< יְהוֹשֻעַ 6 >
וִֽירִיחֹו֙ סֹגֶ֣רֶת וּמְסֻגֶּ֔רֶת מִפְּנֵ֖י בְּנֵ֣י יִשְׂרָאֵ֑ל אֵ֥ין יֹוצֵ֖א וְאֵ֥ין בָּֽא׃ ס | 1 |
ಆಗ ಯೆರಿಕೋವಿನ ಜನರು ಇಸ್ರಾಯೇಲರ ನಿಮಿತ್ತವಾಗಿ, ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದರು.
וַיֹּ֤אמֶר יְהוָה֙ אֶל־יְהֹושֻׁ֔עַ רְאֵה֙ נָתַ֣תִּי בְיָֽדְךָ֔ אֶת־יְרִיחֹ֖ו וְאֶת־מַלְכָּ֑הּ גִּבֹּורֵ֖י הֶחָֽיִל׃ | 2 |
ಆಗ ಯೆಹೋವ ದೇವರು ಯೆಹೋಶುವನಿಗೆ, “ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧ ವೀರರನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
וְסַבֹּתֶ֣ם אֶת־הָעִ֗יר כֹּ֚ל אַנְשֵׁ֣י הַמִּלְחָמָ֔ה הַקֵּ֥יף אֶת־הָעִ֖יר פַּ֣עַם אֶחָ֑ת כֹּ֥ה תַעֲשֶׂ֖ה שֵׁ֥שֶׁת יָמִֽים׃ | 3 |
ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣವನ್ನು ಒಂದು ಸಾರಿ ಸುತ್ತಬೇಕು. ಈ ಪ್ರಕಾರ ಆರು ದಿವಸ ಮಾಡಬೇಕು.
וְשִׁבְעָ֣ה כֹהֲנִ֡ים יִשְׂאוּ֩ שִׁבְעָ֨ה שֹׁופְרֹ֤ות הַיֹּֽובְלִים֙ לִפְנֵ֣י הָאָרֹ֔ון וּבַיֹּום֙ הַשְּׁבִיעִ֔י תָּסֹ֥בּוּ אֶת־הָעִ֖יר שֶׁ֣בַע פְּעָמִ֑ים וְהַכֹּ֣הֲנִ֔ים יִתְקְע֖וּ בַּשֹּׁופָרֹֽות׃ | 4 |
ಏಳುಮಂದಿ ಯಾಜಕರು ಹೊತ್ತುಕೊಂಡಿದ್ದ ಮಂಜೂಷದ ಮುಂದೆ ಟಗರುಗಳ ಏಳು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡು ಹೋಗಬೇಕು. ಆದರೆ ಅವರು ಏಳನೆಯ ದಿವಸ ಪಟ್ಟಣವನ್ನು ಏಳು ಸಾರಿ ಸುತ್ತಿ ಬರಬೇಕು. ಯಾಜಕರು ತುತೂರಿಗಳನ್ನು ಊದಬೇಕು.
וְהָיָ֞ה בִּמְשֹׁ֣ךְ ׀ בְּקֶ֣רֶן הַיֹּובֵ֗ל בְּשָׁמְעֲכֶם (כְּשָׁמְעֲכֶם֙) אֶת־קֹ֣ול הַשֹּׁופָ֔ר יָרִ֥יעוּ כָל־הָעָ֖ם תְּרוּעָ֣ה גְדֹולָ֑ה וְנָ֨פְלָ֜ה חֹומַ֤ת הָעִיר֙ תַּחְתֶּ֔יהָ וְעָל֥וּ הָעָ֖ם אִ֥ישׁ נֶגְדֹּֽו׃ | 5 |
ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು.
וַיִּקְרָ֞א יְהֹושֻׁ֤עַ בִּן־נוּן֙ אֶל־הַכֹּ֣הֲנִ֔ים וַיֹּ֣אמֶר אֲלֵהֶ֔ם שְׂא֖וּ אֶת־אֲרֹ֣ון הַבְּרִ֑ית וְשִׁבְעָ֣ה כֹֽהֲנִ֗ים יִשְׂאוּ֙ שִׁבְעָ֤ה שֹֽׁופְרֹות֙ יֹובְלִ֔ים לִפְנֵ֖י אֲרֹ֥ון יְהוָֽה׃ | 6 |
ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ. ಏಳುಮಂದಿ ಯಾಜಕರು ಏಳು ಟಗರು ಕೊಂಬುಗಳ ತುತೂರಿಗಳೊಂದಿಗೆ ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.
