< ויקרא 19 >

וַיְדַבֵּר יְהוָה אֶל־מֹשֶׁה לֵּאמֹֽר 1
ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
דַּבֵּר אֶל־כָּל־עֲדַת בְּנֵי־יִשְׂרָאֵל וְאָמַרְתָּ אֲלֵהֶם קְדֹשִׁים תִּהְיוּ כִּי קָדוֹשׁ אֲנִי יְהוָה אֱלֹהֵיכֶֽם׃ 2
“ಇಸ್ರಾಯೇಲರ ಸಭೆಯವರೆಲ್ಲರ ಸಂಗಡ ಮಾತನಾಡಿ, ಅವರಿಗೆ ಹೀಗೆ ಹೇಳಬೇಕು: ‘ನೀವು ಪರಿಶುದ್ಧರಾಗಿರಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರಾದ ನಾನು ಪರಿಶುದ್ಧನಾಗಿದ್ದೇನೆ.
אִישׁ אִמּוֹ וְאָבִיו תִּירָאוּ וְאֶת־שַׁבְּתֹתַי תִּשְׁמֹרוּ אֲנִי יְהוָה אֱלֹהֵיכֶֽם׃ 3
“‘ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತಾಯಿಗೂ ತನ್ನ ತಂದೆಗೂ ಭಯಪಟ್ಟು, ನನ್ನ ವಿಶ್ರಾಂತಿಯ ದಿನಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
אַל־תִּפְנוּ אֶל־הָאֱלִילִים וֵֽאלֹהֵי מַסֵּכָה לֹא תַעֲשׂוּ לָכֶם אֲנִי יְהוָה אֱלֹהֵיכֶֽם׃ 4
“‘ನೀವು ವಿಗ್ರಹಗಳ ಕಡೆಗೆ ತಿರುಗಿಕೊಳ್ಳಬೇಡಿರಿ. ಇಲ್ಲವೆ ನಿಮಗೋಸ್ಕರವಾಗಿ ಎರಕದ ದೇವರುಗಳನ್ನು ಮಾಡಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
וְכִי תִזְבְּחוּ זֶבַח שְׁלָמִים לַיהוָה לִֽרְצֹנְכֶם תִּזְבָּחֻֽהוּ׃ 5
“‘ನೀವು ನಿಮ್ಮ ಯೆಹೋವ ದೇವರಿಗೆ ಸಮಾಧಾನದ ಬಲಿಯನ್ನು ಸಮರ್ಪಿಸುವುದಾದರೆ, ನೀವು ಆತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿಯೇ ಅರ್ಪಿಸಬೇಕು.
בְּיוֹם זִבְחֲכֶם יֵאָכֵל וּמִֽמָּחֳרָת וְהַנּוֹתָר עַד־יוֹם הַשְּׁלִישִׁי בָּאֵשׁ יִשָּׂרֵֽף׃ 6
ಅದನ್ನು ನೀವು ಸಮರ್ಪಿಸಿದ ದಿನದಲ್ಲಿಯೂ ಮಾರನೆಯ ದಿನದಲ್ಲಿಯೂ ತಿನ್ನಬೇಕು. ಆದರೆ ಅದು ಮೂರನೆಯ ದಿನದವರೆಗೆ ಉಳಿದರೆ ಅದನ್ನು ಬೆಂಕಿಯಲ್ಲಿ ಸುಡಬೇಕು.
וְאִם הֵאָכֹל יֵאָכֵל בַּיּוֹם הַשְּׁלִישִׁי פִּגּוּל הוּא לֹא יֵרָצֶֽה׃ 7
ಅದನ್ನು ಮೂರನೆಯ ದಿನದಲ್ಲಿ ತಿಂದದ್ದೇ ಆದರೆ, ಅದು ಅಸಹ್ಯವಾದದ್ದು, ಅದು ಅಂಗೀಕೃತವಾಗುವುದಿಲ್ಲ.
