< דברי הימים א 23 >

וְדָוִיד זָקֵן וְשָׂבַע יָמִים וַיַּמְלֵךְ אֶת־שְׁלֹמֹה בְנוֹ עַל־יִשְׂרָאֵֽל׃ 1
ದಾವೀದನು ವಯೋವೃದ್ಧನಾಗಿ ತನ್ನ ಜೀವಮಾನದ ಕೊನೆಯ ದಿನಗಳಲ್ಲಿ ತನ್ನ ಮಗನಾದ ಸೊಲೊಮೋನನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸಿದನು.
וַיֶּאֱסֹף אֶת־כָּל־שָׂרֵי יִשְׂרָאֵל וְהַכֹּהֲנִים וְהַלְוִיִּֽם׃ 2
ಅವನು ಇಸ್ರಾಯೇಲರ ಎಲ್ಲಾ ಅಧಿಪತಿಗಳನ್ನೂ, ಯಾಜಕರನ್ನೂ ಮತ್ತು ಲೇವಿಯರನ್ನೂ ತನ್ನ ಬಳಿಯಲ್ಲಿ ಒಟ್ಟುಗೂಡಿಸಿದನು.
וַיִּסָּֽפְרוּ הַלְוִיִּם מִבֶּן שְׁלֹשִׁים שָׁנָה וָמָעְלָה וַיְהִי מִסְפָּרָם לְגֻלְגְּלֹתָם לִגְבָרִים שְׁלֹשִׁים וּשְׁמוֹנָה אָֽלֶף׃ 3
ಮೂವತ್ತು ವರ್ಷಕ್ಕಿಂತ ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆಯು ಮೂವತ್ತೆಂಟು ಸಾವಿರವಾಗಿತ್ತು.
מֵאֵלֶּה לְנַצֵּחַ עַל־מְלֶאכֶת בֵּית־יְהוָה עֶשְׂרִים וְאַרְבָּעָה אָלֶף וְשֹׁטְרִים וְשֹׁפְטִים שֵׁשֶׁת אֲלָפִֽים׃ 4
ದಾವೀದನು ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತ ನಾಲ್ಕು ಸಾವಿರ ಜನರನ್ನು ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ ಜನರನ್ನು,
וְאַרְבַּעַת אֲלָפִים שֹׁעֲרִים וְאַרְבַּעַת אֲלָפִים מְהַֽלְלִים לַיהוָה בַּכֵּלִים אֲשֶׁר עָשִׂיתִי לְהַלֵּֽל׃ 5
ದ್ವಾರಪಾಲಕರನ್ನಾಗಿ, ನಾಲ್ಕು ಸಾವಿರ ಜನರನ್ನು ಮತ್ತು ತಾನು ಸಿದ್ಧಪಡಿಸಿದ ವಾದ್ಯಗಳಿಂದ ಯೆಹೋವನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನೂ ನೇಮಿಸಿದನು.
וַיֶּֽחָלְקֵם דָּוִיד מַחְלְקוֹת לִבְנֵי לֵוִי לְגֵרְשׁוֹן קְהָת וּמְרָרִֽי׃ 6
ಇದಲ್ಲದೆ ದಾವೀದನು ಲೇವಿಯ ಸಂತಾನದವರಾದ ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು ಇವರನ್ನು ವಿವಿಧ ವರ್ಗಗಳನ್ನಾಗಿ ವಿಭಾಗಿಸಿದನು.
לַגֵּרְשֻׁנִּי לַעְדָּן וְשִׁמְעִֽי׃ 7
ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಮತ್ತು ಶಿಮ್ಮೀ ಎಂಬುವರು.
בְּנֵי לַעְדָּן הָרֹאשׁ יְחִיאֵל וְזֵתָם וְיוֹאֵל שְׁלֹשָֽׁה׃ 8
ಲದ್ದಾನನಿಗೆ ಪ್ರಧಾನನಾದ ಯೆಹೀಯೇಲ್, ಜೇತಾಮ್ ಮತ್ತು ಯೋವೇಲ್ ಎಂಬ ಮೂರು ಮಕ್ಕಳಿದ್ದರು.