וַיֹּאמְרוּ (וַיֹּ֙אמֶר֙) אֶל־הָעָ֔ם עִבְר֖וּ וְסֹ֣בּוּ אֶת־הָעִ֑יר וְהֶ֣חָל֔וּץ יַעֲבֹ֕ר לִפְנֵ֖י אֲרֹ֥ון יְהוָֽה׃ | 7 |
ಜನರಿಗೆ, “ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ದರು ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ,” ಎಂದನು.
וַיְהִ֗י כֶּאֱמֹ֣ר יְהֹושֻׁעַ֮ אֶל־הָעָם֒ וְשִׁבְעָ֣ה הַכֹּהֲנִ֡ים נֹשְׂאִים֩ שִׁבְעָ֨ה שֹׁופְרֹ֤ות הַיֹּֽובְלִים֙ לִפְנֵ֣י יְהוָ֔ה עָבְר֕וּ וְתָקְע֖וּ בַּשֹּֽׁופָרֹ֑ות וֽ͏ַאֲרֹון֙ בְּרִ֣ית יְהוָ֔ה הֹלֵ֖ךְ אַחֲרֵיהֶֽם׃ | 8 |
ಯೆಹೋಶುವನು ಜನರ ಸಂಗಡ ಮಾತನಾಡಿದ ತರುವಾಯ, ಏಳು ಟಗರು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡ ಏಳುಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಮುಂದೆ ನಡೆದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರನ್ನು ಹಿಂಬಾಲಿಸಿತು.
וְהֶחָל֣וּץ הֹלֵ֔ךְ לִפְנֵי֙ הַכֹּ֣הֲנִ֔ים תָּקְעוּ (תֹּקְעֵ֖י) הַשֹּֽׁופָרֹ֑ות וְהַֽמְאַסֵּ֗ף הֹלֵךְ֙ אַחֲרֵ֣י הָאָרֹ֔ון הָלֹ֖וךְ וְתָקֹ֥ועַ בַּשֹּׁופָרֹֽות׃ | 9 |
ಹೀಗೆ ಯುದ್ಧ ಸನ್ನದ್ಧರಾದ ಜನರು ತುತೂರಿಗಳನ್ನು ಊದುವ ಯಾಜಕರ ಮುಂದೆ ಹೋದರು. ಯಾಜಕರು ತುತೂರಿಯನ್ನು ಊದುತ್ತಿರುವಾಗ ಹಿಂದಿನ ಸೈನ್ಯವು ಮಂಜೂಷದ ಹಿಂದೆ ನಡೆದು ಬಂತು.
וְאֶת־הָעָם֩ צִוָּ֨ה יְהֹושֻׁ֜עַ לֵאמֹ֗ר לֹ֤א תָרִ֙יעוּ֙ וְלֹֽא־תַשְׁמִ֣יעוּ אֶת־קֹולְכֶ֔ם וְלֹא־יֵצֵ֥א מִפִּיכֶ֖ם דָּבָ֑ר עַ֠ד יֹ֣ום אָמְרִ֧י אֲלֵיכֶ֛ם הָרִ֖יעוּ וַהֲרִיעֹתֶֽם׃ | 10 |
ಯೆಹೋಶುವನು ಜನರಿಗೆ, “ನೀವು ಈಗ ಆರ್ಭಟಿಸಬಾರದು. ನಿಮ್ಮ ಶಬ್ದವು ಕೇಳಿಸಲೂಬಾರದು. ನಿಮ್ಮ ಬಾಯಿಂದ ಯಾವ ಮಾತು ಹೊರಡಲೂಬಾರದು, ನಾನು ಆರ್ಭಟಿಸಿರೆಂದು ಹೇಳುವ ದಿನದಲ್ಲಿ ಮಾತ್ರ ಆರ್ಭಟಿಸಬೇಕು,” ಎಂದು ಆಜ್ಞಾಪಿಸಿದನು.
