< עזרא 10 >

וּכְהִתְפַּלֵּל עֶזְרָא וּכְהִתְוַדֹּתוֹ בֹּכֶה וּמִתְנַפֵּל לִפְנֵי בֵּית הָאֱלֹהִים נִקְבְּצוּ אֵלָיו מִיִּשְׂרָאֵל קָהָל רַב־מְאֹד אֲנָשִׁים וְנָשִׁים וִֽילָדִים כִּֽי־בָכוּ הָעָם הַרְבֵּה־בֶֽכֶה׃ 1
ಎಜ್ರನು ಪ್ರಾರ್ಥಿಸಿ ಅರಿಕೆಮಾಡಿ ಅತ್ತು ದೇವರ ಆಲಯದ ಮುಂದೆ ಅಡ್ಡಬಿದ್ದ ತರುವಾಯ ಇಸ್ರಾಯೇಲರಲ್ಲಿ ಸ್ತ್ರೀಯರೂ, ಪುರುಷರೂ, ಮಕ್ಕಳು ಮಹಾಕೂಟವಾಗಿ ಅವನ ಬಳಿಯಲ್ಲಿ ಕೂಡಿಕೊಂಡು ಬಂದರು. ಜನರು ಬಹಳವಾಗಿ ಅತ್ತರು.
וַיַּעַן שְׁכַנְיָה בֶן־יְחִיאֵל מִבְּנֵי עולם עֵילָם וַיֹּאמֶר לְעֶזְרָא אֲנַחְנוּ מָעַלְנוּ בֵאלֹהֵינוּ וַנֹּשֶׁב נָשִׁים נָכְרִיּוֹת מֵעַמֵּי הָאָרֶץ וְעַתָּה יֵשׁ־מִקְוֶה לְיִשְׂרָאֵל עַל־זֹֽאת׃ 2
ಆಗ ಏಲಾಮನ ವಂಶಜರಲ್ಲಿ ಒಬ್ಬನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ನಾವು ಅನ್ಯದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡದ್ದರಿಂದ, ನಮ್ಮ ದೇವರಿಗೆ ವಿರೋಧವಾಗಿ ದ್ರೋಹಮಾಡಿದ್ದೇವೆ. ಆದರೂ ಈಗ ಈ ಕಾರ್ಯವನ್ನು ಕುರಿತು ಇಸ್ರಾಯೇಲರಲ್ಲಿ ನಿರೀಕ್ಷೆ ಉಂಟು.
וְעַתָּה נִֽכְרָת־בְּרִית לֵאלֹהֵינוּ לְהוֹצִיא כָל־נָשִׁים וְהַנּוֹלָד מֵהֶם בַּעֲצַת אֲדֹנָי וְהַחֲרֵדִים בְּמִצְוַת אֱלֹהֵינוּ וְכַתּוֹרָה יֵעָשֶֽׂה׃ 3
ಆದಕಾರಣ ನಮ್ಮ ಒಡೆಯನಾದ ನಿನ್ನ ಯೋಚನೆಯ ಪ್ರಕಾರವಾಗಿಯೂ, ನಮ್ಮ ದೇವರ ಆಜ್ಞೆಗೆ ಭಯಪಡುವವರ ಯೋಚನೆಯ ಪ್ರಕಾರವಾಗಿಯೂ ಆ ಸಮಸ್ತ ಸ್ತ್ರೀಯರನ್ನೂ, ಅವರಿಂದ ಹುಟ್ಟಿದವರನ್ನೂ ಕಳುಹಿಸಿಬಿಡಲು, ಈಗಲೇ ನಮ್ಮ ದೇವರ ಮುಂದೆ ಒಡಂಬಡಿಕೆ ಮಾಡಿಕೊಂಡು, ದೇವರ ನಿಯಮದ ಪ್ರಕಾರ ನಡೆಯೋಣ.
