֲלֹא אֲבַקֶּשׁ־לָךְ מָנוֹחַ אֲשֶׁר יִֽיטַב־לָֽךְ׃ | 1 |
ಒಂದು ದಿನ ರೂತಳ ಅತ್ತೆ ನೊವೊಮಿಯು ಅವಳಿಗೆ, “ನನ್ನ ಮಗಳೇ, ನೀನು ಮತ್ತೆ ಗೃಹಿಣಿಯಾಗಿ ಸುಖದಿಂದ ಬಾಳುವಂತೆ, ನಾನು ನಿನಗೆ ವಿಶ್ರಾಂತಿ ಸ್ಥಳ ಏರ್ಪಾಟು ಮಾಡುವುದು ನನ್ನ ಕರ್ತವ್ಯವಲ್ಲವೇ?
וְעַתָּה הֲלֹא בֹעַז מֹֽדַעְתָּנוּ אֲשֶׁר הָיִית אֶת־נַעֲרוֹתָיו הִנֵּה־הוּא זֹרֶה אֶת־גֹּרֶן הַשְּׂעֹרִים הַלָּֽיְלָה׃ | 2 |
ಈಗ ನೀನು ಯಾರ ದಾಸಿಯರ ಸಂಗಡ ಇದ್ದೀಯೋ, ಆ ಬೋವಜನು ನಮ್ಮ ಬಂಧುವಾಗಿದ್ದಾನೆ. ಇಗೋ, ಅವನು ರಾತ್ರಿಯಲ್ಲಿ ಕಣದಲ್ಲಿ ಜವೆಗೋಧಿಯನ್ನು ತೂರುವನು.
וְרָחַצְתְּ ׀ וָסַכְתְּ וְשַׂמְתְּ שמלתך שִׂמְלֹתַיִךְ עָלַיִךְ וירדתי וְיָרַדְתְּ הַגֹּרֶן אַל־תִּוָּדְעִי לָאִישׁ עַד כַּלֹּתוֹ לֶאֱכֹל וְלִשְׁתּֽוֹת׃ | 3 |
ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ತಿಂದು ಕುಡಿದು ತೀರಿಸುವವರೆಗೂ ಅವನಿಗೆ ನೀನು ಅಲ್ಲಿರುವದು ಅವನಿಗೆ ತಿಳಿಯದಿರಲಿ.
וִיהִי בְשָׁכְבוֹ וְיָדַעַתְּ אֶת־הַמָּקוֹם אֲשֶׁר יִשְׁכַּב־שָׁם וּבָאת וְגִלִּית מַרְגְּלֹתָיו ושכבתי וְשָׁכָבְתְּ וְהוּא יַגִּיד לָךְ אֵת אֲשֶׁר תַּעַשִֽׂין׃ | 4 |
ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳಿದುಕೊಂಡು ಹೋಗಿ ಅವನ ಪಾದಗಳ ಮೇಲಿನ ಹೊದಿಕೆಯನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು,” ಎಂದಳು.
וַתֹּאמֶר אֵלֶיהָ כֹּל אֲשֶׁר־תֹּאמְרִי אֵלַי אֶֽעֱשֶֽׂה׃ | 5 |
ಅದಕ್ಕೆ ರೂತಳು, “ನೀವು ನನಗೆ ಹೇಳಿದ್ದನ್ನೆಲ್ಲಾ ಮಾಡುವೆನು,” ಎಂದಳು.
וַתֵּרֶד הַגֹּרֶן וַתַּעַשׂ כְּכֹל אֲשֶׁר־צִוַּתָּה חֲמוֹתָֽהּ׃ | 6 |
ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದಳು.
וַיֹּאכַל בֹּעַז וַיֵּשְׁתְּ וַיִּיטַב לִבּוֹ וַיָּבֹא לִשְׁכַּב בִּקְצֵה הָעֲרֵמָה וַתָּבֹא בַלָּט וַתְּגַל מַרְגְּלֹתָיו וַתִּשְׁכָּֽב׃ | 7 |
ಬೋವಜನು ತಿಂದು ಕುಡಿದು ಸಂತುಷ್ಟನಾಗಿದ್ದನು. ಅವನು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿಕೊಂಡನು. ಆಗ ರೂತಳು ಮೆಲ್ಲಗೆ ಬಂದು ಅವನ ಪಾದಗಳ ಮೇಲಿದ್ದ ಹೊದಿಕೆಯನ್ನು ತೆಗೆದು ಮಲಗಿಕೊಂಡಳು.
