< יְחֶזְקֵאל 45 >
וּבְהַפִּֽילְכֶ֨ם אֶת־הָאָ֜רֶץ בְּנַחֲלָ֗ה תָּרִימוּ֩ תְרוּמָ֨ה לַיהוָ֥ה ׀ קֹדֶשׁ֮ מִן־הָאָרֶץ֒ אֹ֗רֶךְ חֲמִשָּׁ֨ה וְעֶשְׂרִ֥ים אֶ֙לֶף֙ אֹ֔רֶךְ וְרֹ֖חַב עֲשָׂ֣רָה אָ֑לֶף קֹדֶשׁ־ה֥וּא בְכָל־גְּבוּלָ֖הּ סָבִֽיב׃ | 1 |
೧ನೀವು ದೇಶವನ್ನು ಸ್ವತ್ತಾಗಿ ಹಂಚುವಾಗ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಬೇಕು. ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ ಇರಲಿ. ಆ ಪ್ರಾಂತ್ಯವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿರಬೇಕು.
יִהְיֶ֤ה מִזֶּה֙ אֶל־הַקֹּ֔דֶשׁ חֲמֵ֥שׁ מֵא֛וֹת בַּחֲמֵ֥שׁ מֵא֖וֹת מְרֻבָּ֣ע סָבִ֑יב וַחֲמִשִּׁ֣ים אַמָּ֔ה מִגְרָ֥שׁ ל֖וֹ סָבִֽיב׃ | 2 |
೨ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವುದು. ಅದರ ಸುತ್ತಲೂ ಐವತ್ತು ಮೊಳ ಅಗಲವಾದ ಭೂಮಿಯು ಇರುವುದು.
וּמִן־הַמִּדָּ֤ה הַזֹּאת֙ תָּמ֔וֹד אֹ֗רֶךְ חֲמִשָּׁ֤ה וְעֶשְׂרִים֙ אֶ֔לֶף וְרֹ֖חַב עֲשֶׂ֣רֶת אֲלָפִ֑ים וּבֽוֹ־יִהְיֶ֥ה הַמִּקְדָּ֖שׁ קֹ֥דֶשׁ קָדָשִֽׁים׃ | 3 |
೩ಮೊದಲು ಅಳೆದ ಕ್ಷೇತ್ರದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಮತ್ತು ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು. ಇದರಲ್ಲಿ ಪರಿಶುದ್ಧವಾದ ಪವಿತ್ರಾಯಲವು ಇರಬೇಕು.
קֹ֣דֶשׁ מִן־הָאָ֜רֶץ ה֗וּא לַכֹּ֨הֲנִ֜ים מְשָׁרְתֵ֤י הַמִּקְדָּשׁ֙ יִֽהְיֶ֔ה הַקְּרֵבִ֖ים לְשָׁרֵ֣ת אֶת־יְהוָ֑ה וְהָיָ֨ה לָהֶ֤ם מָקוֹם֙ לְבָ֣תִּ֔ים וּמִקְדָּ֖שׁ לַמִּקְדָּֽשׁ׃ | 4 |
೪ಇದು ದೇಶದಲ್ಲಿ ಪರಿಶುದ್ಧ ಭಾಗವೂ; ಯೆಹೋವನಿಗೆ ಸೇವೆ ಮಾಡಲು ಸಮೀಪಿಸುವಂತೆ, ಇದು ಪರಿಶುದ್ಧ ಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿಯೂ, ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿಯೂ ಇರುವುದು.
וַחֲמִשָּׁ֨ה וְעֶשְׂרִ֥ים אֶ֙לֶף֙ אֹ֔רֶךְ וַעֲשֶׂ֥רֶת אֲלָפִ֖ים רֹ֑חַב וְֽהָיָ֡ה לַלְוִיִּם֩ מְשָׁרְתֵ֨י הַבַּ֧יִת לָהֶ֛ם לַאֲחֻזָּ֖ה עֶשְׂרִ֥ים לְשָׁכֹֽת׃ | 5 |
೫ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದವೂ ಮತ್ತು ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವುದು.
