< ירמיה 9 >
מִֽי־יִתֵּן רֹאשִׁי מַיִם וְעֵינִי מְקוֹר דִּמְעָה וְאֶבְכֶּה יוֹמָם וָלַיְלָה אֵת חַֽלְלֵי בַת־עַמִּֽי׃ | 1 |
೧ಅಯ್ಯೋ, ನನ್ನ ಶಿರಸ್ಸು ಜಲಮಯವಾಗಿಯೂ, ನನ್ನ ನೇತ್ರಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಎಷ್ಟೋ ಲೇಸು! ನನ್ನ ಜನರಲ್ಲಿ ಹತರಾದವರ ನಿಮಿತ್ತ ಹಗಲಿರುಳೂ ಅಳಬೇಕಲ್ಲಾ!
מִֽי־יִתְּנֵנִי בַמִּדְבָּר מְלוֹן אֹֽרְחִים וְאֶֽעֶזְבָה אֶת־עַמִּי וְאֵלְכָה מֵֽאִתָּם כִּי כֻלָּם מְנָאֲפִים עֲצֶרֶת בֹּגְדִֽים׃ | 2 |
೨ಆಹಾ! ದಾರಿಗರು ತಂಗುವ ಗುಡಿಸಲು ಕಾಡಿನಲ್ಲಿ ನನಗೆ ಸಿಕ್ಕಿದರೆ ಎಷ್ಟೋ ಒಳ್ಳೆಯದು! ಆಗ ನಾನು ನನ್ನ ಜನರನ್ನು ತ್ಯಜಿಸಿ ಹೋಗುತ್ತಿದ್ದೆನು. ಅವರೆಲ್ಲರೂ ವ್ಯಭಿಚಾರಿಗಳ, ದ್ರೋಹಿಗಳ ಗುಂಪೇ.
וַֽיַּדְרְכוּ אֶת־לְשׁוֹנָם קַשְׁתָּם שֶׁקֶר וְלֹא לֶאֱמוּנָה גָּבְרוּ בָאָרֶץ כִּי מֵרָעָה אֶל־רָעָה ׀ יָצָאוּ וְאֹתִי לֹֽא־יָדָעוּ נְאֻם־יְהוָֽה׃ | 3 |
೩ಸುಳ್ಳಾಡುವುದಕ್ಕೆ ತಮ್ಮ ನಾಲಿಗೆಯನ್ನು ಬಿಲ್ಲಿನಂತೆ ಬಗ್ಗಿಸುತ್ತಾರೆ; ಸತ್ಯಕ್ಕೆ ಪ್ರತಿಕೂಲವಾಗಿ ದೇಶದಲ್ಲಿ ಪ್ರಬಲಿಸಿದ್ದಾರೆ. ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನು ಅರಿಯರು ಎಂದು ಯೆಹೋವನು ನುಡಿಯುತ್ತಾನೆ.
אִישׁ מֵרֵעֵהוּ הִשָּׁמֵרוּ וְעַל־כָּל־אָח אַל־תִּבְטָחוּ כִּי כָל־אָח עָקוֹב יַעְקֹב וְכָל־רֵעַ רָכִיל יַהֲלֹֽךְ׃ | 4 |
೪ನೀವೆಲ್ಲರೂ ನಿಮ್ಮ ನಿಮ್ಮ ನೆರೆಯವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಯಾರೇ ಆಗಲಿ ತನ್ನ ತಮ್ಮನನ್ನೂ ನಂಬದಿರಲಿ. ಪ್ರತಿಯೊಬ್ಬ ತಮ್ಮನೂ ವಂಚಿಸೇ ವಂಚಿಸುವನು, ಒಬ್ಬೊಬ್ಬ ನೆರೆಯವನೂ ಚಾಡಿಹೇಳುತ್ತಾ ತಿರುಗಾಡುವನು.
וְאִישׁ בְּרֵעֵהוּ יְהָתֵלּוּ וֶאֱמֶת לֹא יְדַבֵּרוּ לִמְּדוּ לְשׁוֹנָם דַּבֶּר־שֶׁקֶר הַעֲוֵה נִלְאֽוּ׃ | 5 |
೫ಎಲ್ಲರೂ ತಮ್ಮ ತಮ್ಮ ನೆರೆಯವರಿಗೆ ಮೋಸಮಾಡುತ್ತಾರೆ, ಸತ್ಯವನ್ನು ಆಡುವುದೇ ಇಲ್ಲ; ತಮ್ಮ ನಾಲಿಗೆಗೆ ಸುಳ್ಳನ್ನು ಕಲಿಸಿದ್ದಾರೆ. ತಮಗೆ ಆಯಾಸವಾಗುವ ಮಟ್ಟಿಗೆ ಕೆಡುಕನ್ನು ಮಾಡುತ್ತಿದ್ದಾರೆ.
