< במדבר 11 >

וַיְהִי הָעָם כְּמִתְאֹנְנִים רַע בְּאָזְנֵי יְהוָה וַיִּשְׁמַע יְהוָה וַיִּחַר אַפּוֹ וַתִּבְעַר־בָּם אֵשׁ יְהוָה וַתֹּאכַל בִּקְצֵה הַֽמַּחֲנֶֽה׃ 1
ಇಸ್ರಾಯೇಲ್ ಜನರು ತಮಗೆ ಕಷ್ಟವಾಯಿತೆಂದು ಗೊಣಗುಟ್ಟಿದಾಗ, ಯೆಹೋವ ದೇವರು ಅದನ್ನು ಕೇಳಿ ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿ ಬೀಳುವಂತೆ ಮಾಡಿದ್ದರಿಂದ ಅವರ ಪಾಳೆಯದ ಕಟ್ಟಕಡೆಯ ಭಾಗದಲ್ಲಿದ್ದವರು ಸುಟ್ಟುಹೋದರು.
וַיִּצְעַק הָעָם אֶל־מֹשֶׁה וַיִּתְפַּלֵּל מֹשֶׁה אֶל־יְהוָה וַתִּשְׁקַע הָאֵֽשׁ׃ 2
ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ, ಮೋಶೆಯು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು ಆಗ ಬೆಂಕಿಯು ಆರಿಹೋಯಿತು.
וַיִּקְרָא שֵֽׁם־הַמָּקוֹם הַהוּא תַּבְעֵרָה כִּֽי־בָעֲרָה בָם אֵשׁ יְהוָֽה׃ 3
ಯೆಹೋವ ದೇವರು ಹತ್ತಿಸಿದ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಿಟ್ಟರು.
וְהָֽאסַפְסֻף אֲשֶׁר בְּקִרְבּוֹ הִתְאַוּוּ תַּאֲוָה וַיָּשֻׁבוּ וַיִּבְכּוּ גַּם בְּנֵי יִשְׂרָאֵל וַיֹּאמְרוּ מִי יַאֲכִלֵנוּ בָּשָֽׂר׃ 4
ಅವರೊಳಗಿದ್ದ ಮಿಶ್ರ ಗುಂಪಿನ ಜನರು ಮಾಂಸಕ್ಕಾಗಿ ದುರಾಶೆಪಟ್ಟರು. ಇಸ್ರಾಯೇಲರು ಸಹ ತಿರುಗಿ ಅಳುತ್ತಾ, “ನಮಗೆ ಮಾಂಸವನ್ನು ತಿನ್ನುವುದಕ್ಕೆ ಕೊಡುವವರು ಯಾರು?
זָכַרְנוּ אֶת־הַדָּגָה אֲשֶׁר־נֹאכַל בְּמִצְרַיִם חִנָּם אֵת הַקִּשֻּׁאִים וְאֵת הָֽאֲבַטִּחִים וְאֶת־הֶחָצִיר וְאֶת־הַבְּצָלִים וְאֶת־הַשּׁוּמִֽים׃ 5
ನಾವು ಈಜಿಪ್ಟ್ ದೇಶದಲ್ಲಿ ಉಚಿತವಾಗಿ ತಿಂದ ಮೀನನ್ನೂ ಸವತೆ ಕಾಯಿಯನ್ನೂ ಕರ್ಬೂಜಗಳನ್ನೂ ನೀರುಳ್ಳಿ ಈರುಳ್ಳಿ ಬೆಳ್ಳುಳ್ಳಿಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ.
וְעַתָּה נַפְשֵׁנוּ יְבֵשָׁה אֵין כֹּל בִּלְתִּי אֶל־הַמָּן עֵינֵֽינוּ׃ 6
ಆದರೆ ಈಗ ನಮ್ಮ ಪ್ರಾಣವು ಬತ್ತಿಹೋಯಿತು, ಈ ಮನ್ನವಲ್ಲದೆ ಬೇರೆ ಯಾವುದೂ ನಮ್ಮ ಕಣ್ಣುಗಳ ಮುಂದೆ ಇರುವುದಿಲ್ಲ,” ಎಂದರು.