בְּנֵי שִׁמְעִי שלמות שְׁלוֹמִית וַחֲזִיאֵל וְהָרָן שְׁלֹשָׁה אֵלֶּה רָאשֵׁי הָאָבוֹת לְלַעְדָּֽן׃ 9
ಶಿಮ್ಮೀಗೆ ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಕ್ಕಳಿದ್ದರು. ಇವರು ಲದ್ದಾನ್ಯರ ಗೋತ್ರ ಪ್ರಧಾನರು.
וּבְנֵי שִׁמְעִי יַחַת זִינָא וִיעוּשׁ וּבְרִיעָה אֵלֶּה בְנֵי־שִׁמְעִי אַרְבָּעָֽה׃ 10
೧೦ಶಿಮ್ಮೀಗೆ ಯಹತ್, ಜೀನ, ಯೆಯೂಷ್ ಮತ್ತು ಬೆರೀಯ ಎಂಬ ನಾಲ್ಕು ಮಕ್ಕಳಿದ್ದರು.
וַֽיְהִי־יַחַת הָרֹאשׁ וְזִיזָה הַשֵּׁנִי וִיעוּשׁ וּבְרִיעָה לֹֽא־הִרְבּוּ בָנִים וַיִּֽהְיוּ לְבֵית אָב לִפְקֻדָּה אֶחָֽת׃ 11
೧೧ಯಹತನು ಪ್ರಧಾನನು, ಜೀಜನು ಎರಡನೆಯವನಾಗಿದ್ದನು, ಯೆಯೂಷ್, ಬೆರೀಯರಿಗೆ ಹೆಚ್ಚು ಮಕ್ಕಳಿರಲಿಲ್ಲವಾದುದರಿಂದ ಅವರಿಬ್ಬರೂ ಒಂದೇ ಕುಟುಂಬವಾಗಿ ವರ್ಗವಾಗಿಯೂ ಎಣಿಸಲ್ಪಟ್ಟಿದ್ದರು.
בְּנֵי קְהָת עַמְרָם יִצְהָר חֶבְרוֹן וְעֻזִּיאֵל אַרְבָּעָֽה׃ 12
೧೨ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಎಂಬ ನಾಲ್ಕು ಮಕ್ಕಳಿದ್ದರು.
בְּנֵי עַמְרָם אַהֲרֹן וּמֹשֶׁה וַיִּבָּדֵל אַהֲרֹן לְֽהַקְדִּישׁוֹ קֹדֶשׁ קָֽדָשִׁים הֽוּא־וּבָנָיו עַד־עוֹלָם לְהַקְטִיר לִפְנֵי יְהוָה לְשָׁרְתוֹ וּלְבָרֵךְ בִּשְׁמוֹ עַד־עוֹלָֽם׃ 13
೧೩ಅಮ್ರಾಮನ ಮಕ್ಕಳು ಆರೋನ್ ಮತ್ತು ಮೋಶೆ ಎಂಬುವವರು. ಆರೋನನು ಅವನ ಸಂತಾನದವರು ಮಹಾ ಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು. ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಆತನ ಸೇವೆ ಮಾಡುವವರೂ, ಆತನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.
וּמֹשֶׁה אִישׁ הָאֱלֹהִים בָּנָיו יִקָּרְאוּ עַל־שֵׁבֶט הַלֵּוִֽי׃ 14
೧೪ದೇವರ ಮನುಷ್ಯನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಎಣಿಸಲ್ಪಟ್ಟರು.
בְּנֵי מֹשֶׁה גֵּרְשֹׁם וֶאֱלִיעֶֽזֶר׃ 15
೧೫ಮೋಶೆಯ ಮಕ್ಕಳು ಗೇರ್ಷೋಮ್ ಮತ್ತು ಎಲೀಯೆಜೆರ್ ಎಂಬುವವರು.
בְּנֵי גֵרְשׁוֹם שְׁבוּאֵל הָרֹֽאשׁ׃ 16
೧೬ಪ್ರಧಾನನಾದ ಶೆಬೂವೇಲನು ಗೇರ್ಷೋಮನ ಮಗನು.
וַיִּֽהְיוּ בְנֵי־אֱלִיעֶזֶר רְחַבְיָה הָרֹאשׁ וְלֹא־הָיָה לֶאֱלִיעֶזֶר בָּנִים אֲחֵרִים וּבְנֵי רְחַבְיָה רָבוּ לְמָֽעְלָה׃ 17
೧೭ಪ್ರಧಾನನಾದ ರೆಹಬ್ಯ ಎಲೀಯೆಜೆರನ ಮಗನು. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.
