< דברים 14 >
בָּנִים אַתֶּם לַֽיהוָה אֱלֹהֵיכֶם לֹא תִתְגֹּֽדְדוּ וְלֹֽא־תָשִׂימוּ קָרְחָה בֵּין עֵינֵיכֶם לָמֵֽת׃ | 1 |
ನೀವು ನಿಮ್ಮ ದೇವರಾದ ಯೆಹೋವ ದೇವರ ಮಕ್ಕಳು. ನೀವು ಸತ್ತವರಿಗೋಸ್ಕರ ಗಾಯಮಾಡಿಕೊಳ್ಳಬಾರದು. ಮುಂದಲೆಯನ್ನು ಬೋಳಿಸಿಕೊಳ್ಳಬಾರದು.
כִּי עַם קָדוֹשׁ אַתָּה לַיהוָה אֱלֹהֶיךָ וּבְךָ בָּחַר יְהוָה לִֽהְיוֹת לוֹ לְעַם סְגֻלָּה מִכֹּל הָֽעַמִּים אֲשֶׁר עַל־פְּנֵי הָאֲדָמָֽה׃ | 2 |
ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ, ಯೆಹೋವ ದೇವರು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ನಿಮ್ಮನ್ನೇ ತಮ್ಮ ಅಮೂಲ್ಯವಾದ ಆಸ್ತಿಯಾಗಿ ಆಯ್ದುಕೊಂಡಿದ್ದಾರೆ.
לֹא תֹאכַל כָּל־תּוֹעֵבָֽה׃ | 3 |
ಅಸಹ್ಯವಾದ ಯಾವುದನ್ನಾದರೂ ತಿನ್ನಬಾರದು.
זֹאת הַבְּהֵמָה אֲשֶׁר תֹּאכֵלוּ שׁוֹר שֵׂה כְשָׂבִים וְשֵׂה עִזִּֽים׃ | 4 |
ನೀವು ತಿನ್ನಬಹುದಾದ ಪ್ರಾಣಿಗಳು ಯಾವವಂದರೆ: ಎತ್ತು, ಕುರಿ, ಮೇಕೆ,
אַיָּל וּצְבִי וְיַחְמוּר וְאַקּוֹ וְדִישֹׁן וּתְאוֹ וָזָֽמֶר׃ | 5 |
ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ ಇವುಗಳೇ.
וְכָל־בְּהֵמָה מַפְרֶסֶת פַּרְסָה וְשֹׁסַעַת שֶׁסַע שְׁתֵּי פְרָסוֹת מַעֲלַת גֵּרָה בַּבְּהֵמָה אֹתָהּ תֹּאכֵֽלוּ׃ | 6 |
ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ, ಅದು ಮೆಲುಕು ಹಾಕುವಂಥಾದ್ದಾದರೆ ಅದರ ಮಾಂಸವನ್ನು ತಿನ್ನಬಹುದು.
אַךְ אֶת־זֶה לֹא תֹֽאכְלוּ מִמּֽ͏ַעֲלֵי הַגֵּרָה וּמִמַּפְרִיסֵי הַפַּרְסָה הַשְּׁסוּעָה אֶֽת־הַגָּמָל וְאֶת־הָאַרְנֶבֶת וְאֶת־הַשָּׁפָן כִּֽי־מַעֲלֵה גֵרָה הֵמָּה וּפַרְסָה לֹא הִפְרִיסוּ טְמֵאִים הֵם לָכֶֽם׃ | 7 |
ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ, ಒಂಟೆ, ಮೊಲ, ಬೆಟ್ಟದ ಮೊಲ ಇವು ಮೆಲುಕು ಹಾಕುವಂಥವುಗಳಾದರೂ, ಸೀಳುಗೊರಸು ಇಲ್ಲವಾದದ್ದರಿಂದ ಅವು ನಿಮಗೆ ಅಶುದ್ಧ.