וַיְהִי בַּחֲצִי הַלַּיְלָה וַיֶּחֱרַד הָאִישׁ וַיִּלָּפֵת וְהִנֵּה אִשָּׁה שֹׁכֶבֶת מַרְגְּלֹתָֽיו׃ | 8 |
ಆದರೆ ಮಧ್ಯರಾತ್ರಿಯಲ್ಲಿ ಬೋವಜನು ಹೆದರಿ ತಿರುಗಿ ನೋಡಿದಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವುದನ್ನು ಕಂಡನು.
וַיֹּאמֶר מִי־אָתּ וַתֹּאמֶר אָנֹכִי רוּת אֲמָתֶךָ וּפָרַשְׂתָּ כְנָפֶךָ עַל־אֲמָתְךָ כִּי גֹאֵל אָֽתָּה׃ | 9 |
ಆಗ ಅವನು, “ನೀನು ಯಾರು?” ಎಂದನು. ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು.
וַיֹּאמֶר בְּרוּכָה אַתְּ לַֽיהוָה בִּתִּי הֵיטַבְתְּ חַסְדֵּךְ הָאַחֲרוֹן מִן־הָרִאשׁוֹן לְבִלְתִּי־לֶכֶת אַחֲרֵי הַבַּחוּרִים אִם־דַּל וְאִם־עָשִֽׁיר׃ | 10 |
ಅದಕ್ಕೆ ಅವನು, “ನನ್ನ ಮಗಳೇ, ಯೆಹೋವ ದೇವರಿಂದ ನಿನಗೆ ಆಶೀರ್ವಾದವಾಗಲಿ, ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದುದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದ ದಯೆಯು ಹೆಚ್ಚಾಗಿದೆ.
וְעַתָּה בִּתִּי אַל־תִּירְאִי כֹּל אֲשֶׁר־תֹּאמְרִי אֶֽעֱשֶׂה־לָּךְ כִּי יוֹדֵעַ כָּל־שַׁעַר עַמִּי כִּי אֵשֶׁת חַיִל אָֽתְּ׃ | 11 |
ಈಗ ನನ್ನ ಮಗಳೇ, ನೀನು ಭಯಪಡಬೇಡ. ನಿನಗೆ ಬೇಕಾಗಿರುವುದನ್ನು ನಿನಗೆ ಮಾಡುವೆನು. ನೀನು ಗುಣವತಿಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರೂ ಬಲ್ಲರು.
וְעַתָּה כִּי אָמְנָם כִּי אם גֹאֵל אָנֹכִי וְגַם יֵשׁ גֹּאֵל קָרוֹב מִמֶּֽנִּי׃ | 12 |
ಈಗ ನಾನು ನಿನ್ನ ವಿಮೋಚಿಸತಕ್ಕ ಸಮೀಪ ಬಂಧುವಾಗಿದ್ದೇನೆ ಎಂಬುದು ನಿಜವೇ. ಆದರೆ ನನಗಿಂತಲೂ ಸಮೀಪಸ್ಥನಾದ ಬಂಧುವು ಒಬ್ಬನಿದ್ದಾನೆ.
לִינִי ׀ הַלַּיְלָה וְהָיָה בַבֹּקֶר אִם־יִגְאָלֵךְ טוֹב יִגְאָל וְאִם־לֹא יַחְפֹּץ לְגָֽאֳלֵךְ וּגְאַלְתִּיךְ אָנֹכִי חַי־יְהוָה שִׁכְבִי עַד־הַבֹּֽקֶר׃ | 13 |
ಈ ರಾತ್ರಿಯಲ್ಲಿ ಇಲ್ಲಿರು. ನಾಳೆ ಬೆಳಿಗ್ಗೆ ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಿದರೆ ಒಳ್ಳೆಯದು. ಅವನು ನಿನಗೆ ವಿಮೋಚಕ ಬಂಧುವಿನ ಕರ್ತವ್ಯ ಮಾಡಲು ಮನಸ್ಸಿಲ್ಲದಿದ್ದರೆ ಯೆಹೋವ ದೇವರ ಜೀವದಾಣೆ, ನಾನೇ ಅದನ್ನು ಮಾಡುವೆನು. ಉದಯಕಾಲದವರೆಗೂ ಇಲ್ಲಿಯೇ ಮಲಗಿರು,” ಎಂದನು.