וַיַּסֵּ֤ב אֲרֹון־יְהוָה֙ אֶת־הָעִ֔יר הַקֵּ֖ף פַּ֣עַם אֶחָ֑ת וַיָּבֹ֙אוּ֙ הַֽמַּחֲנֶ֔ה וַיָּלִ֖ינוּ בַּֽמַּחֲנֶֽה׃ פ | 11 |
ಹೀಗೆಯೇ ಯೆಹೋವ ದೇವರ ಮಂಜೂಷವು ಪಟ್ಟಣವನ್ನು ಒಂದು ಸಾರಿ ಸುತ್ತಿದ ಮೇಲೆ ಅವರು ಪಾಳೆಯಕ್ಕೆ ಬಂದು ಅಲ್ಲಿ ರಾತ್ರಿಯನ್ನು ಕಳೆದರು.
וַיַּשְׁכֵּ֥ם יְהֹושֻׁ֖עַ בַּבֹּ֑קֶר וַיִּשְׂא֥וּ הַכֹּהֲנִ֖ים אֶת־אֲרֹ֥ון יְהוָֽה׃ | 12 |
ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡರು.
וְשִׁבְעָ֣ה הַכֹּהֲנִ֡ים נֹשְׂאִים֩ שִׁבְעָ֨ה שֹׁופְרֹ֜ות הַיֹּבְלִ֗ים לִפְנֵי֙ אֲרֹ֣ון יְהוָ֔ה הֹלְכִ֣ים הָלֹ֔וךְ וְתָקְע֖וּ בַּשֹּׁופָרֹ֑ות וְהֶחָלוּץ֙ הֹלֵ֣ךְ לִפְנֵיהֶ֔ם וְהֽ͏ַמְאַסֵּ֗ף הֹלֵךְ֙ אֽ͏ַחֲרֵי֙ אֲרֹ֣ון יְהוָ֔ה הֹולֵךְ (הָלֹ֖וךְ) וְתָקֹ֥ועַ בַּשֹּׁופָרֹֽות׃ | 13 |
ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಊದುತ್ತಾ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಡೆಯುತ್ತಾ ಹೋದರು. ಯುದ್ಧಕ್ಕೆ ಸಿದ್ಧವಾದ ಜನರು ಅವರ ಮುಂದೆ ಹೋದರು. ಆದರೆ ಹಿಂದಿನ ಸೈನ್ಯದವರು ಯೆಹೋವ ದೇವರ ಮಂಜೂಷದ ಹಿಂದೆ ನಡೆದರು. ಯಾಜಕರು ತುತೂರಿಗಳನ್ನು ಊದುತ್ತಾ ಹೊರಟರು.
וַיָּסֹ֨בּוּ אֶת־הָעִ֜יר בַּיֹּ֤ום הַשֵּׁנִי֙ פַּ֣עַם אַחַ֔ת וַיָּשֻׁ֖בוּ הַֽמַּחֲנֶ֑ה כֹּ֥ה עָשׂ֖וּ שֵׁ֥שֶׁת יָמִֽים׃ | 14 |
ಹೀಗೆ ಎರಡನೆಯ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿಬಂದು ಪಾಳೆಯಕ್ಕೆ ಹಿಂದಿರುಗಿದರು. ಹೀಗೆಯೇ ಆರು ದಿನ ಮಾಡಿದರು.
וַיְהִ֣י ׀ בַּיֹּ֣ום הַשְּׁבִיעִ֗י וַיַּשְׁכִּ֙מוּ֙ כַּעֲלֹ֣ות הַשַּׁ֔חַר וַיָּסֹ֧בּוּ אֶת־הָעִ֛יר כַּמִּשְׁפָּ֥ט הַזֶּ֖ה שֶׁ֣בַע פְּעָמִ֑ים רַ֚ק בַּיֹּ֣ום הַה֔וּא סָבְב֥וּ אֶת־הָעִ֖יר שֶׁ֥בַע פְּעָמִֽים׃ | 15 |
ಆದರೆ ಏಳನೆಯ ದಿನ ಸೂರ್ಯೋದಯವಾಗುವಾಗ, ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು. ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿಬಂದರು.
