< 2 דִּבְרֵי הַיָּמִים 15 >
וַעֲזַרְיָ֙הוּ֙ בֶּן־עֹודֵ֔ד הָיְתָ֥ה עָלָ֖יו ר֥וּחַ אֱלֹהִֽים׃ | 1 |
ಆಗ ದೇವರ ಆತ್ಮವು ಓದೇದನ ಮಗನಾದ ಅಜರ್ಯನ ಮೇಲೆ ಬಂದದ್ದರಿಂದ,
וַיֵּצֵא֮ לִפְנֵ֣י אָסָא֒ וַיֹּ֣אמֶר לֹ֔ו שְׁמָע֕וּנִי אָסָ֖א וְכָל־יְהוּדָ֣ה וּבִנְיָמִ֑ן יְהוָ֤ה עִמָּכֶם֙ בִּֽהְיֹֽותְכֶ֣ם עִמֹּ֔ו וְאִֽם־תִּדְרְשֻׁ֙הוּ֙ יִמָּצֵ֣א לָכֶ֔ם וְאִם־תַּעַזְבֻ֖הוּ יַעֲזֹ֥ב אֶתְכֶֽם׃ ס | 2 |
ಅವನು ಆಸನನ್ನು ಎದುರುಗೊಳ್ಳಲು ಹೊರಟುಬಂದು, ಅವನಿಗೆ, “ಆಸನೇ, ಯೆಹೂದ ಮತ್ತು ಬೆನ್ಯಾಮೀನ್ ಗೋತ್ರದವರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವ ದೇವರ ಸಂಗಡ ಇರುವವರೆಗೂ, ಅವರು ನಿಮ್ಮ ಸಂಗಡ ಇರುವರು. ನೀವು ಅವರನ್ನು ಹುಡುಕಿದರೆ ಅವರು ನಿಮಗೆ ಸಿಕ್ಕುವರು. ಆದರೆ ನೀವು ಅವರನ್ನು ಬಿಟ್ಟುಬಿಟ್ಟರೆ ಅವರು ನಿಮ್ಮನ್ನು ಬಿಟ್ಟುಬಿಡುವರು
וְיָמִ֥ים רַבִּ֖ים לְיִשְׂרָאֵ֑ל לְלֹ֣א ׀ אֱלֹהֵ֣י אֱמֶ֗ת וּלְלֹ֛א כֹּהֵ֥ן מֹורֶ֖ה וּלְלֹ֥א תֹורָֽה׃ | 3 |
ಬಹುಕಾಲ ಇಸ್ರಾಯೇಲರು ನಿಜವಾದ ದೇವರಿಲ್ಲದೆ ಬೋಧಿಸುವ ಯಾಜಕನಿಲ್ಲದೆ, ನಿಯಮವಿಲ್ಲದೆ ಇದ್ದರು.
וַיָּ֙שָׁב֙ בַּצַּר־לֹ֔ו עַל־יְהוָ֖ה אֱלֹהֵ֣י יִשְׂרָאֵ֑ל וַיְבַקְשֻׁ֖הוּ וַיִּמָּצֵ֥א לָהֶֽם׃ | 4 |
ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿ ಅವರನ್ನು ಹುಡುಕಿದಾಗ ಅವರಿಗೆ ದೇವರು ಸಿಕ್ಕಿದರು.
וּבָעִתִּ֣ים הָהֵ֔ם אֵ֥ין שָׁלֹ֖ום לַיֹּוצֵ֣א וְלַבָּ֑א כִּ֚י מְהוּמֹ֣ת רַבֹּ֔ות עַ֥ל כָּל־יֹושְׁבֵ֖י הָאֲרָצֹֽות׃ | 5 |
ಆ ಕಾಲಗಳಲ್ಲಿ ಹೊರಗೆ ಹೋಗುವವನಿಗೂ, ಒಳಗೆ ಬರುವವನಿಗೂ ಸಮಾಧಾನವಿಲ್ಲದೆ ಇತ್ತು. ದೇಶದ ನಿವಾಸಿಗಳು ಬಹಳವಾಗಿ ಹೆದರಿದ್ದರು.