וְאֶת־הַחֲזִיר כִּֽי־מַפְרִיס פַּרְסָה הוּא וְלֹא גֵרָה טָמֵא הוּא לָכֶם מִבְּשָׂרָם לֹא תֹאכֵלוּ וּבְנִבְלָתָם לֹא תִגָּֽעוּ׃ | 8 |
ಹಂದಿಯನ್ನು ತಿನ್ನಬಾರದು. ಏಕೆಂದರೆ ಅದು ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲ. ಅದು ನಿಮಗೆ ಅಶುದ್ಧವೇ. ಅವುಗಳ ಮಾಂಸವನ್ನು ನೀವು ತಿನ್ನಬಾರದು, ಅವುಗಳ ಹೆಣವನ್ನು ಮುಟ್ಟಬಾರದು.
אֶת־זֶה תֹּֽאכְלוּ מִכֹּל אֲשֶׁר בַּמָּיִם כֹּל אֲשֶׁר־לוֹ סְנַפִּיר וְקַשְׂקֶשֶׂת תֹּאכֵֽלוּ׃ | 9 |
ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ನೀವು ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು.
וְכֹל אֲשֶׁר אֵֽין־לוֹ סְנַפִּיר וְקַשְׂקֶשֶׂת לֹא תֹאכֵלוּ טָמֵא הוּא לָכֶֽם׃ | 10 |
ಆದರೆ ರೆಕ್ಕಗಳೂ ಪೊರೆಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು. ಅವು ನಿಮಗೆ ಅಶುದ್ಧ.
כָּל־צִפּוֹר טְהֹרָה תֹּאכֵֽלוּ׃ | 11 |
ಶುದ್ಧವಾದ ಎಲ್ಲಾ ಪಕ್ಷಿಗಳನ್ನು ತಿನ್ನಬಹುದು.
וְזֶה אֲשֶׁר לֹֽא־תֹאכְלוּ מֵהֶם הַנֶּשֶׁר וְהַפֶּרֶס וְהָֽעָזְנִיָּֽה׃ | 12 |
ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ಬೆಟ್ಟದಹದ್ದು, ಕಪ್ಪು ರಣಹದ್ದು,
וְהָרָאָה וְאֶת־הָאַיָּה וְהַדַּיָּה לְמִינָֽהּ׃ | 13 |
ಗಿಡುಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು,
וְאֵת כָּל־עֹרֵב לְמִינֽוֹ׃ | 14 |
ಸಕಲವಿಧವಾದ ಕಾಗೆ,
וְאֵת בַּת הַֽיַּעֲנָה וְאֶת־הַתַּחְמָס וְאֶת־הַשָּׁחַף וְאֶת־הַנֵּץ לְמִינֵֽהוּ׃ | 15 |
ಉಷ್ಟ್ರಪಕ್ಷಿ, ಉಲೂಕ, ಚೀರು ಗೂಬೆ, ಕಡಲ ಹಕ್ಕಿ, ಸಕಲವಿಧವಾದ ಡೇಗೆ,
אֶת־הַכּוֹס וְאֶת־הַיַּנְשׁוּף וְהַתִּנְשָֽׁמֶת׃ | 16 |
ಸಣ್ಣ ಗೂಬೆ, ದೊಡ್ಡ ಗೂಬೆ, ಬಿಳಿಗೂಬೆ,
וְהַקָּאָת וְאֶֽת־הָרָחָמָה וְאֶת־הַשָּׁלָֽךְ׃ | 17 |
ಮರಳುಗಾಡು ಗೂಬೆ, ರಣಹದ್ದು, ನೀರು ಕೋಳಿ,
וְהַחֲסִידָה וְהָאֲנָפָה לְמִינָהּ וְהַדּוּכִיפַת וְהָעֲטַלֵּֽף׃ | 18 |
ಕೊಕ್ಕರೆ, ನೀರುಕಾಗೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ.
וְכֹל שֶׁרֶץ הָעוֹף טָמֵא הוּא לָכֶם לֹא יֵאָכֵֽלוּ׃ | 19 |
ಇದಲ್ಲದೆ ಹಾರುವ ಎಲ್ಲಾ ಕ್ರಿಮಿಕೀಟಗಳು ನಿಮಗೆ ಅಶುದ್ಧವೇ. ಅವುಗಳನ್ನು ತಿನ್ನಬಾರದು.