וְאֹֽכְלָיו עֲוֺנוֹ יִשָּׂא כִּֽי־אֶת־קֹדֶשׁ יְהוָה חִלֵּל וְנִכְרְתָה הַנֶּפֶשׁ הַהִוא מֵעַמֶּֽיהָ׃ 8
ಆದ್ದರಿಂದ ಅದನ್ನು ತಿನ್ನುವ ಪ್ರತಿಯೊಬ್ಬರೂ ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು. ಏಕೆಂದರೆ ಯೆಹೋವ ದೇವರಿಗೆ ಪವಿತ್ರವಾದದ್ದನ್ನು ಅವರು ಅಶುದ್ಧಮಾಡಿದ್ದಾನೆ. ಅಂಥವರನ್ನು ತಮ್ಮ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.
וּֽבְקֻצְרְכֶם אֶת־קְצִיר אַרְצְכֶם לֹא תְכַלֶּה פְּאַת שָׂדְךָ לִקְצֹר וְלֶקֶט קְצִֽירְךָ לֹא תְלַקֵּֽט׃ 9
“‘ನೀವು ನಿಮ್ಮ ಭೂಮಿಯ ಪೈರನ್ನು ಕೊಯ್ಯುವಾಗ, ನಿಮ್ಮ ಹೊಲದ ಮೂಲೆಗಳಲ್ಲಿ ಸಂಪೂರ್ಣವಾಗಿ ಕೊಯ್ಯಬಾರದು. ಇಲ್ಲವೆ ನಿಮ್ಮ ಸುಗ್ಗಿಯ ಹಕ್ಕಲುಗಳನ್ನು ಕೂಡಿಸಬಾರದು.
וְכַרְמְךָ לֹא תְעוֹלֵל וּפֶרֶט כַּרְמְךָ לֹא תְלַקֵּט לֶֽעָנִי וְלַגֵּר תַּעֲזֹב אֹתָם אֲנִי יְהוָה אֱלֹהֵיכֶֽם׃ 10
ನಿಮ್ಮ ದ್ರಾಕ್ಷಿತೋಟದಲ್ಲಿ ಹಕ್ಕಲಾಯಬಾರದು. ಇಲ್ಲವೆ ಪ್ರತಿಯೊಂದು ದ್ರಾಕ್ಷಿಯನ್ನೂ ಕೂಡಿಸಬಾರದು. ನೀವು ಅವುಗಳನ್ನು ಬಡವರಿಗಾಗಿಯೂ ಪರಕೀಯರಿಗಾಗಿಯೂ ಬಿಟ್ಟುಬಿಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
לֹא תִּגְנֹבוּ וְלֹא־תְכַחֲשׁוּ וְלֹֽא־תְשַׁקְּרוּ אִישׁ בַּעֲמִיתֽוֹ׃ 11
“‘ಕದಿಯಬಾರದು. “‘ಸುಳ್ಳಾಡಬಾರದು. “‘ಒಬ್ಬರಿಗೊಬ್ಬರು ಮೋಸಮಾಡಬಾರದು.
וְלֹֽא־תִשָּׁבְעוּ בִשְׁמִי לַשָּׁקֶר וְחִלַּלְתָּ אֶת־שֵׁם אֱלֹהֶיךָ אֲנִי יְהוָֽה׃ 12
“‘ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣ ಮಾಡಬಾರದು. ನಿಮ್ಮ ದೇವರ ಹೆಸರನ್ನು ಅಗೌರವಿಸಬಾರದು. ನಾನೇ ಯೆಹೋವ ದೇವರು.
לֹֽא־תַעֲשֹׁק אֶת־רֵֽעֲךָ וְלֹא תִגְזֹל לֹֽא־תָלִין פְּעֻלַּת שָׂכִיר אִתְּךָ עַד־בֹּֽקֶר׃ 13
“‘ನಿಮ್ಮ ನೆರೆಯವನನ್ನು ವಂಚಿಸಬಾರದು. “‘ಇಲ್ಲವೆ ಅವನನ್ನು ಸುಲಿದುಕೊಳ್ಳಬಾರದು. ಕೂಲಿಯಾಳಿನ ಕೂಲಿಯು ನಿಮ್ಮ ಬಳಿಯಲ್ಲಿ ರಾತ್ರಿಯೆಲ್ಲಾ ಮತ್ತು ಮುಂಜಾನೆಯವರೆಗೆ ಇರಬಾರದು.
