< וַיִּקְרָא 21 >

וַיֹּ֤אמֶר יְהוָה֙ אֶל־מֹשֶׁ֔ה אֱמֹ֥ר אֶל־הַכֹּהֲנִ֖ים בְּנֵ֣י אַהֲרֹ֑ן וְאָמַרְתָּ֣ אֲלֵהֶ֔ם לְנֶ֥פֶשׁ לֹֽא־יִטַּמָּ֖א בְּעַמָּֽיו׃ 1
ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ, ಅವರಿಗೆ ಹೀಗೆ ಹೇಳು: ಸತ್ತವರ ದೇಹವನ್ನು ಮುಟ್ಟುವುದರಿಂದ ಯಾವ ಯಾಜಕನೂ ಅಪವಿತ್ರನಾಗಬಾರದು.
כִּ֚י אִם־לִשְׁאֵרֹ֔ו הַקָּרֹ֖ב אֵלָ֑יו לְאִמֹּ֣ו וּלְאָבִ֔יו וְלִבְנֹ֥ו וּלְבִתֹּ֖ו וּלְאָחִֽיו׃ 2
ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿಯಾಗಿ, ತಂದೆಯಾಗಿ, ಅವನ ಮಗನಿಗಾಗಿ, ಅವನ ಮಗಳಿಗಾಗಿ, ಅವನ ಸಹೋದರನಿಗಾಗಿ,
וְלַאֲחֹתֹ֤ו הַבְּתוּלָה֙ הַקְּרֹובָ֣ה אֵלָ֔יו אֲשֶׁ֥ר לֹֽא־הָיְתָ֖ה לְאִ֑ישׁ לָ֖הּ יִטַּמָּֽא׃ 3
ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಹೊರತು,
לֹ֥א יִטַּמָּ֖א בַּ֣עַל בְּעַמָּ֑יו לְהֵ֖חַלֹּֽו׃ 4
ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿರುವುದರಿಂದ ತನ್ನನ್ನು ತಾನು ಅಪವಿತ್ರವಾಗಬಾರದು.
לֹֽא־יִקְרְחָה (יִקְרְח֤וּ) קָרְחָה֙ בְּרֹאשָׁ֔ם וּפְאַ֥ת זְקָנָ֖ם לֹ֣א יְגַלֵּ֑חוּ וּבִ֨בְשָׂרָ֔ם לֹ֥א יִשְׂרְט֖וּ שָׂרָֽטֶת׃ 5
“‘ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿಕೊಳ್ಳಬಾರದು. ದೇಹವನ್ನು ಗಾಯಮಾಡಿಕೊಳ್ಳಬಾರದು.
קְדֹשִׁ֤ים יִהְיוּ֙ לֵאלֹ֣הֵיהֶ֔ם וְלֹ֣א יְחַלְּל֔וּ שֵׁ֖ם אֱלֹהֵיהֶ֑ם כִּי֩ אֶת־אִשֵּׁ֨י יְהוָ֜ה לֶ֧חֶם אֱלֹהֵיהֶ֛ם הֵ֥ם מַקְרִיבִ֖ם וְהָ֥יוּ קֹֽדֶשׁ׃ 6
ಅವರು ತಮ್ಮ ಯೆಹೋವ ದೇವರಿಗೆ ಅಗ್ನಿಯಿಂದ ಮಾಡಿದ ಸಮರ್ಪಣೆಗಳನ್ನು ಮತ್ತು ತನ್ನ ದೇವರ ರೊಟ್ಟಿಯನ್ನು ಸಮರ್ಪಿಸುವುದರಿಂದ, ಅವರು ತಮ್ಮ ದೇವರ ಹೆಸರನ್ನು ಅಗೌರವಪಡಿಸದೆ, ತಮ್ಮ ದೇವರಿಗೆ ಪರಿಶುದ್ಧರಾಗಿರಬೇಕು. ಆದಕಾರಣ ಅವರು ಪರಿಶುದ್ಧರಾಗಿರುವರು.
אִשָּׁ֨ה זֹנָ֤ה וַחֲלָלָה֙ לֹ֣א יִקָּ֔חוּ וְאִשָּׁ֛ה גְּרוּשָׁ֥ה מֵאִישָׁ֖הּ לֹ֣א יִקָּ֑חוּ כִּֽי־קָדֹ֥שׁ ה֖וּא לֵאלֹהָֽיו׃ 7
“‘ಯಾಜಕರು ತಮ್ಮ ದೇವರಿಗೆ ಪರಿಶುದ್ಧರಾಗಿರುವುದರಿಂದ ವೇಶ್ಯೆಯನ್ನಾಗಲಿ, ಶೀಲಭ್ರಷ್ಠ ಸ್ತ್ರೀಯನ್ನಾಗಲಿ, ಗಂಡನಿಂದ ವಿಚ್ಛೇದನ ಪಡೆದವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.
