< 1 דִּבְרֵי הַיָּמִים 28 >
וַיַּקְהֵ֣ל דָּוִ֣יד אֶת־כָּל־שָׂרֵ֣י יִשְׂרָאֵ֡ל שָׂרֵ֣י הַשְּׁבָטִ֣ים וְשָׂרֵ֣י הַמַּחְלְקֹ֣ות הַמְשָׁרְתִ֪ים אֶת־הַמֶּ֟לֶךְ וְשָׂרֵ֣י הָאֲלָפִ֣ים וְשָׂרֵ֣י הַמֵּאֹ֡ות וְשָׂרֵ֣י כָל־רְכוּשׁ־וּמִקְנֶה֩ ׀ לַמֶּ֨לֶךְ וּלְבָנָ֜יו עִם־הַסָּרִיסִ֧ים וְהַגִּבֹּורִ֛ים וּֽלְכָל־גִּבֹּ֥ור חָ֖יִל אֶל־יְרוּשָׁלָֽ͏ִם׃ | 1 |
೧ದಾವೀದನು ಇಸ್ರಾಯೇಲರ ಎಲ್ಲಾ ಗೋತ್ರಗಳ ಅಧಿಪತಿಗಳನ್ನು, ಅರಸನ ಸೇವೆಮಾಡುತ್ತಿರುವ ವರ್ಗನಾಯಕರು, ಸಹಸ್ರಾಧಿಪತಿಗಳು, ಶತಾಧಿಪತಿಗಳು ಅರಸನ ದನಕುರಿ ಮೊದಲಾದ ಸಂಪತ್ತಿನ ಮೇಲ್ವಿಚಾರಕರು, ರಾಜಪುತ್ರ ಪಾಲಕರು, ಕಂಚುಕಿಗಳು, ಯುದ್ಧವೀರರು ಹಾಗೂ ಎಲ್ಲಾ ಪ್ರಧಾನರನ್ನು ಯೆರೂಸಲೇಮಿಗೆ ಕರೆಯಿಸಿದನು.
וַיָּ֨קָם דָּוִ֤יד הַמֶּ֙לֶךְ֙ עַל־רַגְלָ֔יו וַיֹּ֕אמֶר שְׁמָע֖וּנִי אַחַ֣י וְעַמִּ֑י אֲנִ֣י עִם־לְבָבִ֡י לִבְנֹות֩ בֵּ֨ית מְנוּחָ֜ה לַאֲרֹ֣ון בְּרִית־יְהוָ֗ה וְלַהֲדֹם֙ רַגְלֵ֣י אֱלֹהֵ֔ינוּ וַהֲכִינֹ֖ותִי לִבְנֹֽות׃ | 2 |
೨ಅವರು ಸೇರಿ ಬಂದಾಗ ಅರಸನಾದ ದಾವೀದನು ಎದ್ದು ನಿಂತು ಅವರಿಗೆ ಹೇಳಿದ್ದೇನೆಂದರೆ, “ನನ್ನ ಸಹೋದರರೇ, ನನ್ನ ಪ್ರಜೆಗಳೇ, ನನ್ನ ಮಾತನ್ನು ಕೇಳಿರಿ, ಯೆಹೋವನ ಒಡಂಬಡಿಕೆಯ ಮಂಜೂಷಕ್ಕೋಸ್ಕರ ನಮ್ಮ ದೇವರ ಪಾದಪೀಠಕ್ಕೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿ ಅದಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿದೆನು.
וְהָאֱלֹהִים֙ אָ֣מַר לִ֔י לֹא־תִבְנֶ֥ה בַ֖יִת לִשְׁמִ֑י כִּ֣י אִ֧ישׁ מִלְחָמֹ֛ות אַ֖תָּה וְדָמִ֥ים שָׁפָֽכְתָּ׃ | 3 |
೩ಆಗ ದೇವರು ನನಗೆ, ‘ನೀನು ಮಹಾಯುದ್ಧಗಳನ್ನು ಮಾಡಿ ಬಹಳ ರಕ್ತವನ್ನು ಸುರಿಸಿದವನು, ನನ್ನ ಹೆಸರಿಗೋಸ್ಕರ ಆಲಯವನ್ನು ಕಟ್ಟಬಾರದು’ ಎಂದು ಹೇಳಿದನು.
