< מִשְׁלֵי 30 >
דִּבְרֵי ׀ אָגוּר בִּן־יָקֶה הַמַּשָּׂא נְאֻם הַגֶּבֶר לְאִֽיתִיאֵל לְאִיתִיאֵל וְאֻכָֽל׃ | 1 |
ಜಾಕೆ ಎಂಬುವನ ಮಗನಾದ ಆಗೂರನ ದೈವಿಕ ಬುದ್ಧಿಮಾತುಗಳು. ಇವನು ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು: “ದೇವರೇ, ನಾನು ದಣಿದಿದ್ದೇನೆ, ಆದರೆ ನಾನು ಜಯಶಾಲಿಯಾಗುವೆನು.
כִּי בַעַר אָנֹכִי מֵאִישׁ וְלֹֽא־בִינַת אָדָם לִֽי׃ | 2 |
ಖಂಡಿತವಾಗಿಯೂ ನಾನು ಮನುಷ್ಯನಲ್ಲ, ಮೃಗ. ನನಗೆ ಮನುಷ್ಯನ ಗ್ರಹಿಕೆ ಇಲ್ಲ.
וְלֹֽא־לָמַדְתִּי חָכְמָה וְדַעַת קְדֹשִׁים אֵדָֽע׃ | 3 |
ನಾನು ಜ್ಞಾನವನ್ನು ಕಲಿತುಕೊಂಡಿಲ್ಲ; ಅಲ್ಲದೆ ಪರಿಶುದ್ಧ ದೇವರ ಅರಿವು ನನಗಿಲ್ಲ.
מִי עָלָֽה־שָׁמַיִם ׀ וַיֵּרַד מִי אָֽסַף־רוּחַ ׀ בְּחָפְנָיו מִי צָֽרַר־מַיִם ׀ בַּשִּׂמְלָה מִי הֵקִים כָּל־אַפְסֵי־אָרֶץ מַה־שְּׁמוֹ וּמַֽה־שֶּׁם־בְּנוֹ כִּי תֵדָֽע׃ | 4 |
ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ? ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ? ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು? ಅವರ ಹೆಸರೇನು? ಅವರ ಮಗನ ಹೆಸರೇನು? ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು!
כָּל־אִמְרַת אֱלוֹהַּ צְרוּפָה מָגֵן הוּא לַֽחֹסִים בּֽוֹ׃ | 5 |
“ದೇವರ ಪ್ರತಿಯೊಂದು ಮಾತು ದೋಷವಿಲ್ಲದ್ದು; ದೇವರಲ್ಲಿ ಭರವಸವಿಡುವವನಿಗೆ ಅವರು ಗುರಾಣಿಯಾಗಿದ್ದಾರೆ.
אַל־תּוֹסְףְּ עַל־דְּבָרָיו פֶּן־יוֹכִיחַ בְּךָ וְנִכְזָֽבְתָּ׃ | 6 |
ದೇವರ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ. ಇಲ್ಲವಾದರೆ ದೇವರು ನಿನ್ನನ್ನು ಗದರಿಸಿ ನಿನ್ನನ್ನು ಸುಳ್ಳುಗಾರನೆಂದು ಸಾಬೀತುಪಡಿಸುವರು.
שְׁתַּיִם שָׁאַלְתִּי מֵאִתָּךְ אַל־תִּמְנַע מִמֶּנִּי בְּטֶרֶם אָמֽוּת׃ | 7 |
“ಯೆಹೋವ ದೇವರೇ, ನಾನು ನಿಮ್ಮನ್ನು ಎರಡು ವಿಷಯಗಳನ್ನು ಕೇಳುತ್ತೇನೆ. ನಿರಾಕರಿಸಬೇಡಿ ನಾನು ಸಾಯುವ ಮೊದಲು ಅವೆರಡನ್ನು ಅನುಗ್ರಹಿಸಿರಿ.