שִׁבְתְּךָ בְּתוֹךְ מִרְמָה בְּמִרְמָה מֵאֲנוּ דַֽעַת־אוֹתִי נְאֻם־יְהוָֽה׃ | 6 |
೬ನಿಮ್ಮ ನಿವಾಸವು ಮೋಸದೊಳಗೆ ಇದೆ; ಅಯ್ಯೋ, ಅವರು ಮೋಸಗಾರರಾಗಿರುವುದರಿಂದ ನನ್ನನ್ನು ತಿಳಿಯರು ಎಂದು ಯೆಹೋವನು ನುಡಿಯುತ್ತಾನೆ.
לָכֵן כֹּה אָמַר יְהוָה צְבָאוֹת הִנְנִי צוֹרְפָם וּבְחַנְתִּים כִּֽי־אֵיךְ אֶעֱשֶׂה מִפְּנֵי בַּת־עַמִּֽי׃ | 7 |
೭ಹೀಗಿರಲು ಸೇನಾಧೀಶ್ವರನಾದ ಯೆಹೋವನು, “ಆಹಾ, ನಾನು ನನ್ನ ಜನರ ದ್ರೋಹಕ್ಕೆ ಏನು ಮಾಡಲಿ? ಅವರನ್ನು ಪುಟಕ್ಕೆ ಹಾಕಿ ಶೋಧಿಸುವೆನು.
חֵץ שוחט שָׁחוּט לְשׁוֹנָם מִרְמָה דִבֵּר בְּפִיו שָׁלוֹם אֶת־רֵעֵהוּ יְדַבֵּר וּבְקִרְבּוֹ יָשִׂים אָרְבּֽוֹ׃ | 8 |
೮ಅವರ ನಾಲಿಗೆಯು ಕೊಲ್ಲುವ ಬಾಣವಾಗಿದೆ, ಅದು ಸುಳ್ಳನ್ನೇ ಆಡುತ್ತದೆ; ಒಬ್ಬನು ತನ್ನ ನೆರೆಯವನಿಗೆ ಬಾಯಿಂದ ಶುಭವಾಗಲಿ ಎಂದೂ ಹೇಳಿದರೂ ತನ್ನ ಹೃದಯದಲ್ಲಿ ಅವನಿಗಾಗಿ ಹೊಂಚುಹಾಕುತ್ತಾನೆ.
הַעַל־אֵלֶּה לֹֽא־אֶפְקָד־בָּם נְאֻם־יְהוָה אִם בְּגוֹי אֲשֶׁר־כָּזֶה לֹא תִתְנַקֵּם נַפְשִֽׁי׃ | 9 |
೯ನಾನು ಅವರನ್ನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ?” ಎಂದು ನುಡಿಯುತ್ತಾನೆ.
עַל־הֶהָרִים אֶשָּׂא בְכִי וָנֶהִי וְעַל־נְאוֹת מִדְבָּר קִינָה כִּי נִצְּתוּ מִבְּלִי־אִישׁ עֹבֵר וְלֹא שָׁמְעוּ קוֹל מִקְנֶה מֵעוֹף הַשָּׁמַיִם וְעַד־בְּהֵמָה נָדְדוּ הָלָֽכוּ׃ | 10 |
೧೦“ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದು ಹೋಗರು, ದನಕರುಗಳ ಶಬ್ದ ಕಿವಿಗೆ ಬೀಳದು, ಮೃಗ ಪಕ್ಷಿಗಳು ತೊಲಗಿಹೋಗಿವೆ.
וְנָתַתִּי אֶת־יְרוּשָׁלַ͏ִם לְגַלִּים מְעוֹן תַּנִּים וְאֶת־עָרֵי יְהוּדָה אֶתֵּן שְׁמָמָה מִבְּלִי יוֹשֵֽׁב׃ | 11 |
೧೧ನಾನು ಯೆರೂಸಲೇಮನ್ನು ಹಾಳು ದಿಬ್ಬವನ್ನಾಗಿಯೂ, ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು ಮತ್ತು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂಮಿಯನ್ನಾಗಿ ಮಾಡುವೆನು” ಎಂದು ಯೆಹೋವನು ಹೇಳಿದ್ದಾನಲ್ಲಾ.