קוּם כִּֽי־עָלֶיךָ הַדָּבָר וַאֲנַחְנוּ עִמָּךְ חֲזַק וַעֲשֵֽׂה׃ 4
ನೀನು ಏಳು, ಏಕೆಂದರೆ ಈ ಕಾರ್ಯ ನಿನಗೆ ಸಂಬಂಧಿಸಿದೆ. ನಾವು ನಿನ್ನ ಸಂಗಡ ನಿಲ್ಲುತ್ತೇವೆ. ಧೈರ್ಯದಿಂದ ಅದನ್ನು ಮಾಡು,” ಎಂದನು.
וַיָּקָם עֶזְרָא וַיַּשְׁבַּע אֶת־שָׂרֵי הַכֹּהֲנִים הַלְוִיִּם וְכָל־יִשְׂרָאֵל לַעֲשׂוֹת כַּדָּבָר הַזֶּה וַיִּשָּׁבֵֽעוּ׃ 5
ಆಗ ಎಜ್ರನು ಎದ್ದು, ಮಹಾಯಾಜಕರೂ ಲೇವಿಯರೂ ಸಮಸ್ತ ಇಸ್ರಾಯೇಲರೂ ಈ ಮಾತಿನ ಪ್ರಕಾರವಾಗಿ ಮಾಡಲು, ಅವರು ಆಣೆಯಿಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
וַיָּקָם עֶזְרָא מִלִּפְנֵי בֵּית הָֽאֱלֹהִים וַיֵּלֶךְ אֶל־לִשְׁכַּת יְהוֹחָנָן בֶּן־אֶלְיָשִׁיב וַיֵּלֶךְ שָׁם לֶחֶם לֹֽא־אָכַל וּמַיִם לֹֽא־שָׁתָה כִּי מִתְאַבֵּל עַל־מַעַל הַגּוֹלָֽה׃ 6
ಆಮೇಲೆ ಎಜ್ರನು ಎದ್ದು ದೇವರ ಆಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. ಏಕೆಂದರೆ ಸೆರೆಯಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರ ಅಪನಂಬಿಗಸ್ತಿಕೆಯ ಬಗ್ಗೆ ತುಂಬಾ ದುಃಖಿತನಾಗಿದ್ದನು.
וַיַּעֲבִירוּ קוֹל בִּיהוּדָה וִירֽוּשָׁלִַם לְכֹל בְּנֵי הַגּוֹלָה לְהִקָּבֵץ יְרוּשָׁלָֽ͏ִם׃ 7
ತರುವಾಯ ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿಗೆ ಕೂಡಿಬರಬೇಕೆಂದು ಸಮಸ್ತ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಸಾರಲಾಗಿತ್ತು.
וְכֹל אֲשֶׁר לֹֽא־יָבוֹא לִשְׁלֹשֶׁת הַיָּמִים כַּעֲצַת הַשָּׂרִים וְהַזְּקֵנִים יָחֳרַם כָּל־רְכוּשׁוֹ וְהוּא יִבָּדֵל מִקְּהַל הַגּוֹלָֽה׃ 8
ಇದಲ್ಲದೆ ಯಾವನಾದರೂ ಪ್ರಧಾನರ, ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸದಲ್ಲಿ ಬಾರದೆ ಇದ್ದರೆ, ಅವನ ಆಸ್ತಿಯೆಲ್ಲಾ ದಂಡವಾಗಿ ತೆಗೆದುಕೊಳ್ಳಲಾಗುವುದೆಂದೂ, ಅವನು ಸೆರೆಯಿಂದ ಬಂದವರ ಕೂಟದಿಂದ ಬಹಿಷ್ಕೃತನಾಗುವನು ಎಂದೂ ಪ್ರಕಟಿಸಿದರು.