שָׁוְא ׀ וּֽדְבַר־כָּזָב הַרְחֵק מִמֶּנִּי רֵאשׁ וָעֹשֶׁר אַל־תִּֽתֶּן־לִי הַטְרִיפֵנִי לֶחֶם חֻקִּֽי׃ | 8 |
ವಂಚನೆ ಸುಳ್ಳನ್ನು ನನ್ನಿಂದ ದೂರಮಾಡಿರಿ. ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ನನಗೆ ಕೊಡಬೇಡಿರಿ. ನನಗೆ ಅನುದಿನದ ಆಹಾರವನ್ನು ದಯಪಾಲಿಸಿರಿ.
פֶּן אֶשְׂבַּע ׀ וְכִחַשְׁתִּי וְאָמַרְתִּי מִי יְהוָה וּפֶֽן־אִוָּרֵשׁ וְגָנַבְתִּי וְתָפַשְׂתִּי שֵׁם אֱלֹהָֽי׃ | 9 |
ನಾನು ಐಶ್ವರ್ಯವಂತನಾದರೆ ನಿನ್ನನ್ನು ನಿರಾಕರಿಸಿ, ‘ಯೆಹೋವ ದೇವರು ಯಾರು?’ ಎಂದು ಹೇಳೇನು. ನಾನು ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿಮ್ಮ ಹೆಸರಿಗೆ ಅಪಕೀರ್ತಿ ತಂದೇನು.
אַל־תַּלְשֵׁן עֶבֶד אֶל־אדנו אֲדֹנָיו פֶּֽן־יְקַלֶּלְךָ וְאָשָֽׁמְתָּ׃ | 10 |
“ಕೆಲಸಗಾರರ ವಿಷಯವಾಗಿ ಅವನ ಯಜಮಾನನಿಗೆ ದೂರು ಹೇಳಬೇಡ; ಇದರಿಂದ ಆ ಕೆಲಸಗಾರ ನಿನ್ನನ್ನು ಶಪಿಸಾನು, ಆಗ ನೀನು ದೋಷಿಯಾಗುವೆ.
דּוֹר אָבִיו יְקַלֵּל וְאֶת־אִמּוֹ לֹא יְבָרֵֽךְ׃ | 11 |
“ತಮ್ಮ ತಂದೆಯನ್ನು ಶಪಿಸಿ, ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವವರು ಇದ್ದಾರೆ.
דּוֹר טָהוֹר בְּעֵינָיו וּמִצֹּאָתוֹ לֹא רֻחָֽץ׃ | 12 |
ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವವರು ಇದ್ದಾರೆ; ಆದರೆ ಅವರು ತಮ್ಮ ಕೊಳೆಯನ್ನು ತೊಳೆದುಕೊಂಡಿರುವುದಿಲ್ಲ.
דּוֹר מָה־רָמוּ עֵינָיו וְעַפְעַפָּיו יִנָּשֵֽׂאוּ׃ | 13 |
ಅವರ ಕಣ್ಣುಗಳು ಯಾವಾಗಲೂ ಅಹಂಕಾರದಿಂದ ಕೂಡಿರುತ್ತವೆ. ಅವರ ದೃಷ್ಟಿ ಅಸಹ್ಯವಾಗಿದೆ.
דּוֹר ׀ חֲרָבוֹת שִׁנָּיו וּֽמַאֲכָלוֹת מְֽתַלְּעֹתָיו לֶאֱכֹל עֲנִיִּים מֵאֶרֶץ וְאֶבְיוֹנִים מֵאָדָֽם׃ | 14 |
ಖಡ್ಗಗಳಂತೆ ಹಲ್ಲುಗಳುಳ್ಳವರೂ ಚೂರಿಗಳಂತೆ ದವಡೆಗಳುಳ್ಳವರೂ ಬಡವರನ್ನು ಭೂಮಿಯಿಂದಲೂ ದಿಕ್ಕಿಲ್ಲದವರನ್ನು ಮಾನವಕುಲದಿಂದಲೂ ಕಬಳಿಸುವವರೂ ಆಗಿದ್ದಾರೆ.
