< יִרְמְיָהוּ 37 >

וַיִּ֨מְלָךְ־מֶ֔לֶךְ צִדְקִיָּ֖הוּ בֶּן־יֹֽאשִׁיָּ֑הוּ תַּ֗חַת כָּנְיָ֙הוּ֙ בֶּן־יְהֹ֣ויָקִ֔ים אֲשֶׁ֥ר הִמְלִ֛יךְ נְבוּכַדְרֶאצַּ֥ר מֶֽלֶךְ־בָּבֶ֖ל בְּאֶ֥רֶץ יְהוּדָֽה׃ 1
ಯೋಷೀಯನ ಮಗ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಅರಸನನ್ನಾಗಿ ಮಾಡಿದನು. ಅವನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ, ಅರಸನಾಗಿ ಆಳಿದನು.
וְלֹ֥א שָׁמַ֛ע ה֥וּא וַעֲבָדָ֖יו וְעַ֣ם הָאָ֑רֶץ אֶל־דִּבְרֵ֣י יְהוָ֔ה אֲשֶׁ֣ר דִּבֶּ֔ר בְּיַ֖ד יִרְמְיָ֥הוּ הַנָּבִֽיא׃ 2
ಆದರೆ ಅವನೂ ಅವನ ಸೇವಕರೂ ದೇಶದ ಜನರೂ ಯೆಹೋವ ದೇವರ ಪ್ರವಾದಿಯಾದ ಯೆರೆಮೀಯನಿಂದ ಹೇಳಿಸಿದ ವಾಕ್ಯಗಳಿಗೆ ಕಿವಿಗೊಡಲಿಲ್ಲ.
וַיִּשְׁלַח֩ הַמֶּ֨לֶךְ צִדְקִיָּ֜הוּ אֶת־יְהוּכַ֣ל בֶּן־שֶֽׁלֶמְיָ֗ה וְאֶת־צְפַנְיָ֤הוּ בֶן־מַֽעֲשֵׂיָה֙ הַכֹּהֵ֔ן אֶל־יִרְמְיָ֥הוּ הַנָּבִ֖יא לֵאמֹ֑ר הִתְפַּלֶּל־נָ֣א בַעֲדֵ֔נוּ אֶל־יְהוָ֖ה אֱלֹהֵֽינוּ׃ 3
ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನೂ, ಯಾಜಕನಾದ ಮಾಸೇಯನ ಮಗನಾದ ಚೆಫನ್ಯನನ್ನೂ, ಪ್ರವಾದಿಯಾದ ಯೆರೆಮೀಯನ ಬಳಿಗೆ ಕಳುಹಿಸಿ, “ನಮಗೋಸ್ಕರ ನಮ್ಮ ದೇವರಾದ ಯೆಹೋವ ದೇವರನ್ನು ಪ್ರಾರ್ಥಿಸು,” ಎಂದು ಹೇಳಿಸಿದನು.
וְיִרְמְיָ֕הוּ בָּ֥א וְיֹצֵ֖א בְּתֹ֣וךְ הָעָ֑ם וְלֹֽא־נָתְנ֥וּ אֹתֹ֖ו בֵּ֥ית הַכְּלִיא (הַכְּלֽוּא)׃ 4
ಆಗ ಯೆರೆಮೀಯನು ಜನರೊಳಗೆ ಬರುತ್ತಾ ಹೋಗುತ್ತಾ ಇದ್ದನು. ಏಕೆಂದರೆ ಅವರು ಅವನನ್ನು ಸೆರೆಮನೆಯಲ್ಲಿ ಇಡಲಿಲ್ಲ.
וְחֵ֥יל פַּרְעֹ֖ה יָצָ֣א מִמִּצְרָ֑יִם וַיִּשְׁמְע֨וּ הַכַּשְׂדִּ֜ים הַצָּרִ֤ים עַל־יְרוּשָׁלַ֙͏ִם֙ אֶת־שִׁמְעָ֔ם וַיֵּ֣עָל֔וּ מֵעַ֖ל יְרוּשָׁלָֽ͏ִם׃ פ 5
ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ, ಯೆರೂಸಲೇಮನ್ನು ಬಿಟ್ಟುಹೋದರು.
