< ישעה 31 >

הוֹי הַיֹּרְדִים מִצְרַיִם לְעֶזְרָה עַל־סוּסִים יִשָּׁעֵנוּ וַיִּבְטְחוּ עַל־רֶכֶב כִּי רָב וְעַל פָּֽרָשִׁים כִּֽי־עָצְמוּ מְאֹד וְלֹא שָׁעוּ עַל־קְדוֹשׁ יִשְׂרָאֵל וְאֶת־יְהוָה לֹא דָרָֽשׁוּ׃ 1
ಸಹಾಯಕ್ಕಾಗಿ ಈಜಿಪ್ಟನ್ನು ಸೇರಿ, ಅಶ್ವಬಲವನ್ನು, ಆಶ್ರಯಿಸುವವರಿಗೆ ಕಷ್ಟ! ಏಕೆಂದರೆ ರಥಗಳು ಬಹಳವೆಂದೂ, ಅವರ ನಂಬಿಕೆಯು ರಥಗಳ ಮೇಲೆ ಏಕೆಂದರೆ ಅವರು ಅನೇಕರು, ಆದರೆ ಇಸ್ರಾಯೇಲಿನ ಪರಿಶುದ್ಧನ ಮೇಲೆ ದೃಷ್ಟಿ ಇಡುವುದಿಲ್ಲ. ಇಲ್ಲವೆ ಯೆಹೋವ ದೇವರಿಂದ ಸಹಾಯವನ್ನು ಬಯಸುವುದಿಲ್ಲ.
וְגַם־הוּא חָכָם וַיָּבֵא רָע וְאֶת־דְּבָרָיו לֹא הֵסִיר וְקָם עַל־בֵּית מְרֵעִים וְעַל־עֶזְרַת פֹּעֲלֵי אָֽוֶן׃ 2
ಆದರೂ ಅವರು ಜ್ಞಾನಿ, ಕೇಡನ್ನು ಬರಮಾಡುವರು. ಅವರು ತಮ್ಮ ಮಾತನ್ನು ಹಿಂದೆಗೆಯುವುದಿಲ್ಲ. ಆದರೆ ಕೆಡುಕರ ಮನೆತನಕ್ಕೂ, ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು.
וּמִצְרַיִם אָדָם וְֽלֹא־אֵל וְסוּסֵיהֶם בָּשָׂר וְלֹא־רוּחַ וַֽיהוָה יַטֶּה יָדוֹ וְכָשַׁל עוֹזֵר וְנָפַל עָזֻר וְיַחְדָּו כֻּלָּם יִכְלָיֽוּן׃ 3
ಈಜಿಪ್ಟಿನವರು ಮನುಷ್ಯ ಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮೂಳೆಮಾಂಸವೇ. ಹೀಗಿರುವುದರಿಂದ ಯೆಹೋವ ದೇವರು ತನ್ನ ಕೈಚಾಚುವಾಗ ಸಹಾಯ ಮಾಡಿದವನು ಮತ್ತು ಸಹಾಯ ಪಡೆದವನೂ ಬಿದ್ದುಹೋಗುವನು. ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
כִּי כֹה אָֽמַר־יְהוָה ׀ אֵלַי כַּאֲשֶׁר יֶהְגֶּה הָאַרְיֵה וְהַכְּפִיר עַל־טַרְפּוֹ אֲשֶׁר יִקָּרֵא עָלָיו מְלֹא רֹעִים מִקּוֹלָם לֹא יֵחָת וּמֵֽהֲמוֹנָם לֹא יַֽעֲנֶה כֵּן יֵרֵד יְהוָה צְבָאוֹת לִצְבֹּא עַל־הַר־צִיּוֹן וְעַל־גִּבְעָתָֽהּ׃ 4
ಯೆಹೋವ ದೇವರು ನನಗೆ ಹೀಗೆ ಹೇಳಿದ್ದಾನೆ: ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಕಾವಲುಗಾರನ ಕೂಗನ್ನು ಕೇಳಿ, ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ, ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವುದೋ, ಹಾಗೆಯೇ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತಕ್ಕೋಸ್ಕರವೂ, ಅದರ ಗುಡ್ಡಕ್ಕೋಸ್ಕರವೂ ಯುದ್ಧಮಾಡಲು ಇಳಿದು ಬರುವರು.