וְהַמָּן כִּזְרַע־גַּד הוּא וְעֵינוֹ כְּעֵין הַבְּדֹֽלַח׃ 7
ಆ ಮನ್ನವು ಕೊತ್ತಂಬರಿ ಬೀಜದ ಹಾಗೆ ಇತ್ತು. ಅದು ಗುಗ್ಗುಲದಂತೆ ಕಾಣಿಸಿತು.
שָׁטוּ הָעָם וְלָֽקְטוּ וְטָחֲנוּ בָרֵחַיִם אוֹ דָכוּ בַּמְּדֹכָה וּבִשְּׁלוּ בַּפָּרוּר וְעָשׂוּ אֹתוֹ עֻגוֹת וְהָיָה טַעְמוֹ כְּטַעַם לְשַׁד הַשָּֽׁמֶן׃ 8
ಜನರು ಹೊರಗೆ ಹೋಗಿ ಅದನ್ನು ಕೂಡಿಸಿ, ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ, ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡುತ್ತಿದ್ದರು. ಅದರ ರುಚಿಯು ಓಲಿವ್ ಎಣ್ಣೆಯಿಂದ ಮಾಡಿದ ರೊಟ್ಟಿಯಹಾಗೆ ಇತ್ತು.
וּבְרֶדֶת הַטַּל עַל־הַֽמַּחֲנֶה לָיְלָה יֵרֵד הַמָּן עָלָֽיו׃ 9
ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುವಾಗ ಅದರೊಂದಿಗೆ ಮನ್ನವು ಬೀಳುತ್ತಿತ್ತು.
וַיִּשְׁמַע מֹשֶׁה אֶת־הָעָם בֹּכֶה לְמִשְׁפְּחֹתָיו אִישׁ לְפֶתַח אָהֳלוֹ וַיִּֽחַר־אַף יְהוָה מְאֹד וּבְעֵינֵי מֹשֶׁה רָֽע׃ 10
ಆಗ ಪ್ರತಿಯೊಂದು ಕುಟುಂಬದ ಜನರು ತಮ್ಮ ಗುಡಾರದ ಬಾಗಿಲಿನಲ್ಲಿ ನಿಂತು ಅಳುವುದನ್ನು ಮೋಶೆ ಕೇಳಿದನು. ಯೆಹೋವ ದೇವರು ಬಹಳ ಕೋಪಗೊಂಡರು. ಮೋಶೆ ಗಲಿಬಿಲಿಗೊಂಡನು.
וַיֹּאמֶר מֹשֶׁה אֶל־יְהוָה לָמָה הֲרֵעֹתָ לְעַבְדֶּךָ וְלָמָּה לֹא־מָצָתִי חֵן בְּעֵינֶיךָ לָשׂוּם אֶת־מַשָּׂא כָּל־הָעָם הַזֶּה עָלָֽי׃ 11
ಮೋಶೆಯು ಯೆಹೋವ ದೇವರಿಗೆ, “ಈ ಎಲ್ಲಾ ಜನರ ಭಾರವನ್ನು ನನ್ನ ಮೇಲೆ ಹೊರಿಸಿ ನೀವು ಏಕೆ ತೊಂದರೆಯನ್ನು ನಿಮ್ಮ ಸೇವಕನ ಮೇಲೆ ತಂದಿದ್ದೀರಿ? ನಿಮ್ಮನ್ನು ಅತೃಪ್ತಿಗೊಳಿಸಲು ನಾನೇನು ಮಾಡಿದ್ದೇನೆ?