וַיִּבְחַ֡ר יְהוָ֣ה אֱלֹהֵי֩ יִשְׂרָאֵ֨ל בִּ֜י מִכֹּ֣ל בֵּית־אָבִ֗י לִהְיֹ֨ות לְמֶ֤לֶךְ עַל־יִשְׂרָאֵל֙ לְעֹולָ֔ם כִּ֤י בִֽיהוּדָה֙ בָּחַ֣ר לְנָגִ֔יד וּבְבֵ֥ית יְהוּדָ֖ה בֵּ֣ית אָבִ֑י וּבִבְנֵ֣י אָבִ֔י בִּ֣י רָצָ֔ה לְהַמְלִ֖יךְ עַל־כָּל־יִשְׂרָאֵֽל׃ | 4 |
೪ಇಸ್ರಾಯೇಲರ ದೇವರಾದ ಯೆಹೋವನು ತನ್ನ ತಂದೆಯ ಮನೆಯವರೆಲ್ಲರಲ್ಲಿ ನನ್ನನ್ನೇ ಸದಾ ಇಸ್ರಾಯೇಲರ ಅರಸನಾಗುವುದಕ್ಕೆ ಆರಿಸಿಕೊಂಡನು. ಆತನು ಯೆಹೂದ ಕುಲವು ರಾಜಕುಲವಾಗಬೇಕೆಂದು ನೇಮಿಸಿ, ಆ ಕುಲದಲ್ಲಿ ನನ್ನ ತಂದೆಯ ಕುಟುಂಬವನ್ನು ಆರಿಸಿಕೊಂಡನು. ನನ್ನ ತಂದೆಯ ಎಲ್ಲಾ ಮಕ್ಕಳಲ್ಲಿ ನನ್ನನ್ನೇ ಮೆಚ್ಚಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದನು.
וּמִכָּ֨ל־בָּנַ֔י כִּ֚י רַבִּ֣ים בָּנִ֔ים נָ֥תַן לִ֖י יְהוָ֑ה וַיִּבְחַר֙ בִּשְׁלֹמֹ֣ה בְנִ֔י לָשֶׁ֗בֶת עַל־כִּסֵּ֛א מַלְכ֥וּת יְהוָ֖ה עַל־יִשְׂרָאֵֽל׃ | 5 |
೫ನನಗೆ ದಯಪಾಲಿಸಿದ ಅನೇಕ ಮಕ್ಕಳಲ್ಲಿ ನನ್ನ ಮಗನಾದ ಸೊಲೊಮೋನನನ್ನು ಯೆಹೋವನ ರಾಜ್ಯ ಸಿಂಹಾಸನವಾಗಿರುವ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸುವುದಕ್ಕೋಸ್ಕರ ಆರಿಸಿಕೊಂಡನು.
וַיֹּ֣אמֶר לִ֔י שְׁלֹמֹ֣ה בִנְךָ֔ הֽוּא־יִבְנֶ֥ה בֵיתִ֖י וַחֲצֵרֹותָ֑י כִּי־בָחַ֨רְתִּי בֹ֥ו לִי֙ לְבֵ֔ן וַאֲנִ֖י אֶֽהְיֶה־לֹּ֥ו לְאָֽב׃ | 6 |
೬ಆತನು ನನಗೆ, ‘ನಿನ್ನ ಮಗನಾದ ಸೊಲೊಮೋನನೇ ನನ್ನ ಆಲಯವನ್ನೂ, ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ. ನಾನು ಅವನಿಗೆ ತಂದೆಯಾಗಿರುವೆನು.
וַהֲכִינֹותִ֥י אֶת־מַלְכוּתֹ֖ו עַד־לְעֹולָ֑ם אִם־יֶחֱזַ֗ק לַעֲשֹׂ֛ות מִצְוֹתַ֥י וּמִשְׁפָּטַ֖י כַּיֹּ֥ום הַזֶּֽה׃ | 7 |
೭ಅವನು ಈಗಿನಂತೆ ಯಾವಾಗಲೂ ನನ್ನ ಆಜ್ಞಾವಿಧಿಗಳನ್ನು ಕೈಕೊಂಡು ನಡೆಯುವುದಾದರೆ ಅವನ ರಾಜ್ಯವನ್ನು ಸದಾಕಾಲವೂ ಸ್ಥಿರಪಡಿಸುವೆನು ಎಂದು ಹೇಳಿದ್ದಾನೆ.’