וַיְהִי֙ בַּפַּ֣עַם הַשְּׁבִיעִ֔ית תָּקְע֥וּ הַכֹּהֲנִ֖ים בַּשֹּׁופָרֹ֑ות וַיֹּ֨אמֶר יְהֹושֻׁ֤עַ אֶל־הָעָם֙ הָרִ֔יעוּ כִּֽי־נָתַ֧ן יְהוָ֛ה לָכֶ֖ם אֶת־הָעִֽיר׃ | 16 |
ಏಳನೆಯ ಸಾರಿ ಯಾಜಕರು ತುತೂರಿಗಳನ್ನು ಊದುವಾಗ, ಯೆಹೋಶುವನು ಜನರಿಗೆ, “ಆರ್ಭಟಿಸಿರಿ! ಯೆಹೋವ ದೇವರು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾರೆ.
וְהָיְתָ֨ה הָעִ֥יר חֵ֛רֶם הִ֥יא וְכָל־אֲשֶׁר־בָּ֖הּ לַֽיהוָ֑ה רַק֩ רָחָ֨ב הַזֹּונָ֜ה תִּֽחְיֶ֗ה הִ֚יא וְכָל־אֲשֶׁ֣ר אִתָּ֣הּ בַּבַּ֔יִת כִּ֣י הֶחְבְּאַ֔תָה אֶת־הַמַּלְאָכִ֖ים אֲשֶׁ֥ר שָׁלָֽחְנוּ׃ | 17 |
ಆದರೂ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರಿಗೆ ಅರ್ಪಿತವಾದವುಗಳು. ರಾಹಾಬಳೆಂಬ ವೇಶ್ಯೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಆಕೆಯು ಬಚ್ಚಿಟ್ಟಿದ್ದಳು.
וְרַק־אַתֶּם֙ שִׁמְר֣וּ מִן־הַחֵ֔רֶם פֶּֽן־תַּחֲרִ֖ימוּ וּלְקַחְתֶּ֣ם מִן־הַחֵ֑רֶם וְשַׂמְתֶּ֞ם אֶת־מַחֲנֵ֤ה יִשְׂרָאֵל֙ לְחֵ֔רֶם וַעֲכַרְתֶּ֖ם אֹותֹֽו׃ | 18 |
ಆದರೆ ಅರ್ಪಿತವಾದವುಗಳನ್ನು ನೀವು ಮುಟ್ಟಬೇಡಿರಿ. ಹಾಗೆ ಅವುಗಳನ್ನು ತೆಗೆದುಕೊಂಡು ನಿಮಗೆ ನಾಶನವನ್ನು ತಂದುಕೊಳ್ಳಬೇಡಿರಿ. ಇಸ್ರಾಯೇಲಿನ ಪಾಳೆಯವೇ ಶಾಪಕ್ಕೆ ಈಡು ಮಾಡಿ, ತೊಂದರೆ ಪಡಿಸದಂತೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರಿ.
וְכֹ֣ל ׀ כֶּ֣סֶף וְזָהָ֗ב וּכְלֵ֤י נְחֹ֙שֶׁת֙ וּבַרְזֶ֔ל קֹ֥דֶשׁ ה֖וּא לַֽיהוָ֑ה אֹוצַ֥ר יְהוָ֖ה יָבֹֽוא׃ | 19 |
ಎಲ್ಲಾ ಬೆಳ್ಳಿಬಂಗಾರ, ಕಂಚು, ಕಬ್ಬಿಣ ಪಾತ್ರೆಗಳು ಯೆಹೋವ ದೇವರಿಗೆ ಅರ್ಪಿತವಾಗಿರಬೇಕು. ಅವು ಯೆಹೋವ ದೇವರ ಭಂಡಾರಕ್ಕೆ ಸೇರಿರಬೇಕು,” ಎಂದು ಆಜ್ಞಾಪಿಸಿದನು.