הֶאָנֹכִי הָרִיתִי אֵת כָּל־הָעָם הַזֶּה אִם־אָנֹכִי יְלִדְתִּיהוּ כִּֽי־תֹאמַר אֵלַי שָׂאֵהוּ בְחֵיקֶךָ כַּאֲשֶׁר יִשָּׂא הָאֹמֵן אֶת־הַיֹּנֵק עַל הָֽאֲדָמָה אֲשֶׁר נִשְׁבַּעְתָּ לַאֲבֹתָֽיו׃ 12
ನಾನು ಈ ಎಲ್ಲಾ ಜನರನ್ನು ಗರ್ಭಧರಿಸಿ ಜನ್ಮವಿತ್ತೆನೋ? ದಾದಿಯು ಹಸುಗೂಸನ್ನು ಎತ್ತಿಕೊಂಡು ಹೋಗುವಂತೆ, ಈ ಜನರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅವರ ಪಿತೃಗಳಿಗೆ ನೀವು ವಾಗ್ದಾನ ಮಾಡಿದ ದೇಶಕ್ಕೆ ನಡೆಸಬೇಕೆಂದು ನೀವು ನನಗೇಕೆ ಹೇಳಿದ್ದೀರಿ?
מֵאַיִן לִי בָּשָׂר לָתֵת לְכָל־הָעָם הַזֶּה כִּֽי־יִבְכּוּ עָלַי לֵאמֹר תְּנָה־לָּנוּ בָשָׂר וְנֹאכֵֽלָה׃ 13
ಈ ಸಮಸ್ತ ಜನರಿಗೆ ಕೊಡುವುದಕ್ಕೆ ಮಾಂಸವು ನನಗೆ ಎಲ್ಲಿಂದ ದೊರಕುವುದು? ‘ನಮಗೆ ತಿನ್ನಲು ಮಾಂಸವನ್ನು ಕೊಡು,’ ಎಂದು ನನ್ನ ಬಳಿಗೆ ಬಂದು ಅಳುತ್ತಿದ್ದಾರೆ.
לֹֽא־אוּכַל אָנֹכִי לְבַדִּי לָשֵׂאת אֶת־כָּל־הָעָם הַזֶּה כִּי כָבֵד מִמֶּֽנִּי׃ 14
ನಾನು ಒಬ್ಬೊಂಟಿಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವುದಕ್ಕೆ ಶಕ್ತನಲ್ಲ. ಅದು ನನಗೆ ಅತಿದೊಡ್ಡ ಭಾರವಾಗಿದೆ.
וְאִם־כָּכָה ׀ אַתְּ־עֹשֶׂה לִּי הָרְגֵנִי נָא הָרֹג אִם־מָצָאתִי חֵן בְּעֵינֶיךָ וְאַל־אֶרְאֶה בְּרָעָתִֽי׃ 15
ಈ ರೀತಿಯಲ್ಲಿ ನೀವು ನನ್ನನ್ನು ನಡೆಸುವುದಾದರೆ, ಈಗಲೇ ನನ್ನನ್ನು ಕೊಂದುಬಿಡಿ. ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆತರೆ, ನಾನು ನನ್ನ ಸ್ವಂತ ನಾಶವನ್ನು ಎದುರಿಸದಂತೆ ಕಾಪಾಡಿ,” ಎಂದನು.