וַיִּקָּבְצוּ כָל־אַנְשֵֽׁי־יְהוּדָה וּבִנְיָמִן ׀ יְרוּשָׁלִַם לִשְׁלֹשֶׁת הַיָּמִים הוּא חֹדֶשׁ הַתְּשִׁיעִי בְּעֶשְׂרִים בַּחֹדֶשׁ וַיֵּשְׁבוּ כָל־הָעָם בִּרְחוֹב בֵּית הָאֱלֹהִים מַרְעִידִים עַל־הַדָּבָר וּמֵהַגְּשָׁמִֽים׃ 9
ಆಗ ಯೆಹೂದ ಮತ್ತು ಬೆನ್ಯಾಮೀನಿನ ಮನುಷ್ಯರೆಲ್ಲರೂ ಮೂರು ದಿವಸಗಳೊಳಗೆ ಯೆರೂಸಲೇಮಿನಲ್ಲಿ ಕೂಡಿದರು. ಅದು ಒಂಬತ್ತನೆಯ ತಿಂಗಳ, ಇಪ್ಪತ್ತನೆಯ ದಿವಸವಾಗಿತ್ತು. ಜನರೆಲ್ಲರು ದೇವರ ಆಲಯದ ಬೀದಿಯಲ್ಲಿ ಆ ಕಾರ್ಯಕ್ಕೋಸ್ಕರವೂ, ಮಳೆಗೋಸ್ಕರವೂ ನಡುಗಿ ಕುಳಿತುಕೊಂಡಿದ್ದರು.
וַיָּקָם עֶזְרָא הַכֹּהֵן וַיֹּאמֶר אֲלֵהֶם אַתֶּם מְעַלְתֶּם וַתֹּשִׁיבוּ נָשִׁים נָכְרִיּוֹת לְהוֹסִיף עַל־אַשְׁמַת יִשְׂרָאֵֽל׃ 10
ಆಗ ಯಾಜಕನಾದ ಎಜ್ರನು ಎದ್ದು ಅವರಿಗೆ, “ನೀವು ಇಸ್ರಾಯೇಲರ ಅಪರಾಧವನ್ನು ಅಧಿಕವಾಗಿ ಮಾಡಲು, ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದರಿಂದ ದ್ರೋಹ ಮಾಡಿದಿರಿ.
וְעַתָּה תְּנוּ תוֹדָה לַיהוָה אֱלֹהֵֽי־אֲבֹתֵיכֶם וַעֲשׂוּ רְצוֹנוֹ וְהִבָּֽדְלוּ מֵעַמֵּי הָאָרֶץ וּמִן־הַנָּשִׁים הַנָּכְרִיּֽוֹת׃ 11
ಆದ್ದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಯೆಹೋವ ದೇವರ ಮುಂದೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತದ ಪ್ರಕಾರಮಾಡಿ, ಈ ದೇಶದ ಜನರಿಂದಲೂ, ಅನ್ಯ ಸ್ತ್ರೀಯರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ,” ಎಂದನು.
וַיַּֽעְנוּ כָֽל־הַקָּהָל וַיֹּאמְרוּ קוֹל גָּדוֹל כֵּן כדבריך כִּדְבָרְךָ עָלֵינוּ לַעֲשֽׂוֹת׃ 12
ಆಗ ಸಭೆಯೆಲ್ಲಾ ಉತ್ತರವಾಗಿ ದೊಡ್ಡ ಶಬ್ದದಿಂದ, “ನೀನು ಸರಿಯಾಗಿ ಹೇಳಿದೆ! ನೀನು ಹೇಳಿದ ಪ್ರಕಾರವೇ ನಾವು ಮಾಡಬೇಕು.