וַֽיְהִי֙ דְּבַר־יְהוָ֔ה אֶל־יִרְמְיָ֥הוּ הַנָּבִ֖יא לֵאמֹֽר׃ 6
ಆಗ ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಯೆರೆಮೀಯನಿಗೆ ಬಂದಿತು:
כֹּֽה־אָמַ֤ר יְהוָה֙ אֱלֹהֵ֣י יִשְׂרָאֵ֔ל כֹּ֚ה תֹֽאמְרוּ֙ אֶל־מֶ֣לֶךְ יְהוּדָ֔ה הַשֹּׁלֵ֧חַ אֶתְכֶ֛ם אֵלַ֖י לְדָרְשֵׁ֑נִי הִנֵּ֣ה ׀ חֵ֣יל פַּרְעֹ֗ה הַיֹּצֵ֤א לָכֶם֙ לְעֶזְרָ֔ה שָׁ֥ב לְאַרְצֹ֖ו מִצְרָֽיִם׃ 7
“ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದೇನೆಂದರೆ, ಇಗೋ, ನಿಮ್ಮ ಸಹಾಯಕ್ಕೆ ಹೊರಟ, ‘ಫರೋಹನ ಸೈನ್ಯವು, ಅದರ ಸ್ವದೇಶವಾದ ಈಜಿಪ್ಟಿಗೆ ಹಿಂದಿರುಗುವುದು.
וְשָׁ֙בוּ֙ הַכַּשְׂדִּ֔ים וְנִלְחֲמ֖וּ עַל־הָעִ֣יר הַזֹּ֑את וּלְכָדֻ֖הָ וּשְׂרָפֻ֥הָ בָאֵֽשׁ׃ ס 8
ಕಸ್ದೀಯರು ತಿರುಗಿಕೊಂಡು, ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡಿ, ಅದನ್ನು ಹಿಡಿದು ಬೆಂಕಿಯಿಂದ ಸುಡುವರು.’
כֹּ֣ה ׀ אָמַ֣ר יְהוָ֗ה אַל־תַּשִּׁ֤אוּ נַפְשֹֽׁתֵיכֶם֙ לֵאמֹ֔ר הָלֹ֛ךְ יֵלְכ֥וּ מֵעָלֵ֖ינוּ הַכַּשְׂדִּ֑ים כִּי־לֹ֖א יֵלֵֽכוּ׃ 9
“ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಕಸ್ದೀಯರು ನಿಜವಾಗಿ ನಮ್ಮನ್ನು ಬಿಟ್ಟು ಹೋಗುವರು,’ ಎಂದುಕೊಂಡು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ; ಏಕೆಂದರೆ ಅವರು ತೊಲಗುವುದೇ ಇಲ್ಲ.
כִּ֣י אִם־הִכִּיתֶ֞ם כָּל־חֵ֤יל כַּשְׂדִּים֙ הַנִּלְחָמִ֣ים אִתְּכֶ֔ם וְנִ֨שְׁאֲרוּ בָ֔ם אֲנָשִׁ֖ים מְדֻקָּרִ֑ים אִ֤ישׁ בְּאָהֳלֹו֙ יָק֔וּמוּ וְשָֽׂרְפ֛וּ אֶת־הָעִ֥יר הַזֹּ֖את בָּאֵֽשׁ׃ 10
ನಿಮ್ಮ ಸಂಗಡ ಯುದ್ಧಮಾಡುವ ಕಸ್ದೀಯರ ಸೈನ್ಯವನ್ನೆಲ್ಲಾ ನೀವು ಹೊಡೆದಿದ್ದಾಗ್ಯೂ, ಗಾಯಪಟ್ಟ ಮನುಷ್ಯರು ಮಾತ್ರ ಅವರೊಳಗೆ ಉಳಿದಿದ್ದಾಗ್ಯೂ ಅವರೇ ತಮ್ಮ ತಮ್ಮ ಡೇರೆಗಳಲ್ಲಿ ಎದ್ದು, ಈ ಪಟ್ಟಣವನ್ನು ಬೆಂಕಿಯಿಂದ ಸುಡುವರು.”
וְהָיָ֗ה בְּהֵֽעָלֹות֙ חֵ֣יל הַכַּשְׂדִּ֔ים מֵעַ֖ל יְרֽוּשָׁלָ֑͏ִם מִפְּנֵ֖י חֵ֥יל פַּרְעֹֽה׃ ס 11
ಕಸ್ದೀಯರ ದಂಡು ಫರೋಹನ ದಂಡಿನ ಭಯದ ನಿಮಿತ್ತ, ಯೆರೂಸಲೇಮನ್ನು ಬಿಟ್ಟುಹೋದ ಮೇಲೆ,
וַיֵּצֵ֤א יִרְמְיָ֙הוּ֙ מִיר֣וּשָׁלַ֔͏ִם לָלֶ֖כֶת אֶ֣רֶץ בִּנְיָמִ֑ן לַחֲלִ֥ק מִשָּׁ֖ם בְּתֹ֥וךְ הָעָֽם׃ 12
ಯೆರೆಮೀಯನು ಬೆನ್ಯಾಮೀನನ ದೇಶಕ್ಕೆ ಹೋಗುವುದಕ್ಕೂ, ಜನರ ಮಧ್ಯದಿಂದ ತನ್ನ ಪಾಲನ್ನು ತೆಗೆದುಕೊಳ್ಳುವುದಕ್ಕೂ ಯೆರೂಸಲೇಮಿನಿಂದ ಹೊರಟನು.