וַיֹּאמֶר יְהוָה אֶל־מֹשֶׁה אֶסְפָה־לִּי שִׁבְעִים אִישׁ מִזִּקְנֵי יִשְׂרָאֵל אֲשֶׁר יָדַעְתָּ כִּי־הֵם זִקְנֵי הָעָם וְשֹׁטְרָיו וְלָקַחְתָּ אֹתָם אֶל־אֹהֶל מוֹעֵד וְהִֽתְיַצְּבוּ שָׁם עִמָּֽךְ׃ 16
ಯೆಹೋವ ದೇವರು ಮೋಶೆಗೆ, “ಜನರ ನಾಯಕರೆಂದೂ, ಹಿರಿಯರೆಂದೂ, ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂತಹ ಇಸ್ರಾಯೇಲರ ಹಿರಿಯರೊಳಗಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ, ಅವರನ್ನು ದೇವದರ್ಶನದ ಗುಡಾರದ ಕಡೆಗೆ ಕರೆದುಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
וְיָרַדְתִּי וְדִבַּרְתִּי עִמְּךָ שָׁם וְאָצַלְתִּי מִן־הָרוּחַ אֲשֶׁר עָלֶיךָ וְשַׂמְתִּי עֲלֵיהֶם וְנָשְׂאוּ אִתְּךָ בְּמַשָּׂא הָעָם וְלֹא־תִשָּׂא אַתָּה לְבַדֶּֽךָ׃ 17
ಆಗ ನಾನು ಇಳಿದುಬಂದು, ಅಲ್ಲಿ ನಿನ್ನ ಸಂಗಡ ಮಾತನಾಡುವೆನು. ನಿನಗೆ ನಾನು ಅನುಗ್ರಹಿಸಿರುವ ಆತ್ಮಶಕ್ತಿಯಲ್ಲಿ ಸ್ವಲ್ಪವನ್ನು ಅವರಿಗೂ ಕೊಡುವೆನು. ಆಗ ನೀನು ಅದನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಜನರ ಭಾರವನ್ನು ಹೊರುವರು,” ಎಂದು ಹೇಳಿದರು.
וְאֶל־הָעָם תֹּאמַר הִתְקַדְּשׁוּ לְמָחָר וַאֲכַלְתֶּם בָּשָׂר כִּי בְּכִיתֶם בְּאָזְנֵי יְהוָה לֵאמֹר מִי יַאֲכִלֵנוּ בָּשָׂר כִּי־טוֹב לָנוּ בְּמִצְרָיִם וְנָתַן יְהוָה לָכֶם בָּשָׂר וַאֲכַלְתֶּֽם׃ 18
ಜನರಿಗೆ ನೀನು, “‘ನಾಳೆಗಾಗಿ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ. ಆಗ ಮಾಂಸವನ್ನು ತಿನ್ನುವಿರಿ. ನಮಗೆ ಯಾವನು ಮಾಂಸವನ್ನು ತಿನ್ನುವುದಕ್ಕೆ ಕೊಡುವನು? ಈಜಿಪ್ಟ್ ದೇಶದಲ್ಲಿ ನಮಗೆ ಒಳ್ಳೆಯದು ಇತ್ತು,’ ಎಂದು ಹೇಳಿ, ಯೆಹೋವ ದೇವರು ಕೇಳುವಂತೆ ಅತ್ತಿರಿ. ಆದಕಾರಣ ಯೆಹೋವ ದೇವರು ನಿಮಗೆ ತಿನ್ನುವುದಕ್ಕೆ ಮಾಂಸವನ್ನು ಕೊಡುವನು ಮತ್ತು ನೀವು ಅದನ್ನು ತಿನ್ನುವಿರಿ.
לֹא יוֹם אֶחָד תֹּאכְלוּן וְלֹא יוֹמָיִם וְלֹא ׀ חֲמִשָּׁה יָמִים וְלֹא עֲשָׂרָה יָמִים וְלֹא עֶשְׂרִים יֽוֹם׃ 19
ನೀವು ತಿನ್ನುವುದು ಒಂದು ದಿನವಲ್ಲ, ಎರಡು ದಿನವೂ ಅಲ್ಲ, ಐದು ದಿನವೂ ಅಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವೂ ಅಲ್ಲ.