בְּנֵי יִצְהָר שְׁלֹמִית הָרֹֽאשׁ׃ 18
೧೮ಪ್ರಧಾನನಾದ ಶೆಲೋಮೋತನು ಇಚ್ಹಾರನ ಮಗ.
בְּנֵי חֶבְרוֹן יְרִיָּהוּ הָרֹאשׁ אֲמַרְיָה הַשֵּׁנִי יַחֲזִיאֵל הַשְּׁלִישִׁי וִֽיקַמְעָם הָרְבִיעִֽי׃ 19
೧೯ಹೆಬ್ರೋನನ ಮಕ್ಕಳಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.
בְּנֵי עֻזִּיאֵל מִיכָה הָרֹאשׁ וְיִשִּׁיָּה הַשֵּׁנִֽי׃ 20
೨೦ಉಜ್ಜೀಯೇಲನ ಮಕ್ಕಳಲ್ಲಿ ಮೀಕನು ಪ್ರಧಾನನು, ಇಷ್ಷೀಯನು ಎರಡನೆಯವನು.
בְּנֵי מְרָרִי מַחְלִי וּמוּשִׁי בְּנֵי מַחְלִי אֶלְעָזָר וְקִֽישׁ׃ 21
೨೧ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಮತ್ತು ಕೀಷ್.
וַיָּמָת אֶלְעָזָר וְלֹא־הָיוּ לוֹ בָּנִים כִּי אִם־בָּנוֹת וַיִּשָּׂאוּם בְּנֵי־קִישׁ אֲחֵיהֶֽם׃ 22
೨೨ಎಲ್ಲಾಜಾರನು ಗಂಡು ಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು. ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು.
בְּנֵי מוּשִׁי מַחְלִי וְעֵדֶר וִירֵמוֹת שְׁלֹשָֽׁה׃ 23
೨೩ಮೂಷೀಗೆ ಮಹ್ಲೀ, ಏದೆರ್ ಮತ್ತು ಯೆರೇಮೋತ್ ಎಂಬ ಮೂವರು ಮಕ್ಕಳಿದ್ದರು.
אֵלֶּה בְנֵֽי־לֵוִי לְבֵית אֲבֹתֵיהֶם רָאשֵׁי הָאָבוֹת לִפְקוּדֵיהֶם בְּמִסְפַּר שֵׁמוֹת לְגֻלְגְּלֹתָם עֹשֵׂה הַמְּלָאכָה לַעֲבֹדַת בֵּית יְהוָה מִבֶּן עֶשְׂרִים שָׁנָה וָמָֽעְלָה׃ 24
೨೪ಲೇವಿಯರ ಪಟ್ಟಿಯಲ್ಲಿ ಬರೆಯಲ್ಪಟ್ಟ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸುಳ್ಳವರು ಯೆಹೋವನ ಆಲಯದಲ್ಲಿ ಸೇವೆಮಾಡತಕ್ಕವರಾಗಿದ್ದರು.
כִּי אָמַר דָּוִיד הֵנִיחַ יְהוָה אֱלֹהֵֽי־יִשְׂרָאֵל לְעַמּוֹ וַיִּשְׁכֹּן בִּירוּשָׁלַ͏ִם עַד־לְעוֹלָֽם׃ 25
೨೫ಇಸ್ರಾಯೇಲಿನ ದೇವರಾದ ಯೆಹೋವನು, ತನ್ನ ಪ್ರಜೆಗಳಿಗೆ ವಿಶ್ರಾಂತಿಯನ್ನು ಅನುಗ್ರಹಿಸಿ, ಆತನು ಸದಾಕಾಲವೂ ಯೆರೂಸಲೇಮಿನಲ್ಲಿ ವಾಸಿಸುವವನಾದುದರಿಂದ,
וְגַם לַלְוִיִּם אֵין־לָשֵׂאת אֶת־הַמִּשְׁכָּן וְאֶת־כָּל־כֵּלָיו לַעֲבֹדָתֽוֹ׃ 26
೨೬ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ, ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲ ಎಂದು ದಾವೀದನು ಈ ಪ್ರಕಾರ ಆಜ್ಞೆ ವಿಧಿಸಿದನು.