וַיָּ֣רַע הָעָ֔ם וַֽיִּתְקְע֖וּ בַּשֹּֽׁפָרֹ֑ות וַיְהִי֩ כִשְׁמֹ֨עַ הָעָ֜ם אֶת־קֹ֣ול הַשֹּׁופָ֗ר וַיָּרִ֤יעוּ הָעָם֙ תְּרוּעָ֣ה גְדֹולָ֔ה וַתִּפֹּ֨ל הַֽחֹומָ֜ה תַּחְתֶּ֗יהָ וַיַּ֨עַל הָעָ֤ם הָעִ֙ירָה֙ אִ֣ישׁ נֶגְדֹּ֔ו וַֽיִּלְכְּד֖וּ אֶת־הָעִֽיר׃ | 20 |
ಕೂಡಲೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತೂರಿಯ ಶಬ್ದವನ್ನು ಜನರು ಕೇಳಿ ಮಹಾಧ್ವನಿಯಿಂದ ಆರ್ಭಟಿಸಿದಾಗ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು. ಹೀಗೆ ಜನರಲ್ಲಿ ಪ್ರತಿಯೊಬ್ಬನು ಮುಂದೆ ನೇರವಾಗಿ ಒಳಗೆ ನುಗ್ಗಿದರು. ಆಗ ಪಟ್ಟಣವು ಅವರಿಗೆ ಸ್ವಾಧೀನವಾಯಿತು.
וַֽיַּחֲרִ֙ימוּ֙ אֶת־כָּל־אֲשֶׁ֣ר בָּעִ֔יר מֵאִישׁ֙ וְעַד־אִשָּׁ֔ה מִנַּ֖עַר וְעַד־זָקֵ֑ן וְעַ֨ד שֹׁ֥ור וָשֶׂ֛ה וַחֲמֹ֖ור לְפִי־חָֽרֶב׃ | 21 |
ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀಪುರುಷರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆಗಳನ್ನೂ ಖಡ್ಗದಿಂದ ಸಂಪೂರ್ಣವಾಗಿ ನಾಶಮಾಡಿದರು.
וְלִשְׁנַ֨יִם הָאֲנָשִׁ֜ים הַֽמְרַגְּלִ֤ים אֶת־הָאָ֙רֶץ֙ אָמַ֣ר יְהֹושֻׁ֔עַ בֹּ֖אוּ בֵּית־הָאִשָּׁ֣ה הַזֹּונָ֑ה וְהֹוצִ֨יאוּ מִשָּׁ֤ם אֶת־הָֽאִשָּׁה֙ וְאֶת־כָּל־אֲשֶׁר־לָ֔הּ כַּאֲשֶׁ֥ר נִשְׁבַּעְתֶּ֖ם לָֽהּ׃ | 22 |
ಆ ನಾಡನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ ಯೆಹೋಶುವನು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳನ್ನೂ ಅವಳಿಗೆ ಇರುವ ಸಮಸ್ತವನ್ನೂ ನೀವು ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತೆಗೆದುಕೊಂಡು ಬನ್ನಿರಿ,” ಎಂದನು.
וַיָּבֹ֜אוּ הַנְּעָרִ֣ים הַֽמְרַגְּלִ֗ים וַיֹּצִ֡יאוּ אֶת־רָ֠חָב וְאֶת־אָבִ֨יהָ וְאֶת־אִמָּ֤הּ וְאֶת־אַחֶ֙יהָ֙ וְאֶת־כָּל־אֲשֶׁר־לָ֔הּ וְאֵ֥ת כָּל־מִשְׁפְּחֹותֶ֖יהָ הֹוצִ֑יאוּ וַיַּ֨נִּיח֔וּם מִח֖וּץ לְמַחֲנֵ֥ה יִשְׂרָאֵֽל׃ | 23 |
ಅದರಂತೆ ಆ ಯೌವನಸ್ಥರು ಒಳಗೆ ಹೋಗಿ, ರಾಹಾಬಳನ್ನೂ ಅವಳ ತಂದೆಯನ್ನೂ ಅವಳ ತಾಯಿಯನ್ನೂ ಅವಳ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಗೋತ್ರದ ಎಲ್ಲಾ ಸಂಬಂಧಿಕರನ್ನೂ ಹೊರಗೆ ಕರೆತಂದು ಇಸ್ರಾಯೇಲ್ ಪಾಳೆಯದ ಹೊರಗೆ ಅವರನ್ನು ಇರಿಸಿದರು.