עַד ׀ חֹדֶשׁ יָמִים עַד אֲשֶׁר־יֵצֵא מֵֽאַפְּכֶם וְהָיָה לָכֶם לְזָרָא יַעַן כִּֽי־מְאַסְתֶּם אֶת־יְהוָה אֲשֶׁר בְּקִרְבְּכֶם וַתִּבְכּוּ לְפָנָיו לֵאמֹר לָמָּה זֶּה יָצָאנוּ מִמִּצְרָֽיִם׃ 20
ಅದು ನಿಮ್ಮ ಮೂಗಿನಿಂದ ಬಂದು, ನಿಮಗೆ ಅಸಹ್ಯವಾಗುವ ತನಕ ಪೂರ್ತಿ ತಿಂಗಳವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಯೆಹೋವ ದೇವರನ್ನು ಅಲಕ್ಷ್ಯಮಾಡಿ, ಅವರ ಎದುರಿನಲ್ಲಿ ಅತ್ತು, ‘ನಾವು ಏಕೆ ಈಜಿಪ್ಟಿನಿಂದ ಬಂದೆವು,’ ಎಂದು ಹೇಳುತ್ತೀರಲ್ಲಾ, ಎಂದು ಹೇಳು,” ಎಂದರು.
וַיֹּאמֶר מֹשֶׁה שֵׁשׁ־מֵאוֹת אֶלֶף רַגְלִי הָעָם אֲשֶׁר אָנֹכִי בְּקִרְבּוֹ וְאַתָּה אָמַרְתָּ בָּשָׂר אֶתֵּן לָהֶם וְאָכְלוּ חֹדֶשׁ יָמִֽים׃ 21
ಆದರೆ ಮೋಶೆಯು, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಅವರು ಒಂದು ತಿಂಗಳು ಪೂರ್ತಿ ತಿನ್ನುವ ಹಾಗೆ, ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀವು ಹೇಳಿದ್ದೀರಿ.
הֲצֹאן וּבָקָר יִשָּׁחֵט לָהֶם וּמָצָא לָהֶם אִם אֶֽת־כָּל־דְּגֵי הַיָּם יֵאָסֵף לָהֶם וּמָצָא לָהֶֽם׃ 22
ಅವರಿಗೆ ಸಾಕಾಗುವ ಹಾಗೆ ಕುರಿದನಗಳನ್ನು ಅವರಿಗೋಸ್ಕರ ಕೊಯ್ಯಬೇಕೋ? ಅವರಿಗೆ ಸಾಕಾಗುವ ಹಾಗೆ ಸಮುದ್ರದ ಮೀನುಗಳನ್ನೆಲ್ಲಾ ಕೂಡಿಸಿ ತರಬೇಕೋ?” ಎಂದು ಕೇಳಿದನು.
וַיֹּאמֶר יְהוָה אֶל־מֹשֶׁה הֲיַד יְהוָה תִּקְצָר עַתָּה תִרְאֶה הֲיִקְרְךָ דְבָרִי אִם־לֹֽא׃ 23
ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಎಂದು ನೀನು ನೋಡುವೆ,” ಎಂದರು.
וַיֵּצֵא מֹשֶׁה וַיְדַבֵּר אֶל־הָעָם אֵת דִּבְרֵי יְהוָה וַיֶּאֱסֹף שִׁבְעִים אִישׁ מִזִּקְנֵי הָעָם וַֽיַּעֲמֵד אֹתָם סְבִיבֹת הָאֹֽהֶל׃ 24
ಆಗ ಮೋಶೆ ಹೋಗಿ ಯೆಹೋವ ದೇವರ ಮಾತುಗಳನ್ನು ಜನರಿಗೆ ಹೇಳಿ, ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ, ಗುಡಾರದ ಸುತ್ತಲೂ ನಿಲ್ಲಿಸಿದನು.
וַיֵּרֶד יְהוָה ׀ בֶּעָנָן וַיְדַבֵּר אֵלָיו וַיָּאצֶל מִן־הָרוּחַ אֲשֶׁר עָלָיו וַיִּתֵּן עַל־שִׁבְעִים אִישׁ הַזְּקֵנִים וַיְהִי כְּנוֹחַ עֲלֵיהֶם הָרוּחַ וַיִּֽתְנַבְּאוּ וְלֹא יָסָֽפוּ׃ 25
ಯೆಹೋವ ದೇವರು ಮೇಘದೊಳಗಿಂದ ಇಳಿದು, ಅವನ ಸಂಗಡ ಮಾತನಾಡಿ, ಅವನ ಮೇಲಿರುವ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ತೆಗೆದು, ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟರು. ಆದ್ದರಿಂದ ಆತ್ಮವು ಅವರ ಮೇಲೆ ನೆಲೆಯಾಗಿದ್ದಾಗ ಅವರು ಪ್ರವಾದಿಸಿದರು. ಆಮೇಲೆ ಅವರು ಪ್ರವಾದಿಸಲಿಲ್ಲ.
