< 1 דִּבְרֵי הַיָּמִים 5 >

וּבְנֵ֨י רְאוּבֵ֥ן בְּכֹֽור־יִשְׂרָאֵל֮ כִּ֣י ה֣וּא הַבְּכֹור֒ וּֽבְחַלְּלֹו֙ יְצוּעֵ֣י אָבִ֔יו נִתְּנָה֙ בְּכֹ֣רָתֹ֔ו לִבְנֵ֥י יֹוסֵ֖ף בֶּן־יִשְׂרָאֵ֑ל וְלֹ֥א לְהִתְיַחֵ֖שׂ לַבְּכֹרָֽה׃ 1
ಇಸ್ರಾಯೇಲಿನ ಚೊಚ್ಚಲಮಗನಾದ ರೂಬೇನನ ಪುತ್ರರು ಇವರು: ಅವನು ಚೊಚ್ಚಲ ಮಗನಾಗಿದ್ದನು. ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರ ಮಾಡಿದ್ದರಿಂದ ಅವನ ಚೊಚ್ಚಲುತನದ ಹಕ್ಕು ಇಸ್ರಾಯೇಲಿನ ಮಗ ಯೋಸೇಫನ ಪುತ್ರರಿಗೆ ಕೊಡಲಾಗಿತ್ತು. ಆದ್ದರಿಂದ ಈ ವಂಶಾವಳಿಯು ಚೊಚ್ಚಲುತನದ ಪ್ರಕಾರ ಬರೆದಿರುವುದಿಲ್ಲ.
כִּ֤י יְהוּדָה֙ גָּבַ֣ר בְּאֶחָ֔יו וּלְנָגִ֖יד מִמֶּ֑נּוּ וְהַבְּכֹרָ֖ה לְיֹוסֵֽף׃ ס 2
ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲುತನವು ಯೋಸೇಫನದಾಗಿತ್ತು.
בְּנֵ֥י רְאוּבֵ֖ן בְּכֹ֣ור יִשְׂרָאֵ֑ל חֲנֹ֥וךְ וּפַלּ֖וּא חֶצְרֹ֥ון וְכַרְמִֽי׃ 3
ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನನು, ಕರ್ಮೀ.
בְּנֵ֖י יֹואֵ֑ל שְׁמַֽעְיָ֥ה בְנֹ֛ו גֹּ֥וג בְּנֹ֖ו שִׁמְעִ֥י בְנֹֽו׃ 4
ಯೋಯೇಲನ ವಂಶಜರು: ಅವನ ಮಗ ಶೆಮಾಯನು; ಅವನ ಮಗ ಗೋಗನು; ಅವನ ಮಗ ಶಿಮ್ಮೀಯಿ.
מִיכָ֥ה בְנֹ֛ו רְאָיָ֥ה בְנֹ֖ו בַּ֥עַל בְּנֹֽו׃ 5
ಅವನ ಮಗ ಮೀಕಾಯನು; ಅವನ ಮಗ ರೆವಾಯನು, ಅವನ ಮಗ ಬಾಳನು.
בְּאֵרָ֣ה בְנֹ֔ו אֲשֶׁ֣ר הֶגְלָ֔ה תִּלְּגַ֥ת פִּלְנְאֶ֖סֶר מֶ֣לֶךְ אַשֻּׁ֑ר ה֥וּא נָשִׂ֖יא לָרֽאוּבֵנִֽי׃ 6
ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರಿನಿಂದ ಸೆರೆಯಾಗಿ ಒಯ್ದ ಅವನ ಮಗ ಬೇರನು; ಅವನೇ ರೂಬೇನ್ಯರಲ್ಲಿ ನಾಯಕನಾಗಿದ್ದನು.
וְאֶחָיו֙ לְמִשְׁפְּחֹתָ֔יו בְּהִתְיַחֵ֖שׂ לְתֹלְדֹותָ֑ם הָרֹ֥אשׁ יְעִיאֵ֖ל וּזְכַרְיָֽהוּ׃ 7
ಇವನ ಸಹೋದರರು ತಮ್ಮ ಸಂತತಿಗಳಲ್ಲಿ ವಂಶಗಳ ವಂಶಾವಳಿಯನ್ನು ಲೆಕ್ಕಿಸಿದ ಅವನ ಮುಖ್ಯಸ್ಥರು ಯಾರೆಂದರೆ, ಯೆಹಿಯೇಲ್, ಜೆಕರ್ಯ,
וּבֶ֙לַע֙ בֶּן־עָזָ֔ז בֶּן־שֶׁ֖מַע בֶּן־יֹואֵ֑ל ה֚וּא יֹושֵׁ֣ב בַּעֲרֹעֵ֔ר וְעַד־נְבֹ֖ו וּבַ֥עַל מְעֹֽון׃ 8
ಅಜಾಜನ ಮಗನೂ ಶೆಮಯನ ಮಗನೂ ಯೋಯೇಲನ ಮಗನೂ ಆದ ಬೆಳ. ಇವರು ಅರೋಯೇರು ಮೊದಲ್ಗೊಂಡು ನೆಬೋ, ಬಾಳ್ ಮೆಯೋನ್ ಎಂಬ ಸ್ಥಳಗಳವರೆಗೂ ವಾಸವಾಗಿದ್ದರು.
