< 1 שְׁמוּאֵל 23 >

וַיַּגִּ֥דוּ לְדָוִ֖ד לֵאמֹ֑ר הִנֵּ֤ה פְלִשְׁתִּים֙ נִלְחָמִ֣ים בִּקְעִילָ֔ה וְהֵ֖מָּה שֹׁסִ֥ים אֶת־הַגֳּרָנֹֽות׃ 1
“ಫಿಲಿಷ್ಟಿಯರು ಕೆಯೀಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆ,” ಎಂದು ದಾವೀದನಿಗೆ ತಿಳಿಸಿದರು.
וַיִּשְׁאַ֨ל דָּוִ֤ד בַּֽיהוָה֙ לֵאמֹ֔ר הַאֵלֵ֣ךְ וְהִכֵּ֔יתִי בַּפְּלִשְׁתִּ֖ים הָאֵ֑לֶּה ס וַיֹּ֨אמֶר יְהוָ֜ה אֶל־דָּוִ֗ד לֵ֚ךְ וְהִכִּ֣יתָ בַפְּלִשְׁתִּ֔ים וְהֹושַׁעְתָּ֖ אֶת־קְעִילָֽה׃ 2
ಆದ್ದರಿಂದ ದಾವೀದನು, “ನಾನು ಈ ಫಿಲಿಷ್ಟಿಯರನ್ನು ಹೊಡೆಯಲು ಹೋಗಲೋ?” ಎಂದು ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು, “ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯೀಲಾ ನಗರವನ್ನು ರಕ್ಷಿಸು,” ಎಂದರು.
וַיֹּ֨אמְר֜וּ אַנְשֵׁ֤י דָוִד֙ אֵלָ֔יו הִנֵּ֨ה אֲנַ֥חְנוּ פֹ֛ה בִּֽיהוּדָ֖ה יְרֵאִ֑ים וְאַף֙ כִּֽי־נֵלֵ֣ךְ קְעִלָ֔ה אֶל־מֽ͏ַעַרְכֹ֖ות פְּלִשְׁתִּֽים׃ ס 3
ಆಗ ದಾವೀದನ ಜನರು ಅವನಿಗೆ, “ಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ. ಆದರೆ ನಾವು ಫಿಲಿಷ್ಟಿಯರ ಸೈನ್ಯಗಳಿಗೆ ವಿರೋಧವಾಗಿ ಕೆಯೀಲಾ ನಗರಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವುದು,” ಎಂದರು.
וַיֹּ֨וסֶף עֹ֤וד דָּוִד֙ לִשְׁאֹ֣ל בַּֽיהוָ֔ה ס וַֽיַּעֲנֵ֖הוּ יְהוָ֑ה וַיֹּ֗אמֶר ק֚וּם רֵ֣ד קְעִילָ֔ה כִּֽי־אֲנִ֥י נֹתֵ֛ן אֶת־פְּלִשְׁתִּ֖ים בְּיָדֶֽךָ׃ 4
ದಾವೀದನು ತಿರುಗಿ ಯೆಹೋವ ದೇವರನ್ನು ಕೇಳಿದನು. ಅದಕ್ಕೆ ಯೆಹೋವ ದೇವರು ಉತ್ತರವಾಗಿ, “ನೀನೆದ್ದು ಕೆಯೀಲಾ ನಗರಕ್ಕೆ ಹೋಗು; ಏಕೆಂದರೆ ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು,” ಎಂದರು.