וַאֲחֻזַּ֨ת הָעִ֜יר תִּתְּנ֗וּ חֲמֵ֤שֶׁת אֲלָפִים֙ רֹ֔חַב וְאֹ֗רֶךְ חֲמִשָּׁ֤ה וְעֶשְׂרִים֙ אֶ֔לֶף לְעֻמַּ֖ת תְּרוּמַ֣ת הַקֹּ֑דֶשׁ לְכָל־בֵּ֥ית יִשְׂרָאֵ֖ל יִהְיֶֽה׃ | 6 |
೬ನೀವು ನನಗೆ ಸಮರ್ಪಿಸುವ ಪರಿಶುದ್ಧ ಭಾಗದ ಪಕ್ಕದಲ್ಲಿ ಐದು ಸಾವಿರ ಮೊಳ ಅಗಲದ, ಇಪ್ಪತ್ತೈದು ಸಾವಿರ ಮೊಳ ಉದ್ದದ ಕ್ಷೇತ್ರವನ್ನು ಪಟ್ಟಣಕ್ಕೆ ಒಳಪಟ್ಟ ಭೂಮಿಯನ್ನಾಗಿ ನೇಮಿಸಬೇಕು. ಅದರಲ್ಲಿ ಇಸ್ರಾಯೇಲ್ ವಂಶದವರಿಗೆಲ್ಲಾ ಹಕ್ಕಿರುವುದು.
וְלַנָּשִׂ֡יא מִזֶּ֣ה וּמִזֶּה֩ לִתְרוּמַ֨ת הַקֹּ֜דֶשׁ וְלַאֲחֻזַּ֣ת הָעִ֗יר אֶל־פְּנֵ֤י תְרֽוּמַת־הַקֹּ֙דֶשׁ֙ וְאֶל־פְּנֵי֙ אֲחֻזַּ֣ת הָעִ֔יר מִפְּאַת־יָ֣ם יָ֔מָּה וּמִפְּאַת־קֵ֖דְמָה קָדִ֑ימָה וְאֹ֗רֶךְ לְעֻמּוֹת֙ אַחַ֣ד הַחֲלָקִ֔ים מִגְּב֥וּל יָ֖ם אֶל־גְּב֥וּל קָדִֽימָה׃ | 7 |
೭ರಾಜನ ಸ್ವತ್ತು ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರಕ್ಕೂ, ಪಟ್ಟಣಕ್ಕೆ ಒಳಪಟ್ಟ ಭೂಮಿಗೂ ಎರಡು ಕಡೆಗಳಲ್ಲಿರುವುದು; ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಪಶ್ಚಿಮ ಕಡೆಯಲ್ಲಿ ಹರಡುವುದು, ಪೂರ್ವದಿಂದ ಪೂರ್ವಕ್ಕೂ ಹರಡುವುದು, ಅದರ ಉದ್ದವು ಪಶ್ಚಿಮದಿಂದ ಪೂರ್ವಕ್ಕೂ ಒಂದು ಕುಲದ ಸ್ವತ್ತಿನ ಉದ್ದಕ್ಕೆ ಸರಿಸಮಾನವಾಗಿರುವುದು.
לָאָ֛רֶץ יִֽהְיֶה־לּ֥וֹ לַֽאֲחֻזָּ֖ה בְּיִשְׂרָאֵ֑ל וְלֹא־יוֹנ֨וּ ע֤וֹד נְשִׂיאַי֙ אֶת־עַמִּ֔י וְהָאָ֛רֶץ יִתְּנ֥וּ לְבֵֽית־יִשְׂרָאֵ֖ל לְשִׁבְטֵיהֶֽם׃ ס | 8 |
೮ಅದು ಅವನಿಗೆ ಇಸ್ರಾಯೇಲಿನಲ್ಲಿ ಭೂಸ್ವಾಸ್ತ್ಯವಾಗುವುದು; ಇನ್ನು ಮೇಲೆ ನನ್ನ ಪ್ರಭುಗಳು ನನ್ನ ಪ್ರಜೆಗಳನ್ನು ಹಿಂಸಿಸುವುದಿಲ್ಲ; ದೇಶದ ಭೂಮಿಯನ್ನು ಇಸ್ರಾಯೇಲರಿಗೆ ಕುಲಕ್ಕೆ ತಕ್ಕಂತೆ ಹಂಚುವರು.
כֹּֽה־אָמַ֞ר אֲדֹנָ֣י יְהוִ֗ה רַב־לָכֶם֙ נְשִׂיאֵ֣י יִשְׂרָאֵ֔ל חָמָ֤ס וָשֹׁד֙ הָסִ֔ירוּ וּמִשְׁפָּ֥ט וּצְדָקָ֖ה עֲשׂ֑וּ הָרִ֤ימוּ גְרֻשֹֽׁתֵיכֶם֙ מֵעַ֣ל עַמִּ֔י נְאֻ֖ם אֲדֹנָ֥י יְהוִֽה׃ | 9 |
೯ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ, ನೀತಿನ್ಯಾಯಗಳನ್ನು ನಡೆಸಿರಿ. ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿರಿ. ಇದು ಕರ್ತನಾದ ಯೆಹೋವನ ನುಡಿ.
