< דְּבָרִים 24 >
כִּֽי־יִקַּ֥ח אִ֛ישׁ אִשָּׁ֖ה וּבְעָלָ֑הּ וְהָיָ֞ה אִם־לֹ֧א תִמְצָא־חֵ֣ן בְּעֵינָ֗יו כִּי־מָ֤צָא בָהּ֙ עֶרְוַ֣ת דָּבָ֔ר וְכָ֨תַב לָ֜הּ סֵ֤פֶר כְּרִיתֻת֙ וְנָתַ֣ן בְּיָדָ֔הּ וְשִׁלְּחָ֖הּ מִבֵּיתֹֽו׃ | 1 |
ಒಬ್ಬನು ತಾನು ಮದುವೆಮಾಡಿಕೊಂಡ ಮಹಿಳೆಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಅಸಂತೃಪ್ತನಾದರೆ, ವಿವಾಹ ವಿಚ್ಛೇದನ ಪತ್ರವನ್ನು ಬರೆದು, ಅವಳ ಕೈಯಲ್ಲಿ ಕೊಟ್ಟು, ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಟ್ಟಾಗ,
וְיָצְאָ֖ה מִבֵּיתֹ֑ו וְהָלְכָ֖ה וְהָיְתָ֥ה לְאִישׁ־אַחֵֽר׃ | 2 |
ಅವಳು ಅವನ ಮನೆಯನ್ನು ಬಿಟ್ಟುಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗಬಹುದು.
וּשְׂנֵאָהּ֮ הָאִ֣ישׁ הָאַחֲרֹון֒ וְכָ֨תַב לָ֜הּ סֵ֤פֶר כְּרִיתֻת֙ וְנָתַ֣ן בְּיָדָ֔הּ וְשִׁלְּחָ֖הּ מִבֵּיתֹ֑ו אֹ֣ו כִ֤י יָמוּת֙ הָאִ֣ישׁ הָאַחֲרֹ֔ון אֲשֶׁר־לְקָחָ֥הּ לֹ֖ו לְאִשָּֽׁה׃ | 3 |
ಆ ಮತ್ತೊಬ್ಬ ಗಂಡನು ಅವಳನ್ನು ಹಗೆಮಾಡಿ, ವಿವಾಹ ವಿಚ್ಛೇದನ ಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು, ತನ್ನ ಮನೆಯಿಂದ ಕಳುಹಿಸಿಬಿಟ್ಟರೆ, ಇಲ್ಲವೆ ಆ ಎರಡನೆಯ ಗಂಡನು ಸತ್ತರೆ,
לֹא־יוּכַ֣ל בַּעְלָ֣הּ הָרִאשֹׁ֣ון אֲשֶֽׁר־שִׁ֠לְּחָהּ לָשׁ֨וּב לְקַחְתָּ֜הּ לִהְיֹ֧ות לֹ֣ו לְאִשָּׁ֗ה אַחֲרֵי֙ אֲשֶׁ֣ר הֻטַּמָּ֔אָה כִּֽי־תֹועֵבָ֥ה הִ֖וא לִפְנֵ֣י יְהוָ֑ה וְלֹ֤א תַחֲטִיא֙ אֶת־הָאָ֔רֶץ אֲשֶׁר֙ יְהוָ֣ה אֱלֹהֶ֔יךָ נֹתֵ֥ן לְךָ֖ נַחֲלָֽה׃ ס | 4 |
ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಹೆಂಡತಿಯಾಗಿ ಸ್ವೀಕರಿಸಬಾರದು. ಅದು ಯೆಹೋವ ದೇವರ ಮುಂದೆ ಅಸಹ್ಯವೇ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ದೋಷವುಂಟಾಗಲು ಅವಕಾಶ ಕೊಡಬಾರದು.
כִּֽי־יִקַּ֥ח אִישׁ֙ אִשָּׁ֣ה חֲדָשָׁ֔ה לֹ֤א יֵצֵא֙ בַּצָּבָ֔א וְלֹא־יַעֲבֹ֥ר עָלָ֖יו לְכָל־דָּבָ֑ר נָקִ֞י יִהְיֶ֤ה לְבֵיתֹו֙ שָׁנָ֣ה אֶחָ֔ת וְשִׂמַּ֖ח אֶת־אִשְׁתֹּ֥ו אֲשֶׁר־לָקָֽח׃ ס | 5 |
ಒಬ್ಬನು ಹೊಸದಾಗಿ ಮದುವೆಯಾಗಿದ್ದರೆ, ಅವನನ್ನು ಯುದ್ಧಕ್ಕೆ ಕಳುಹಿಸಬಾರದು ಅಥವಾ ಜವಾಬ್ದಾರಿಯ ಯಾವುದೊಂದೂ ಕೆಲಸವನ್ನು ಅವನಿಂದ ಮಾಡಿಸಬಾರದು. ಅವನು ಒಂದು ವರ್ಷ ಸ್ವತಂತ್ರನಾಗಿ ತನ್ನ ಮನೆಯಲ್ಲಿದ್ದು, ತಾನು ಮದುವೆಯಾದ ಹೆಂಡತಿಯೊಡನೆ ಸುಖವಾಗಿರಲಿ.