וַיֵּ֣לֶךְ דָּוִד֩ וַאִנְשֹׁו (וַאֲנָשָׁ֨יו) קְעִילָ֜ה וַיִּלָּ֣חֶם בַּפְּלִשְׁתִּ֗ים וַיִּנְהַג֙ אֶת־מִקְנֵיהֶ֔ם וַיַּ֥ךְ בָּהֶ֖ם מַכָּ֣ה גְדֹולָ֑ה וַיֹּ֣שַׁע דָּוִ֔ד אֵ֖ת יֹשְׁבֵ֥י קְעִילָֽה׃ ס 5
ಹಾಗೆಯೇ ದಾವೀದನೂ, ಅವನ ಜನರೂ ಎದ್ದು ಕೆಯೀಲಾ ನಗರಕ್ಕೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿ, ಅವರ ಪಶುಗಳನ್ನು ಹಿಡಿದುಕೊಂಡು ಬಂದು, ಅವರನ್ನು ಪೂರ್ಣವಾಗಿ ಸೋಲಿಸಿದರು. ಈ ಪ್ರಕಾರ ದಾವೀದನು ಕೆಯೀಲಾ ನಗರದ ನಿವಾಸಿಗಳನ್ನು ರಕ್ಷಿಸಿದನು.
וַיְהִ֗י בִּ֠בְרֹחַ אֶבְיָתָ֧ר בֶּן־אֲחִימֶ֛לֶךְ אֶל־דָּוִ֖ד קְעִילָ֑ה אֵפֹ֖וד יָרַ֥ד בְּיָדֹֽו׃ 6
ಅಹೀಮೆಲೆಕನ ಮಗ ಅಬಿಯಾತರನು ಕೆಯೀಲಾ ನಗರದಲ್ಲಿ ಇರುವ ದಾವೀದನ ಬಳಿಗೆ ಓಡಿ ಬಂದಾಗ, ಅವನ ಕೈಯಲ್ಲಿ ಏಫೋದು ಇತ್ತು.
וַיֻּגַּ֣ד לְשָׁא֔וּל כִּי־בָ֥א דָוִ֖ד קְעִילָ֑ה וַיֹּ֣אמֶר שָׁא֗וּל נִכַּ֨ר אֹתֹ֤ו אֱלֹהִים֙ בְּיָדִ֔י כִּ֚י נִסְגַּ֣ר לָבֹ֔וא בְּעִ֖יר דְּלָתַ֥יִם וּבְרִֽיחַ׃ 7
ದಾವೀದನು ಕೆಯೀಲಾ ನಗರಕ್ಕೆ ಬಂದಿದ್ದಾನೆ ಎಂಬ ವಿಷಯ ಸೌಲನಿಗೆ ಮುಟ್ಟಿತು. ಆಗ ಅವನು, “ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ಏಕೆಂದರೆ ಅವನು ಬಾಗಿಲುಗಳೂ, ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಈಗ ತಪ್ಪಿಸಿಕೊಳ್ಳಲಾರನು,” ಎಂದುಕೊಂಡನು.
וַיְשַׁמַּ֥ע שָׁא֛וּל אֶת־כָּל־הָעָ֖ם לַמִּלְחָמָ֑ה לָרֶ֣דֶת קְעִילָ֔ה לָצ֥וּר אֶל־דָּוִ֖ד וְאֶל־אֲנָשָֽׁיו׃ 8
ಆಗ ಸೌಲನು ದಾವೀದನನ್ನೂ, ಅವನ ಜನರನ್ನೂ ಮುತ್ತಿಕೊಳ್ಳಲು ತನ್ನ ಸೈನಿಕರನ್ನು ಯುದ್ಧಕ್ಕೆ ಹೋಗಲು ಕೆಯೀಲಾ ನಗರಕ್ಕೆ ಕರೆದನು.
וַיֵּ֣דַע דָּוִ֔ד כִּ֣י עָלָ֔יו שָׁא֖וּל מַחֲרִ֣ישׁ הָרָעָ֑ה וַיֹּ֙אמֶר֙ אֶל־אֶבְיָתָ֣ר הַכֹּהֵ֔ן הַגִּ֖ישָׁה הָאֵפֹֽוד׃ ס 9
ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿದ್ದರಿಂದ ಯಾಜಕನಾದ ಅಬಿಯಾತರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ,” ಎಂದನು.