וְכֻתְּת֥וּ גֹוי־בְּגֹ֖וי וְעִ֣יר בְּעִ֑יר כִּֽי־אֱלֹהִ֥ים הֲמָמָ֖ם בְּכָל־צָרָֽה׃ | 6 |
ಜನಾಂಗವು ಜನಾಂಗದಿಂದಲೂ, ಪಟ್ಟಣವು ಪಟ್ಟಣದಿಂದಲೂ ನಾಶವಾಯಿತು. ದೇವರು ಸಕಲ ಇಕ್ಕಟ್ಟುಗಳಿಂದ ಅವರನ್ನು ತೊಂದರೆಪಡಿಸಿದರು.
וְאַתֶּ֣ם חִזְק֔וּ וְאַל־יִרְפּ֖וּ יְדֵיכֶ֑ם כִּ֛י יֵ֥שׁ שָׂכָ֖ר לִפְעֻלַּתְכֶֽם׃ ס | 7 |
ಆದ್ದರಿಂದ ನೀವು ಬಲಗೊಳ್ಳಿರಿ. ನಿಮ್ಮ ಕೈಗಳು ಬಲಹೀನವಾಗದೆ ಇರಲಿ. ನಿಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕುವುದು,” ಎಂದನು.
וְכִשְׁמֹ֨עַ אָסָ֜א הַדְּבָרִ֣ים הָאֵ֗לֶּה וְהַנְּבוּאָה֮ עֹדֵ֣ד הַנָּבִיא֒ הִתְחַזַּ֗ק וַיַּעֲבֵ֤ר הַשִּׁקּוּצִים֙ מִכָּל־אֶ֤רֶץ יְהוּדָה֙ וּבִנְיָמִ֔ן וּמִן־הֶ֣עָרִ֔ים אֲשֶׁ֥ר לָכַ֖ד מֵהַ֣ר אֶפְרָ֑יִם וַיְחַדֵּשׁ֙ אֶת־מִזְבַּ֣ח יְהוָ֔ה אֲשֶׁ֕ר לִפְנֵ֖י אוּלָ֥ם יְהוָֽה׃ | 8 |
ಆಸನು ಆ ಮಾತುಗಳನ್ನೂ, ಪ್ರವಾದಿಯಾದ ಓದೇದನ ಮಗ ಅಜರ್ಯನ ಪ್ರವಾದನಾ ಮಾತುಗಳನ್ನೂ ಕೇಳಿದಾಗ, ಅವನು ಬಲಗೊಂಡು ಯೆಹೂದ ಬೆನ್ಯಾಮೀನಿನ ಸಮಸ್ತ ದೇಶದೊಳಗಿಂದಲೂ, ಎಫ್ರಾಯೀಮನ ಬೆಟ್ಟದಲ್ಲಿ ತಾನು ಹಿಡಿದ ಪಟ್ಟಣಗಳೊಳಗಿಂದಲೂ ಅಸಹ್ಯ ವಿಗ್ರಹಗಳನ್ನು ತೆಗೆದುಹಾಕಿ, ಯೆಹೋವ ದೇವರ ದ್ವಾರಾಂಗಳದ ಮುಂದೆ ಇದ್ದ ಯೆಹೋವ ದೇವರ ಬಲಿಪೀಠವನ್ನು ನೂತನಪಡಿಸಿದನು.