וַיְהִי־ה֞וּא בְּשַׁ֣עַר בִּנְיָמִ֗ן וְשָׁם֙ בַּ֣עַל פְּקִדֻ֔ת וּשְׁמֹו֙ יִרְאִיָּ֔יה בֶּן־שֶֽׁלֶמְיָ֖ה בֶּן־חֲנַנְיָ֑ה וַיִּתְפֹּ֞שׂ אֶֽת־יִרְמְיָ֤הוּ הַנָּבִיא֙ לֵאמֹ֔ר אֶל־הַכַּשְׂדִּ֖ים אַתָּ֥ה נֹפֵֽל׃ 13
ಆಗ ಅವನು ಬೆನ್ಯಾಮೀನನ ಬಾಗಿಲಲ್ಲಿ ಇರುವಾಗ, ಅಲ್ಲಿ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನಾದ ಇರೀಯನೆಂಬ ಪಹರೆಯ ನಾಯಕನು ಇದ್ದನು. ಇವನು ಪ್ರವಾದಿಯಾದ ಯೆರೆಮೀಯನನ್ನು, “ನೀನು ಕಸ್ದೀಯರ ಪಕ್ಷಕ್ಕೆ ಸೇರುತ್ತೀ,” ಎಂದು ಹೇಳಿ ಹಿಡಿದನು.
וַיֹּ֨אמֶר יִרְמְיָ֜הוּ שֶׁ֗קֶר אֵינֶ֤נִּי נֹפֵל֙ עַל־הַכַּשְׂדִּ֔ים וְלֹ֥א שָׁמַ֖ע אֵלָ֑יו וַיִּתְפֹּ֤שׂ יִרְאִיָּיה֙ בְּיִרְמְיָ֔הוּ וַיְבִאֵ֖הוּ אֶל־הַשָּׂרִֽים׃ 14
ಆದರೆ ಯೆರೆಮೀಯನು ಹೇಳಿದ್ದೇನೆಂದರೆ, ಸುಳ್ಳು; ನಾನು ಕಸ್ದೀಯರ ಕಡೆಗೆ ಸೇರುವವನಲ್ಲ. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆಮೀಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು.
וַיִּקְצְפ֧וּ הַשָּׂרִ֛ים עַֽל־יִרְמְיָ֖הוּ וְהִכּ֣וּ אֹתֹ֑ו וְנָתְנ֨וּ אֹותֹ֜ו בֵּ֣ית הָאֵס֗וּר בֵּ֚ית יְהֹונָתָ֣ן הַסֹּפֵ֔ר כִּֽי־אֹתֹ֥ו עָשׂ֖וּ לְבֵ֥ית הַכֶּֽלֶא׃ 15
ಆಗ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು, ಅವನನ್ನು ಹೊಡೆದು, ಲೇಖಕನಾದ ಯೋನಾತಾನನ ಮನೆಯಲ್ಲಿ ಬಂಧನದಲ್ಲಿ ಇಟ್ಟರು. ಏಕೆಂದರೆ ಅದನ್ನು ಸೆರೆಮನೆಯಾಗಿ ಮಾಡಿದ್ದರು.
כִּ֣י בָ֧א יִרְמְיָ֛הוּ אֶל־בֵּ֥ית הַבֹּ֖ור וְאֶל־הַֽחֲנֻ֑יֹות וַיֵּֽשֶׁב־שָׁ֥ם יִרְמְיָ֖הוּ יָמִ֥ים רַבִּֽים׃ פ 16
ಯೆರೆಮೀಯನು ಆ ಬಂಧಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು.