מִֽי־הָאִישׁ הֶֽחָכָם וְיָבֵן אֶת־זֹאת וַאֲשֶׁר דִּבֶּר פִּֽי־יְהוָה אֵלָיו וְיַגִּדָהּ עַל־מָה אָבְדָה הָאָרֶץ נִצְּתָה כַמִּדְבָּר מִבְּלִי עֹבֵֽר׃ | 12 |
೧೨ಯಾರೂ ದಾಟದ ಹಾಗೆ ದೇಶವು ಹಾಳಾಗಿ ಕಾಡಿನಂತೆ ಸುಟ್ಟು ಹೋದದ್ದು ಏಕೆ? ಈ ವಿಚಾರವನ್ನು ಗ್ರಹಿಸತಕ್ಕ ಜ್ಞಾನಿಯು ಯಾರು? ಅದನ್ನು ಯೆಹೋವನ ಬಾಯಿಂದಲೇ ಕೇಳಿ ತಿಳಿಸಬಲ್ಲವನು ಯಾರು?
וַיֹּאמֶר יְהוָה עַל־עָזְבָם אֶת־תּוֹרָתִי אֲשֶׁר נָתַתִּי לִפְנֵיהֶם וְלֹא־שָׁמְעוּ בְקוֹלִי וְלֹא־הָלְכוּ בָֽהּ׃ | 13 |
೧೩ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು, “ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಾರದೆ, ನನ್ನ ಮಾತನ್ನು ಕೇಳದೆ ಹೋದರು.
וַיֵּלְכוּ אַחֲרֵי שְׁרִרוּת לִבָּם וְאַחֲרֵי הַבְּעָלִים אֲשֶׁר לִמְּדוּם אֲבוֹתָֽם׃ | 14 |
೧೪ಅವರು ಧರ್ಮದ ಮಾರ್ಗದಲ್ಲಿ ನಡೆಯದೆ, ಸ್ವಂತ ಹೃದಯದ ಹಟದಂತೆ ನಡೆದು, ತಮ್ಮ ಪೂರ್ವಿಕರು ತಮಗೆ ಕಲಿಸಿಕೊಟ್ಟ ಹಾಗೆ ಬಾಳ್ ದೇವತೆಗಳನ್ನು ಹಿಂಬಾಲಿಸಿದರು.
לָכֵן כֹּֽה־אָמַר יְהוָה צְבָאוֹת אֱלֹהֵי יִשְׂרָאֵל הִנְנִי מַאֲכִילָם אֶת־הָעָם הַזֶּה לַֽעֲנָה וְהִשְׁקִיתִים מֵי־רֹֽאשׁ׃ | 15 |
೧೫ಆದುದರಿಂದ ಆಹಾ, ನಾನು ಈ ಜನರಿಗೆ ವಿಷದ ಆಹಾರವನ್ನು ಮತ್ತು ಕಹಿಯಾದ ಪಾನಗಳನ್ನು ಕೊಡುವೆನು.
וַהֲפִֽצוֹתִים בַּגּוֹיִם אֲשֶׁר לֹא יָֽדְעוּ הֵמָּה וַֽאֲבוֹתָם וְשִׁלַּחְתִּי אַֽחֲרֵיהֶם אֶת־הַחֶרֶב עַד כַּלּוֹתִי אוֹתָֽם׃ | 16 |
೧೬ಇವರಿಗಾಗಲಿ ಅಥವಾ ಇವರ ಪೂರ್ವಿಕರಿಗಾಗಲಿ ಗೊತ್ತಿಲ್ಲದ ಜನಾಂಗಗಳೊಳಗೆ ಇವರನ್ನು ಚದರಿಸಿಬಿಟ್ಟು, ಇವರು ನಿರ್ಮೂಲವಾಗುವ ತನಕ ಖಡ್ಗವನ್ನು ಇವರ ಹಿಂದೆ ಕಳುಹಿಸುವೆನು” ಎಂದು ಹೇಳುತ್ತಾನೆ.
