< יהושע 3 >
וַיַּשְׁכֵּם יְהוֹשֻׁעַ בַּבֹּקֶר וַיִּסְעוּ מֵֽהַשִׁטִּים וַיָּבֹאוּ עַד־הַיַּרְדֵּן הוּא וְכָל־בְּנֵי יִשְׂרָאֵל וַיָּלִנוּ שָׁם טֶרֶם יַעֲבֹֽרוּ׃ | 1 |
ಯೆಹೋಶುವನು ಬೆಳಿಗ್ಗೆ ಎದ್ದು, ಅವನೂ, ಇಸ್ರಾಯೇಲರೆಲ್ಲರೂ ಶಿಟ್ಟೀಮಿನಿಂದ ಪ್ರಯಾಣಮಾಡಿ, ಯೊರ್ದನ್ ನದಿ ಬಳಿಗೆ ಬಂದು, ದಾಟುವುದಕ್ಕಿಂತ ಮುಂಚೆ ಅಲ್ಲಿ ಇಳಿದುಕೊಂಡರು.
וַיְהִי מִקְצֵה שְׁלֹשֶׁת יָמִים וַיַּעַבְרוּ הַשֹּׁטְרִים בְּקֶרֶב הַֽמַּחֲנֶֽה׃ | 2 |
ಮೂರು ದಿನಗಳಾದ ಮೇಲೆ ಅಧಿಕಾರಿಗಳು ಪಾಳೆಯದೊಳಗೆ ಹಾದು ಹೋಗಿ,
וַיְצַוּוּ אֶת־הָעָם לֵאמֹר כִּרְאֽוֹתְכֶם אֵת אֲרוֹן בְּרִית־יְהוָה אֱלֹהֵיכֶם וְהַכֹּֽהֲנִים הַלְוִיִּם נֹשְׂאִים אֹתוֹ וְאַתֶּם תִּסְעוּ מִמְּקוֹמְכֶם וַהֲלַכְתֶּם אַחֲרָֽיו׃ | 3 |
ಜನರಿಗೆ ಆಜ್ಞಾಪಿಸಿ, “ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವ ದೇವರ ಒಡಂಬಡಿಕೆಯ ಮಂಜೂಷ ಹೊರುವುದನ್ನು ಕಾಣುವಾಗ ನೀವು ನಿಮ್ಮ ಸ್ಥಳದಿಂದ ಹೊರಟು ಅದರ ಹಿಂದೆ ಹೋಗಬೇಕು.
אַךְ ׀ רָחוֹק יִהְיֶה בֵּֽינֵיכֶם ובינו וּבֵינָיו כְּאַלְפַּיִם אַמָּה בַּמִּדָּה אַֽל־תִּקְרְבוּ אֵלָיו לְמַעַן אֲשֶׁר־תֵּֽדְעוּ אֶת־הַדֶּרֶךְ אֲשֶׁר תֵּֽלְכוּ־בָהּ כִּי לֹא עֲבַרְתֶּם בַּדֶּרֶךְ מִתְּמוֹל שִׁלְשֽׁוֹם׃ | 4 |
ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರ ಇರಬೇಕು. ಅದರ ಹತ್ತಿರ ಬರಬೇಡಿರಿ. ನೀವು ಹೋಗಬೇಕಾದ ಮಾರ್ಗ ನಿಮಗೆ ತಿಳಿಯುವುದು. ಏಕೆಂದರೆ ನೀವು ಆ ಮಾರ್ಗವಾಗಿ ಇದುವರೆಗೆ ಪ್ರಯಾಣ ಮಾಡಿರುವುದಿಲ್ಲ,” ಎಂದರು.
וַיֹּאמֶר יְהוֹשֻׁעַ אֶל־הָעָם הִתְקַדָּשׁוּ כִּי מָחָר יַעֲשֶׂה יְהוָה בְּקִרְבְּכֶם נִפְלָאֽוֹת׃ | 5 |
ಯೆಹೋಶುವನು ಜನರಿಗೆ, “ಇಂದು ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ, ನಾಳೆ ಯೆಹೋವ ದೇವರು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವರು,” ಎಂದನು.
וַיֹּאמֶר יְהוֹשֻׁעַ אֶל־הַכֹּהֲנִים לֵאמֹר שְׂאוּ אֶת־אֲרוֹן הַבְּרִית וְעִבְרוּ לִפְנֵי הָעָם וַיִּשְׂאוּ אֶת־אֲרוֹן הַבְּרִית וַיֵּלְכוּ לִפְנֵי הָעָֽם׃ | 6 |
ಆಗ ಯೆಹೋಶುವನು ಯಾಜಕರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋಗಿರಿ,” ಎಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದೆ ಹೊರಟರು.