וְקִדַּשְׁתֹּ֔ו כִּֽי־אֶת־לֶ֥חֶם אֱלֹהֶ֖יךָ ה֣וּא מַקְרִ֑יב קָדֹשׁ֙ יִֽהְיֶה־לָּ֔ךְ כִּ֣י קָדֹ֔ושׁ אֲנִ֥י יְהוָ֖ה מְקַדִּשְׁכֶֽם׃ 8
ಅವರನ್ನು ಪರಿಶುದ್ಧರೆಣಿಸಿ, ಏಕೆಂದರೆ ನಿಮ್ಮ ದೇವರಾದ ನನಗೆ ಆಹಾರವನ್ನು ಸಮರ್ಪಿಸುವವರಾದ ಕಾರಣ ನೀನು ಅವರನ್ನು ದೇವರ ದಾಸರೆಂದು ಭಾವಿಸಬೇಕು. ನಿಮ್ನನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವ ದೇವರೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನೂ ಪರಿಶುದ್ಧರೆಂದು ನೀನು ಭಾವಿಸಬೇಕು.
וּבַת֙ אִ֣ישׁ כֹּהֵ֔ן כִּ֥י תֵחֵ֖ל לִזְנֹ֑ות אֶת־אָבִ֙יהָ֙ הִ֣יא מְחַלֶּ֔לֶת בָּאֵ֖שׁ תִּשָּׂרֵֽף׃ ס 9
“‘ಯಾವುದೇ ಯಾಜಕನ ಮಗಳು ವ್ಯಭಿಚಾರ ಕೃತ್ಯದಿಂದ ತನ್ನನ್ನು ಅಪವಿತ್ರ ಮಾಡಿಕೊಂಡರೆ, ಅವಳು ತನ್ನ ತಂದೆಯನ್ನು ಅಗೌರವಿಸಿದ್ದಾಳೆ. ಅವಳನ್ನು ಬೆಂಕಿಯಿಂದ ಸುಡಬೇಕು.
וְהַכֹּהֵן֩ הַגָּדֹ֨ול מֵאֶחָ֜יו אֲ‍ֽשֶׁר־יוּצַ֥ק עַל־רֹאשֹׁ֣ו ׀ שֶׁ֤מֶן הַמִּשְׁחָה֙ וּמִלֵּ֣א אֶת־יָדֹ֔ו לִלְבֹּ֖שׁ אֶת־הַבְּגָדִ֑ים אֶת־רֹאשֹׁו֙ לֹ֣א יִפְרָ֔ע וּבְגָדָ֖יו לֹ֥א יִפְרֹֽם׃ 10
“‘ತನ್ನ ಸಹೋದರರೊಳಗೆ ಮಹಾಯಾಜಕನಾಗಿದ್ದು, ಯಾವನು ತೈಲಾಭಿಷೇಕ ಹೊಂದಿ, ದೀಕ್ಷಾವಸ್ತ್ರಗಳನ್ನು ಧರಿಸಿ, ಪಟ್ಟಕ್ಕೆ ಬರುವನೋ, ಅವನು ತನ್ನ ತಲೆಯನ್ನು ಮುಚ್ಚಿಕೊಳ್ಳಲೂಬಾರದು, ತನ್ನ ಬಟ್ಟೆಗಳನ್ನು ಹರಿದುಕೊಳ್ಳಲೂಬಾರದು.
וְעַ֛ל כָּל־נַפְשֹׁ֥ת מֵ֖ת לֹ֣א יָבֹ֑א לְאָבִ֥יו וּלְאִמֹּ֖ו לֹ֥א יִטַּמָּֽא׃ 11
ಯಾವ ಮೃತ ಶರೀರದ ಬಳಿಗೂ ಹೋಗಬಾರದು, ಅವನು ತನ್ನ ತಂದೆತಾಯಿಗಳ ಮರಣದ ನಿಮಿತ್ತ, ತನ್ನನ್ನು ಅಶುದ್ಧಮಾಡಿಕೊಳ್ಳಬಾರದು.