מֹֽאזְנֵי־צֶ֧דֶק וְאֵֽיפַת־צֶ֛דֶק וּבַת־צֶ֖דֶק יְהִ֥י לָכֶֽם׃ | 10 |
೧೦ನಿಮ್ಮ ತಕ್ಕಡಿಯೂ, ಧಾನ್ಯದ ಅಳತೆಯೂ, ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು.
הָאֵיפָ֣ה וְהַבַּ֗ת תֹּ֤כֶן אֶחָד֙ יִֽהְיֶ֔ה לָשֵׂ֕את מַעְשַׂ֥ר הַחֹ֖מֶר הַבָּ֑ת וַעֲשִׂירִ֤ת הַחֹ֙מֶר֙ הָֽאֵיפָ֔ה אֶל־הַחֹ֖מֶר יִהְיֶ֥ה מַתְכֻּנְתּֽוֹ׃ | 11 |
೧೧ಏಫಾ (ಧಾನ್ಯದ ಅಳತೆ) ಮತ್ತು ಬತ್ (ರಸದ್ರವ್ಯದ ಅಳತೆ) ಒಂದೇ ಪ್ರಮಾಣವಾಗಿರಬೇಕು. ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಏಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಎರಡೂ ಹೋಮೆರ್ ಅಳತೆಗೆ ಸಂಬಂಧವಾಗಿರಬೇಕು.
וְהַשֶּׁ֖קֶל עֶשְׂרִ֣ים גֵּרָ֑ה עֶשְׂרִ֨ים שְׁקָלִ֜ים חֲמִשָּׁ֧ה וְעֶשְׂרִ֣ים שְׁקָלִ֗ים עֲשָׂרָ֤ה וַחֲמִשָּׁה֙ שֶׁ֔קֶל הַמָּנֶ֖ה יִֽהְיֶ֥ה לָכֶֽם׃ | 12 |
೧೨ತೊಲೆಯು ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ಇಪ್ಪತ್ತೈದು ಅಥವಾ ಹದಿನೈದು ತೊಲಾ ತೂಕದ್ದಾಗಿರಲಿ.”
זֹ֥את הַתְּרוּמָ֖ה אֲשֶׁ֣ר תָּרִ֑ימוּ שִׁשִּׁ֤ית הָֽאֵיפָה֙ מֵחֹ֣מֶר הַֽחִטִּ֔ים וְשִׁשִּׁיתֶם֙ הָֽאֵיפָ֔ה מֵחֹ֖מֶר הַשְּׂעֹרִֽים׃ | 13 |
೧೩ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನಿಮ್ಮ ದೋಷಪರಿಹಾರಕ್ಕಾಗಿ ಧಾನ್ಯನೈವೇದ್ಯವನ್ನೂ, ಸರ್ವಾಂಗಹೋಮವನ್ನೂ, ಸಮಾಧಾನಯಜ್ಞವನ್ನೂ ಮಾಡುವುದಕ್ಕೋಸ್ಕರ ಸಮರ್ಪಿಸತಕ್ಕದು ಏನೆಂದರೆ ಒಂದು ಹೋಮೆರ್ ಅಳತೆಯ ಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು.
וְחֹ֨ק הַשֶּׁ֜מֶן הַבַּ֣ת הַשֶּׁ֗מֶן מַעְשַׂ֤ר הַבַּת֙ מִן־הַכֹּ֔ר עֲשֶׂ֥רֶת הַבַּתִּ֖ים חֹ֑מֶר כִּֽי־עֲשֶׂ֥רֶת הַבַּתִּ֖ים חֹֽמֶר׃ | 14 |
೧೪ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ ಒಂದು ಕೋರ್ ಅಂದರೆ ಹತ್ತು ಬತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬತ್ ಅಳತೆಯ ಹತ್ತನೆಯ ಒಂದು ಪಾಲು. (ಹತ್ತು ಬತ್ ಅಂದರೆ ಒಂದು ಹೋಮೆರ್)
וְשֶׂה־אַחַ֨ת מִן־הַצֹּ֤אן מִן־הַמָּאתַ֙יִם֙ מִמַּשְׁקֵ֣ה יִשְׂרָאֵ֔ל לְמִנְחָ֖ה וּלְעוֹלָ֣ה וְלִשְׁלָמִ֑ים לְכַפֵּ֣ר עֲלֵיהֶ֔ם נְאֻ֖ם אֲדֹנָ֥י יְהוִֽה׃ | 15 |
೧೫ಇನ್ನೂರು ಕುರಿಗಳಲ್ಲಿ ಇಸ್ರಾಯೇಲಿನ ನೀರಾವರಿಯ ಹುಲ್ಗಾವಲಿನ ಒಂದು ಕುರಿ; ಇವುಗಳನ್ನು ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಸರ್ವಾಂಗಹೋಮ ಮತ್ತು ಸಮಾಧಾನಬಲಿಯಾಗಿ ಒಪ್ಪಿಸಬೇಕು” ಇದು ಕರ್ತನಾದ ಯೆಹೋವನ ನುಡಿ.