וְלַמִּזְרָ֗ח יָשַׁב֙ עַד־לְבֹ֣וא מִדְבָּ֔רָה לְמִן־הַנָּהָ֖ר פְּרָ֑ת כִּ֧י מִקְנֵיהֶ֛ם רָב֖וּ בְּאֶ֥רֶץ גִּלְעָֽד׃ 9
ಗಿಲ್ಯಾದಿನ ದೇಶದಲ್ಲಿ ಅವನ ಪಶುಗಳು ಹೆಚ್ಚಾದುದರಿಂದ, ಅವನು ಪೂರ್ವದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲ್ಗೊಂಡು ಮರುಭೂಮಿಯ ಪ್ರದೇಶದವರೆಗೂ ವಾಸವಾಗಿದ್ದನು.
וּבִימֵ֣י שָׁא֗וּל עָשׂ֤וּ מִלְחָמָה֙ עִם־הַֽהַגְרִאִ֔ים וַֽיִּפְּל֖וּ בְּיָדָ֑ם וַיֵּשְׁבוּ֙ בְּאָ֣הֳלֵיהֶ֔ם עַֽל־כָּל־פְּנֵ֖י מִזְרָ֥ח לַגִּלְעָֽד׃ פ 10
ಸೌಲನ ದಿವಸಗಳಲ್ಲಿ ರೂಬೇನ್ ವಂಶದವರು ಹಗ್ರೀಯರ ಸಂಗಡ ಯುದ್ಧಮಾಡಿ, ಅವರ ಕೈಯಲ್ಲಿ ಸೋತುಹೋದರು. ರೂಬೇನ್ ವಂಶದವರು ಗಿಲ್ಯಾದಿನ ಸಮಸ್ತ ಪೂರ್ವ ದಿಕ್ಕಿನಾದ್ಯಂತ ಹಗ್ರೀಯರ ವಾಸಸ್ಥಾನಗಳನ್ನು ಆಕ್ರಮಿಸಿಕೊಂಡರು.
וּבְנֵי־גָ֣ד לְנֶגְדָּ֗ם יָֽשְׁב֛וּ בְּאֶ֥רֶץ הַבָּשָׁ֖ן עַד־סַלְכָֽה׃ 11
ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದವರೆಗೂ ವಾಸವಾಗಿದ್ದರು.
יֹואֵ֣ל הָרֹ֔אשׁ וְשָׁפָ֖ם הַמִּשְׁנֶ֑ה וְיַעְנַ֥י וְשָׁפָ֖ט בַּבָּשָֽׁן׃ 12
ಬಾಷಾನಿನಲ್ಲಿ ಮುಖ್ಯನಾದವನು ಯೋಯೇಲನು, ಎರಡನೆಯವನು ಶಾಫಾಮನು, ಅನಂತರ ಯನ್ನೈ, ಶಾಫಾಟನು.
וַאֲחֵיהֶ֞ם לְבֵ֣ית אֲבֹותֵיהֶ֗ם מִֽיכָאֵ֡ל וּמְשֻׁלָּ֡ם וְ֠שֶׁבַע וְיֹורַ֧י וְיַעְכָּ֛ן וְזִ֥יעַ וָעֵ֖בֶר שִׁבְעָֽה׃ ס 13
ಕುಟುಂಬಗಳಾಗಿ ಅವರ ಬಂಧುಗಳು: ಮೀಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈನು, ಯಕ್ಕಾನನು, ಜೀಯನು, ಏಬೆರನು; ಒಟ್ಟು ಏಳುಮಂದಿ.
אֵ֣לֶּה ׀ בְּנֵ֣י אֲבִיחַ֗יִל בֶּן־חוּרִ֡י בֶּן־יָ֠רֹוחַ בֶּן־גִּלְעָ֧ד בֶּן־מִיכָאֵ֛ל בֶּן־יְשִׁישַׁ֥י בֶּן־יַחְדֹּ֖ו בֶּן־בּֽוּז׃ 14
ಇವರು ಹೂರಿಯ ಮಗ ಅಬೀಹೈಲನ ಪುತ್ರರು: ಈ ಹೂರೀಯು ಯಾರೋಹನ ಮಗನು, ಅವನು ಗಿಲ್ಯಾದನ ಮಗನು, ಅವನು ಮೀಕಾಯೇಲನ ಮಗನು, ಅವನು ಯೆಷೀಷೈಯನ ಮಗನು, ಅವನು ಯಹ್ದೋವಿನ ಮಗನು, ಅವನು ಬೂಜನ ಮಗನು.