כֹּה אָמַר יְהוָה צְבָאוֹת הִתְבּֽוֹנְנוּ וְקִרְאוּ לַמְקוֹנְנוֹת וּתְבוֹאֶינָה וְאֶל־הַחֲכָמוֹת שִׁלְחוּ וְתָבֽוֹאנָה׃ | 17 |
೧೭ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳಿರಿ, “ನಿಮ್ಮ ಬಗ್ಗೆ ಯೋಚಿಸಿರಿ; ರೋದನ ಗಾಯಕಿಯರನ್ನು ಕರೆಯಿಸಿರಿ, ಅವರು ಬರಲಿ; ಜಾಣೆಯರನ್ನು ಕರೆಯ ಕಳುಹಿಸಿರಿ, ಅವರು ಸೇರಲಿ.
וּתְמַהֵרְנָה וְתִשֶּׂנָה עָלֵינוּ נֶהִי וְתֵרַדְנָה עֵינֵינוּ דִּמְעָה וְעַפְעַפֵּינוּ יִזְּלוּ־מָֽיִם׃ | 18 |
೧೮ಅವರು ತ್ವರೆಪಟ್ಟು ನಮ್ಮ ನೇತ್ರಗಳಿಂದ ಧಾರೆಹೊರಡುವಂತೆಯೂ, ನಮ್ಮ ಕಣ್ಣುಗಳಿಂದ ನೀರುಕ್ಕುವಂತೆಯೂ ನಮಗೋಸ್ಕರ ಗೋಳಾಡಲಿ.
כִּי קוֹל נְהִי נִשְׁמַע מִצִיּוֹן אֵיךְ שֻׁדָּדְנוּ בֹּשְׁנֽוּ מְאֹד כִּֽי־עָזַבְנוּ אָרֶץ כִּי הִשְׁלִיכוּ מִשְׁכְּנוֹתֵֽינוּ׃ | 19 |
೧೯‘ಅಯ್ಯೋ, ಹಾಳಾದೆವು, ಭಂಗಪಟ್ಟೆವು; ನಾವು ನಮ್ಮ ದೇಶವನ್ನು ಬಿಟ್ಟೆವಲ್ಲಾ, ಶತ್ರುಗಳು ನಮ್ಮ ಮನೆಗಳನ್ನು ಕೆಡವಿದ್ದಾರಲ್ಲಾ’” ಎಂಬ ಪ್ರಲಾಪಧ್ವನಿಯು ಚೀಯೋನಿನೊಳಗಿಂದ ಕೇಳಿಸುತ್ತದೆ.
כִּֽי־שְׁמַעְנָה נָשִׁים דְּבַר־יְהוָה וְתִקַּח אָזְנְכֶם דְּבַר־פִּיו וְלַמֵּדְנָה בְנֽוֹתֵיכֶם נֶהִי וְאִשָּׁה רְעוּתָהּ קִינָֽה׃ | 20 |
೨೦ಸ್ತ್ರೀಯರೇ, ಯೆಹೋವನ ನುಡಿಯನ್ನು ಕೇಳಿ ಆತನ ಬಾಯಿಂದ ಹೊರಟ ಮಾತಿಗೆ ಕಿವಿದೆರೆಯಿರಿ. ನಿಮ್ಮ ಹೆಣ್ಣುಮಕ್ಕಳಿಗೂ ಗೋಳಾಡುವುದನ್ನು ಕಲಿಸಿರಿ, ಪ್ರತಿಯೊಬ್ಬಳು ತನ್ನ ನೆರೆಯವಳಿಗೂ ಶೋಕಗೀತವನ್ನು ಅಭ್ಯಾಸ ಮಾಡಿಸಲಿ;
כִּֽי־עָלָה מָוֶת בְּחַלּוֹנֵינוּ בָּא בְּאַרְמְנוֹתֵינוּ לְהַכְרִית עוֹלָל מִחוּץ בַּחוּרִים מֵרְחֹבֽוֹת׃ | 21 |
೨೧ಏಕೆಂದರೆ ಬೀದಿಗಳಲ್ಲಿ ಮಕ್ಕಳೂ, ಚೌಕಗಳಲ್ಲಿ ಯುವಕರೂ ಇಲ್ಲದ ಹಾಗೆ ಮೃತ್ಯುವು ನಮ್ಮ ಕಿಟಕಿಗಳ ಮೇಲೆ ಹತ್ತಿ ನಮ್ಮ ಅರಮನೆಗಳೊಳಗೆ ನುಗ್ಗಿದೆ.