וְהָעִ֛יר שָׂרְפ֥וּ בָאֵ֖שׁ וְכָל־אֲשֶׁר־בָּ֑הּ רַ֣ק ׀ הַכֶּ֣סֶף וְהַזָּהָ֗ב וּכְלֵ֤י הַנְּחֹ֙שֶׁת֙ וְהַבַּרְזֶ֔ל נָתְנ֖וּ אֹוצַ֥ר בֵּית־יְהוָֽה׃ | 24 |
ಆದರೆ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿಬಂಗಾರವನ್ನೂ ಕಂಚು ಕಬ್ಬಿಣ ಪಾತ್ರೆಗಳನ್ನು ಮಾತ್ರ ಯೆಹೋವ ದೇವರ ಮನೆಯ ಭಂಡಾರದಲ್ಲಿ ಇಟ್ಟರು.
וְֽאֶת־רָחָ֣ב הַ֠זֹּונָה וְאֶת־בֵּ֨ית אָבִ֤יהָ וְאֶת־כָּל־אֲשֶׁר־לָהּ֙ הֶחֱיָ֣ה יְהֹושֻׁ֔עַ וַתֵּ֙שֶׁב֙ בְּקֶ֣רֶב יִשְׂרָאֵ֔ל עַ֖ד הַיֹּ֣ום הַזֶּ֑ה כִּ֤י הֶחְבִּ֙יאָה֙ אֶת־הַמַּלְאָכִ֔ים אֲשֶׁר־שָׁלַ֥ח יְהֹושֻׁ֖עַ לְרַגֵּ֥ל אֶת־יְרִיחֹֽו׃ פ | 25 |
ಆದರೆ ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ, ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದ ಸಮಸ್ತವನ್ನೂ ತಪ್ಪಿಸಿ ಉಳಿಸಿದನು. ಅವಳು ಈ ದಿವಸದವರೆಗೂ ಇಸ್ರಾಯೇಲರಲ್ಲಿ ವಾಸವಾಗಿದ್ದಾಳೆ. ಏಕೆಂದರೆ ಯೆರಿಕೋವನ್ನು ಸಂಚರಿಸಿ ನೋಡಲು, ಯೆಹೋಶುವನು ಕಳುಹಿಸಿದ ಗೂಢಚಾರರನ್ನು ಅವಳು ಬಚ್ಚಿಟ್ಟಿದ್ದಳು.
וַיַּשְׁבַּ֣ע יְהֹושֻׁ֔עַ בָּעֵ֥ת הַהִ֖יא לֵאמֹ֑ר אָר֨וּר הָאִ֜ישׁ לִפְנֵ֣י יְהוָ֗ה אֲשֶׁ֤ר יָקוּם֙ וּבָנָ֞ה אֶת־הָעִ֤יר הַזֹּאת֙ אֶת־יְרִיחֹ֔ו בִּבְכֹרֹ֣ו יְיַסְּדֶ֔נָּה וּבִצְעִירֹ֖ו יַצִּ֥יב דְּלָתֶֽיהָ׃ | 26 |
ಆ ಕಾಲದಲ್ಲಿ ಯೆಹೋಶುವನು ಅವರಿಗೆ ಆಣೆ ಇಟ್ಟು ಹೇಳಿದ್ದೇನೆಂದರೆ, “ಯೆರಿಕೋವೆಂಬ ಈ ನಗರವನ್ನು ಮತ್ತೆ ಕಟ್ಟುವವನು, ಯೆಹೋವ ದೇವರ ದೃಷ್ಟಿಯಲ್ಲಿ ಶಾಪಗ್ರಸ್ತನಾಗುವನು. “ಅದರ ಅಸ್ತಿವಾರವನ್ನು ಹಾಕುವವನು, ಅವನು ತನ್ನ ಚೊಚ್ಚಲು ಮಗನನ್ನು ಕಳೆದುಕೊಳ್ಳುವನು. ಪಟ್ಟಣದ ಬಾಗಿಲುಗಳನ್ನಿಡುವಾಗ ತನ್ನ ಕಿರಿ ಮಗನನ್ನು ಕಳೆದುಕೊಳ್ಳುವನು.”
וַיְהִ֥י יְהוָ֖ה אֶת־יְהֹושֻׁ֑עַ וַיְהִ֥י שָׁמְעֹ֖ו בְּכָל־הָאָֽרֶץ׃ | 27 |
ಯೆಹೋವ ದೇವರು ಯೆಹೋಶುವನ ಸಂಗಡ ಇದ್ದರು. ಅವನ ಕೀರ್ತಿ ದೇಶದಲ್ಲೆಲ್ಲಾ ಹರಡಿತು.