לֹא־תְקַלֵּל חֵרֵשׁ וְלִפְנֵי עִוֵּר לֹא תִתֵּן מִכְשֹׁל וְיָרֵאתָ מֵּאֱלֹהֶיךָ אֲנִי יְהוָֽה׃ 14
“‘ಕಿವುಡನನ್ನು ಶಪಿಸಬಾರದು. ಇಲ್ಲವೆ ಕಣ್ಣು ಕಾಣದವನನ್ನು ಮುಗ್ಗರಿಸುವಂತೆ ಮಾಡಬಾರದು. ನಿಮ್ಮ ದೇವರಿಗೆ ಭಯಪಡಬೇಕು. ನಾನೇ ಯೆಹೋವ ದೇವರು.
לֹא־תַעֲשׂוּ עָוֶל בַּמִּשְׁפָּט לֹא־תִשָּׂא פְנֵי־דָל וְלֹא תֶהְדַּר פְּנֵי גָדוֹל בְּצֶדֶק תִּשְׁפֹּט עֲמִיתֶֽךָ׃ 15
“‘ವ್ಯಾಜ್ಯ ತೀರಿಸುವಾಗ ನೀನು ಅನ್ಯಾಯ ಮಾಡದಿರು. ಬಡವನ ಮುಖ ದಾಕ್ಷಿಣ್ಯವನ್ನಾಗಲಿ, ಬಲಿಷ್ಠನ ಘನತೆಯನ್ನಾಗಲಿ ಲಕ್ಷಿಸದೆ ನಿಷ್ಪಕ್ಷಪಾತವಾಗಿ ತೀರ್ಪುಕೊಡು. ನಿನ್ನ ನೆರೆಯವನಿಗೆ ನೀತಿಯಲ್ಲಿ ನ್ಯಾಯವಾಗಿ ತೀರ್ಪುಮಾಡು.
לֹא־תֵלֵךְ רָכִיל בְּעַמֶּיךָ לֹא תַעֲמֹד עַל־דַּם רֵעֶךָ אֲנִי יְהוָֽה׃ 16
“‘ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ. “‘ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ. ನಾನೇ ಯೆಹೋವ ದೇವರು.
לֹֽא־תִשְׂנָא אֶת־אָחִיךָ בִּלְבָבֶךָ הוֹכֵחַ תּוֹכִיחַ אֶת־עֲמִיתֶךָ וְלֹא־תִשָּׂא עָלָיו חֵֽטְא׃ 17
“‘ನಿನ್ನ ಹೃದಯದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ, ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.
לֹֽא־תִקֹּם וְלֹֽא־תִטֹּר אֶת־בְּנֵי עַמֶּךָ וְאָֽהַבְתָּ לְרֵעֲךָ כָּמוֹךָ אֲנִי יְהוָֽה׃ 18
“‘ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸದವನಾಗಿಯೂ, ಸೇಡು ತೀರಿಸದೆಯೂ ಇರು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು. ನಾನೇ ಯೆಹೋವ ದೇವರು.
אֶֽת־חֻקֹּתַי תִּשְׁמֹרוּ בְּהֶמְתְּךָ לֹא־תַרְבִּיעַ כִּלְאַיִם שָׂדְךָ לֹא־תִזְרַע כִּלְאָיִם וּבֶגֶד כִּלְאַיִם שֽׁ͏ַעַטְנֵז לֹא יַעֲלֶה עָלֶֽיךָ׃ 19
“‘ನೀನು ನನ್ನ ಆಜ್ಞೆಗಳನ್ನು ಕೈಗೊಳ್ಳಬೇಕು. “‘ನಿನ್ನ ಪಶುಗಳನ್ನು ಬೇರೆ ಜಾತಿಯೊಂದಿಗೆ ಕೂಡಗೊಡಿಸಬೇಡ. “‘ನಿನ್ನ ಹೊಲದಲ್ಲಿ ಮಿಶ್ರವಾದ ಬೀಜಗಳನ್ನು ಬಿತ್ತಬೇಡ. “‘ಇದಲ್ಲದೆ ನಾರು ಮತ್ತು ಉಣ್ಣೆ ಕೂಡಿಸಿದ ಬಟ್ಟೆ ನಿನ್ನ ಮೇಲೆ ಇರಬಾರದು.