וַיִּשְׁלַח֩ הַמֶּ֨לֶךְ צִדְקִיָּ֜הוּ וַיִּקָּחֵ֗הוּ וַיִּשְׁאָלֵ֨הוּ הַמֶּ֤לֶךְ בְּבֵיתֹו֙ בַּסֵּ֔תֶר וַיֹּ֕אמֶר הֲיֵ֥שׁ דָּבָ֖ר מֵאֵ֣ת יְהוָ֑ה וַיֹּ֤אמֶר יִרְמְיָ֙הוּ֙ יֵ֔שׁ וַיֹּ֕אמֶר בְּיַ֥ד מֶֽלֶךְ־בָּבֶ֖ל תִּנָּתֵֽן׃ ס 17
ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, ಅರಮನೆಗೆ ಕರೆತಂದನು, “ಯೆಹೋವ ದೇವರಿಂದ ಮಾತು ಉಂಟೋ,” ಎಂದು ಹೇಳಿದನು. ಯೆರೆಮೀಯನು, “ಹೌದು, ಉಂಟು. ನೀನು ಬಾಬಿಲೋನಿನ ಅರಸನ ಕೈಗೆಸಿಕ್ಕಿಬೀಳುವೆ,” ಎಂದನು.
וַיֹּ֣אמֶר יִרְמְיָ֔הוּ אֶל־הַמֶּ֖לֶךְ צִדְקִיָּ֑הוּ מֶה֩ חָטָ֨אתִֽי לְךָ֤ וְלַעֲבָדֶ֙יךָ֙ וְלָעָ֣ם הַזֶּ֔ה כִּֽי־נְתַתֶּ֥ם אֹותִ֖י אֶל־בֵּ֥ית הַכֶּֽלֶא׃ 18
ಇದಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ ಹೇಳಿದ್ದೇನೆಂದರೆ: “ನೀವು ನನ್ನನ್ನು ಸೆರೆಮನೆಯಲ್ಲಿ ಹಾಕುವ ಹಾಗೆ ನಾನು ನಿನಗೂ, ನಿನ್ನ ಸೇವಕರಿಗೂ, ಈ ಜನರಿಗೂ ವಿರೋಧವಾಗಿ ಏನು ಅಪರಾಧ ಮಾಡಿದ್ದೇನೆ?
וְאַיֹּו (וְאַיֵּה֙) נְבִ֣יאֵיכֶ֔ם אֲשֶׁר־נִבְּא֥וּ לָכֶ֖ם לֵאמֹ֑ר לֹֽא־יָבֹ֤א מֶֽלֶךְ־בָּבֶל֙ עֲלֵיכֶ֔ם וְעַ֖ל הָאָ֥רֶץ הַזֹּֽאת׃ 19
ಬಾಬಿಲೋನಿನ ಅರಸನು ನಿಮ್ಮ ಮೇಲೆಯೂ, ಈ ದೇಶದ ಮೇಲೆಯೂ ಬರುವುದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?
וְעַתָּ֕ה שְֽׁמַֽע־נָ֖א אֲדֹנִ֣י הַמֶּ֑לֶךְ תִּפָּל־נָ֤א תְחִנָּתִי֙ לְפָנֶ֔יךָ וְאַל־תְּשִׁבֵ֗נִי בֵּ֚ית יְהֹונָתָ֣ן הַסֹּפֵ֔ר וְלֹ֥א אָמ֖וּת שָֽׁם׃ 20
ಆದ್ದರಿಂದ ಈಗ ಕಿವಿಗೊಡು. ನನ್ನ ಒಡೆಯನಾದ ಅರಸನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀಕಾರವಾಗಲಿ. ಲೇಖಕನಾದ ಯೋನಾತಾನನ ಮನೆಗೆ ನಾನು ಅಲ್ಲಿ ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ,” ಎಂದನು.
וַיְצַוֶּ֞ה הַמֶּ֣לֶךְ צִדְקִיָּ֗הוּ וַיַּפְקִ֣דוּ אֶֽת־יִרְמְיָהוּ֮ בַּחֲצַ֣ר הַמַּטָּרָה֒ וְנָתֹן֩ לֹ֨ו כִכַּר־לֶ֤חֶם לַיֹּום֙ מִח֣וּץ הָאֹפִ֔ים עַד־תֹּ֥ם כָּל־הַלֶּ֖חֶם מִן־הָעִ֑יר וַיֵּ֣שֶׁב יִרְמְיָ֔הוּ בַּחֲצַ֖ר הַמַּטָּרָֽה׃ 21
ಆಗ ಅರಸನಾದ ಚಿದ್ಕೀಯನು ಯೆರೆಮೀಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ, ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವವರೆಗೆ, ಅವನಿಗೆ ರೊಟ್ಟಿಗಾರರ ಬೀದಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿ ಕೊಡಬೇಕೆಂದು ಆಜ್ಞಾಪಿಸಿದನು; ಹಾಗೆಯೇ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ನಿಂತನು.

< יִרְמְיָהוּ 37 >