לֽ͏ַעֲלוּקָה ׀ שְׁתֵּי בָנוֹת הַב ׀ הַב שָׁלוֹשׁ הֵנָּה לֹא תִשְׂבַּעְנָה אַרְבַּע לֹא־אָמְרוּ הֽוֹן׃ | 15 |
“ಜಿಗಣೆಗೆ, ‘ಕೊಡು! ಕೊಡು!’ ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳುಂಟು. “ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ, ಹೌದು, ‘ಸಾಕು!’ ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ:
שְׁאוֹל וְעֹצֶר רָחַם אֶרֶץ לֹא־שָׂבְעָה מַּיִם וְאֵשׁ לֹא־אָמְרָה הֽוֹן׃ (Sheol ) | 16 |
ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ಎಂದೂ ತೃಪ್ತಿ ಹೊಂದದ ಭೂಮಿ, ‘ಸಾಕು!’ ಎಂದು ಹೇಳದಿರುವ ಬೆಂಕಿ. (Sheol )
עַיִן ׀ תִּֽלְעַג לְאָב וְתָבוּז לִֽיקֲּהַת־אֵם יִקְּרוּהָ עֹרְבֵי־נַחַל וְֽיֹאכְלוּהָ בְנֵי־נָֽשֶׁר׃ | 17 |
“ತನ್ನ ತಂದೆಯನ್ನು ಹಾಸ್ಯಮಾಡಿ, ತನ್ನ ತಾಯಿಯನ್ನು ಧಿಕ್ಕರಿಸುವ ಕಣ್ಣನ್ನು, ಕಣಿವೆಯ ಕಾಗೆಗಳು ಕಿತ್ತು ಕಕ್ಕುವವು. ರಣಹದ್ದುಗಳು ಅದನ್ನು ತಿಂದುಬಿಡುವವು.
שְׁלֹשָׁה הֵמָּה נִפְלְאוּ מִמֶּנִּי וארבע וְאַרְבָּעָה לֹא יְדַעְתִּֽים׃ | 18 |
“ನನಗೆ ಆಶ್ಚರ್ಯವಾದ ಮೂರು ಸಂಗತಿಗಳಿವೆ, ಹೌದು, ನನಗೆ ಅರ್ಥವಾಗದಿರುವ ನಾಲ್ಕು ಸಂಗತಿಗಳಿವೆ:
דֶּרֶךְ הַנֶּשֶׁר ׀ בַּשָּׁמַיִם דֶּרֶךְ נָחָשׁ עֲלֵי צוּר דֶּֽרֶךְ־אֳנִיָּה בְלֶב־יָם וְדֶרֶךְ גֶּבֶר בְּעַלְמָֽה׃ | 19 |
ಆಕಾಶದಲ್ಲಿ ಹದ್ದಿನ ಮಾರ್ಗ, ಬಂಡೆಯ ಮೇಲೆ ಸರ್ಪದ ಮಾರ್ಗ, ಸಮುದ್ರ ನಡುವೆ ಹಡಗಿನ ಮಾರ್ಗ, ಯುವಕ ಯುವತಿಯರ ಪ್ರೀತಿ ಮಾರ್ಗ.
כֵּן ׀ דֶּרֶךְ אִשָּׁה מְנָאָפֶת אָכְלָה וּמָחֲתָה פִיהָ וְאָמְרָה לֹֽא־פָעַלְתִּי אָֽוֶן׃ | 20 |
“ಜಾರಸ್ತ್ರೀಯ ನಡತೆಯು ಹೀಗಿದೆ: ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು ‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ.
תַּחַת שָׁלוֹשׁ רָגְזָה אֶרֶץ וְתַחַת אַרְבַּע לֹא־תוּכַל שְׂאֵֽת׃ | 21 |
“ಭೂಮಿಯು ಮೂರು ವಿಷಯಗಳಿಂದ ಕಳವಳಗೊಳ್ಳುತ್ತದೆ, ನಾಲ್ವರನ್ನು ಅದು ತಾಳಲಾರದು:
תַּֽחַת־עֶבֶד כִּי יִמְלוֹךְ וְנָבָל כִּי יִֽשְׂבַּֽע־לָֽחֶם׃ | 22 |
ಅರಸನಾಗುವ ದಾಸನು, ತಿನ್ನಲು ಸಾಕಷ್ಟು ಪಡೆಯುವ ಮೂರ್ಖನು,
תַּחַת שְׂנוּאָה כִּי תִבָּעֵל וְשִׁפְחָה כִּֽי־תִירַשׁ גְּבִרְתָּֽהּ׃ | 23 |
ತಿರಸ್ಕಾರಕ್ಕೆ ಅರ್ಹಳಾದ ಮಹಿಳೆ, ಮದುವೆಯಾಗುವುದು. ಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ.