וְ֠עַתָּה לְעֵינֵ֨י כָל־יִשְׂרָאֵ֤ל קְהַל־יְהוָה֙ וּבְאָזְנֵ֣י אֱלֹהֵ֔ינוּ שִׁמְר֣וּ וְדִרְשׁ֔וּ כָּל־מִצְוֹ֖ת יְהוָ֣ה אֱלֹהֵיכֶ֑ם לְמַ֤עַן תִּֽירְשׁוּ֙ אֶת־הָאָ֣רֶץ הַטֹּובָ֔ה וְהִנְחַלְתֶּ֛ם לִבְנֵיכֶ֥ם אַחֲרֵיכֶ֖ם עַד־עֹולָֽם׃ פ | 8 |
೮ಆದುದರಿಂದ ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳನ್ನು ಧ್ಯಾನಿಸಿ ಕೈಕೊಳ್ಳಬೇಕೆಂದು ಯೆಹೋವನ ಸಭೆಯಾದ ಸಮಸ್ತ ಇಸ್ರಾಯೇಲರ ಎದುರಿನಲ್ಲಿ ನಮ್ಮ ದೇವರಿಗೆ ಕೇಳಿಸುವಂತೆ ನಿಮ್ಮನ್ನು ಎಚ್ಚರಿಸುತ್ತೇನೆ. ಹಾಗೆ ಮಾಡಿದರೆ ಈ ಒಳ್ಳೆಯ ದೇಶವು ಸದಾಕಾಲ ನಿಮ್ಮ ಮತ್ತು ನಿಮ್ಮ ಸಂತಾನದವರ ಸ್ವತ್ತಾಗಿರುವುದು.
וְאַתָּ֣ה שְׁלֹמֹֽה־בְנִ֡י דַּע֩ אֶת־אֱלֹהֵ֨י אָבִ֜יךָ וְעָבְדֵ֗הוּ בְּלֵ֤ב שָׁלֵם֙ וּבְנֶ֣פֶשׁ חֲפֵצָ֔ה כִּ֤י כָל־לְבָבֹות֙ דֹּורֵ֣שׁ יְהוָ֔ה וְכָל־יֵ֥צֶר מַחֲשָׁבֹ֖ות מֵבִ֑ין אִֽם־תִּדְרְשֶׁ֙נּוּ֙ יִמָּ֣צֵא לָ֔ךְ וְאִם־תַּֽעַזְבֶ֖נּוּ יַזְנִיחֲךָ֥ לָעַֽד׃ | 9 |
೯ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.
רְאֵ֣ה ׀ עַתָּ֗ה כִּֽי־יְהוָ֛ה בָּ֧חַר בְּךָ֛ לִבְנֹֽות־בַּ֥יִת לַמִּקְדָּ֖שׁ חֲזַ֥ק וַעֲשֵֽׂה׃ פ | 10 |
೧೦ಆದುದರಿಂದ ಎಚ್ಚರಿಕೆಯಿಂದಿರು, ಯೆಹೋವನು ತನಗೋಸ್ಕರ ಪವಿತ್ರಾಲಯವನ್ನು ಕಟ್ಟಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾನೆ. ಧೈರ್ಯದಿಂದ ಕೆಲಸ ಮಾಡು” ಎಂಬುದೇ.
וַיִּתֵּ֣ן דָּוִ֣יד לִשְׁלֹמֹ֣ה בְנֹ֡ו אֶת־תַּבְנִ֣ית הָאוּלָם֩ וֽ͏ְאֶת־בָּ֨תָּ֜יו וְגַנְזַכָּ֧יו וַעֲלִיֹּתָ֛יו וַחֲדָרָ֥יו הַפְּנִימִ֖ים וּבֵ֥ית הַכַּפֹּֽרֶת׃ | 11 |
೧೧ತರುವಾಯ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ಮಂಟಪ, ಕಟ್ಟಡಗಳು, ಭಂಡಾರಗಳು, ಮೇಲುಪ್ಪರಿಗೆಗಳು, ಒಳಗಣ ಕೋಣೆಗಳು, ಕೃಪಾಸನ ಮಂದಿರ ಇವುಗಳ ನಕ್ಷೆಯನ್ನು ಕೊಟ್ಟನು.