לֹא־יַחֲבֹ֥ל רֵחַ֖יִם וָרָ֑כֶב כִּי־נֶ֖פֶשׁ ה֥וּא חֹבֵֽל׃ ס | 6 |
ಬೀಸುವ ಕಲ್ಲಿನಲ್ಲಿ ಅಡಿಗಲ್ಲನ್ನಾದರೂ, ಮೇಲಿನ ಕಲ್ಲನ್ನಾದರೂ ಒತ್ತೆಯಾಗಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದರೆ, ಅದು ವ್ಯಕ್ತಿಯ ಜೀವನೋಪಾಯವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಿರುವುದು.
כִּי־יִמָּצֵ֣א אִ֗ישׁ גֹּנֵ֨ב נֶ֤פֶשׁ מֵאֶחָיו֙ מִבְּנֵ֣י יִשְׂרָאֵ֔ל וְהִתְעַמֶּר־בֹּ֖ו וּמְכָרֹ֑ו וּמֵת֙ הַגַּנָּ֣ב הַה֔וּא וּבִֽעַרְתָּ֥ הָרָ֖ע מִקִּרְבֶּֽךָ׃ | 7 |
ಒಬ್ಬನು ತನ್ನ ಸಹೋದರರಾದ ಇಸ್ರಾಯೇಲರಲ್ಲಿ ಒಬ್ಬನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ನಡುವೆಯಿಂದ ತೆಗೆದುಹಾಕಬೇಕು.
הִשָּׁ֧מֶר בְּנֶֽגַע־הַצָּרַ֛עַת לִשְׁמֹ֥ר מְאֹ֖ד וְלַעֲשֹׂ֑ות כְּכֹל֩ אֲשֶׁר־יֹור֨וּ אֶתְכֶ֜ם הַכֹּהֲנִ֧ים הַלְוִיִּ֛ם כַּאֲשֶׁ֥ר צִוִּיתִ֖ם תִּשְׁמְר֥וּ לַעֲשֹֽׂות׃ ס | 8 |
ಕುಷ್ಠರೋಗಿಗಳ ವಿಷಯದಲ್ಲಿ ಲೇವಿಯರಾದ ಯಾಜಕರು ನಿಮಗೆ ಬೋಧಿಸುವುದನ್ನೆಲ್ಲಾ ನೀವು ಜಾಗ್ರತೆಯಿಂದ ಕಾಪಾಡಿ ಕೈಗೊಳ್ಳುವ ಹಾಗೆ ನೋಡಿಕೊಳ್ಳಿ. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನು ನೀವು ಕಾಪಾಡಿ ಕೈಗೊಳ್ಳಬೇಕು.
זָכֹ֕ור אֵ֧ת אֲשֶׁר־עָשָׂ֛ה יְהוָ֥ה אֱלֹהֶ֖יךָ לְמִרְיָ֑ם בַּדֶּ֖רֶךְ בְּצֵאתְכֶ֥ם מִמִּצְרָֽיִם׃ ס | 9 |
ನೀವು ಈಜಿಪ್ಟಿನಿಂದ ಹೊರಗೆ ಬಂದಾಗ, ಮಾರ್ಗದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ಮಿರ್ಯಾಮಗಳಿಗೆ ಮಾಡಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ.
כִּֽי־תַשֶּׁ֥ה בְרֵֽעֲךָ מַשַּׁ֣את מְא֑וּמָה לֹא־תָבֹ֥א אֶל־בֵּיתֹ֖ו לַעֲבֹ֥ט עֲבֹטֹֽו׃ | 10 |
ನಿನ್ನ ನೆರೆಯವನಿಗೆ ನೀವು ಯಾವುದೇ ರೀತಿಯ ಸಾಲಕೊಟ್ಟರೆ, ಅವನ ಒತ್ತೆಯನ್ನು ಕೇಳಲು ಅವನ ಮನೆಯಲ್ಲಿ ಪ್ರವೇಶಿಸಬಾರದು.