וַיֹּאמֶר֮ דָּוִד֒ יְהוָה֙ אֱלֹהֵ֣י יִשְׂרָאֵ֔ל שָׁמֹ֤עַ שָׁמַע֙ עַבְדְּךָ֔ כִּֽי־מְבַקֵּ֥שׁ שָׁא֖וּל לָבֹ֣וא אֶל־קְעִילָ֑ה לְשַׁחֵ֥ת לָעִ֖יר בַּעֲבוּרִֽי׃ 10
ಆಗ ದಾವೀದನು, “ಇಸ್ರಾಯೇಲ್ ದೇವರಾದ ಯೆಹೋವ ದೇವರೇ, ಸೌಲನು ಕೆಯೀಲಾ ನಗರಕ್ಕೆ ಬಂದು, ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿಮ್ಮ ಸೇವಕನು ಖಂಡಿತವಾಗಿ ಕೇಳಿದನು.
הֲיַסְגִּרֻ֣נִי בַעֲלֵי֩ קְעִילָ֨ה בְיָדֹ֜ו הֲיֵרֵ֣ד שָׁא֗וּל כַּֽאֲשֶׁר֙ שָׁמַ֣ע עַבְדֶּ֔ךָ יְהוָה֙ אֱלֹהֵ֣י יִשְׂרָאֵ֔ל הַגֶּד־נָ֖א לְעַבְדֶּ֑ךָ ס וַיֹּ֥אמֶר יְהוָ֖ה יֵרֵֽד׃ 11
ಕೆಯೀಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿಮ್ಮ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ದಯಮಾಡಿ ಇದನ್ನು ನಿಮ್ಮ ಸೇವಕನಿಗೆ ತಿಳಿಸಿರಿ,” ಎಂದನು. ಅದಕ್ಕೆ ಯೆಹೋವ ದೇವರು, “ಅವನು ಬರುವನು,” ಎಂದರು.
וַיֹּ֣אמֶר דָּוִ֔ד הֲיַסְגִּ֜רוּ בַּעֲלֵ֧י קְעִילָ֛ה אֹתִ֥י וְאֶת־אֲנָשַׁ֖י בְּיַד־שָׁא֑וּל וַיֹּ֥אמֶר יְהוָ֖ה יַסְגִּֽירוּ׃ ס 12
ಅನಂತರ ದಾವೀದನು, “ಕೆಯೀಲಾ ಪಟ್ಟಣದವರು ನನ್ನನ್ನೂ, ನನ್ನ ಜನರನ್ನೂ ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ?” ಎಂದು ಕೇಳಿದನು. ಯೆಹೋವ ದೇವರು, “ಅವರು ಒಪ್ಪಿಸಿಕೊಡುವರು,” ಎಂದರು.
וַיָּקָם֩ דָּוִ֨ד וַאֲנָשָׁ֜יו כְּשֵׁשׁ־מֵאֹ֣ות אִ֗ישׁ וַיֵּצְאוּ֙ מִקְּעִלָ֔ה וַיִּֽתְהַלְּכ֖וּ בַּאֲשֶׁ֣ר יִתְהַלָּ֑כוּ וּלְשָׁא֣וּל הֻגַּ֗ד כִּֽי־נִמְלַ֤ט דָּוִד֙ מִקְּעִילָ֔ה וַיֶּחְדַּ֖ל לָצֵֽאת׃ 13
ಆದ್ದರಿಂದ ದಾವೀದನೂ, ಹೆಚ್ಚು ಕಡಿಮೆ ಆರುನೂರು ಮಂದಿಯಿದ್ದ ತನ್ನ ಜನರೂ ಎದ್ದು ಕೆಯೀಲಾವನ್ನು ಬಿಟ್ಟು ವಿವಿಧ ಕಡೆಗಳಲ್ಲಿ ಅಲೆದಾಡಿದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ಗೊತ್ತಾಗಲು ಅವನು ಪ್ರಯಾಣವನ್ನು ನಿಲ್ಲಿಸಿಬಿಟ್ಟನು.