כֹּ֚ל הָעָ֣ם הָאָ֔רֶץ יִהְי֖וּ אֶל־הַתְּרוּמָ֣ה הַזֹּ֑את לַנָּשִׂ֖יא בְּיִשְׂרָאֵֽל׃ | 16 |
೧೬ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಈ ಕಾಣಿಕೆಯನ್ನು ಒಪ್ಪಿಸತಕ್ಕದ್ದು.
וְעַֽל־הַנָּשִׂ֣יא יִהְיֶ֗ה הָעוֹל֣וֹת וְהַמִּנְחָה֮ וְהַנֵּסֶךְ֒ בַּחַגִּ֤ים וּבֶחֳדָשִׁים֙ וּבַשַּׁבָּת֔וֹת בְּכָֽל־מוֹעֲדֵ֖י בֵּ֣ית יִשְׂרָאֵ֑ל הֽוּא־יַעֲשֶׂ֞ה אֶת־הַחַטָּ֣את וְאֶת־הַמִּנְחָ֗ה וְאֶת־הָֽעוֹלָה֙ וְאֶת־הַשְּׁלָמִ֔ים לְכַפֵּ֖ר בְּעַ֥ד בֵּֽית־יִשְׂרָאֵֽל׃ ס | 17 |
೧೭ಉತ್ಸವಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಸಬ್ಬತ್ ದಿನಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮ ಪಶು, ಧಾನನೈವೇದ್ಯ ಪಾನನೈವೇದ್ಯ, ಇವುಗಳನ್ನು ಒದಗಿಸುವುದು ಅರಸನ ಕರ್ತವ್ಯವಾಗಿದೆ; ಇಸ್ರಾಯೇಲ್ ವಂಶದ ದೋಷ ನಿವಾರಣೆಗಾಗಿ ಅವನು ದೋಷಪರಿಹಾರಕ ಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮ ಪಶು, ಸಮಾಧಾನ ಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು.
כֹּה־אָמַר֮ אֲדֹנָ֣י יְהוִה֒ בָּֽרִאשׁוֹן֙ בְּאֶחָ֣ד לַחֹ֔דֶשׁ תִּקַּ֥ח פַּר־בֶּן־בָּקָ֖ר תָּמִ֑ים וְחִטֵּאתָ֖ אֶת־הַמִּקְדָּֽשׁ׃ | 18 |
೧೮ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀವು ಪೂರ್ಣಾಂಗವಾದ ಹೋರಿಯನ್ನು ಆರಿಸಿಕೊಂಡು ಪವಿತ್ರಾಲಯವನ್ನು ಶುದ್ಧೀಕರಿಸಬೇಕು.
וְלָקַ֨ח הַכֹּהֵ֜ן מִדַּ֣ם הַחַטָּ֗את וְנָתַן֙ אֶל־מְזוּזַ֣ת הַבַּ֔יִת וְאֶל־אַרְבַּ֛ע פִּנּ֥וֹת הָעֲזָרָ֖ה לַמִּזְבֵּ֑חַ וְעַ֨ל־מְזוּזַ֔ת שַׁ֖עַר הֶחָצֵ֥ר הַפְּנִימִֽית׃ | 19 |
೧೯ಆಗ ಯಾಜಕನು ಆ ದೋಷಪರಿಹಾರಕ ಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ, ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಹೆಬ್ಬಾಗಿಲಿನ ಕಂಬಗಳಿಗೂ ಹಚ್ಚಬೇಕು.