אֲחִי֙ בֶּן־עַבְדִּיאֵ֣ל בֶּן־גּוּנִ֔י רֹ֖אשׁ לְבֵ֥ית אֲבֹותָֽם׃ 15
ಅಬ್ದಿಯೇಲನ ಮಗನೂ ಗೂನೀಯ ಮೊಮ್ಮಗನೂ ಆದ ಅಹೀಯು ಈ ಗೋತ್ರದ ಮುಖ್ಯಸ್ಥನು.
וַיֵּֽשְׁב֛וּ בַּגִּלְעָ֥ד בַּבָּשָׁ֖ן וּבִבְנֹתֶ֑יהָ וּבְכָֽל־מִגְרְשֵׁ֥י שָׁרֹ֖ון עַל־תֹּוצְאֹותָֽם׃ 16
ಅವರು ಗಿಲ್ಯಾದಿನಲ್ಲಿರುವ ಬಾಷಾನಿನಲ್ಲಿಯೂ, ಅವರ ಊರುಗಳಲ್ಲಿಯೂ, ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.
כֻּלָּם֙ הִתְיַחְשׂ֔וּ בִּימֵ֖י יֹותָ֣ם מֶֽלֶךְ־יְהוּדָ֑ה וּבִימֵ֖י יָרָבְעָ֥ם מֶֽלֶךְ־יִשְׂרָאֵֽל׃ פ 17
ಇವರೆಲ್ಲರು ಯೆಹೂದದ ಅರಸನಾದ ಯೋತಾಮನ ದಿವಸಗಳಲ್ಲಿಯೂ, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ದಿವಸಗಳಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ಲಿಖಿತರಾದರು.
בְּנֵֽי־רְאוּבֵ֨ן וְגָדִ֜י וַחֲצִ֥י שֵֽׁבֶט־מְנַשֶּׁה֮ מִן־בְּנֵי־חַיִל֒ אֲ֠נָשִׁים נֹשְׂאֵ֨י מָגֵ֤ן וְחֶ֙רֶב֙ וְדֹ֣רְכֵי קֶ֔שֶׁת וּלְמוּדֵ֖י מִלְחָמָ֑ה אַרְבָּעִ֨ים וְאַרְבָּעָ֥ה אֶ֛לֶף וּשְׁבַע־מֵאֹ֥ות וְשִׁשִּׁ֖ים יֹצְאֵ֥י צָבָֽא׃ 18
ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ, ಗುರಾಣಿಯನ್ನೂ, ಖಡ್ಗವನ್ನೂ ಹಿಡಿಯುವುದಕ್ಕೆ ಬಿಲ್ಲೆಸೆಯುವುದಕ್ಕೆ ಯುದ್ಧದಲ್ಲಿ ಪ್ರವೀಣರಾದ ಪರಾಕ್ರಮಶಾಲಿಗಳಾದ ಯುದ್ಧಕ್ಕೆ ಹೊರಡುವವರು 44,760 ಮಂದಿಯಾಗಿದ್ದರು.
וַיַּעֲשׂ֥וּ מִלְחָמָ֖ה עִם־הַֽהַגְרִיאִ֑ים וִיט֥וּר וְנָפִ֖ישׁ וְנֹודָֽב׃ 19
ಇವರು ಹಗ್ರೀಯರಾದ ಯೆಟೂರನು, ನಾಫೀಷನು, ನೊದಾಬನು ಎಂಬವರ ವಿರುದ್ಧ ಯುದ್ಧಮಾಡಿದರು.
וַיֵּעָזְר֣וּ עֲלֵיהֶ֔ם וַיִּנָּתְנ֤וּ בְיָדָם֙ הַֽהַגְרִיאִ֔ים וְכֹ֖ל שֶׁ֣עִמָּהֶ֑ם כִּ֠י לֵאלֹהִ֤ים זָעֲקוּ֙ בַּמִּלְחָמָ֔ה וְנַעְתֹּ֥ור לָהֶ֖ם כִּי־בָ֥טְחוּ בֹֽו׃ 20
ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು.
וַיִּשְׁבּ֣וּ מִקְנֵיהֶ֗ם גְּֽמַלֵּיהֶ֞ם חֲמִשִּׁ֥ים אֶ֙לֶף֙ וְצֹ֗אן מָאתַ֤יִם וַחֲמִשִּׁים֙ אֶ֔לֶף וַחֲמֹורִ֖ים אַלְפָּ֑יִם וְנֶ֥פֶשׁ אָדָ֖ם מֵ֥אָה אָֽלֶף׃ 21
ಅವರು ವೈರಿಗಳಿಂದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಐವತ್ತು ಸಾವಿರ ಒಂಟೆಗಳನ್ನು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳನ್ನು, ಎರಡು ಸಾವಿರ ಕತ್ತೆಗಳನ್ನು ಅಲ್ಲದೆ, ಒಂದು ಲಕ್ಷ ಜನರನ್ನು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದರು.