וּמִן־הַמִּקְדָּשׁ֙ לֹ֣א יֵצֵ֔א וְלֹ֣א יְחַלֵּ֔ל אֵ֖ת מִקְדַּ֣שׁ אֱלֹהָ֑יו כִּ֡י נֵ֠זֶר שֶׁ֣מֶן מִשְׁחַ֧ת אֱלֹהָ֛יו עָלָ֖יו אֲנִ֥י יְהוָֽה׃ 12
ಇದಲ್ಲದೆ ಪರಿಶುದ್ಧ ಸ್ಥಳದಿಂದ ಹೊರಗೆ ಹೋಗಬಾರದು ಮತ್ತು ತನ್ನ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ತನ್ನ ದೇವರ ಅಭಿಷೇಕ ತೈಲವನ್ನು ತಲೆಯ ಮೇಲೆ ಹೊಯ್ಯಿಸಿಕೊಂಡು ಪ್ರತಿಷ್ಠಿತನಾಗಿದ್ದಾನೆ. ನಾನೇ ಯೆಹೋವ ದೇವರು.
וְה֕וּא אִשָּׁ֥ה בִבְתוּלֶ֖יהָ יִקָּֽח׃ 13
“‘ಅವನು ಪುರುಷ ಸಂಪರ್ಕವೇ ಇಲ್ಲದ ಯುವತಿಯನ್ನು ಮದುವೆ ಮಾಡಿಕೊಳ್ಳಬೇಕೇ ಹೊರತು
אַלְמָנָ֤ה וּגְרוּשָׁה֙ וַחֲלָלָ֣ה זֹנָ֔ה אֶת־אֵ֖לֶּה לֹ֣א יִקָּ֑ח כִּ֛י אִם־בְּתוּלָ֥ה מֵעַמָּ֖יו יִקַּ֥ח אִשָּֽׁה׃ 14
ವಿಧವೆಯನ್ನಾಗಲಿ, ಗಂಡ ಬಿಟ್ಟ ಸ್ತ್ರೀಯನ್ನಾಗಲಿ, ಇಲ್ಲವೆ ಅಪವಿತ್ರಳನ್ನಾಗಲಿ, ವೇಶ್ಯೆಯನ್ನಾಗಲಿ, ಇಂಥವರನ್ನು ಅವನು ಮದುವೆಯಾಗಬಾರದು. ಆದರೆ ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ನಿಕೆಯನ್ನು ತನಗೆ ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು.
וְלֹֽא־יְחַלֵּ֥ל זַרְעֹ֖ו בְּעַמָּ֑יו כִּ֛י אֲנִ֥י יְהוָ֖ה מְקַדְּשֹֽׁו׃ פ 15
ಇದಲ್ಲದೆ ಅವನು ತನ್ನ ಜನರೊಳಗೆ ತನ್ನ ಸಂತತಿಯನ್ನು ಅಪವಿತ್ರ ಮಾಡಬಾರದು. ಏಕೆಂದರೆ ಯೆಹೋವ ದೇವರಾದ ನಾನು ಅವನನ್ನು ಶುದ್ಧೀಕರಿಸುತ್ತೇನೆ.’”
וַיְדַבֵּ֥ר יְהוָ֖ה אֶל־מֹשֶׁ֥ה לֵּאמֹֽר׃ 16
ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
דַּבֵּ֥ר אֶֽל־אַהֲרֹ֖ן לֵאמֹ֑ר אִ֣ישׁ מִֽזַּרְעֲךָ֞ לְדֹרֹתָ֗ם אֲשֶׁ֨ר יִהְיֶ֥ה בֹו֙ מ֔וּם לֹ֣א יִקְרַ֔ב לְהַקְרִ֖יב לֶ֥חֶם אֱלֹהָֽיו׃ 17
“ಆರೋನನೊಂದಿಗೆ ಮಾತನಾಡಿ ಹೀಗೆ ಹೇಳು: ‘ನಿನ್ನ ಸಂತತಿಯ ವಂಶಾವಳಿಗಳಲ್ಲಿ ಯಾವನಿಗೆ ನ್ಯೂನತೆವಿರುತ್ತದೋ, ಅವನು ದೇವರ ರೊಟ್ಟಿಯನ್ನು ಸಮರ್ಪಿಸುವುದಕ್ಕಾಗಿ ಬರಬಾರದು.