וַתִּשְׁכַּב מרגלתו מַרְגְּלוֹתָיוֹ עַד־הַבֹּקֶר וַתָּקָם בטרום בְּטֶרֶם יַכִּיר אִישׁ אֶת־רֵעֵהוּ וַיֹּאמֶר אַל־יִוָּדַע כִּי־בָאָה הָאִשָּׁה הַגֹּֽרֶן׃ | 14 |
ಅವಳು ಹಾಗೆಯೇ ಉದಯಕಾಲದವರೆಗೂ ಅವನ ಪಾದಗಳ ಬಳಿಯಲ್ಲಿ ಮಲಗಿದ್ದು ಯಾರಿಗೂ ಗೊತ್ತಾಗಬಾರದೆಂದು ಹೊತ್ತಿಗೆ ಮುಂಚೆ ಎದ್ದಳು. ಅವನು, “ಒಬ್ಬ ಸ್ತ್ರೀ ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯದಿರಲಿ,” ಎಂದನು.
וַיֹּאמֶר הָבִי הַמִּטְפַּחַת אֲשֶׁר־עָלַיִךְ וְאֶֽחֳזִי־בָהּ וַתֹּאחֶז בָּהּ וַיָּמָד שֵׁשׁ־שְׂעֹרִים וַיָּשֶׁת עָלֶיהָ וַיָּבֹא הָעִֽיר׃ | 15 |
ಅವನು, “ನಿನ್ನ ಮೇಲ್ಹೊದಿಕೆಯನ್ನು ಹಿಡಿ,” ಎಂದನು. ಅವಳು ಅದನ್ನು ಹಿಡಿದಾಗ ಅವನು ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಅವಳು ಅದನ್ನು ಹೊತ್ತುಕೊಂಡು ಪಟ್ಟಣಕ್ಕೆ ಬಂದಳು.
וַתָּבוֹא אֶל־חֲמוֹתָהּ וַתֹּאמֶר מִי־אַתְּ בִּתִּי וַתַּגֶּד־לָהּ אֵת כָּל־אֲשֶׁר עָֽשָׂה־לָהּ הָאִֽישׁ׃ | 16 |
ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು, “ನನ್ನ ಮಗಳೇ, ಏನು ನಡೆಯಿತು?” ಎಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು.
וַתֹּאמֶר שֵׁשׁ־הַשְּׂעֹרִים הָאֵלֶּה נָתַן לִי כִּי אָמַר אֵלַי אַל־תָּבוֹאִי רֵיקָם אֶל־חֲמוֹתֵֽךְ׃ | 17 |
“‘ನೀನು ನಿನ್ನ ಅತ್ತೆಯ ಬಳಿಗೆ ಬರೀ ಕೈಯಾಗಿ ಹೋಗಬಾರದು’ ಎಂದು ಅವನು ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ನನಗೆ ಕೊಟ್ಟನು,” ಎಂದಳು.
וַתֹּאמֶר שְׁבִי בִתִּי עַד אֲשֶׁר תֵּֽדְעִין אֵיךְ יִפֹּל דָּבָר כִּי לֹא יִשְׁקֹט הָאִישׁ כִּֽי־אִם־כִּלָּה הַדָּבָר הַיּֽוֹם׃ | 18 |
ಅದಕ್ಕೆ ನೊವೊಮಿ, “ನನ್ನ ಮಗಳೇ, ಈ ಕಾರ್ಯ ಏನಾಗುವುದೋ, ಎಂದು ನೀನು ತಿಳಿಯುವವರೆಗೂ ಸುಮ್ಮನೆ ಇರು. ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವವರೆಗೂ ವಿಶ್ರಾಂತಿಯಲ್ಲಿ ಇರಲಾರನು,” ಎಂದಳು.