וְכֵ֤ן תַּֽעֲשֶׂה֙ בְּשִׁבְעָ֣ה בַחֹ֔דֶשׁ מֵאִ֥ישׁ שֹׁגֶ֖ה וּמִפֶּ֑תִי וְכִפַּרְתֶּ֖ם אֶת־הַבָּֽיִת׃ | 20 |
೨೦ಅದೇ ಮೇರೆಗೆ ಏಳನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀನು ಯಜ್ಞಮಾಡಿ, ಯಾರಾದರೂ ಆಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ, ಬುದ್ಧಿಹೀನರ ಅವಿವೇಕದಿಂದಾಗಲಿ ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು.
בָּ֠רִאשׁוֹן בְּאַרְבָּעָ֨ה עָשָׂ֥ר יוֹם֙ לַחֹ֔דֶשׁ יִהְיֶ֥ה לָכֶ֖ם הַפָּ֑סַח חָ֕ג שְׁבֻע֣וֹת יָמִ֔ים מַצּ֖וֹת יֵאָכֵֽל׃ | 21 |
೨೧“ಮೊದಲನೆಯ ತಿಂಗಳಿನ, ಹದಿನಾಲ್ಕನೆಯ ದಿನದಲ್ಲಿ, ಏಳು ದಿನದ ಪಸ್ಕಹಬ್ಬವನ್ನು ಆಚರಿಸಬೇಕು; ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು.
וְעָשָׂ֤ה הַנָּשִׂיא֙ בַּיּ֣וֹם הַה֔וּא בַּעֲד֕וֹ וּבְעַ֖ד כָּל־עַ֣ם הָאָ֑רֶץ פַּ֖ר חַטָּֽאת׃ | 22 |
೨೨ಆ ದಿನದಲ್ಲಿ ಪ್ರಭುವು ತನ್ನ ನಿಮಿತ್ತವೂ, ದೇಶದ ಜನರೆಲ್ಲರ ನಿಮಿತ್ತವೂ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನು ಒಪ್ಪಿಸಲಿ.
וְשִׁבְעַ֨ת יְמֵֽי־הֶחָ֜ג יַעֲשֶׂ֧ה עוֹלָ֣ה לַֽיהוָ֗ה שִׁבְעַ֣ת פָּ֠רִים וְשִׁבְעַ֨ת אֵילִ֤ים תְּמִימִם֙ לַיּ֔וֹם שִׁבְעַ֖ת הַיָּמִ֑ים וְחַטָּ֕את שְׂעִ֥יר עִזִּ֖ים לַיּֽוֹם׃ | 23 |
೨೩ಹಬ್ಬದ ಏಳು ದಿನಗಳಲ್ಲಿಯೂ ಯೆಹೋವನಿಗೆ ಸಮರ್ಪಿಸತಕ್ಕ ಸರ್ವಾಂಗಹೋಮಕ್ಕಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಪೂರ್ಣಾಂಗವಾದ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಒದಗಿಸಲಿ ಮತ್ತು ದೋಷಪರಿಹಾರಕ ಯಜ್ಞವಾಗಿ ಪ್ರತಿ ದಿನವೂ ಒಂದು ಹೋತವನ್ನು ಕೊಡಲಿ.
וּמִנְחָ֗ה אֵיפָ֥ה לַפָּ֛ר וְאֵיפָ֥ה לָאַ֖יִל יַֽעֲשֶׂ֑ה וְשֶׁ֖מֶן הִ֥ין לָאֵיפָֽה׃ | 24 |
೨೪ಇದಲ್ಲದೆ ಒಂದೊಂದು ಹೋರಿಯ ಮತ್ತು ಟಗರಿನ ಸಂಗಡ ಮೂವತ್ತು ಸೇರು ಗೋದಿಹಿಟ್ಟನ್ನೂ, ಆರಾರು ಸೇರು ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒಪ್ಪಿಸಬೇಕು.
בַּשְּׁבִיעִ֡י בַּחֲמִשָּׁה֩ עָשָׂ֨ר י֤וֹם לַחֹ֙דֶשׁ֙ בֶּחָ֔ג יַעֲשֶׂ֥ה כָאֵ֖לֶּה שִׁבְעַ֣ת הַיָּמִ֑ים כַּֽחַטָּאת֙ כָּעֹלָ֔ה וְכַמִּנְחָ֖ה וְכַשָּֽׁמֶן׃ ס | 25 |
೨೫“ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿನಗಳಲ್ಲಿಯೂ ಅವನು ದೋಷಪರಿಹಾರಕ ಯಜ್ಞಪಶು, ಸರ್ವಾಂಗಹೋಮ ಪಶು, ಧಾನ್ಯನೈವೇದ್ಯ ಎಣ್ಣೆ, ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.”