וַיֹּאמֶר יְהוָה אֶל־יְהוֹשֻׁעַ הַיּוֹם הַזֶּה אָחֵל גַּדֶּלְךָ בְּעֵינֵי כָּל־יִשְׂרָאֵל אֲשֶׁר יֵֽדְעוּן כִּי כַּאֲשֶׁר הָיִיתִי עִם־מֹשֶׁה אֶהְיֶה עִמָּֽךְ׃ | 7 |
ಯೆಹೋವ ದೇವರು ಯೆಹೋಶುವನಿಗೆ, “ನಾನು ಮೋಶೆಯ ಸಂಗಡ ಇದ್ದ ಪ್ರಕಾರ, ನಿನ್ನ ಸಂಗಡ ಇರುವುದನ್ನು ಇಸ್ರಾಯೇಲರೆಲ್ಲರೂ ತಿಳಿಯುವಂತೆ, ನಾನು ಈ ದಿನ ನಿನ್ನನ್ನು ಅವರ ಮುಂದೆ ಉನ್ನತಗೊಳಿಸುವೆನು.
וְאַתָּה תְּצַוֶּה אֶת־הַכֹּהֲנִים נֹשְׂאֵי אֲרֽוֹן־הַבְּרִית לֵאמֹר כְּבֹאֲכֶם עַד־קְצֵה מֵי הַיַּרְדֵּן בַּיַּרְדֵּן תַּעֲמֹֽדוּ׃ | 8 |
ನೀನು ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನ್ ನದಿಯ ಅಂಚಿಗೆ ಬಂದಾಗ, ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು,” ಎಂದರು.
וַיֹּאמֶר יְהוֹשֻׁעַ אֶל־בְּנֵי יִשְׂרָאֵל גֹּשׁוּ הֵנָּה וְשִׁמְעוּ אֶת־דִּבְרֵי יְהוָה אֱלֹֽהֵיכֶֽם׃ | 9 |
ಆಗ ಯೆಹೋಶುವನು ಇಸ್ರಾಯೇಲರಿಗೆ, “ನೀವು ಇಲ್ಲಿಗೆ ಬಂದು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯಗಳನ್ನು ಕೇಳಿರಿ.
וַיֹּאמֶר יְהוֹשֻׁעַ בְּזֹאת תֵּֽדְעוּן כִּי אֵל חַי בְּקִרְבְּכֶם וְהוֹרֵשׁ יוֹרִישׁ מִפְּנֵיכֶם אֶת־הַכְּנַעֲנִי וְאֶת־הַחִתִּי וְאֶת־הַחִוִּי וְאֶת־הַפְּרִזִּי וְאֶת־הַגִּרְגָּשִׁי וְהָאֱמֹרִי וְהַיְבוּסִֽי׃ | 10 |
ಜೀವವುಳ್ಳ ದೇವರು ನಿಮ್ಮ ಮಧ್ಯದಲ್ಲಿರುವುದನ್ನೂ, ಅವರು ಕಾನಾನ್ಯರನ್ನೂ, ಹಿತ್ತಿಯರನ್ನೂ, ಹಿವ್ವಿಯರನ್ನೂ, ಪೆರಿಜೀಯರನ್ನೂ, ಗಿರ್ಗಾಷಿಯರನ್ನೂ, ಅಮೋರಿಯರನ್ನೂ, ಯೆಬೂಸಿಯರನ್ನೂ ನಿಮ್ಮ ಮುಂದೆ ನಿಶ್ಚಯವಾಗಿ ಓಡಿಸಿಬಿಡುವುದನ್ನೂ ನೀವು ತಿಳಿಯುವಿರಿ.
הִנֵּה אֲרוֹן הַבְּרִית אֲדוֹן כָּל־הָאָרֶץ עֹבֵר לִפְנֵיכֶם בַּיַּרְדֵּֽן׃ | 11 |
ಇಗೋ, ಸಮಸ್ತ ಭೂಮಿಗೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನ್ ನದಿಯನ್ನು ದಾಟಿ ಹೋಗುವುದು.
וְעַתָּה קְחוּ לָכֶם שְׁנֵי עָשָׂר אִישׁ מִשִּׁבְטֵי יִשְׂרָאֵל אִישׁ־אֶחָד אִישׁ־אֶחָד לַשָּֽׁבֶט׃ | 12 |
ಆದ್ದರಿಂದ ಈಗ ಇಸ್ರಾಯೇಲ್ ಗೋತ್ರಗಳಲ್ಲಿ ಹನ್ನೆರಡು ಮಂದಿಯನ್ನು ಒಂದೊಂದು ಗೋತ್ರಕ್ಕೆ ಒಬ್ಬೊಬ್ಬರಾಗಿ ತೆಗೆದುಕೊಳ್ಳಿರಿ.