וַיֵּ֨שֶׁב דָּוִ֤ד בַּמִּדְבָּר֙ בַּמְּצָדֹ֔ות וַיֵּ֥שֶׁב בָּהָ֖ר בְּמִדְבַּר־זִ֑יף וַיְבַקְשֵׁ֤הוּ שָׁאוּל֙ כָּל־הַיָּמִ֔ים וְלֹֽא־נְתָנֹ֥ו אֱלֹהִ֖ים בְּיָדֹֽו׃ 14
ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ, ಜೀಫ್ ಎಂಬ ಮರುಭೂಮಿಯ ಬೆಟ್ಟದಲ್ಲಿಯೂ ವಾಸವಾಗಿದ್ದನು. ಸೌಲನು ದಿನವೂ ಅವನನ್ನು ಹುಡುಕುತ್ತಿದ್ದನು. ಆದರೆ ದೇವರು ದಾವೀದನನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.
וַיַּ֣רְא דָוִ֔ד כִּֽי־יָצָ֥א שָׁא֖וּל לְבַקֵּ֣שׁ אֶת־נַפְשֹׁ֑ו וְדָוִ֥ד בְּמִדְבַּר־זִ֖יף בַּחֹֽרְשָׁה׃ ס 15
ತನ್ನ ಪ್ರಾಣವನ್ನು ತೆಗೆಯುವುದಕ್ಕೆ ಸೌಲನು ಹೊರಟಿದ್ದಾನೆಂದು ದಾವೀದನು ತಿಳಿದಾಗ, ಅವನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು.
וַיָּ֙קָם֙ יְהֹונָתָ֣ן בֶּן־שָׁא֔וּל וַיֵּ֥לֶךְ אֶל־דָּוִ֖ד חֹ֑רְשָׁה וַיְחַזֵּ֥ק אֶת־יָדֹ֖ו בֵּאלֹהִֽים׃ 16
ಆಗ ಸೌಲನ ಮಗ ಯೋನಾತಾನನು ಎದ್ದು ಮರುಭೂಮಿಯಲ್ಲಿರುವ ದಾವೀದನ ಬಳಿಗೆ ಹೋಗಿ, ಅವನನ್ನು ದೇವರಲ್ಲಿ ಬಲಪಡಿಸಿ ಸಹಾಯಮಾಡಿದನು.
וַיֹּ֨אמֶר אֵלָ֜יו אַל־תִּירָ֗א כִּ֠י לֹ֤א תִֽמְצָאֲךָ֙ יַ֚ד שָׁא֣וּל אָבִ֔י וְאַתָּה֙ תִּמְלֹ֣ךְ עַל־יִשְׂרָאֵ֔ל וְאָנֹכִ֖י אֶֽהְיֶה־לְּךָ֣ לְמִשְׁנֶ֑ה וְגַם־שָׁא֥וּל אָבִ֖י יֹדֵ֥עַ כֵּֽן׃ 17
ಯೋನಾತಾನನು ಅವನಿಗೆ, “ಭಯಪಡಬೇಡ, ಏಕೆಂದರೆ ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವುದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ. ನಾನು ನಿನಗೆ ಎರಡನೆಯವನಾಗಿರುವೆನು ಮತ್ತು ಹೀಗೆ ಆಗುವುದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ,” ಎಂದನು.
וַיִּכְרְת֧וּ שְׁנֵיהֶ֛ם בְּרִ֖ית לִפְנֵ֣י יְהוָ֑ה וַיֵּ֤שֶׁב דָּוִד֙ בַּחֹ֔רְשָׁה וִיהֹונָתָ֖ן הָלַ֥ךְ לְבֵיתֹֽו׃ ס 18
ಅವರಿಬ್ಬರೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಹೋರೆಷದಲ್ಲಿಯೇ ಉಳಿದನು. ಆದರೆ ಯೋನಾತಾನನು ತನ್ನ ಮನೆಗೆ ಹೋದನು.