וְתַבְנִ֗ית כֹּל֩ אֲשֶׁ֨ר הָיָ֤ה בָר֙וּחַ֙ עִמֹּ֔ו לְחַצְרֹ֧ות בֵּית־יְהוָ֛ה וּלְכָל־הַלְּשָׁכֹ֖ות סָבִ֑יב לְאֹֽצְרֹות֙ בֵּ֣ית הָאֱלֹהִ֔ים וּלְאֹצְרֹ֖ות הַקֳּדָשִֽׁים׃ | 12 |
೧೨ಇವನು ಯೆಹೋವನ ಆಲಯದ ಅಂಗಳಗಳು, ಸುತ್ತಣ ಕೋಣೆಗಳು, ದೇವಾಲಯದ ಭಂಡಾರಗಳು, ಪ್ರತಿಷ್ಠಿತ ವಸ್ತುಗಳು, ಭಂಡಾರಗಳು ಇವುಗಳ ವಿಷಯವಾಗಿಯೂ,
וּֽלְמַחְלְקֹות֙ הַכֹּהֲנִ֣ים וְהַלְוִיִּ֔ם וּֽלְכָל־מְלֶ֖אכֶת עֲבֹודַ֣ת בֵּית־יְהוָ֑ה וּֽלְכָל־כְּלֵ֖י עֲבֹודַ֥ת בֵּית־יְהוָֽה׃ | 13 |
೧೩ಯಾಜಕರ ಮತ್ತು ಲೇವಿಯರ ವರ್ಗಗಳು, ಯೆಹೋವನ ಆಲಯದಲ್ಲಿ ನಡೆಯತಕ್ಕ ಎಲ್ಲಾ ಆರಾಧನೆ, ಆರಾಧನೆಯ ಎಲ್ಲಾ ಸಾಮಗ್ರಿಗಳು
לַזָּהָ֤ב בַּמִּשְׁקָל֙ לַזָּהָ֔ב לְכָל־כְּלֵ֖י עֲבֹודָ֣ה וַעֲבֹודָ֑ה לְכֹ֨ל כְּלֵ֤י הַכֶּ֙סֶף֙ בְּמִשְׁקָ֔ל לְכָל־כְּלֵ֖י עֲבֹודָ֥ה וַעֲבֹודָֽה׃ | 14 |
೧೪ಇವುಗಳ ವಿಷಯವಾಗಿ ಪವಿತ್ರಾತ್ಮನು ತನ್ನ ಮನಸ್ಸಿನಲ್ಲಿ ಕೊಟ್ಟಿದ್ದ ಯೋಜನೆಗಳನ್ನು ವಿವರಿಸಿದನು.
וּמִשְׁקָ֞ל לִמְנֹרֹ֣ות הַזָּהָ֗ב וְנֵרֹֽתֵיהֶם֙ זָהָ֔ב בְּמִשְׁקַל־מְנֹורָ֥ה וּמְנֹורָ֖ה וְנֵרֹתֶ֑יהָ וְלִמְנֹרֹ֨ות הַכֶּ֤סֶף בְּמִשְׁקָל֙ לִמְנֹורָ֣ה וְנֵרֹתֶ֔יהָ כַּעֲבֹודַ֖ת מְנֹורָ֥ה וּמְנֹורָֽה׃ | 15 |
೧೫ಇದಲ್ಲದೆ ಆರಾಧನೆಯ ಆಯಾ ಆಚಾರಗಳಲ್ಲಿ ಉಪಯೋಗವಾಗಬೇಕಾದ ಎಲ್ಲಾ ಸಾಮಾನುಗಳ ಬೆಳ್ಳಿ ಬಂಗಾರದ ತೂಕ, ಅಂದರೆ ಬಂಗಾರದ ಹಣತೆಗಳಿರುವ ಬಂಗಾರದ ಪ್ರತಿಯೊಂದು ದೀಪಸ್ತಂಭದ ತೂಕ, ಬೇರೆ ಬೇರೆ ಕೆಲಸಗಳಿಗೆ ಉಪಯೋಗವಾಗುವ ಪ್ರತಿಯೊಂದು ಬೆಳ್ಳಿಯ ದೀಪಸ್ತಂಭದ ಮತ್ತು ಅದರ ಹಣತೆಗಳ ತೂಕ,
וְאֶת־הַזָּהָ֥ב מִשְׁקָ֛ל לְשֻׁלְחֲנֹ֥ות הַֽמַּעֲרֶ֖כֶת לְשֻׁלְחַ֣ן וְשֻׁלְחָ֑ן וְכֶ֖סֶף לְשֻׁלְחֲנֹ֥ות הַכָּֽסֶף׃ | 16 |
೧೬ಮೀಸಲು ರೊಟ್ಟಿಗಳನ್ನಿಡುವ ಬಟ್ಟಲುಗಳು ಹಾಗೂ ಪ್ರತಿಯೊಂದು ಮೇಜಿಗೆ ಉಪಯೋಗಿಸಬೇಕಾದ ಬಂಗಾರದ ತೂಕ, ಬೆಳ್ಳಿಯ ಮೇಜುಗಳ ಬೆಳ್ಳಿಯ ತೂಕ,
וְהַמִּזְלָגֹ֧ות וְהַמִּזְרָקֹ֛ות וְהַקְּשָׂוֹ֖ת זָהָ֣ב טָהֹ֑ור וְלִכְפֹורֵ֨י הַזָּהָ֤ב בְּמִשְׁקָל֙ לִכְפֹ֣ור וּכְפֹ֔ור וְלִכְפֹורֵ֥י הַכֶּ֛סֶף בְּמִשְׁקָ֖ל לִכְפֹ֥ור וּכְפֹֽור׃ | 17 |