אֲבָל הָעָם רָב וְהָעֵת גְּשָׁמִים וְאֵין כֹּחַ לַעֲמוֹד בַּחוּץ וְהַמְּלָאכָה לֹֽא־לְיוֹם אֶחָד וְלֹא לִשְׁנַיִם כִּֽי־הִרְבִּינוּ לִפְשֹׁעַ בַּדָּבָר הַזֶּֽה׃ 13
ಆದರೆ ಜನರು ಅನೇಕರು. ಇದು ಮಳೆಗಾಲವಾಗಿರುವುದರಿಂದ ಹೊರಗೆ ಇರಲಾರೆವು. ಇದಲ್ಲದೆ ಇದು ಒಂದೆರಡು ದಿನಗಳ ಕೆಲಸವಲ್ಲ. ಏಕೆಂದರೆ ಈ ಕಾರ್ಯದಲ್ಲಿ ನಮ್ಮ ಅಪರಾಧವು ದೊಡ್ಡದು.
יַֽעֲמְדוּ־נָא שָׂרֵינוּ לְֽכָל־הַקָּהָל וְכֹל ׀ אֲשֶׁר בֶּעָרֵינוּ הַהֹשִׁיב נָשִׁים נָכְרִיּוֹת יָבֹא לְעִתִּים מְזֻמָּנִים וְעִמָּהֶם זִקְנֵי־עִיר וָעִיר וְשֹׁפְטֶיהָ עַד לְהָשִׁיב חֲרוֹן אַף־אֱלֹהֵינוּ מִמֶּנּוּ עַד לַדָּבָר הַזֶּֽה׃ 14
ಆದಕಾರಣ ದಯಮಾಡಿ ಸಭೆಯ ಎಲ್ಲಾದರಲ್ಲಿ ನಮ್ಮ ಪ್ರಧಾನರು ನಿಲ್ಲಲಿ. ಈ ಕಾರ್ಯದ ನಿಮಿತ್ತ ನಮ್ಮ ದೇವರ ಕಠಿಣ ಕೋಪವು ನಮ್ಮನ್ನು ಬಿಟ್ಟು ಹೋಗುವವರೆಗೆ, ನಮ್ಮ ಪಟ್ಟಣಗಳಲ್ಲಿ ಯಹೂದ್ಯರಲ್ಲದ ಸ್ತ್ರೀಯರನ್ನು ತೆಗೆದುಕೊಂಡವರು, ನೇಮಿಸಿದ ಕಾಲದಲ್ಲಿ ಬಂದು, ಅವರ ಸಂಗಡ ಪ್ರತಿ ಪಟ್ಟಣದ ಹಿರಿಯರೂ, ಅದರ ನ್ಯಾಯಾಧಿಪತಿಗಳೂ ಇರಲಿ,” ಎಂದರು.
אַךְ יוֹנָתָן בֶּן־עֲשָׂהאֵל וְיַחְזְיָה בֶן־תִּקְוָה עָמְדוּ עַל־זֹאת וּמְשֻׁלָּם וְשַׁבְּתַי הַלֵּוִי עֲזָרֻֽם׃ 15
ಆದರೆ ಅಸಾಯೇಲನ ಮಗ ಯೋನಾತಾನ್ ಹಾಗು, ತಿಕ್ವನ ಮಗ ಯಹ್ಜೆಯ ಇದನ್ನು ವಿರೋಧಿಸಿದರು. ಮೆಷುಲ್ಲಾಮನೂ ಲೇವಿಯನಾದ ಶಬ್ಬೆತೈನೂ ಅವರನ್ನು ಬೆಂಬಲಿಸಿದರು.