וַיִשָּׁאֲרוּ שְׁנֵֽי־אֲנָשִׁים ׀ בַּֽמַּחֲנֶה שֵׁם הָאֶחָד ׀ אֶלְדָּד וְשֵׁם הַשֵּׁנִי מֵידָד וַתָּנַח עֲלֵיהֶם הָרוּחַ וְהֵמָּה בַּכְּתֻבִים וְלֹא יָצְאוּ הָאֹהֱלָה וַיִּֽתְנַבְּאוּ בּֽ͏ַמַּחֲנֶֽה׃ 26
ಆದರೆ ಇಬ್ಬರು ಮನುಷ್ಯರು ಪಾಳೆಯದಲ್ಲಿ ಉಳಿದರು. ಅವರಲ್ಲಿ ಒಬ್ಬನ ಹೆಸರು ಎಲ್ದಾದ್. ಮತ್ತೊಬ್ಬನ ಹೆಸರು ಮೇದಾದ್. ಇವರು ನಾಯಕರ ಪಟ್ಟಿಯಲ್ಲಿದ್ದವರಾಗಿದ್ದರು. ಇವರ ಮೇಲೆ ಆತ್ಮವು ನೆಲೆಯಾಯಿತು. ಇವರು ಗುಡಾರಕ್ಕೆ ಹೊರಟು ಹೋಗದೆ, ಪಾಳೆಯದಲ್ಲಿ ಪ್ರವಾದಿಸುತ್ತಿದ್ದರು.
וַיָּרָץ הַנַּעַר וַיַּגֵּד לְמֹשֶׁה וַיֹּאמַר אֶלְדָּד וּמֵידָד מִֽתְנַבְּאִים בַּֽמַּחֲנֶֽה׃ 27
ಆಗ ಒಬ್ಬ ಯೌವನಸ್ಥನು ಓಡಿಬಂದು ಮೋಶೆಗೆ, “ಎಲ್ದಾದನೂ, ಮೇದಾದನೂ ಪಾಳೆಯದಲ್ಲಿ ಪ್ರವಾದಿಸುತ್ತಾರೆ,” ಎಂದನು.
וַיַּעַן יְהוֹשֻׁעַ בִּן־נוּן מְשָׁרֵת מֹשֶׁה מִבְּחֻרָיו וַיֹּאמַר אֲדֹנִי מֹשֶׁה כְּלָאֵֽם׃ 28
ಅದಕ್ಕೆ ಯೌವನಸ್ಥರಲ್ಲಿ ಒಬ್ಬನೂ, ಮೋಶೆಯ ಸೇವಕನೂ ಆಗಿದ್ದ ನೂನನ ಮಗ ಯೆಹೋಶುವನು, “ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ,” ಎಂದನು.
וַיֹּאמֶר לוֹ מֹשֶׁה הַֽמְקַנֵּא אַתָּה לִי וּמִי יִתֵּן כָּל־עַם יְהוָה נְבִיאִים כִּי־יִתֵּן יְהוָה אֶת־רוּחוֹ עֲלֵיהֶֽם׃ 29
ಮೋಶೆಯು ಅವನಿಗೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚು ಪಡುತ್ತೀಯೋ? ಯೆಹೋವ ದೇವರ ಜನರೆಲ್ಲಾ ಪ್ರವಾದಿಗಳಾಗಿದ್ದು, ಯೆಹೋವ ದೇವರು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೆಯದು,” ಎಂದನು.