וְאִישׁ כִּֽי־יִשְׁכַּב אֶת־אִשָּׁה שִׁכְבַת־זֶרַע וְהִוא שִׁפְחָה נֶחֱרֶפֶת לְאִישׁ וְהָפְדֵּה לֹא נִפְדָּתָה אוֹ חֻפְשָׁה לֹא נִתַּן־לָהּ בִּקֹּרֶת תִּהְיֶה לֹא יוּמְתוּ כִּי־לֹא חֻפָּֽשָׁה׃ 20
“‘ಒಬ್ಬ ಪುರುಷನಿಗೆ ನಿಶ್ಚಿತವಾಗಿರುವ ದಾಸಿಯಾದ ಒಬ್ಬ ಸ್ತ್ರೀಯೊಂದಿಗೆ ಒಬ್ಬ ಮನುಷ್ಯನು ಸಂಗಮಿಸುವುದಕ್ಕಾಗಿ ಮಲಗಿದರೆ ಅವಳು ಬಿಡುಗಡೆಯನ್ನು ಹೊಂದಿರದಿದ್ದರೆ, ಇಲ್ಲವೆ ಅವಳಿಗೆ ಸ್ವಾತಂತ್ರ್ಯವನ್ನು ಕೊಡದಿರದಿದ್ದರೆ, ತಕ್ಕ ಶಿಕ್ಷೆಯಾಗಬೇಕು. ಅವಳು ಸ್ವತಂತ್ರಳಲ್ಲದ ಕಾರಣ ಅವಳಿಗೆ ಮರಣದಂಡನೆಯನ್ನು ವಿಧಿಸಬಾರದು.
וְהֵבִיא אֶת־אֲשָׁמוֹ לַֽיהוָה אֶל־פֶּתַח אֹהֶל מוֹעֵד אֵיל אָשָֽׁם׃ 21
ಅವನು ಪ್ರಾಯಶ್ಚಿತ್ತ ಬಲಿಯ ಟಗರಾದ ತನ್ನ ಪ್ರಾಯಶ್ಚಿತ್ತ ಬಲಿಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಎದುರಿನಲ್ಲಿ ತರಬೇಕು.
וְכִפֶּר עָלָיו הַכֹּהֵן בְּאֵיל הָֽאָשָׁם לִפְנֵי יְהוָה עַל־חַטָּאתוֹ אֲשֶׁר חָטָא וְנִסְלַח לוֹ מֵחַטָּאתוֹ אֲשֶׁר חָטָֽא׃ 22
ಅವನು ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಬಲಿಯಾಗಿರುವ ಟಗರಿನಿಂದ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನು ಮಾಡಿದ ಪಾಪವನ್ನು ಅವನಿಗೆ ಕ್ಷಮಿಸಲಾಗುವುದು.
וְכִי־תָבֹאוּ אֶל־הָאָרֶץ וּנְטַעְתֶּם כָּל־עֵץ מַאֲכָל וַעֲרַלְתֶּם עָרְלָתוֹ אֶת־פִּרְיוֹ שָׁלֹשׁ שָׁנִים יִהְיֶה לָכֶם עֲרֵלִים לֹא יֵאָכֵֽל׃ 23
“‘ನೀವು ದೇಶದೊಳಗೆ ಬಂದು ಎಲ್ಲಾ ತರಹದ ಮರಗಳನ್ನು ಆಹಾರಕ್ಕೋಸ್ಕರ ನೆಟ್ಟಾಗ, ಅದರ ಫಲವನ್ನು ಮೂರು ವರುಷಗಳವರೆಗೆ ಅಶುದ್ಧವೆಂದೆಣಿಸಿ ಅದನ್ನು ತಿನ್ನಬಾರದು.
וּבַשָּׁנָה הָרְבִיעִת יִהְיֶה כָּל־פִּרְיוֹ קֹדֶשׁ הִלּוּלִים לַיהוָֽה׃ 24
ಆದರೆ ನಾಲ್ಕನೆಯ ವರುಷದಲ್ಲಿ ಅದರ ಎಲ್ಲಾ ಫಲವು ಯೆಹೋವ ದೇವರ ಸ್ತೋತ್ರಕ್ಕಾಗಿ ಪರಿಶುದ್ಧವಾಗಿರುವುದು.