כִּי בְדִבְרֵי דָוִיד הָאַחֲרֹנִים הֵמָּה מִסְפַּר בְּנֵי־לֵוִי מִבֶּן עֶשְׂרִים שָׁנָה וּלְמָֽעְלָה׃ 27
೨೭ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸುಳ್ಳವರೆಲ್ಲರೂ ಪರಿಗಣಿಸಲ್ಪಟ್ಟರು.
כִּי מַעֲמָדָם לְיַד־בְּנֵי אַהֲרֹן לַעֲבֹדַת בֵּית יְהוָה עַל־הַחֲצֵרוֹת וְעַל־הַלְּשָׁכוֹת וְעַֽל־טָהֳרַת לְכָל־קֹדֶשׁ וּמֽ͏ַעֲשֵׂה עֲבֹדַת בֵּית הָאֱלֹהִֽים׃ 28
೨೮ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚಾರಿಕೆಯನ್ನು ನಡೆಸುತ್ತಿದ್ದರು. ಅವರ ಕೆಲಸಗಳು ಯಾವುದೆಂದರೆ, ಅಂಗಳಗಳ ಕೋಣೆಗಳನ್ನು ಸ್ವಚ್ಛಮಾಡಿ ನೋಡಿಕೊಳ್ಳುವುದೂ, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದೂ,
וּלְלֶחֶם הַֽמַּעֲרֶכֶת וּלְסֹלֶת לְמִנְחָה וְלִרְקִיקֵי הַמַּצּוֹת וְלַֽמַּחֲבַת וְלַמֻּרְבָּכֶת וּלְכָל־מְשׂוּרָה וּמִדָּֽה׃ 29
೨೯ದೇವಾಲಯದಲ್ಲಿ ಸೇವೆಮಾಡುವುದೂ, ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯಗಳು ಇವುಗಳನ್ನು ಒದಗಿಸುವುದೂ, ಸೇರು, ಅಳತೆಗೋಲುಗಳನ್ನು ಪರೀಕ್ಷಿಸುವುದೂ,
וְלַעֲמֹד בַּבֹּקֶר בַּבֹּקֶר לְהֹדוֹת וּלְהַלֵּל לַיהוָה וְכֵן לָעָֽרֶב׃ 30
೩೦ಪ್ರತಿದಿನ ಪ್ರಾತಃಕಾಲ ಸಾಯಂಕಾಲಗಳಲ್ಲಿ ನಿಯಮಿತ ಸಂಖ್ಯೆಗೆ ಸರಿಯಾಗಿ
וּלְכֹל הַעֲלוֹת עֹלוֹת לַיהוָה לַשַּׁבָּתוֹת לֶחֳדָשִׁים וְלַמֹּעֲדִים בְּמִסְפָּר כְּמִשְׁפָּט עֲלֵיהֶם תָּמִיד לִפְנֵי יְהוָֽה׃ 31
೩೧ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಯೆಹೋವನ ಮುಂದೆ ತಪ್ಪದೆ ನಡೆಯುವ ಸರ್ವಾಂಗಹೋಮ, ಸಮರ್ಪಣೆಯ ಹೊತ್ತಿನಲ್ಲಿ ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದೂ ಇವೇ.
וְשָׁמְרוּ אֶת־מִשְׁמֶרֶת אֹֽהֶל־מוֹעֵד וְאֵת מִשְׁמֶרֶת הַקֹּדֶשׁ וּמִשְׁמֶרֶת בְּנֵי אַהֲרֹן אֲחֵיהֶם לַעֲבֹדַת בֵּית יְהוָֽה׃ 32
೩೨ಹೀಗೆ ಅವರು ತಮ್ಮ ಸಹೋದರನಾದ ಆರೋನನ ಸಹಾಯಕರಾಗಿದ್ದು ದೇವದರ್ಶನದ ಗುಡಾರವನ್ನೂ, ಪರಿಶುದ್ಧವಾದ ಎಲ್ಲಾ ವಸ್ತುಗಳನ್ನು ನೋಡಿಕೊಳ್ಳುವುದೇ ಯೆಹೋವನ ಆಲಯದಲ್ಲಿ ಮಾಡತಕ್ಕ ಕರ್ತವ್ಯಗಳು.

< דברי הימים א 23 >