כְּצִפֳּרִים עָפוֹת כֵּן יָגֵן יְהוָה צְבָאוֹת עַל־יְרֽוּשָׁלָ͏ִם גָּנוֹן וְהִצִּיל פָּסֹחַ וְהִמְלִֽיט׃ 5
ರೆಕ್ಕೆಗಳನ್ನು ಚಾಚಿದ ಪಕ್ಷಿಗಳಂತೆ ಸೇನಾಧೀಶ್ವರ ಯೆಹೋವ ದೇವರು ಯೆರೂಸಲೇಮನ್ನು ಕಾಪಾಡುವರು. ಅದನ್ನು ರಕ್ಷಿಸಿ ಕಾಯುವರು. ಹಾದುಹೋಗುತ್ತಾ ಅಪಾಯದಿಂದ ತಪ್ಪಿಸುವರು.
שׁוּבוּ לַאֲשֶׁר הֶעְמִיקוּ סָרָה בְּנֵי יִשְׂרָאֵֽל׃ 6
ಇಸ್ರಾಯೇಲರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದ್ದೀರೋ, ಆತನ ಕಡೆಗೆ ತಿರುಗಿಕೊಳ್ಳಿರಿ.
כִּי בַּיּוֹם הַהוּא יִמְאָסוּן אִישׁ אֱלִילֵי כַסְפּוֹ וֶאֱלִילֵי זְהָבוֹ אֲשֶׁר עָשׂוּ לָכֶם יְדֵיכֶם חֵֽטְא׃ 7
ಏಕೆಂದರೆ ನೀವು ನಿಮ್ಮ ಸ್ವಂತ ಕೈಗಳು ಪಾಪಕ್ಕೋಸ್ಕರ ಮಾಡಿದ ಬೆಳ್ಳಿಯ ಮತ್ತು ಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನು ಬಿಸಾಡಿಬಿಡುವನು.
וְנָפַל אַשּׁוּר בְּחֶרֶב לֹא־אִישׁ וְחֶרֶב לֹֽא־אָדָם תֹּֽאכֲלֶנּוּ וְנָס לוֹ מִפְּנֵי־חֶרֶב וּבַחוּרָיו לָמַס יִהְיֽוּ׃ 8
ಆಗ ಅಸ್ಸೀರಿಯದವರು ಖಡ್ಗದಿಂದ ಬೀಳುವರು. ಅದು ಮನುಷ್ಯರ ಖಡ್ಗವಲ್ಲ, ಖಡ್ಗವು ಅವರನ್ನು ನುಂಗುವುದು. ಅದು ಮಾನವ ಖಡ್ಗವಲ್ಲ. ಅವರು ಖಡ್ಗದಿಂದ ತಪ್ಪಿಸಿಕೊಳ್ಳಲು ಓಡುವರು. ಅವರ ಯೌವನಸ್ಥರು ಜೀತದಾಳುಗಳಾಗುವರು.
וְסַלְעוֹ מִמָּגוֹר יַֽעֲבוֹר וְחַתּוּ מִנֵּס שָׂרָיו נְאֻם־יְהוָה אֲשֶׁר־אוּר לוֹ בְּצִיּוֹן וְתַנּוּר לוֹ בִּירוּשָׁלָֽ͏ִם׃ 9
ಭಯಾನಕತೆಯಿಂದ ಅವರ ಕೋಟೆ ಬೀಳುವುದು, ಯುದ್ಧದ ದೃಶ್ಯವನ್ನು ನೋಡಿ ಅವರ ಸೇನಾಪತಿಗಳು ಧ್ವಜಸ್ಥಾನದಿಂದ ದಿಕ್ಕುಪಾಲಾಗುವರು. ಚೀಯೋನಿನಲ್ಲಿ ಅಗ್ನಿಯನ್ನೂ, ಯೆರೂಸಲೇಮಿನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಯೆಹೋವ ದೇವರು ಘೋಷಿಸುತ್ತಾರೆ.

< ישעה 31 >