< תהילים 123 >
שִׁיר הַֽמַּעֲלוֹת אֵלֶיךָ נָשָׂאתִי אֶת־עֵינַי הַיֹּשְׁבִי בַּשָּׁמָֽיִם׃ | 1 |
೧ಯಾತ್ರಾಗೀತೆ. ಪರಲೋಕದಲ್ಲಿ ಆಸೀನನಾಗಿರುವಾತನೇ, ನನ್ನ ಕಣ್ಣುಗಳನ್ನು ನಿನ್ನ ಕಡೆಗೆ ಎತ್ತಿದ್ದೇನೆ.
הִנֵּה כְעֵינֵי עֲבָדִים אֶל־יַד אֲֽדוֹנֵיהֶם כְּעֵינֵי שִׁפְחָה אֶל־יַד גְּבִרְתָּהּ כֵּן עֵינֵינוּ אֶל־יְהוָה אֱלֹהֵינוּ עַד שֶׁיְּחָנֵּֽנוּ׃ | 2 |
೨ಯಜಮಾನನ ಕೈಯನ್ನು ದಾಸನ ಕಣ್ಣುಗಳು, ಯಜಮಾನಿಯ ಕೈಯನ್ನು ದಾಸಿಯ ಕಣ್ಣುಗಳು ನೋಡುವ ಪ್ರಕಾರವೇ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರನ್ನು ನೋಡುತ್ತಾ, ಆತನ ಕಟಾಕ್ಷವನ್ನು ನಿರೀಕ್ಷಿಸಿಕೊಂಡಿವೆ.
חָנֵּנוּ יְהוָה חָנֵּנוּ כִּֽי־רַב שָׂבַעְנוּ בֽוּז׃ | 3 |
೩ಯೆಹೋವನೇ, ನಮ್ಮನ್ನು ಕಟಾಕ್ಷಿಸು, ಕಟಾಕ್ಷಿಸು. ಅವಮಾನ ಹೊಂದಿ ಹೊಂದಿ ನಮಗೆ ಸಾಕಾಯಿತು;
רַבַּת שָֽׂבְעָה־לָּהּ נַפְשֵׁנוּ הַלַּעַג הַשַּׁאֲנַנִּים הַבּוּז לִגְאֵיוֹנִֽים׃ | 4 |
೪ಲೋಕಭೋಗಿಗಳ ಹಾಸ್ಯದಿಂದಲೂ, ಗರ್ವಿಷ್ಠರ ನಿಂದೆಯಿಂದಲೂ ನಮ್ಮ ಮನಸ್ಸು ಬೇಸತ್ತು ಹೋಯಿತು.