וַיִּקְבֹּ֗ץ אֶת־כָּל־יְהוּדָה֙ וּבִנְיָמִ֔ן וְהַגָּרִים֙ עִמָּהֶ֔ם מֵאֶפְרַ֥יִם וּמְנַשֶּׁ֖ה וּמִשִּׁמְעֹ֑ון כִּֽי־נָפְל֨וּ עָלָ֤יו מִיִּשְׂרָאֵל֙ לָרֹ֔ב בִּרְאֹתָ֕ם כִּֽי־יְהוָ֥ה אֱלֹהָ֖יו עִמֹּֽו׃ פ | 9 |
ತರುವಾಯ ಆಸನು ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರನ್ನು ಬರಮಾಡಿದನು. ಯೆಹೂದ ದೇಶದಲ್ಲಿ ನೆಲೆಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನು ಸಹ ಕರೆಸಿಕೊಂಡನು. ಅವನ ದೇವರಾದ ಯೆಹೋವ ದೇವರು ಅವನ ಸಂಗಡ ಇದ್ದಾರೆಂದು ಇವರು ಕಂಡಾಗ, ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಬಂದಿದ್ದರು.
וַיִּקָּבְצ֥וּ יְרוּשָׁלַ֖͏ִם בַּחֹ֣דֶשׁ הַשְּׁלִישִׁ֑י לִשְׁנַ֥ת חֲמֵשׁ־עֶשְׂרֵ֖ה לְמַלְכ֥וּת אָסָֽא׃ | 10 |
ಹೀಗೆಯೇ ಆಸನ ಆಳಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಿನಲ್ಲಿ ಅವರು ಯೆರೂಸಲೇಮಿನಲ್ಲಿ ಕೂಡಿಕೊಂಡರು.
וַיִּזְבְּח֤וּ לַיהוָה֙ בַּיֹּ֣ום הַה֔וּא מִן־הַשָּׁלָ֖ל הֵבִ֑יאוּ בָּקָר֙ שְׁבַ֣ע מֵאֹ֔ות וְצֹ֖אן שִׁבְעַ֥ת אֲלָפִֽים׃ | 11 |
ಅದೇ ಕಾಲದಲ್ಲಿ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯೆಹೋವ ದೇವರಿಗೆ ಬಲಿ ಅರ್ಪಿಸಿದರು.
וַיָּבֹ֣אוּ בַבְּרִ֔ית לִדְרֹ֕ושׁ אֶת־יְהוָ֖ה אֱלֹהֵ֣י אֲבֹותֵיהֶ֑ם בְּכָל־לְבָבָ֖ם וּבְכָל־נַפְשָֽׁם׃ | 12 |
ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ತಮ್ಮ ಪೂರ್ಣಹೃದಯದಿಂದಲೂ, ತಮ್ಮ ಪೂರ್ಣಪ್ರಾಣದಿಂದಲೂ ಹುಡುಕಬೇಕೆಂದೂ
וְכֹ֨ל אֲשֶׁ֧ר לֹֽא־יִדְרֹ֛שׁ לַיהוָ֥ה אֱלֹהֵֽי־יִשְׂרָאֵ֖ל יוּמָ֑ת לְמִן־קָטֹן֙ וְעַד־גָּדֹ֔ול לְמֵאִ֖ישׁ וְעַד־אִשָּֽׁה׃ | 13 |
ಯಾವನಾದರೂ ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಹುಡುಕದೆ ಹೋದರೆ; ಹಿರಿಯನಾದರೂ, ಕಿರಿಯನಾದರೂ, ಪುರುಷನಾದರೂ, ಸ್ತ್ರೀಯಾದರೂ ಸಾಯಬೇಕೆಂದು ಒಡಂಬಡಿಕೆ ಮಾಡಿಕೊಂಡರು.
וַיִּשָּֽׁבְעוּ֙ לַיהוָ֔ה בְּקֹ֥ול גָּדֹ֖ול וּבִתְרוּעָ֑ה וּבַחֲצֹצְרֹ֖ות וּבְשֹׁופָרֹֽות׃ | 14 |
ಮಹಾಶಬ್ದದಿಂದಲೂ, ಆರ್ಭಟದಿಂದಲೂ, ತುತೂರಿಗಳ ಶಬ್ದದಿಂದಲೂ, ಕೊಂಬುಗಳ ಶಬ್ದದಿಂದಲೂ ಯೆಹೋವ ದೇವರ ಮುಂದೆ ಆಣೆ ಇಟ್ಟರು.