וּבַשָּׁנָה הַחֲמִישִׁת תֹּֽאכְלוּ אֶת־פִּרְיוֹ לְהוֹסִיף לָכֶם תְּבוּאָתוֹ אֲנִי יְהוָה אֱלֹהֵיכֶֽם׃ 25
ಐದನೆಯ ವರುಷದಲ್ಲಿ ಅದರ ಫಲವನ್ನು ನೀವು ತಿನ್ನಬೇಕು. ಆಗ ಅದು ನಿಮಗೆ ಇನ್ನೂ ಸಮೃದ್ಧಿಯಾಗಿ ಫಲಿಸುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
לֹא תֹאכְלוּ עַל־הַדָּם לֹא תְנַחֲשׁוּ וְלֹא תְעוֹנֵֽנוּ׃ 26
“‘ರಕ್ತದೊಂದಿಗೆ ಯಾವುದನ್ನೂ ನೀವು ತಿನ್ನಬಾರದು. “‘ಇದಲ್ಲದೆ ಮಂತ್ರವನ್ನು ಮಾಡಬಾರದು. ಇಲ್ಲವೆ ಶಕುನಗಳನ್ನು ನೋಡಬಾರದು.
לֹא תַקִּפוּ פְּאַת רֹאשְׁכֶם וְלֹא תַשְׁחִית אֵת פְּאַת זְקָנֶֽךָ׃ 27
“‘ನಿಮ್ಮ ತಲೆಯ ಮೂಲೆಗಳನ್ನು ದುಂಡಗೆ ಕತ್ತರಿಸಬಾರದು. ಇದಲ್ಲದೆ ನಿಮ್ಮ ಗಡ್ಡದ ಮೂಲೆಯನ್ನು ಕೆಡಿಸಬಾರದು.
וְשֶׂרֶט לָנֶפֶשׁ לֹא תִתְּנוּ בִּבְשַׂרְכֶם וּכְתֹבֶת קֽ͏ַעֲקַע לֹא תִתְּנוּ בָּכֶם אֲנִי יְהוָֽה׃ 28
“‘ಸತ್ತವರಿಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು. ನಿಮ್ಮ ಮೇಲೆ ಯಾವ ಹಚ್ಚೆಗಳನ್ನೂ ಹಚ್ಚಿಸಿಕೊಳ್ಳಬಾರದು. ನಾನೇ ಯೆಹೋವ ದೇವರು.
אַל־תְּחַלֵּל אֶֽת־בִּתְּךָ לְהַזְנוֹתָהּ וְלֹא־תִזְנֶה הָאָרֶץ וּמָלְאָה הָאָרֶץ זִמָּֽה׃ 29
“‘ನಿನ್ನ ಮಗಳು ವೇಶ್ಯೆಯಾಗುವಂತೆ ವ್ಯಭಿಚಾರಕ್ಕೆ ಬಿಡಬಾರದು. ಹಾಗೆ ಮಾಡಿದರೆ, ದೇಶವು ವೇಶ್ಯೆತನಕ್ಕೆ ಒಳಪಡುವುದು ಮತ್ತು ಕೆಟ್ಟತನದಿಂದ ತುಂಬಿಹೋಗುವುದು.
אֶת־שַׁבְּתֹתַי תִּשְׁמֹרוּ וּמִקְדָּשִׁי תִּירָאוּ אֲנִי יְהוָֽה׃ 30
“‘ನನ್ನ ವಿಶ್ರಾಂತಿಯ ದಿನಗಳನ್ನು ನೀವು ಆಚರಿಸಬೇಕು. ನನ್ನ ಪರಿಶುದ್ಧಸ್ಥಳದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನೇ ಯೆಹೋವ ದೇವರು.