וַיֵּאָסֵף מֹשֶׁה אֶל־הַֽמַּחֲנֶה הוּא וְזִקְנֵי יִשְׂרָאֵֽל׃ 30
ಆಗ ಮೋಶೆಯೂ, ಇಸ್ರಾಯೇಲರ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.
וְרוּחַ נָסַע ׀ מֵאֵת יְהוָה וַיָּגָז שַׂלְוִים מִן־הַיָּם וַיִּטֹּשׁ עַל־הַֽמַּחֲנֶה כְּדֶרֶךְ יוֹם כֹּה וּכְדֶרֶךְ יוֹם כֹּה סְבִיבוֹת הַֽמַּחֲנֶה וּכְאַמָּתַיִם עַל־פְּנֵי הָאָֽרֶץ׃ 31
ಯೆಹೋವ ದೇವರ ಕಡೆಯಿಂದ ಒಂದು ಗಾಳಿಯು ಹೊರಟು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ತಂದು, ಪಾಳೆಯದ ಸುತ್ತಲೂ ಈ ಕಡೆ ಒಂದು ದಿನದ ದೂರದ ಪ್ರಯಾಣದಷ್ಟು, ಆ ಕಡೆ ಒಂದು ದಿನದ ದೂರದ ಪ್ರಯಾಣದಷ್ಟು ಪಾಳೆಯದ ಬಳಿಯಲ್ಲಿ ಭೂಮಿಯ ಮೇಲೆ ಎರಡು ಮೊಳ ಎತ್ತರದಲ್ಲಿ ಅವುಗಳನ್ನು ಬೀಳುವಂತೆ ಮಾಡಿತು.
וַיָּקָם הָעָם כָּל־הַיּוֹם הַהוּא וְכָל־הַלַּיְלָה וְכֹל ׀ יוֹם הַֽמָּחֳרָת וַיַּֽאַסְפוּ אֶת־הַשְּׂלָו הַמַּמְעִיט אָסַף עֲשָׂרָה חֳמָרִים וַיִּשְׁטְחוּ לָהֶם שָׁטוֹחַ סְבִיבוֹת הַֽמַּחֲנֶֽה׃ 32
ಜನರು ಆ ದಿನವೆಲ್ಲಾ, ಆ ರಾತ್ರಿಯೆಲ್ಲಾ, ಮರು ದಿವಸವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಕಡಿಮೆ ಕೂಡಿಸಿದವನು ಸಾವಿರ ಕಿಲೋಗ್ರಾಮಿನಷ್ಟು ಕೂಡಿಸಿದನು. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.
הַבָּשָׂר עוֹדֶנּוּ בֵּין שִׁנֵּיהֶם טֶרֶם יִכָּרֵת וְאַף יְהוָה חָרָה בָעָם וַיַּךְ יְהוָה בָּעָם מַכָּה רַבָּה מְאֹֽד׃ 33
ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ, ಅದನ್ನು ಅಗಿಯುವುದಕ್ಕಿಂತ ಮುಂಚೆ ಯೆಹೋವ ದೇವರು ಜನರನ್ನು ಘೋರ ವ್ಯಾಧಿಯಿಂದ ಸಾಯಿಸಿದನು.
וַיִּקְרָא אֶת־שֵֽׁם־הַמָּקוֹם הַהוּא קִבְרוֹת הַֽתַּאֲוָה כִּי־שָׁם קָֽבְרוּ אֶת־הָעָם הַמִּתְאַוִּֽים׃ 34
ಆಶೆ ಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ ಕಿಬ್ರೋತ್ ಹತಾವ ಎಂದು ಹೆಸರಾಯಿತು.
מִקִּבְרוֹת הַֽתַּאֲוָה נָסְעוּ הָעָם חֲצֵרוֹת וַיִּהְיוּ בַּחֲצֵרֽוֹת׃ 35
ತರುವಾಯ ಜನರು ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿಗೆ ಪ್ರಯಾಣಮಾಡಿ ಬಂದು, ಅಲ್ಲಿ ಇಳಿದುಕೊಂಡರು.

< במדבר 11 >