כָּל־עוֹף טָהוֹר תֹּאכֵֽלוּ׃ | 20 |
ಶುದ್ಧವಾದ ಎಲ್ಲಾ ರೆಕ್ಕೆ ಉಳ್ಳ ಪಕ್ಷಿಗಳನ್ನು ತಿನ್ನಬಹುದು.
לֹא תֹאכְלוּ כָל־נְבֵלָה לַגֵּר אֲשֶׁר־בִּשְׁעָרֶיךָ תִּתְּנֶנָּה וַאֲכָלָהּ אוֹ מָכֹר לְנָכְרִי כִּי עַם קָדוֹשׁ אַתָּה לַיהוָה אֱלֹהֶיךָ לֹֽא־תְבַשֵּׁל גְּדִי בַּחֲלֵב אִמּֽוֹ׃ | 21 |
ತಾನೇ ಸತ್ತ ಯಾವುದನ್ನೂ ತಿನ್ನಬಾರದು. ನಿಮ್ಮ ಊರಲ್ಲಿರುವ ಅನ್ಯನಿಗೆ ತಿನ್ನಲು ಕೊಡಬಹುದು ಇಲ್ಲವೆ ಪರದೇಶದವನಿಗೆ ಮಾರಬಹುದು. ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ. ಮೇಕೆಯ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಕುದಿಸಬಾರದು.
עַשֵּׂר תְּעַשֵּׂר אֵת כָּל־תְּבוּאַת זַרְעֶךָ הַיֹּצֵא הַשָּׂדֶה שָׁנָה שָׁנָֽה׃ | 22 |
ನೀವು ಬಿತ್ತುವ ಹೊಲದಲ್ಲಿ ವರ್ಷ ವರ್ಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.
וְאָכַלְתָּ לִפְנֵי ׀ יְהוָה אֱלֹהֶיךָ בַּמָּקוֹם אֲשֶׁר־יִבְחַר לְשַׁכֵּן שְׁמוֹ שָׁם מַעְשַׂר דְּגָֽנְךָ תִּֽירֹשְׁךָ וְיִצְהָרֶךָ וּבְכֹרֹת בְּקָרְךָ וְצֹאנֶךָ לְמַעַן תִּלְמַד לְיִרְאָה אֶת־יְהוָה אֱלֹהֶיךָ כָּל־הַיָּמִֽים׃ | 23 |
ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ದಶಮಾಂಶವನ್ನೂ ನಿಮ್ಮ ದನಕುರಿಗಳಲ್ಲಿ ಚೊಚ್ಚಲುಗಳನ್ನೂ ನಿಮ್ಮ ದೇವರಾದ ಯೆಹೋವ ದೇವರ ಮುಂದೆ ತಮ್ಮ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ದೇವರೇ ಆಯ್ದುಕೊಂಡ ಸ್ಥಳದಲ್ಲಿ ತಿನ್ನಬೇಕು. ಇದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಎಂದೆಂದಿಗೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಕಲಿಯುವಿರಿ.
וְכִֽי־יִרְבֶּה מִמְּךָ הַדֶּרֶךְ כִּי לֹא תוּכַל שְׂאֵתוֹ כִּֽי־יִרְחַק מִמְּךָ הַמָּקוֹם אֲשֶׁר יִבְחַר יְהוָה אֱלֹהֶיךָ לָשׂוּם שְׁמוֹ שָׁם כִּי יְבָרֶכְךָ יְהוָה אֱלֹהֶֽיךָ׃ | 24 |
ನೀವು ಕಾಣಿಕೆಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿಮಗೆ ದಾರಿ ದೂರವಾಗಿದ್ದರೆ, ಅಥವಾ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಹೆಸರನ್ನು ಸ್ಥಾಪಿಸುವುದಕ್ಕೆ ಆಯ್ದುಕೊಂಡ ಸ್ಥಳವು ನಿಮಗೆ ದೂರವಾಗಿದ್ದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಿದ ಕಾಲದಲ್ಲಿ,
וְנָתַתָּה בַּכָּסֶף וְצַרְתָּ הַכֶּסֶף בְּיָדְךָ וְהָֽלַכְתָּ אֶל־הַמָּקוֹם אֲשֶׁר יִבְחַר יְהוָה אֱלֹהֶיךָ בּֽוֹ׃ | 25 |
ಅವುಗಳನ್ನು ಮಾರಿ ಹಣವನ್ನಾಗಿ ಮಾರ್ಪಡಿಸಿ, ಆ ಹಣವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು, ನಿಮ್ಮ ದೇವರಾದ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಹೋಗಿರಿ.