וַיּֽ͏ַעֲשׂוּ־כֵן בְּנֵי הַגּוֹלָה וַיִּבָּדְלוּ עֶזְרָא הַכֹּהֵן אֲנָשִׁים רָאשֵׁי הָאָבוֹת לְבֵית אֲבֹתָם וְכֻלָּם בְּשֵׁמוֹת וַיֵּשְׁבוּ בְּיוֹם אֶחָד לַחֹדֶשׁ הָעֲשִׂירִי לְדַרְיוֹשׁ הַדָּבָֽר׃ 16
ಸೆರೆಯಿಂದ ಬಂದವರು ಇದೇ ಪ್ರಕಾರ ಮಾಡಿದರು. ಆದ್ದರಿಂದ ಯಾಜಕ ಎಜ್ರನು, ಕುಟುಂಬಗಳ ಮುಖ್ಯಸ್ಥರನ್ನಾಗಿ ಕುಟುಂಬಕ್ಕೆ ಒಬ್ಬೊಬ್ಬರನ್ನು ಆಯ್ದುಕೊಂಡನು. ಅವರನ್ನು ಹೆಸರು ಹಿಡಿದು ನೇಮಿಸಿದನು. ಈ ಕಾರ್ಯವನ್ನು ಶೋಧಿಸಲು ಹತ್ತನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಕುಳಿತುಕೊಂಡರು.
וַיְכַלּוּ בַכֹּל אֲנָשִׁים הַהֹשִׁיבוּ נָשִׁים נָכְרִיּוֹת עַד יוֹם אֶחָד לַחֹדֶשׁ הָרִאשֽׁוֹן׃ 17
ಅನ್ಯ ಸ್ತ್ರೀಯರನ್ನು ಹೊಂದಿದವರೆಲ್ಲರ ಕಾರ್ಯವನ್ನು ಮೊದಲನೆಯ ತಿಂಗಳ, ಮೊದಲನೆಯ ದಿವಸದಲ್ಲಿ ಮುಗಿಸಿದರು.
וַיִּמָּצֵא מִבְּנֵי הַכֹּהֲנִים אֲשֶׁר הֹשִׁיבוּ נָשִׁים נָכְרִיּוֹת מִבְּנֵי יֵשׁוּעַ בֶּן־יֽוֹצָדָק וְאֶחָיו מַֽעֲשֵׂיָה וֽ͏ֶאֱלִיעֶזֶר וְיָרִיב וּגְדַלְיָֽה׃ 18
ಯಾಜಕರ ವಂಶಜರಲ್ಲಿ ಅನ್ಯ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು ಯಾರೆಂದರೆ: ಯೋಚಾದಾಕನ ಮಗ ಯೇಷೂವನು ಮತ್ತು ಅವನ ಸಹೋದರರಲ್ಲಿ: ಮಾಸೇಯನು, ಎಲೀಯೆಜೆರನು, ಯಾರೀಬನು, ಗೆದಲ್ಯನು.
וַיִּתְּנוּ יָדָם לְהוֹצִיא נְשֵׁיהֶם וַאֲשֵׁמִים אֵֽיל־צֹאן עַל־אַשְׁמָתָֽם׃ 19
ಇವರು ತಮ್ಮ ಹೆಂಡತಿಯರನ್ನು ಹೊರಡಿಸಿಬಿಡುವೆವೆಂದು ಪ್ರತಿಜ್ಞೆ ಮಾಡಿ, ತಾವು ಅಪರಾಧಸ್ಥರಾದ್ದರಿಂದ ಅಪರಾಧ ಕಳೆಯುವುದಕ್ಕೆ ಮಂದೆಯಿಂದ ತಂದ ಒಂದು ಟಗರನ್ನು ಅರ್ಪಿಸಿದರು.
וּמִבְּנֵי אִמֵּר חֲנָנִי וּזְבַדְיָֽה׃ 20
ಇಮ್ಮೇರನ ವಂಶಜರಲ್ಲಿ: ಹನಾನೀ, ಜೆಬದ್ಯ.
וּמִבְּנֵי חָרִם מַעֲשֵׂיָה וְאֵֽלִיָּה וּֽשְׁמַֽעְיָה וִיחִיאֵל וְעֻזִיָּֽה׃ 21
ಹಾರಿಮನ ವಂಶಜರಲ್ಲಿ: ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ.