אַרְבָּעָה הֵם קְטַנֵּי־אָרֶץ וְהֵמָּה חֲכָמִים מְחֻכָּמִֽים׃ | 24 |
“ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ:
הַנְּמָלִים עַם לֹא־עָז וַיָּכִינוּ בַקַּיִץ לַחְמָֽם׃ | 25 |
ಇರುವೆಗಳು ಬಲಹೀನ ಜೀವಿಗಳು, ಆದರೂ ಅವು ಬೇಸಿಗೆಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ.
שְׁפַנִּים עַם לֹא־עָצוּם וַיָּשִׂימוּ בַסֶּלַע בֵּיתָֽם׃ | 26 |
ಬೆಟ್ಟದ ಮೊಲಗಳು ಬಲಹೀನ ಪ್ರಾಣಿಗಳಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುತ್ತವೆ.
מֶלֶךְ אֵין לָאַרְבֶּה וַיֵּצֵא חֹצֵץ כֻּלּֽוֹ׃ | 27 |
ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ.
שְׂמָמִית בְּיָדַיִם תְּתַפֵּשׂ וְהִיא בְּהֵיכְלֵי מֶֽלֶךְ׃ | 28 |
ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ ಅರಸನ ಅರಮನೆಗಳಲ್ಲಿ ಕಂಡುಬರುತ್ತವೆ.
שְׁלֹשָׁה הֵמָּה מֵיטִיבֵי צָעַד וְאַרְבָּעָה מֵיטִבֵי לָֽכֶת׃ | 29 |
“ಗಂಭೀರ ಗಮನದ ಮೂರು ಪ್ರಾಣಿಗಳಿವೆ, ಹೌದು, ಗಂಭೀರ ಗತಿಯ ನಾಲ್ಕಿವೆ:
לַיִשׁ גִּבּוֹר בַּבְּהֵמָה וְלֹא־יָשׁוּב מִפְּנֵי־כֹֽל׃ | 30 |
ಮೃಗಗಳಲ್ಲಿ ಬಲಿಷ್ಠವಾಗಿರುವ ಸಿಂಹವು, ಯಾವುದಕ್ಕೂ ಹಿಮ್ಮೆಟ್ಟದು.
זַרְזִיר מָתְנַיִם אוֹ־תָיִשׁ וּמֶלֶךְ אַלְקוּם עִמּֽוֹ׃ | 31 |
ಕತ್ತೆತ್ತಿ ನಡೆಯುವ ಹುಂಜ, ಹೋತವು, ತನ್ನ ಸುತ್ತಲೂ ಸೈನಿಕರಿರುವ ಅರಸನು.
אִם־נָבַלְתָּ בְהִתְנַשֵּׂא וְאִם־זַמּוֹתָ יָד לְפֶֽה׃ | 32 |
“ನೀನು ಹೆಮ್ಮೆಪಟ್ಟು ಮೂರ್ಖನಾಗಿ ನಡೆದಿದ್ದರೆ, ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ, ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೊ.
כִּי מִיץ חָלָב יוֹצִיא חֶמְאָה וּֽמִיץ־אַף יוֹצִיא דָם וּמִיץ אַפַּיִם יוֹצִיא רִֽיב׃ | 33 |
ಹಾಲನ್ನು ಕಡೆಯುವುದರಿಂದ ಬೆಣ್ಣೆ, ಮೂಗನ್ನು ಹಿಂಡುವುದರಿಂದ ರಕ್ತ, ಹಾಗೆಯೇ ಕೋಪವನ್ನೆಬ್ಬಿಸುವುದರಿಂದ ಜಗಳ.”