וְנָתַתָּה הַכֶּסֶף בְּכֹל אֲשֶׁר־תְּאַוֶּה נַפְשְׁךָ בַּבָּקָר וּבַצֹּאן וּבַיַּיִן וּבַשֵּׁכָר וּבְכֹל אֲשֶׁר תִּֽשְׁאָלְךָ נַפְשֶׁךָ וְאָכַלְתָּ שָּׁם לִפְנֵי יְהוָה אֱלֹהֶיךָ וְשָׂמַחְתָּ אַתָּה וּבֵיתֶֽךָ׃ | 26 |
ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ, ಮೊದಲಾದವುಗಳನ್ನು ಹಣದಿಂದ ಕೊಂಡುಕೊಂಡು ನೀವೂ, ನಿಮ್ಮ ಮನೆಯವರೂ, ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವ ದೇವರ ಸನ್ನಿಧಿಯಲ್ಲಿ ಊಟಮಾಡಿ, ಸಂತೋಷವಾಗಿರಬೇಕು.
וְהַלֵּוִי אֲשֶׁר־בִּשְׁעָרֶיךָ לֹא תֽ͏ַעַזְבֶנּוּ כִּי אֵין לוֹ חֵלֶק וְנַחֲלָה עִמָּֽךְ׃ | 27 |
ನಿಮ್ಮ ಊರುಗಳಲ್ಲಿರುವ ಲೇವಿಯರನ್ನು ಕೈಬಿಡಬಾರದು. ಏಕೆಂದರೆ ಅವರಿಗೆ ನಿಮ್ಮ ಸಂಗಡ ಪಾಲೂ, ಸೊತ್ತೂ ಇಲ್ಲ.
מִקְצֵה ׀ שָׁלֹשׁ שָׁנִים תּוֹצִיא אֶת־כָּל־מַעְשַׂר תְּבוּאָתְךָ בַּשָּׁנָה הַהִוא וְהִנַּחְתָּ בִּשְׁעָרֶֽיךָ׃ | 28 |
ಪ್ರತಿ ಮೂರು ವರ್ಷಗಳ ಅಂತ್ಯದಲ್ಲಿ ಆಯಾ ವರ್ಷದಲ್ಲಿ ನಿಮಗೆ ಸಿಕ್ಕಿದ ಹುಟ್ಟುವಳಿಯ ದಶಮಭಾಗವನ್ನೆಲ್ಲಾ ಹೊರಗೆ ತಂದು ನಿಮ್ಮ ಊರಲ್ಲಿಯೇ ಕೂಡಿಸಬೇಕು.
וּבָא הַלֵּוִי כִּי אֵֽין־לוֹ חֵלֶק וְנַחֲלָה עִמָּךְ וְהַגֵּר וְהַיָּתוֹם וְהָֽאַלְמָנָה אֲשֶׁר בִּשְׁעָרֶיךָ וְאָכְלוּ וְשָׂבֵעוּ לְמַעַן יְבָרֶכְךָ יְהוָה אֱלֹהֶיךָ בְּכָל־מַעֲשֵׂה יָדְךָ אֲשֶׁר תַּעֲשֶֽׂה׃ | 29 |
ಆಗ ನಿಮ್ಮ ಸಂಗಡ ಪಾಲನ್ನೂ, ಸೊತ್ತನ್ನೂ ಹೊಂದದ ಲೇವಿಯರೂ, ನಿಮ್ಮ ಊರಲ್ಲಿರುವ ಅನ್ಯದೇಶದವರೂ, ದಿಕ್ಕಿಲ್ಲದವರೂ, ವಿಧವೆಯರೂ ಬಂದು ತಿಂದು ತೃಪ್ತರಾಗಲಿ. ಆಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನೂ, ನೀವು ಮಾಡುವ ಎಲ್ಲಾ ಪ್ರಯತ್ನಗಳನ್ನೂ ಆಶೀರ್ವದಿಸುವರು.