וּמִבְּנֵי פַּשְׁחוּר אֶלְיוֹעֵינַי מַֽעֲשֵׂיָה יִשְׁמָעֵאל נְתַנְאֵל יוֹזָבָד וְאֶלְעָשָֽׂה׃ 22
ಪಷ್ಹೂರನ ವಂಶಜರಲ್ಲಿ: ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೆಯೇಲ್, ಯೋಜಾಬಾದ್ ಮತ್ತು ಎಲ್ಲಾಸ.
וּמִֽן־הַלְוִיִּם יוֹזָבָד וְשִׁמְעִי וְקֵֽלָיָה הוּא קְלִיטָא פְּתַֽחְיָה יְהוּדָה וֶאֱלִיעֶֽזֶר׃ 23
ಲೇವಿಯರಲ್ಲಿ ಯೋಜಾಬಾದ್, ಶಿಮ್ಮೀ, ಕೆಲೀಟನೆಂಬ ಕೇಲಾಯ, ಪೆತಹ್ಯ, ಯೆಹೂದ, ಎಲೀಯೆಜೆರ್.
וּמִן־הַמְשֹׁרְרִים אֶלְיָשִׁיב וּמִן־הַשֹּׁעֲרִים שַׁלֻּם וָטֶלֶם וְאוּרִֽי׃ 24
ಹಾಡುಗಾರರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್, ಊರಿ.
וּמִֽיִּשְׂרָאֵל מִבְּנֵי פַרְעֹשׁ רַמְיָה וְיִזִּיָּה וּמַלְכִּיָּה וּמִיָּמִן וְאֶלְעָזָר וּמַלְכִּיָּה וּבְנָיָֽה׃ 25
ಇಸ್ರಾಯೇಲರಲ್ಲಿ: ಪರೋಷನ ವಂಶಜರಲ್ಲಿ: ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯಾಮಿನ್, ಎಲಿಯಾಜರ್, ಮಲ್ಕೀಯ, ಬೆನಾಯ.
וּמִבְּנֵי עֵילָם מַתַּנְיָה זְכַרְיָה וִיחִיאֵל וְעַבְדִּי וִירֵמוֹת וְאֵלִיָּֽה׃ 26
ಏಲಾಮನ ವಂಶಜರಲ್ಲಿ: ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೀಮೋತ್, ಎಲೀಯ.
וּמִבְּנֵי זַתּוּא אֶלְיוֹעֵנַי אֶלְיָשִׁיב מַתַּנְיָה וִֽירֵמוֹת וְזָבָד וַעֲזִיזָֽא׃ 27
ಜತ್ತೂ ವಂಶಜರಲ್ಲಿ: ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೀಮೋತ್, ಜಾಬಾದ್ ಮತ್ತು ಅಜೀಜಾ.
וּמִבְּנֵי בֵּבָי יְהוֹחָנָן חֲנַנְיָה זַבַּי עַתְלָֽי׃ 28
ಬೇಬೈನ ವಂಶಜರಲ್ಲಿ: ಯೆಹೋಹಾನಾನ್, ಹನನ್ಯ, ಜಬ್ಬೈ, ಅತ್ಲೈ.
וּמִבְּנֵי בָּנִי מְשֻׁלָּם מַלּוּךְ וַעֲדָיָה יָשׁוּב וּשְׁאָל ירמות וְרָמֽוֹת׃ 29
ಬಾನೀ ವಂಶಜರಲ್ಲಿ: ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.
וּמִבְּנֵי פַּחַת מוֹאָב עַדְנָא וּכְלָל בְּנָיָה מַעֲשֵׂיָה מַתַּנְיָה בְצַלְאֵל וּבִנּוּי וּמְנַשֶּֽׁה׃ 30
ಪಹತ್ ಮೋವಾಬಿನ ವಂಶಜರಲ್ಲಿ: ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲಯೇಲ್, ಬಿನ್ನೂಯ್, ಮನಸ್ಸೆ.