೧೭ಚೊಕ್ಕ ಬಂಗಾರದ ಮುಳ್ಳು ಬೋಗುಣಿ, ಹೂಜಿಗಳ ಮತ್ತು ಬೆಳ್ಳಿ ಬಂಗಾರದ ಆಯಾ ಪಾತ್ರೆಗಳ ತೂಕ,
וּלְמִזְבַּ֧ח הַקְּטֹ֛רֶת זָהָ֥ב מְזֻקָּ֖ק בַּמִּשְׁקָ֑ל וּלְתַבְנִ֣ית הַמֶּרְכָּבָ֗ה הַכְּרֻבִ֤ים זָהָב֙ לְפֹ֣רְשִׂ֔ים וְסֹכְכִ֖ים עַל־אֲרֹ֥ון בְּרִית־יְהוָֽה׃ | 18 |
೧೮ಧೂಪವೇದಿಗೆ ಉಪಯೋಗಿಸಬೇಕಾದ ಚೊಕ್ಕ ಬಂಗಾರದ ತೂಕ ಎಷ್ಟೆಷ್ಟಾಗಿರಬೇಕೆಂಬುದನ್ನು ವಿವರಿಸಿ, ರೆಕ್ಕೆಗಳನ್ನು ಹರಡಿಕೊಂಡು ಯೆಹೋವನ ಒಡಂಬಡಿಕೆ ಮಂಜೂಷವನ್ನು ಮರೆಮಾಡುವ ಬಂಗಾರದ ಕೆರೂಬಿವಾಹನದ ನಕ್ಷೆಯನ್ನು ಕೊಟ್ಟನು.
הַכֹּ֥ל בִּכְתָ֛ב מִיַּ֥ד יְהוָ֖ה עָלַ֣י הִשְׂכִּ֑יל כֹּ֖ל מַלְאֲכֹ֥ות הַתַּבְנִֽית׃ פ | 19 |
೧೯ಆ ನಕ್ಷೆಯಲ್ಲಿ ಸೂಚಿಸಿದ ಎಲ್ಲಾ ಕೆಲಸಗಳ ವಿವರವಾದ ಜ್ಞಾನವು ತನಗೆ ಯೆಹೋವನು ಸೂಚಿಸಿದಂತೆ ಪ್ರಾಪ್ತವಾಯಿತೆಂದು ಹೇಳಿದನು.
וַיֹּ֨אמֶר דָּוִ֜יד לִשְׁלֹמֹ֣ה בְנֹ֗ו חֲזַ֤ק וֶאֱמַץ֙ וַעֲשֵׂ֔ה אַל־תִּירָ֖א וְאַל־תֵּחָ֑ת כִּי֩ יְהוָ֨ה אֱלֹהִ֤ים אֱלֹהַי֙ עִמָּ֔ךְ לֹ֤א יַרְפְּךָ֙ וְלֹ֣א יַֽעַזְבֶ֔ךָּ עַד־לִכְלֹ֕ות כָּל־מְלֶ֖אכֶת עֲבֹודַ֥ת בֵּית־יְהוָֽה׃ | 20 |
೨೦ಆ ಮೇಲೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು, ಅಂಜಬೇಡ, ಕಳವಳಗೊಳ್ಳಬೇಡ, ನನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರುತ್ತಾನೆ. ಆತನು ತನ್ನ ಆಲಯದ ಎಲ್ಲಾ ಕೆಲಸಗಳು ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ ತೊರೆಯುವುದಿಲ್ಲ.
וְהִנֵּ֗ה מַחְלְקֹות֙ הַכֹּהֲנִ֣ים וְהַלְוִיִּ֔ם לְכָל־עֲבֹודַ֖ת בֵּ֣ית הָאֱלֹהִ֑ים וְעִמְּךָ֙ בְכָל־מְלָאכָ֜ה לְכָל־נָדִ֤יב בַּֽחָכְמָה֙ לְכָל־עֲבֹודָ֔ה וְהַשָּׂרִ֥ים וְכָל־הָעָ֖ם לְכָל־דְּבָרֶֽיךָ׃ פ | 21 |
೨೧ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ದೇವಾಲಯಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನು ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸು ಉಳ್ಳವರು ನಿನ್ನ ಹತ್ತಿರ ಬೆಂಬಲವಾಗಿ ಇರುತ್ತಾರೆ. ಅಧಿಪತಿಗಳೂ, ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ಒಳಗಾಗುವರು” ಎಂದು ಹೇಳಿದನು.