וַיַּעֲל֤וּ זִפִים֙ אֶל־שָׁא֔וּל הַגִּבְעָ֖תָה לֵאמֹ֑ר הֲלֹ֣וא דָ֠וִד מִסְתַּתֵּ֨ר עִמָּ֤נוּ בַמְּצָדֹות֙ בַּחֹ֔רְשָׁה בְּגִבְעַת֙ הַֽחֲכִילָ֔ה אֲשֶׁ֖ר מִימִ֥ין הַיְשִׁימֹֽון׃ 19
ಆಗ ಜೀಫ್ಯರು ಗಿಬೆಯದಲ್ಲಿರುವ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪಕ್ಷವಾಗಿಯೇ ಹೋರೆಷದ ಗಿರಿಗಳಲ್ಲಿ ಅಂದರೆ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದನಲ್ಲವೇ?
וְ֠עַתָּה לְכָל־אַוַּ֨ת נַפְשְׁךָ֥ הַמֶּ֛לֶךְ לָרֶ֖דֶת רֵ֑ד וְלָ֥נוּ הַסְגִּירֹ֖ו בְּיַ֥ד הַמֶּֽלֶךְ׃ 20
ಈಗ ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ. ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು,” ಎಂದರು.
וַיֹּ֣אמֶר שָׁא֔וּל בְּרוּכִ֥ים אַתֶּ֖ם לַֽיהוָ֑ה כִּ֥י חֲמַלְתֶּ֖ם עָלָֽי׃ 21
ಆಗ ಸೌಲನು, “ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ.
לְכוּ־נָ֞א הָכִ֣ינוּ עֹ֗וד וּדְע֤וּ וּרְאוּ֙ אֶת־מְקֹומֹו֙ אֲשֶׁ֣ר תִּֽהְיֶ֣ה רַגְלֹ֔ו מִ֥י רָאָ֖הוּ שָׁ֑ם כִּ֚י אָמַ֣ר אֵלַ֔י עָרֹ֥ום יַעְרִ֖ם הֽוּא׃ 22
ನೀವು ದಯಮಾಡಿ ಹೋಗಿ ಅವನು ಹೆಜ್ಜೆ ಇಡುವ ಸ್ಥಳವನ್ನೂ, ಅಲ್ಲಿ ಅವನನ್ನು ನೋಡಿದವರು ಯಾರು ಎಂಬುದನ್ನೂ ಇನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ನೋಡಿರಿ. ಏಕೆಂದರೆ ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾನೆಂದು ನನಗೆ ಹೇಳುತ್ತಾರೆ.
וּרְא֣וּ וּדְע֗וּ מִכֹּ֤ל הַמַּֽחֲבֹאִים֙ אֲשֶׁ֣ר יִתְחַבֵּ֣א שָׁ֔ם וְשַׁבְתֶּ֤ם אֵלַי֙ אֶל־נָכֹ֔ון וְהָלַכְתִּ֖י אִתְּכֶ֑ם וְהָיָה֙ אִם־יֶשְׁנֹ֣ו בָאָ֔רֶץ וְחִפַּשְׂתִּ֣י אֹתֹ֔ו בְּכֹ֖ל אַלְפֵ֥י יְהוּדָֽה׃ 23
ಅವನು ಅಡಗಿಕೊಂಡಿರುವ ಸಮಸ್ತ ರಹಸ್ಯ ಸ್ಥಳಗಳನ್ನೂ ನೋಡಿ ತಿಳಿದುಕೊಂಡು, ನಿಶ್ಚಯವಾದ ವರ್ತಮಾನವನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ, ಯೆಹೂದದ ಸಹಸ್ರ ಕುಲದಲ್ಲಿಯೂ ಅವನನ್ನು ಹುಡುಕಿ ಅವನನ್ನು ಹಿಡಿಯುವೆನು,” ಎಂದನು.
וַיָּק֛וּמוּ וַיֵּלְכ֥וּ זִ֖יפָה לִפְנֵ֣י שָׁא֑וּל וְדָוִ֨ד וַאֲנָשָׁ֜יו בְּמִדְבַּ֤ר מָעֹון֙ בָּעֲרָבָ֔ה אֶ֖ל יְמִ֥ין הַיְשִׁימֹֽון׃ 24
ಆದ್ದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ, ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನಲ್ಲಿ ಇರುವ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಮಾವೋನಿನ ಮರುಭೂಮಿಯಲ್ಲಿದ್ದರು.