כִּ֥י כָל־אִ֛ישׁ אֲשֶׁר־בֹּ֥ו מ֖וּם לֹ֣א יִקְרָ֑ב אִ֤ישׁ עִוֵּר֙ אֹ֣ו פִסֵּ֔חַ אֹ֥ו חָרֻ֖ם אֹ֥ו שָׂרֽוּעַ׃ 18
ಊನಗೊಂಡ ಮನುಷ್ಯನು ಸಮೀಪಕ್ಕೆ ಬರಬಾರದು. ಎಂದರೆ, ಕಣ್ಣಿಲ್ಲದವನು, ಕುಂಟನು, ಕುರೂಪವುಳ್ಳವನು, ಅಂಗವಿಕಲನು,
אֹ֣ו אִ֔ישׁ אֲשֶׁר־יִהְיֶ֥ה בֹ֖ו שֶׁ֣בֶר רָ֑גֶל אֹ֖ו שֶׁ֥בֶר יָֽד׃ 19
ಮುರಿದ ಪಾದವುಳ್ಳವನು, ಮುರಿದ ಕೈಯುಳ್ಳವನು,
אֹֽו־גִבֵּ֣ן אֹו־דַ֔ק אֹ֖ו תְּבַלֻּ֣ל בְּעֵינֹ֑ו אֹ֤ו גָרָב֙ אֹ֣ו יַלֶּ֔פֶת אֹ֖ו מְרֹ֥וחַ אָֽשֶׁךְ׃ 20
ಗೂನು ಬೆನ್ನುಳ್ಳವನು, ಗಿಡ್ಡನು, ಕಣ್ಣುಗಳಲ್ಲಿ ನ್ಯೂನತೆವುಳ್ಳವನು, ಕಜ್ಜಿತುರಿಗಳುಳ್ಳವನು, ತನ್ನನ್ನು ನಪುಂಸಕನನ್ನಾಗಿ ಮಾಡಿಕೊಂಡವನು,
כָּל־אִ֞ישׁ אֲשֶׁר־בֹּ֣ו מ֗וּם מִזֶּ֙רַע֙ אַהֲרֹ֣ן הַכֹּהֵ֔ן לֹ֣א יִגַּ֔שׁ לְהַקְרִ֖יב אֶת־אִשֵּׁ֣י יְהוָ֑ה מ֣וּם בֹּ֔ו אֵ֚ת לֶ֣חֶם אֱלֹהָ֔יו לֹ֥א יִגַּ֖שׁ לְהַקְרִֽיב׃ 21
ಯಾಜಕನಾದ ಆರೋನನ ಸಂತತಿಯಲ್ಲಿ ನ್ಯೂನತೆವುಳ್ಳ ಯಾವ ಮನುಷ್ಯನೂ ಅಗ್ನಿ ಸಮರ್ಪಣೆಗಳನ್ನು ಅರ್ಪಿಸುವುದಕ್ಕಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ಬರಬಾರದು. ನ್ಯೂನತೆವುಳ್ಳವನು ತನ್ನ ದೇವರ ರೊಟ್ಟಿಯನ್ನು ಅರ್ಪಿಸುವುದಕ್ಕಾಗಿ ಸಮೀಪ ಬರಬಾರದು.
לֶ֣חֶם אֱלֹהָ֔יו מִקָּדְשֵׁ֖י הַקֳּדָשִׁ֑ים וּמִן־הַקֳּדָשִׁ֖ים יֹאכֵֽל׃ 22
ಅವನು ದೇವರ ರೊಟ್ಟಿಯಲ್ಲಿ ಪರಿಶುದ್ಧವಾದದ್ದನ್ನೂ, ಮಹಾಪರಿಶುದ್ಧವಾದದ್ದನ್ನೂ ತಿನ್ನಬಹುದು.
אַ֣ךְ אֶל־הַפָּרֹ֜כֶת לֹ֣א יָבֹ֗א וְאֶל־הַמִּזְבֵּ֛חַ לֹ֥א יִגַּ֖שׁ כִּֽי־מ֣וּם בֹּ֑ו וְלֹ֤א יְחַלֵּל֙ אֶת־מִקְדָּשַׁ֔י כִּ֛י אֲנִ֥י יְהוָ֖ה מְקַדְּשָֽׁם׃ 23
ಆದರೆ ಅವನು ನ್ಯೂನತೆವುಳ್ಳವನಾದ್ದರಿಂದ ತೆರೆಯ ಒಳಗೆ ಹೋಗಬಾರದು ಹಾಗು ಯಜ್ಞವೇದಿಯ ಬಳಿಗೆ ಬರಬಾರದು. ಹೀಗೆ ಅವನು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಬಾರದು. ಏಕೆಂದರೆ ಅವರನ್ನು ಶುದ್ಧೀಕರಿಸುವ ಯೆಹೋವ ದೇವರು ನಾನೇ.’”
וַיְדַבֵּ֣ר מֹשֶׁ֔ה אֶֽל־אַהֲרֹ֖ן וְאֶל־בָּנָ֑יו וְאֶֽל־כָּל־בְּנֵ֖י יִשְׂרָאֵֽל׃ פ 24
ಮೋಶೆಯು ಅದನ್ನು ಆರೋನನಿಗೂ, ಅವನ ಪುತ್ರರಿಗೂ, ಇಸ್ರಾಯೇಲರಿಗೂ ಹೇಳಿದನು.

< וַיִּקְרָא 21 >