< 2 דִּבְרֵי הַיָּמִים 27 >
בֶּן־עֶשְׂרִ֨ים וְחָמֵ֤שׁ שָׁנָה֙ יֹותָ֣ם בְּמָלְכֹ֔ו וְשֵׁשׁ־עֶשְׂרֵ֣ה שָׁנָ֔ה מָלַ֖ךְ בִּֽירוּשָׁלָ֑͏ִם וְשֵׁ֣ם אִמֹּ֔ו יְרוּשָׁ֖ה בַּת־צָדֹֽוק׃ | 1 |
ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.
וַיַּ֨עַשׂ הַיָּשָׁ֜ר בְּעֵינֵ֣י יְהוָ֗ה כְּכֹ֤ל אֲשֶׁר־עָשָׂה֙ עֻזִּיָּ֣הוּ אָבִ֔יו רַ֕ק לֹא־בָ֖א אֶל־הֵיכַ֣ל יְהוָ֑ה וְעֹ֥וד הָעָ֖ם מַשְׁחִיתִֽים׃ | 2 |
ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. ಆದರೆ ಅವನ ತಂದೆಯಂತೆ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಲಿಲ್ಲ. ಆಗ ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.
ה֗וּא בָּנָ֛ה אֶת־שַׁ֥עַר בֵּית־יְהוָ֖ה הָעֶלְיֹ֑ון וּבְחֹומַ֥ת הָעֹ֛פֶל בָּנָ֖ה לָרֹֽב׃ | 3 |
ಅವನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿ, ಓಫೇಲ್ ಗೋಡೆಯನ್ನು ಎತ್ತರವಾಗಿ ಕಟ್ಟಿಸಿದನು.
וְעָרִ֥ים בָּנָ֖ה בְּהַר־יְהוּדָ֑ה וּבֶחֳרָשִׁ֣ים בָּנָ֔ה בִּֽירָנִיֹּ֖ות וּמִגְדָּלִֽים׃ | 4 |
ಇದಲ್ಲದೆ ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ ಕಾಡುಗಳ ಪ್ರದೇಶದಲ್ಲಿ ಕೋಟೆಗಳನ್ನೂ ಬುರುಜುಗಳನ್ನೂ ಕಟ್ಟಿಸಿದನು.
וְ֠הוּא נִלְחַ֞ם עִם־מֶ֣לֶךְ בְּנֵי־עַמֹּון֮ וַיֶּחֱזַ֣ק עֲלֵיהֶם֒ וַיִּתְּנוּ־לֹ֨ו בְנֵֽי־עַמֹּ֜ון בַּשָּׁנָ֣ה הַהִ֗יא מֵאָה֙ כִּכַּר־כֶּ֔סֶף וַעֲשֶׂ֨רֶת אֲלָפִ֤ים כֹּרִים֙ חִטִּ֔ים וּשְׂעֹורִ֖ים עֲשֶׂ֣רֶת אֲלָפִ֑ים זֹ֗את הֵשִׁ֤יבוּ לֹו֙ בְּנֵ֣י עַמֹּ֔ון ס וּבַשָּׁנָ֥ה הַשֵּׁנִ֖ית וְהַשְּׁלִשִֽׁית׃ | 5 |
ಯೋತಾಮನು ಅಮ್ಮೋನ್ಯರ ಅರಸನ ಸಂಗಡ ಯುದ್ಧಮಾಡಿ ಅವನನ್ನು ಜಯಿಸಿದನು. ಆದ್ದರಿಂದ ಅಮ್ಮೋನಿಯರು ಅದೇ ವರ್ಷದಲ್ಲಿ 3,400 ಕಿಲೋಗ್ರಾಂ ಬೆಳ್ಳಿ, 1,600 ಮೆಟ್ರಿಕ್ ಟನ್ ಗೋಧಿ, 1,350 ಮೆಟ್ರಿಕ್ ಟನ್ ಜವೆಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನಿಯರು ಎರಡನೆಯ ವರ್ಷದಲ್ಲಿಯೂ, ಮೂರನೆಯ ವರ್ಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.
וַיִּתְחַזֵּ֖ק יֹותָ֑ם כִּ֚י הֵכִ֣ין דְּרָכָ֔יו לִפְנֵ֖י יְהוָ֥ה אֱלֹהָֽיו׃ | 6 |
ಹೀಗೆ ಯೋತಾಮನು ತನ್ನ ದೇವರಾದ ಯೆಹೋವ ದೇವರ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿಕೊಂಡದ್ದರಿಂದ ಅವನು ಬಲಗೊಂಡನು.
וְיֶתֶר֙ דִּבְרֵ֣י יֹותָ֔ם וְכָל־מִלְחֲמֹתָ֖יו וּדְרָכָ֑יו הִנָּ֣ם כְּתוּבִ֔ים עַל־סֵ֥פֶר מַלְכֵֽי־יִשְׂרָאֵ֖ל וִיהוּדָֽה׃ | 7 |
ಯೋತಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಯುದ್ಧಗಳೂ, ಅವನ ಮಾರ್ಗಗಳೂ, ಅವು ಇಸ್ರಾಯೇಲರ ಮತ್ತು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
בֶּן־עֶשְׂרִ֧ים וְחָמֵ֛שׁ שָׁנָ֖ה הָיָ֣ה בְמָלְכֹ֑ו וְשֵׁשׁ־עֶשְׂרֵ֣ה שָׁנָ֔ה מָלַ֖ךְ בִּירוּשָׁלָֽ͏ִם׃ | 8 |
ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು.
וַיִּשְׁכַּ֤ב יֹותָם֙ עִם־אֲבֹתָ֔יו וַיִּקְבְּר֥וּ אֹתֹ֖ו בְּעִ֣יר דָּוִ֑יד וַיִּמְלֹ֛ךְ אָחָ֥ז בְּנֹ֖ו תַּחְתָּֽיו׃ פ | 9 |
ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.