בַּח֖וּץ תַּעֲמֹ֑ד וְהָאִ֗ישׁ אֲשֶׁ֤ר אַתָּה֙ נֹשֶׁ֣ה בֹ֔ו יֹוצִ֥יא אֵלֶ֛יךָ אֶֽת־הַעֲבֹ֖וט הַחֽוּצָה׃ | 11 |
ನೀನು ಹೊರಗೆ ನಿಂತಿರಬೇಕು. ಸಾಲ ಕೊಟ್ಟವನೇ ಒತ್ತೆಯನ್ನು ನಿನಗೆ ಹೊರಗೆ ತರಬೇಕು.
וְאִם־אִ֥ישׁ עָנִ֖י ה֑וּא לֹ֥א תִשְׁכַּ֖ב בַּעֲבֹטֹֽו׃ | 12 |
ಅವನು ಬಡವನಾದರೆ, ಅವನ ಒತ್ತೆಯನ್ನು ಇಟ್ಟುಕೊಂಡು ರಾತ್ರಿ ಮಲಗಬೇಡ.
הָשֵׁב֩ תָּשִׁ֨יב לֹ֤ו אֶֽת־הַעֲבֹוט֙ כְּבֹ֣א הַשֶּׁ֔מֶשׁ וְשָׁכַ֥ב בְּשַׂלְמָתֹ֖ו וּבֵֽרֲכֶ֑ךָּ וּלְךָ֙ תִּהְיֶ֣ה צְדָקָ֔ה לִפְנֵ֖י יְהוָ֥ה אֱלֹהֶֽיךָ׃ ס | 13 |
ನಿನ್ನ ನೆರೆಯವನು ಅದರಲ್ಲಿ ಮಲಗಲು ಸಾಯಂಕಾಲದ ಹೊತ್ತಿಗೆ ಅವನು ಹೊದ್ದುಕೊಳ್ಳುವ ವಸ್ತ್ರವನ್ನು ಹಿಂತಿರುಗಿಸು. ಆಗ ಅವನು ನಿನ್ನನ್ನು ಆಶೀರ್ವದಿಸುವನು. ನೀನು ಮಾಡಿದ್ದು ನಿನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ನೀತಿಯ ಕಾರ್ಯವೆಂದು ಪರಿಗಣಿಸಲಾಗುವುದು.
לֹא־תַעֲשֹׁ֥ק שָׂכִ֖יר עָנִ֣י וְאֶבְיֹ֑ון מֵאַחֶ֕יךָ אֹ֧ו מִגֵּרְךָ֛ אֲשֶׁ֥ר בְּאַרְצְךָ֖ בִּשְׁעָרֶֽיךָ׃ | 14 |
ನಿನ್ನ ನಾಡಿನ ಸಹೋದರನಾಗಲಿ, ಪರದೇಶಿಯವನಾಗಲಿ, ಬಡ ಮತ್ತು ನಿರ್ಗತಿಕನಾಗಿರುವ ಕೂಲಿಯವನನ್ನು ಬಾಧಿಸಬಾರದು.
בְּיֹומֹו֩ תִתֵּ֨ן שְׂכָרֹ֜ו וְֽלֹא־תָבֹ֧וא עָלָ֣יו הַשֶּׁ֗מֶשׁ כִּ֤י עָנִי֙ ה֔וּא וְאֵלָ֕יו ה֥וּא נֹשֵׂ֖א אֶת־נַפְשֹׁ֑ו וְלֹֽא־יִקְרָ֤א עָלֶ֙יךָ֙ אֶל־יְהוָ֔ה וְהָיָ֥ה בְךָ֖ חֵֽטְא׃ ס | 15 |
ಅವನ ದಿನದ ಕೂಲಿಯನ್ನು ಆ ದಿನದಲ್ಲೇ ಸೂರ್ಯನು ಮುಳುಗುವುದರೊಳಗೆ ಅವನಿಗೆ ಕೊಡಬೇಕು. ಏಕೆಂದರೆ ಅವನು ಬಡವನಾಗಿದ್ದರಿಂದ ಅದನ್ನೇ ಎದುರು ನೋಡುತ್ತಿರುತ್ತಾನೆ. ನೀವು ಕೊಡದಿದ್ದರೆ, ಅವನು ನಿನಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆಯಿಡುವನು. ಆಗ ನಿನ್ನ ಮೇಲೆ ಪಾಪದ ಹೊರೆ ಬಿದ್ದೀತು.