וְהָיָה כְּנוֹחַ כַּפּוֹת רַגְלֵי הַכֹּהֲנִים נֹשְׂאֵי אֲרוֹן יְהוָה אֲדוֹן כָּל־הָאָרֶץ בְּמֵי הַיַּרְדֵּן מֵי הַיַּרְדֵּן יִכָּרֵתוּן הַמַּיִם הַיֹּרְדִים מִלְמָעְלָה וְיַעַמְדוּ נֵד אֶחָֽד׃ | 13 |
ಸಮಸ್ತ ಭೂಮಿಗೂ ಒಡೆಯರಾಗಿರುವ ಯೆಹೋವ ದೇವರ ಮಂಜೂಷವನ್ನು ಹೊರುವ ಯಾಜಕರ ಪಾದಗಳು ಯೊರ್ದನ್ ನದಿಯ ನೀರಲ್ಲಿ ಇಡುತ್ತಲೇ, ಮೇಲಿನಿಂದ ಹರಿದು ಬರುವ ನೀರು ಮುಂದೆ ಹರಿಯದೆ ಅಲ್ಲಿಯೇ ರಾಶಿಯಾಗಿ ನಿಲ್ಲುವುದು,” ಎಂದು ಹೇಳಿದನು.
וַיְהִי בִּנְסֹעַ הָעָם מֵאָהֳלֵיהֶם לַעֲבֹר אֶת־הַיַּרְדֵּן וְהַכֹּהֲנִים נֹֽשְׂאֵי הָאָרוֹן הַבְּרִית לִפְנֵי הָעָֽם׃ | 14 |
ಆದ್ದರಿಂದ ಜನರು ಯೊರ್ದನ್ ನದಿಯನ್ನು ದಾಟಲು ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಜನರಿಗೆ ಮುಂದಾಗಿ ಹೊತ್ತುಕೊಂಡು ಹೋದರು.
וּכְבוֹא נֹשְׂאֵי הָֽאָרוֹן עַד־הַיַּרְדֵּן וְרַגְלֵי הַכֹּֽהֲנִים נֹשְׂאֵי הָֽאָרוֹן נִטְבְּלוּ בִּקְצֵה הַמָּיִם וְהַיַּרְדֵּן מָלֵא עַל־כָּל־גְּדוֹתָיו כֹּל יְמֵי קָצִֽיר׃ | 15 |
ಎಂದಿನಂತೆ ಯೊರ್ದನ್ ನದಿಯು ಸುಗ್ಗಿಕಾಲದಲ್ಲಿ ದಡ ತುಂಬಿ ಹರಿಯುತ್ತಾ ಇತ್ತು. ಮಂಜೂಷವನ್ನು ಹೊರುವ ಯಾಜಕರ ಕಾಲುಗಳು ನೀರಿನ ಅಂಚಿನಲ್ಲಿ ಇಡುತ್ತಲೇ,
וַיַּעַמְדוּ הַמַּיִם הַיֹּרְדִים מִלְמַעְלָה קָמוּ נֵד־אֶחָד הַרְחֵק מְאֹד באדם מֵֽאָדָם הָעִיר אֲשֶׁר מִצַּד צָֽרְתָן וְהַיֹּרְדִים עַל יָם הָעֲרָבָה יָם־הַמֶּלַח תַּמּוּ נִכְרָתוּ וְהָעָם עָבְרוּ נֶגֶד יְרִיחֽוֹ׃ | 16 |
ಮೇಲಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಸಮೀಪವಾಗಿದ್ದ ಆದಾಮ್ ಪಟ್ಟಣಕ್ಕೆ ಬಂದು ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ಎಂಬ ಲವಣ ಸಮುದ್ರಕ್ಕೆ ಹರಿದುಹೋಯಿತು. ಆಗ ಜನರು ಯೆರಿಕೋವಿನ ಎದುರಾಗಿ ನದಿ ದಾಟಿದರು.
וַיַּעַמְדוּ הַכֹּהֲנִים נֹשְׂאֵי הָאָרוֹן בְּרִית־יְהוָה בֶּחֽ͏ָרָבָה בְּתוֹךְ הַיַּרְדֵּן הָכֵן וְכָל־יִשְׂרָאֵל עֹֽבְרִים בֶּחָרָבָה עַד אֲשֶׁר־תַּמּוּ כָּל־הַגּוֹי לַעֲבֹר אֶת־הַיַּרְדֵּֽן׃ | 17 |
ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿಯ ಮಧ್ಯದಲ್ಲಿ ಒಣನೆಲದಲ್ಲಿ ದೃಢವಾಗಿ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲರೆಲ್ಲರೂ ಒಣನೆಲದ ಮೇಲೆ ನಡೆದರು. ಹೀಗೆ ಇಡೀ ರಾಷ್ಟ್ರವು ಯೊರ್ದನ್ ನದಿ ಆಚೆ ಸೇರಿತು.