וַיִּשְׂמְח֨וּ כָל־יְהוּדָ֜ה עַל־הַשְּׁבוּעָ֗ה כִּ֤י בְכָל־לְבָבָם֙ נִשְׁבָּ֔עוּ וּבְכָל־רְצֹונָ֣ם בִּקְשֻׁ֔הוּ וַיִּמָּצֵ֖א לָהֶ֑ם וַיָּ֧נַח יְהוָ֛ה לָהֶ֖ם מִסָּבִֽיב׃ | 15 |
ಯೆಹೂದದವರೆಲ್ಲರು ಪ್ರಮಾಣಕ್ಕೆ ಸಂತೋಷಪಟ್ಟರು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ಆಣೆ ಇಟ್ಟು, ತಮ್ಮ ಪೂರ್ಣ ಇಷ್ಟಪೂರ್ವಕವಾಗಿ ದೇವರನ್ನು ಹುಡುಕಿದರು; ದೇವರು ಅವರಿಗೆ ಸಿಕ್ಕಿದರು. ಯೆಹೋವ ದೇವರು ಅವರಿಗೆ ಸುತ್ತಲೂ ವಿಶ್ರಾಂತಿಕೊಟ್ಟರು.
וְגַֽם־מַעֲכָ֞ה אֵ֣ם ׀ אָסָ֣א הַמֶּ֗לֶךְ הֱסִירָהּ֙ מִגְּבִירָ֔ה אֲשֶׁר־עָשְׂתָ֥ה לַאֲשֵׁרָ֖ה מִפְלָ֑צֶת וַיִּכְרֹ֤ת אָסָא֙ אֶת־מִפְלַצְתָּ֔הּ וַיָּ֕דֶק וַיִּשְׂרֹ֖ף בְּנַ֥חַל קִדְרֹֽון׃ | 16 |
ಅರಸನಾದ ಆಸನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಇದಲ್ಲದೆ ಆಸನು ಆ ಮೂರ್ತಿಯನ್ನು ಕಡಿದು ಚೂರುಚೂರು ಮಾಡಿ, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು.
וְהַ֨בָּמֹ֔ות לֹא־סָ֖רוּ מִיִּשְׂרָאֵ֑ל רַ֧ק לְבַב־אָסָ֛א הָיָ֥ה שָׁלֵ֖ם כָּל־יָמָֽיו׃ | 17 |
ಇಸ್ರಾಯೇಲಿನೊಳಗಿಂದ ಪೂಜಾಸ್ಥಳಗಳನ್ನು ತೆಗೆದು ಹಾಕದಿದ್ದರೂ ಆಸನ ಹೃದಯವು ತನ್ನ ಜೀವಮಾನದಲ್ಲೆಲ್ಲಾ ಯೆಹೋವ ದೇವರಿಗೆ ಸಮರ್ಪಿತವಾಗಿತ್ತು.
וַיָּבֵ֞א אֶת־קָדְשֵׁ֥י אָבִ֛יו וְקָֽדָשָׁ֖יו בֵּ֣ית הָאֱלֹהִ֑ים כֶּ֥סֶף וְזָהָ֖ב וְכֵלִֽים׃ | 18 |
ತಾನು ಮತ್ತು ತನ್ನ ತಂದೆಯೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಸಲಕರಣೆಗಳನ್ನೂ ದೇವರ ಆಲಯಕ್ಕೆ ತಂದನು.
וּמִלְחָמָ֖ה לֹ֣א הָיָ֑תָה עַ֛ד שְׁנַת־שְׁלֹשִׁ֥ים וְחָמֵ֖שׁ לְמַלְכ֥וּת אָסָֽא׃ ס | 19 |
ಆಸನ ಆಳ್ವಿಕೆಯಲ್ಲಿ ಮೂವತ್ತೈದನೆಯ ವರ್ಷದವರೆಗೂ ಯುದ್ಧವಿಲ್ಲದೆ ಇತ್ತು.