וַיֵּ֨לֶךְ שָׁא֣וּל וַאֲנָשָׁיו֮ לְבַקֵּשׁ֒ וַיַּגִּ֣דוּ לְדָוִ֔ד וַיֵּ֣רֶד הַסֶּ֔לַע וַיֵּ֖שֶׁב בְּמִדְבַּ֣ר מָעֹ֑ון וַיִּשְׁמַ֣ע שָׁא֔וּל וַיִּרְדֹּ֥ף אַחֲרֵֽי־דָוִ֖ד מִדְבַּ֥ר מָעֹֽון׃ 25
ಸೌಲನೂ, ಅವನ ಜನರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿದಾಗ, ಅವನು ಬಂಡೆಗಳಲ್ಲಿ ಇಳಿದು ಮಾವೋನಿನ ಮರುಭೂಮಿಯಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಮರುಭೂಮಿಯಲ್ಲಿ ದಾವೀದನನ್ನು ಹಿಂದಟ್ಟಿದನು.
וַיֵּ֨לֶךְ שָׁא֜וּל מִצַּ֤ד הָהָר֙ מִזֶּ֔ה וְדָוִ֧ד וַאֲנָשָׁ֛יו מִצַּ֥ד הָהָ֖ר מִזֶּ֑ה וַיְהִ֨י דָוִ֜ד נֶחְפָּ֤ז לָלֶ֙כֶת֙ מִפְּנֵ֣י שָׁא֔וּל וְשָׁא֣וּל וַאֲנָשָׁ֗יו עֹֽטְרִ֛ים אֶל־דָּוִ֥ד וְאֶל־אֲנָשָׁ֖יו לְתָפְשָֽׂם׃ 26
ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು. ದಾವೀದನೂ, ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು. ಸೌಲನಿಗೆ ಭಯಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆಪಡುತ್ತಿದ್ದರು. ಆಗ ಸೌಲನೂ, ಅವನ ಜನರೂ ಅವರನ್ನು ಹಿಡಿಯುವಂತೆ ಸುತ್ತಿಕೊಂಡರು.
וּמַלְאָ֣ךְ בָּ֔א אֶל־שָׁא֖וּל לֵאמֹ֑ר מַהֲרָ֣ה וְלֵ֔כָה כִּֽי־פָשְׁט֥וּ פְלִשְׁתִּ֖ים עַל־הָאָֽרֶץ׃ 27
ಆದರೆ ಒಬ್ಬ ಸೇವಕನು ಸೌಲನ ಬಳಿಗೆ ಬಂದು, “ನೀನು ತ್ವರೆಯಾಗಿ ಬಾ. ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ,” ಎಂದನು.
וַיָּ֣שָׁב שָׁא֗וּל מִרְדֹף֙ אַחֲרֵ֣י דָוִ֔ד וַיֵּ֖לֶךְ לִקְרַ֣את פְּלִשְׁתִּ֑ים עַל־כֵּ֗ן קָֽרְאוּ֙ לַמָּקֹ֣ום הַה֔וּא סֶ֖לַע הַֽמַּחְלְקֹֽות׃ 28
ಆದ್ದರಿಂದ ಸೌಲನು ದಾವೀದನನ್ನು ಹಿಂದಟ್ಟುವುದನ್ನು ಬಿಟ್ಟು, ಫಿಲಿಷ್ಟಿಯರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಸೇಲಾ ಅಮ್ಮಾಲೆಕೋತ್ ಎಂದರೆ, ಅಡ್ಡ ಬೆಟ್ಟ ಎಂದು ಹೆಸರಿಟ್ಟರು.
וַיַּ֥עַל דָּוִ֖ד מִשָּׁ֑ם וַיֵּ֖שֶׁב בִּמְצָדֹ֥ות עֵֽין־גֶּֽדִי׃ 29
ದಾವೀದನು ಆ ಸ್ಥಳವನ್ನು ಬಿಟ್ಟು ಹೋಗಿ ಏನ್ಗೆದಿಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.

< 1 שְׁמוּאֵל 23 >