וּבְנֵי חָרִם אֱלִיעֶזֶר יִשִּׁיָּה מַלְכִּיָּה שְׁמַֽעְיָה שִׁמְעֽוֹן׃ 31
ಹಾರಿಮನ ವಂಶಜರಲ್ಲಿ: ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
בְּנְיָמִן מַלּוּךְ שְׁמַרְיָֽה׃ 32
ಬೆನ್ಯಾಮೀನ್, ಮಲ್ಲೂಕ್, ಶೆಮರ್ಯ.
מִבְּנֵי חָשֻׁם מַתְּנַי מַתַּתָּה זָבָד אֱלִיפֶלֶט יְרֵמַי מְנַשֶּׁה שִׁמְעִֽי׃ 33
ಹಾಷುಮ್ ವಂಶಜರಲ್ಲಿ: ಮತ್ತೆನೈ, ಮತ್ತತ್ತ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ, ಶಿಮ್ಮೀ.
מִבְּנֵי בָנִי מַעֲדַי עַמְרָם וְאוּאֵֽל׃ 34
ಬಾನೀ ವಂಶಜರಲ್ಲಿ: ಮಾದೈ, ಅಮ್ರಾಮ್, ಉಯೇಲ್,
בְּנָיָה בֵדְיָה כלהי כְּלֽוּהוּ׃ 35
ಬೆನಾಯ, ಬೇದೆಯ, ಕೆಲೂಹಿ.
וַנְיָה מְרֵמוֹת אֶלְיָשִֽׁיב׃ 36
ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
מַתַּנְיָה מַתְּנַי ויעשו וְיַעֲשָֽׂי׃ 37
ಮತ್ತನ್ಯ, ಮತ್ತೆನೈ, ಯಾಸೈ.
וּבָנִי וּבִנּוּי שִׁמְעִֽי׃ 38
ಬಾನೀ, ಬಿನ್ನೂಯ್ ವಂಶಜರಲ್ಲಿ: ಶಿಮ್ಮೀ,
וְשֶֽׁלֶמְיָה וְנָתָן וַעֲדָיָֽה׃ 39
ಶೆಲೆಮ್ಯ, ನಾತಾನ್, ಅದಾಯ,
מַכְנַדְבַי שָׁשַׁי שָׁרָֽי׃ 40
ಮಕ್ನದೆಬೈ, ಶಾಷೈ, ಶಾರೈ,
עֲזַרְאֵל וְשֶׁלֶמְיָהוּ שְׁמַרְיָֽה׃ 41
ಅಜರಯೇಲ್, ಶೆಲೆಮ್ಯ, ಶೆಮರ್ಯ,
שַׁלּוּם אֲמַרְיָה יוֹסֵֽף׃ 42
ಶಲ್ಲೂಮ್, ಅಮರ್ಯ, ಯೋಸೇಫ್.
מִבְּנֵי נְבוֹ יְעִיאֵל מַתִּתְיָה זָבָד זְבִינָא ידו יַדַּי וְיוֹאֵל בְּנָיָֽה׃ 43
ನೆಬೋ ವಂಶಜರಲ್ಲಿ: ಯೆಹಿಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋಯೇಲ್ ಮತ್ತು ಬೆನಾಯ.
כָּל־אֵלֶּה נשאי נָשְׂאוּ נָשִׁים נָכְרִיּוֹת וְיֵשׁ מֵהֶם נָשִׁים וַיָּשִׂימוּ בָּנִֽים׃ 280 10 4 4 44
ಇವರೆಲ್ಲರು ಅನ್ಯ ಸ್ತ್ರೀಯರನ್ನು ಮದುವೆಯಾಗಿದ್ದರು. ಇವರಲ್ಲಿ ಕೆಲವರಿಗೆ ಈ ಹೆಂಡತಿಯರಿಂದ ಮಕ್ಕಳಾಗಿದ್ದರು.

< עזרא 10 >