דַּבֵּר כֹּה נְאֻם־יְהוָה וְנָֽפְלָה נִבְלַת הָֽאָדָם כְּדֹמֶן עַל־פְּנֵי הַשָּׂדֶה וּכְעָמִיר מֵאַחֲרֵי הַקֹּצֵר וְאֵין מְאַסֵּֽף׃ | 22 |
೨೨“ಈ ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವುದು; ಅವು ಹೊಲ ಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಸಿವುಡಿನಂತೆ ಇರುವವು, ಯೆಹೋವನ ಈ ಮಾತನ್ನು ಸಾರು” ಎಂದು ನನಗೆ ಅಪ್ಪಣೆಯಾಯಿತು.
כֹּה ׀ אָמַר יְהוָה אַל־יִתְהַלֵּל חָכָם בְּחָכְמָתוֹ וְאַל־יִתְהַלֵּל הַגִּבּוֹר בִּגְבֽוּרָתוֹ אַל־יִתְהַלֵּל עָשִׁיר בְּעָשְׁרֽוֹ׃ | 23 |
೨೩ಯೆಹೋವನು ಹೀಗೆನ್ನುತ್ತಾನೆ, “ಜ್ಞಾನಿಯು ತನ್ನ ಜ್ಞಾನಕ್ಕೆ, ಪರಾಕ್ರಮಿಯು ತನ್ನ ಪರಾಕ್ರಮಕ್ಕೆ, ಐಶ್ವರ್ಯವಂತನು ತನ್ನ ಐಶ್ವರ್ಯಕ್ಕೆ ಹೆಚ್ಚಳಪಡದಿರಲಿ.
כִּי אִם־בְּזֹאת יִתְהַלֵּל הַמִּתְהַלֵּל הַשְׂכֵּל וְיָדֹעַ אוֹתִי כִּי אֲנִי יְהוָה עֹשֶׂה חֶסֶד מִשְׁפָּט וּצְדָקָה בָּאָרֶץ כִּֽי־בְאֵלֶּה חָפַצְתִּי נְאֻם־יְהוָֽה׃ | 24 |
೨೪ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು, ನಾನು ಲೋಕದಲ್ಲಿ ಪ್ರೀತಿ, ನೀತಿ ಮತ್ತು ನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬುವುದಕ್ಕೇ ಹೆಚ್ಚಳಪಡಲಿ; ಪ್ರೀತಿ, ನೀತಿ ಮತ್ತು ನ್ಯಾಯಗಳೇ ನನಗೆ ಆನಂದ” ಎಂದು ಯೆಹೋವನು ನುಡಿಯುತ್ತಾನೆ.
הִנֵּה יָמִים בָּאִים נְאֻם־יְהוָה וּפָקַדְתִּי עַל־כָּל־מוּל בְּעָרְלָֽה׃ | 25 |
೨೫“ಆಹಾ, ಐಗುಪ್ತರು, ಯೆಹೂದ್ಯರು, ಎದೋಮ್ಯರು, ಅಮ್ಮೋನ್ಯರು, ಮೋವಾಬ್ಯರು, ಚಂಡಿಕೆಯನ್ನು ಬಿಟ್ಟುಕೊಂಡಿರುವ ಅರಣ್ಯದ ನಿವಾಸಿಗಳು, ಅಂತು ಸುನ್ನತಿಯುಳ್ಳವರಾದರೂ ಸುನ್ನತಿಯಿಲ್ಲದ ಇವರೆಲ್ಲರನ್ನೂ ನಾನು ದಂಡಿಸುವ ದಿನಗಳು ಬರುತ್ತವೆ.
עַל־מִצְרַיִם וְעַל־יְהוּדָה וְעַל־אֱדוֹם וְעַל־בְּנֵי עַמּוֹן וְעַל־מוֹאָב וְעַל כָּל־קְצוּצֵי פֵאָה הַיֹּשְׁבִים בַּמִּדְבָּר כִּי כָל־הַגּוֹיִם עֲרֵלִים וְכָל־בֵּית יִשְׂרָאֵל עַרְלֵי־לֵֽב׃ | 26 |
೨೬ಏಕೆಂದರೆ ಸಕಲ ಜನಾಂಗಗಳವರೂ ಸುನ್ನತಿಹೀನರು, ಎಲ್ಲಾ ಇಸ್ರಾಯೇಲ್ ವಂಶದವರೂ ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ನುಡಿಯುತ್ತಾನೆ.