כִּֽי־חֲלָלִ֤ים רַבִּים֙ נָפָ֔לוּ כִּ֥י מֵהָאֱלֹהִ֖ים הַמִּלְחָמָ֑ה וַיֵּשְׁב֥וּ תַחְתֵּיהֶ֖ם עַד־הַגֹּלָֽה׃ פ 22
ಏಕೆಂದರೆ ಯುದ್ಧವು ದೇವರಿಂದ ಉಂಟಾದ ಕಾರಣ, ಅನೇಕ ಜನರು ಹತರಾದರು. ಇವರು ಸೆರೆಯಾಗಿ ಹೋಗುವ ಕಾಲದವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
וּבְנֵ֗י חֲצִי֙ שֵׁ֣בֶט מְנַשֶּׁ֔ה יָשְׁב֖וּ בָּאָ֑רֶץ מִבָּשָׁ֞ן עַד־בַּ֧עַל חֶרְמֹ֛ון וּשְׂנִ֥יר וְהַר־חֶרְמֹ֖ון הֵ֥מָּה רָבֽוּ׃ 23
ಮನಸ್ಸೆಯ ಅರ್ಧ ಗೋತ್ರದ ಜನರು ದೇಶದಲ್ಲಿ ವಾಸಮಾಡಿ, ಬಾಷಾನ್ ಮೊದಲುಗೊಂಡು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದವರೆಗೂ ಹಬ್ಬಿಕೊಂಡರು.
וְאֵ֖לֶּה רָאשֵׁ֣י בֵית־אֲבֹותָ֑ם וְעֵ֡פֶר וְיִשְׁעִ֡י וֶאֱלִיאֵ֡ל וְ֠עַזְרִיאֵל וְיִרְמְיָ֨ה וְהֹודַוְיָ֜ה וְיַחְדִּיאֵ֗ל אֲנָשִׁים֙ גִּבֹּ֣ורֵי חַ֔יִל אַנְשֵׁ֣י שֵׁמֹ֔ות רָאשִׁ֖ים לְבֵ֥ית אֲבֹותָֽם׃ 24
ಅವರ ಪಿತೃಗಳ ಮನೆಯಲ್ಲಿರುವ ಯಜಮಾನರು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರಿಯೇಲ್, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್. ಇವರು ಪರಾಕ್ರಮಶಾಲಿಗಳಾಗಿಯೂ, ಹೆಸರುಗೊಂಡವರಾಗಿಯೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರಾಗಿಯೂ ಇದ್ದರು.
וַיִּֽמְעֲל֔וּ בֵּאלֹהֵ֖י אֲבֹותֵיהֶ֑ם וַיִּזְנ֗וּ אַחֲרֵי֙ אֱלֹהֵ֣י עַמֵּי־הָאָ֔רֶץ אֲשֶׁר־הִשְׁמִ֥יד אֱלֹהִ֖ים מִפְּנֵיהֶֽם׃ 25
ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.
וַיָּעַר֩ אֱלֹהֵ֨י יִשְׂרָאֵ֜ל אֶת־ר֣וּחַ ׀ פּ֣וּל מֶֽלֶךְ־אַשּׁ֗וּר וְאֶת־ר֙וּחַ֙ תִּלְּגַ֤ת פִּלְנֶ֙סֶר֙ מֶ֣לֶךְ אַשּׁ֔וּר וַיַּגְלֵם֙ לָראוּבֵנִ֣י וְלַגָּדִ֔י וְלַחֲצִ֖י שֵׁ֣בֶט מְנַשֶּׁ֑ה וַ֠יְבִיאֵם לַחְלַ֨ח וְחָבֹ֤ור וְהָרָא֙ וּנְהַ֣ר גֹּוזָ֔ן עַ֖ד הַיֹּ֥ום הַזֶּֽה׃ פ 26
ಆದಕಾರಣ ಇಸ್ರಾಯೇಲಿನ ದೇವರು ಅಸ್ಸೀರಿಯದ ಅರಸನಾದ ಪೂಲನ ಆತ್ಮವನ್ನೂ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ, ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ, ಗಾದ್ಯರನ್ನೂ, ಮನಸ್ಸೆಯ ಅರ್ಧ ಗೋತ್ರದವರನ್ನೂ ಹಲಹ, ಹಾಬೋರ್, ಹಾರ, ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ತೆಗೆದುಕೊಂಡು ಹೋದರು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.

< 1 דִּבְרֵי הַיָּמִים 5 >