אַל־תִּפְנוּ אֶל־הָאֹבֹת וְאֶל־הַיִּדְּעֹנִים אַל־תְּבַקְשׁוּ לְטָמְאָה בָהֶם אֲנִי יְהוָה אֱלֹהֵיכֶֽם׃ 31
“‘ಮಾಟಗಾರರನ್ನು ಲಕ್ಷಿಸಬೇಡ, ಅಲ್ಲದೆ ಅವರಿಂದ ಅಶುದ್ಧವಾಗದಂತೆ ಭೂತಪ್ರೇತಗಳನ್ನು ವಿಚಾರಿಸುವವರನ್ನು ಅನುಸರಿಸಬೇಡ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
מִפְּנֵי שֵׂיבָה תָּקוּם וְהָדַרְתָּ פְּנֵי זָקֵן וְיָרֵאתָ מֵּאֱלֹהֶיךָ אֲנִי יְהוָֽה׃ 32
“‘ತಲೆ ನೆರೆತ ವೃದ್ಧರ ಮುಂದೆ ಎದ್ದು ನಿಂತುಕೊಳ್ಳಬೇಕು, ಅವರ ಸಮ್ಮುಖವನ್ನು ಗೌರವಿಸು. ನಿನ್ನ ದೇವರಿಗೆ ಭಯಪಡಬೇಕು. ನಾನೇ ಯೆಹೋವ ದೇವರು.
וְכִֽי־יָגוּר אִתְּךָ גֵּר בְּאַרְצְכֶם לֹא תוֹנוּ אֹתֽוֹ׃ 33
“‘ಒಬ್ಬ ಪರಕೀಯನು ನಿಮ್ಮ ದೇಶದಲ್ಲಿ ನಿನ್ನೊಂದಿಗೆ ಪ್ರವಾಸಿಯಾಗಿದ್ದರೆ, ಅವನನ್ನು ಉಪದ್ರವ ಪಡಿಸಬೇಡಿರಿ.
כְּאֶזְרָח מִכֶּם יִהְיֶה לָכֶם הַגֵּר ׀ הַגָּר אִתְּכֶם וְאָהַבְתָּ לוֹ כָּמוֹךָ כִּֽי־גֵרִים הֱיִיתֶם בְּאֶרֶץ מִצְרָיִם אֲנִי יְהוָה אֱלֹהֵיכֶֽם׃ 34
ಆದರೆ ನಿಮ್ಮಲ್ಲಿ ವಾಸವಾಗಿರುವ ಪರಕೀಯನು ನಿಮ್ಮೊಳಗೇ ಸ್ವದೇಶದವನಂತಿರಲಿ. ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು. ಏಕೆಂದರೆ ನೀವು ಸಹ ಈಜಿಪ್ಟ್ ದೇಶದಲ್ಲಿ ಪರಕೀಯರಾಗಿದ್ದಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
לֹא־תַעֲשׂוּ עָוֶל בַּמִּשְׁפָּט בַּמִּדָּה בַּמִּשְׁקָל וּבַמְּשׂוּרָֽה׃ 35
“‘ನಿಮ್ಮ ನಿರ್ಣಯದಲ್ಲಿಯೂ, ಅಳೆಯುವುದರಲ್ಲಿಯೂ, ತೂಕದಲ್ಲಿಯೂ, ಅಳತೆಯಲ್ಲಿಯೂ ನೀವು ಅನ್ಯಾಯ ಮಾಡಬೇಡಿರಿ.
מֹאזְנֵי צֶדֶק אַבְנֵי־צֶדֶק אֵיפַת צֶדֶק וְהִין צֶדֶק יִהְיֶה לָכֶם אֲנִי יְהוָה אֱלֹֽהֵיכֶם אֲשֶׁר־הוֹצֵאתִי אֶתְכֶם מֵאֶרֶץ מִצְרָֽיִם׃ 36
ತಕ್ಕಡಿ, ತೂಕದ ಕಲ್ಲುಗಳು, ಕಿಲೋಗ್ರಾಂ ಮತ್ತು ಲೀಟರ್ ನ್ಯಾಯಯುತವಾಗಿರಲಿ. ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ.
וּשְׁמַרְתֶּם אֶת־כָּל־חֻקֹּתַי וְאֶת־כָּל־מִשְׁפָּטַי וַעֲשִׂיתֶם אֹתָם אֲנִי יְהוָֽה׃ 37
“‘ಆದ್ದರಿಂದ ನನ್ನ ಎಲ್ಲಾ ಆಜ್ಞೆಗಳನ್ನೂ, ನನ್ನ ಎಲ್ಲಾ ನ್ಯಾಯಗಳನ್ನೂ ನೀವು ಅನುಸರಿಸಿ ನಡೆಯಬೇಕು. ನಾನೇ ಯೆಹೋವ ದೇವರು,’” ಎಂದು ಹೇಳಿದರು.

< ויקרא 19 >