לֹֽא־יוּמְת֤וּ אָבֹות֙ עַל־בָּנִ֔ים וּבָנִ֖ים לֹא־יוּמְת֣וּ עַל־אָבֹ֑ות אִ֥ישׁ בְּחֶטְאֹ֖ו יוּמָֽתוּ׃ ס | 16 |
ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು.
לֹ֣א תַטֶּ֔ה מִשְׁפַּ֖ט גֵּ֣ר יָתֹ֑ום וְלֹ֣א תַחֲבֹ֔ל בֶּ֖גֶד אַלְמָנָֽה׃ | 17 |
ಪರನಿಗೂ, ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸಬೇಡ. ವಿಧವೆಯಿಂದ ಉಡುವ ವಸ್ತ್ರವನ್ನು ಒತ್ತೆಯಾಗಿ ತೆಗೆದುಕೊಳ್ಳಬೇಡ.
וְזָכַרְתָּ֗ כִּ֣י עֶ֤בֶד הָיִ֙יתָ֙ בְּמִצְרַ֔יִם וַֽיִּפְדְּךָ֛ יְהוָ֥ה אֱלֹהֶ֖יךָ מִשָּׁ֑ם עַל־כֵּ֞ן אָנֹכִ֤י מְצַוְּךָ֙ לַעֲשֹׂ֔ות אֶת־הַדָּבָ֖ר הַזֶּֽה׃ ס | 18 |
ನೀನು ಈಜಿಪ್ಟಿನಲ್ಲಿ ದಾಸನಾಗಿದ್ದೆ ಎಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದ್ದರಿಂದ ಈ ಕಾರ್ಯಗಳನ್ನೆಲ್ಲಾ ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
כִּ֣י תִקְצֹר֩ קְצִֽירְךָ֨ בְשָׂדֶ֜ךָ וְשֽׁ͏ָכַחְתָּ֧ עֹ֣מֶר בַּשָּׂדֶ֗ה לֹ֤א תָשׁוּב֙ לְקַחְתֹּ֔ו לַגֵּ֛ר לַיָּתֹ֥ום וְלָאַלְמָנָ֖ה יִהְיֶ֑ה לְמַ֤עַן יְבָרֶכְךָ֙ יְהוָ֣ה אֱלֹהֶ֔יךָ בְּכֹ֖ל מַעֲשֵׂ֥ה יָדֶֽיךָ׃ | 19 |
ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ, ಹೊಲದಲ್ಲಿ ಸಿವುಡನ್ನು ಮರೆತುಬಿಟ್ಟರೆ, ಅದನ್ನು ತೆಗೆದುಕೊಳ್ಳುವುದಕ್ಕೆ ತಿರುಗಿಕೊಳ್ಳಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ. ನೀವು ಹೀಗೆ ನಡೆದುಕೊಂಡರೆ, ನಿನ್ನ ದೇವರಾದ ಯೆಹೋವ ದೇವರು ನಿನ್ನ ಎಲ್ಲಾ ದುಡಿಮೆಯಲ್ಲಿ ನಿನ್ನನ್ನು ಆಶೀರ್ವದಿಸುವರು.
כִּ֤י תַחְבֹּט֙ זֵֽיתְךָ֔ לֹ֥א תְפָאֵ֖ר אַחֲרֶ֑יךָ לַגֵּ֛ר לַיָּתֹ֥ום וְלָאַלְמָנָ֖ה יִהְיֶֽה׃ ס | 20 |
ಓಲಿವ್ ಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವದಕ್ಕೆ ಹೋಗಬಾರದು, ಮಿಕ್ಕಿದ್ದನ್ನು ಪರದೇಶದವನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.
כִּ֤י תִבְצֹר֙ כַּרְמְךָ֔ לֹ֥א תְעֹולֵ֖ל אַחֲרֶ֑יךָ לַגֵּ֛ר לַיָּתֹ֥ום וְלָאַלְמָנָ֖ה יִהְיֶֽה׃ | 21 |
ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು. ಪರದೇಶಿ, ತಂದೆತಾಯಿ ಇಲ್ಲದ ವ್ಯಕ್ತಿ, ವಿಧವೆ ಇಂಥವರಿಗಾಗಿ ಅದನ್ನು ಬಿಟ್ಟುಬಿಡು.
וְזָ֣כַרְתָּ֔ כִּי־עֶ֥בֶד הָיִ֖יתָ בְּאֶ֣רֶץ מִצְרָ֑יִם עַל־כֵּ֞ן אָנֹכִ֤י מְצַוְּךָ֙ לַעֲשֹׂ֔ות אֶת־הַדָּבָ֖ר הַזֶּֽה׃ ס | 22 |
ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿ ವಾಸವಾಗಿದ್ದಿರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ.