< שופטים 7 >
וַיַּשְׁכֵּם יְרֻבַּעַל הוּא גִדְעוֹן וְכׇל־הָעָם אֲשֶׁר אִתּוֹ וַֽיַּחֲנוּ עַל־עֵין חֲרֹד וּמַחֲנֵה מִדְיָן הָיָה־לוֹ מִצָּפוֹן מִגִּבְעַת הַמּוֹרֶה בָּעֵֽמֶק׃ | 1 |
ಗಿದ್ಯೋನನೆಂಬ ಯೆರುಬ್ಬಾಳನೂ, ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು, ಹೆರೋದಿನ ಬಾವಿಯ ಬಳಿಯಲ್ಲಿ ದಂಡಿಳಿಸಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು.
וַיֹּאמֶר יְהֹוָה אֶל־גִּדְעוֹן רַב הָעָם אֲשֶׁר אִתָּךְ מִתִּתִּי אֶת־מִדְיָן בְּיָדָם פֶּן־יִתְפָּאֵר עָלַי יִשְׂרָאֵל לֵאמֹר יָדִי הוֹשִׁיעָה לִּֽי׃ | 2 |
ಆಗ ಯೆಹೋವ ದೇವರು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ, ನಾನು ಮಿದ್ಯಾನ್ಯರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವುದಕ್ಕೆ ಸಾಧ್ಯವಿಲ್ಲ ಇಸ್ರಾಯೇಲರು, ‘ನನ್ನ ಕೈ ನನ್ನನ್ನು ರಕ್ಷಿಸಿತು,’ ಎಂದು ನನಗೆ ವಿರೋಧವಾಗಿ ಹೆಚ್ಚಳಪಟ್ಟಾರು.
וְעַתָּה קְרָא נָא בְּאׇזְנֵי הָעָם לֵאמֹר מִֽי־יָרֵא וְחָרֵד יָשֹׁב וְיִצְפֹּר מֵהַר הַגִּלְעָד וַיָּשׇׁב מִן־הָעָם עֶשְׂרִים וּשְׁנַיִם אֶלֶף וַעֲשֶׂרֶת אֲלָפִים נִשְׁאָֽרוּ׃ | 3 |
ಆದ್ದರಿಂದ ನೀನು ಹೋಗಿ ಜನರು ಕೇಳುವ ಹಾಗೆ, ‘ಯಾವನಿಗೆ ಭಯವೂ, ಹೆದರಿಕೆಯೂ ಉಂಟೋ ಅವನು ತಿರುಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ,’ ಎಂದು ಪ್ರಕಟಮಾಡು,” ಎಂದರು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ಜನರು ತಿರುಗಿ ಹೋದರು; ನಂತರ ಹತ್ತು ಸಾವಿರ ಜನರು ಉಳಿದರು.
וַיֹּאמֶר יְהֹוָה אֶל־גִּדְעוֹן עוֹד הָעָם רָב הוֹרֵד אוֹתָם אֶל־הַמַּיִם וְאֶצְרְפֶנּוּ לְךָ שָׁם וְהָיָה אֲשֶׁר אֹמַר אֵלֶיךָ זֶה ׀ יֵלֵךְ אִתָּךְ הוּא יֵלֵךְ אִתָּךְ וְכֹל אֲשֶׁר־אֹמַר אֵלֶיךָ זֶה לֹא־יֵלֵךְ עִמָּךְ הוּא לֹא יֵלֵֽךְ׃ | 4 |
ಯೆಹೋವ ದೇವರು ಗಿದ್ಯೋನನಿಗೆ, “ಜನರು ಇನ್ನೂ ತುಂಬ ಇದ್ದರೆ; ಅವರನ್ನು ಹತ್ತಿರದ ಹಳ್ಳಕ್ಕೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡಿ ಆರಿಸುವೆನು. ನಿನ್ನ ಸಂಗಡ ಹೋಗುವವರಲ್ಲಿ ಯಾವನನ್ನು ಕುರಿತು ಹೇಳುವೆನೋ, ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು ನಿನ್ನ ಸಂಗಡ ಬರಬಾರದೆಂದು ಯಾವನನ್ನು ಕುರಿತು ಹೇಳುವೆನೋ, ಅವನು ಹೋಗಬಾರದು,” ಎಂದರು.
וַיּוֹרֶד אֶת־הָעָם אֶל־הַמָּיִם וַיֹּאמֶר יְהֹוָה אֶל־גִּדְעוֹן כֹּל אֲשֶׁר־יָלֹק בִּלְשׁוֹנוֹ מִן־הַמַּיִם כַּאֲשֶׁר יָלֹק הַכֶּלֶב תַּצִּיג אוֹתוֹ לְבָד וְכֹל אֲשֶׁר־יִכְרַע עַל־בִּרְכָּיו לִשְׁתּֽוֹת׃ | 5 |
ಗಿದ್ಯೋನನು ಜನರನ್ನು ಹಳ್ಳದ ಬಳಿಗೆ ಕರಕೊಂಡು ಬಂದನು. ಆಗ ಯೆಹೋವ ದೇವರು ಗಿದ್ಯೋನನಿಗೆ, “ನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ, ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗುವ ಪ್ರತಿಯೊಬ್ಬನನ್ನೂ ಬೇರೆಬೇರೆಯಾಗಿ ನಿಲ್ಲಿಸು,” ಎಂದರು.
וַיְהִי מִסְפַּר הַֽמְלַקְקִים בְּיָדָם אֶל־פִּיהֶם שְׁלֹשׁ מֵאוֹת אִישׁ וְכֹל יֶתֶר הָעָם כָּרְעוּ עַל־בִּרְכֵיהֶם לִשְׁתּוֹת מָֽיִם׃ | 6 |
ಆಗ ನೀರನ್ನು ತಮ್ಮ ಕೈಯಿಂದ ತೆಗೆದುಕೊಂಡು, ತಮ್ಮ ಬಾಯಿಗೆ ಎತ್ತಿ ನೆಕ್ಕಿದವರು ಮುನ್ನೂರು ಜನ, ಉಳಿದ ಜನರೆಲ್ಲಾ ನೀರು ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗಿದರು.
וַיֹּאמֶר יְהֹוָה אֶל־גִּדְעוֹן בִּשְׁלֹשׁ מֵאוֹת הָאִישׁ הַֽמְלַקְקִים אוֹשִׁיעַ אֶתְכֶם וְנָתַתִּי אֶת־מִדְיָן בְּיָדֶךָ וְכׇל־הָעָם יֵלְכוּ אִישׁ לִמְקֹמֽוֹ׃ | 7 |
ಆಗ ಯೆಹೋವ ದೇವರು ಗಿದ್ಯೋನನಿಗೆ, “ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ, ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸುವೆನು. ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದರು.
וַיִּקְחוּ אֶת־צֵדָה הָעָם בְּיָדָם וְאֵת שׁוֹפְרֹֽתֵיהֶם וְאֵת כׇּל־אִישׁ יִשְׂרָאֵל שִׁלַּח אִישׁ לְאֹֽהָלָיו וּבִשְׁלֹשׁ־מֵאוֹת הָאִישׁ הֶחֱזִיק וּמַחֲנֵה מִדְיָן הָיָה לוֹ מִתַּחַת בָּעֵֽמֶק׃ | 8 |
ಆಗ ಜನರು ಆಹಾರವನ್ನೂ, ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ ಗಿದ್ಯೋನನು ಇಸ್ರಾಯೇಲರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ, ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳಭಾಗದ ಕಣಿವೆಯಲ್ಲಿ ಇತ್ತು.
וַֽיְהִי בַּלַּיְלָה הַהוּא וַיֹּאמֶר אֵלָיו יְהֹוָה קוּם רֵד בַּֽמַּחֲנֶה כִּי נְתַתִּיו בְּיָדֶֽךָ׃ | 9 |
ಆಗ ರಾತ್ರಿಯಲ್ಲಿ, ಯೆಹೋವ ದೇವರು ಅವನಿಗೆ, “ನೀನು ಎದ್ದು ಪಾಳೆಗೆ ವಿರೋಧವಾಗಿ ಇಳಿದು ಹೋಗು. ಏಕೆಂದರೆ ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ.
וְאִם־יָרֵא אַתָּה לָרֶדֶת רֵד אַתָּה וּפֻרָה נַעַרְךָ אֶל־הַֽמַּחֲנֶֽה׃ | 10 |
ಇಳಿದು ಹೋಗುವುದಕ್ಕೆ ನೀನು ಭಯಪಟ್ಟರೆ, ಮೊದಲು ನೀನು ನಿನ್ನ ಸೇವಕನಾದ ಪುರನ ಸಂಗಡ ಪಾಳೆಯ ಬಳಿಗೆ ಇಳಿದು ಹೋಗಿ,
וְשָֽׁמַעְתָּ מַה־יְדַבֵּרוּ וְאַחַר תֶּחֱזַקְנָה יָדֶיךָ וְיָרַדְתָּ בַּֽמַּחֲנֶה וַיֵּרֶד הוּא וּפֻרָה נַעֲרוֹ אֶל־קְצֵה הַחֲמֻשִׁים אֲשֶׁר בַּֽמַּחֲנֶֽה׃ | 11 |
ಅವರು ಮಾತನಾಡುವುದನ್ನು ಕೇಳು. ತರುವಾಯ ಪಾಳೆಯಲ್ಲಿ ಇಳಿದು ಹೋಗುವುದಕ್ಕೆ ನಿನ್ನ ಕೈಗಳು ಬಲಗೊಳ್ಳುವುವು,” ಎಂದರು. ಹಾಗೆಯೇ ಅವನು ತನ್ನ ಸೇವಕನಾದ ಪುರನ ಸಂಗಡ ಪಾಳೆಯ ಹೊರಗಿರುವ ಸೈನಿಕರ ಬಳಿಗೆ ಹೋದನು.
וּמִדְיָן וַעֲמָלֵק וְכׇל־בְּנֵי־קֶדֶם נֹפְלִים בָּעֵמֶק כָּאַרְבֶּה לָרֹב וְלִגְמַלֵּיהֶם אֵין מִסְפָּר כַּחוֹל שֶׁעַל־שְׂפַת הַיָּם לָרֹֽב׃ | 12 |
ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಮಿಡತೆಗಳಷ್ಟು ಗುಂಪಾಗಿ ತಗ್ಗಿನಲ್ಲಿ ಮಲಗಿದ್ದರು. ಅವರ ಒಂಟೆಗಳು ಸಮುದ್ರದ ಮರಳಿನ ಹಾಗೆ ಅಸಂಖ್ಯವಾಗಿದ್ದವು.
וַיָּבֹא גִדְעוֹן וְהִנֵּה־אִישׁ מְסַפֵּר לְרֵעֵהוּ חֲלוֹם וַיֹּאמֶר הִנֵּה חֲלוֹם חָלַמְתִּי וְהִנֵּה צְלִיל לֶחֶם שְׂעֹרִים מִתְהַפֵּךְ בְּמַחֲנֵה מִדְיָן וַיָּבֹא עַד־הָאֹהֶל וַיַּכֵּהוּ וַיִּפֹּל וַיַּהַפְכֵהוּ לְמַעְלָה וְנָפַל הָאֹֽהֶל׃ | 13 |
ಗಿದ್ಯೋನನು ಬಂದಾಗ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇನೆಂದರೆ, “ಇಗೋ, ನಾನು ಒಂದು ಕನಸನ್ನು ಕಂಡೆನು. ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾನ್ಯರ ಪಾಳೆಯ ಮೇಲೆ ಹೊರಳಿ, ಒಂದು ಡೇರೆಯ ಮೇಲೆ ಬಂದು, ಅದು ಬೀಳುವ ಹಾಗೆ ಅದನ್ನು ಹೊಡೆದು, ಅದನ್ನು ಕೆಡವಿ ಹಾಕಿತು. ಆಗ ಡೇರೆಯು ಬಿದ್ದುಹೋಯಿತು,” ಎಂದನು.
וַיַּעַן רֵעֵהוּ וַיֹּאמֶר אֵין זֹאת בִּלְתִּי אִם־חֶרֶב גִּדְעוֹן בֶּן־יוֹאָשׁ אִישׁ יִשְׂרָאֵל נָתַן הָאֱלֹהִים בְּיָדוֹ אֶת־מִדְיָן וְאֶת־כׇּל־הַֽמַּחֲנֶֽה׃ | 14 |
ಅವನ ಜೊತೆಗಾರನು ಉತ್ತರಕೊಟ್ಟು, “ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲಿನ ಮನುಷ್ಯನ ಖಡ್ಗವೇ ಹೊರತು ಬೇರೆ ಅಲ್ಲ. ದೇವರು ಮಿದ್ಯಾನ್ಯರನ್ನೂ, ಈ ಸಮಸ್ತ ಪಾಳೆಯನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು.
וַיְהִי כִשְׁמֹעַ גִּדְעוֹן אֶת־מִסְפַּר הַחֲלוֹם וְאֶת־שִׁבְרוֹ וַיִּשְׁתָּחוּ וַיָּשׇׁב אֶל־מַחֲנֵה יִשְׂרָאֵל וַיֹּאמֶר קוּמוּ כִּֽי־נָתַן יְהֹוָה בְּיֶדְכֶם אֶת־מַחֲנֵה מִדְיָֽן׃ | 15 |
ಗಿದ್ಯೋನನು ಆ ಕನಸಿನ ವಿವರವನ್ನೂ, ಅದರ ಅರ್ಥವನ್ನೂ ಕೇಳಿದಾಗ, ಅವನು ಯೆಹೋವ ದೇವರನ್ನು ಆರಾಧಿಸಿ, ಇಸ್ರಾಯೇಲ್ ಪಾಳೆಗೆ ತಿರುಗಿಬಂದು, “ಏಳಿರಿ, ಯೆಹೋವ ದೇವರು ಮಿದ್ಯಾನ್ಯರ ಪಾಳೆಯನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದು ಹೇಳಿದನು.
וַיַּחַץ אֶת־שְׁלֹשׁ־מֵאוֹת הָאִישׁ שְׁלֹשָׁה רָאשִׁים וַיִּתֵּן שׁוֹפָרוֹת בְּיַד־כֻּלָּם וְכַדִּים רֵיקִים וְלַפִּדִים בְּתוֹךְ הַכַּדִּֽים׃ | 16 |
ಆ ಮುನ್ನೂರು ಜನರನ್ನು ಮೂರು ಭಾಗವಾಗಿ ಹಂಚಿ, ಎಲ್ಲರ ಕೈಯಲ್ಲಿ ತುತೂರಿಗಳನ್ನೂ, ಬರಿದಾದ ಕೊಡಗಳನ್ನೂ, ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟನು.
וַיֹּאמֶר אֲלֵיהֶם מִמֶּנִּי תִרְאוּ וְכֵן תַּעֲשׂוּ וְהִנֵּה אָנֹכִי בָא בִּקְצֵה הַֽמַּחֲנֶה וְהָיָה כַאֲשֶׁר־אֶעֱשֶׂה כֵּן תַּעֲשֽׂוּן׃ | 17 |
ಅನಂತರ ಗಿದ್ಯೋನನು, “ನಾನು ಮಾಡುವುದನ್ನು ನೋಡಿ ಹಾಗೆಯೇ ನೀವೂ ಮಾಡಿರಿ. ನಾನು ಪಾಳೆಯ ಹೊರಗೆ ಬಂದಾಗ ಹೇಗೆ ಮಾಡುವೆನೋ, ಹಾಗೆಯೇ ನೀವೂ ಮಾಡಿರಿ.
וְתָֽקַעְתִּי בַּשּׁוֹפָר אָנֹכִי וְכׇל־אֲשֶׁר אִתִּי וּתְקַעְתֶּם בַּשּׁוֹפָרוֹת גַּם־אַתֶּם סְבִיבוֹת כׇּל־הַֽמַּחֲנֶה וַאֲמַרְתֶּם לַיהֹוָה וּלְגִדְעֽוֹן׃ | 18 |
ನಾನೂ, ನನ್ನ ಸಂಗಡ ಇರುವವರೆಲ್ಲರೂ ತುತೂರಿಯನ್ನು ಊದುವಾಗ, ನೀವೆಲ್ಲರೂ ಪಾಳೆಯ ಸುತ್ತಲೂ, ಎಲ್ಲಾ ಕಡೆಯಲ್ಲಿಯೂ ತುತೂರಿಗಳನ್ನು ಊದಿ, ‘ಯೆಹೋವ ದೇವರಿಗಾಗಿ, ಗಿದ್ಯೋನನಿಗಾಗಿ,’ ಎಂದು ಕೂಗಿರಿ,” ಎಂದನು.
וַיָּבֹא גִדְעוֹן וּמֵאָה־אִישׁ אֲשֶׁר־אִתּוֹ בִּקְצֵה הַֽמַּחֲנֶה רֹאשׁ הָאַשְׁמֹרֶת הַתִּיכוֹנָה אַךְ הָקֵם הֵקִימוּ אֶת־הַשֹּׁמְרִים וַֽיִּתְקְעוּ בַּשּׁוֹפָרוֹת וְנָפוֹץ הַכַּדִּים אֲשֶׁר בְּיָדָֽם׃ | 19 |
ಮಧ್ಯರಾತ್ರಿ ಆರಂಭದ ಜಾವದಲ್ಲಿ ಕಾವಲುಗಾರರನ್ನು ಬದಲಾಯಿಸಿದಾಗ, ಗಿದ್ಯೋನನೂ, ಅವನ ಸಂಗಡ ಇದ್ದ ನೂರು ಮಂದಿಯೂ ಪಾಳೆಯ ಹೊರಗೆ ಬಂದು, ತುತೂರಿಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು.
וַֽיִּתְקְעוּ שְׁלֹשֶׁת הָרָאשִׁים בַּשּׁוֹפָרוֹת וַיִּשְׁבְּרוּ הַכַּדִּים וַיַּחֲזִיקוּ בְיַד־שְׂמֹאולָם בַּלַּפִּדִים וּבְיַד־יְמִינָם הַשּׁוֹפָרוֹת לִתְקוֹעַ וַֽיִּקְרְאוּ חֶרֶב לַיהֹוָה וּלְגִדְעֽוֹן׃ | 20 |
ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ, ಆ ಕೊಡಗಳನ್ನು ಒಡೆದುಬಿಟ್ಟು, ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ, ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು, “ಯೆಹೋವ ದೇವರಿಗಾಗಿ ಖಡ್ಗ, ಗಿದ್ಯೋನನಿಗಾಗಿ ಖಡ್ಗ,” ಎಂದು ಕೂಗಿ ಪಾಳೆಯ ಸುತ್ತಲೂ ಅವರವರ ಸ್ಥಳದಲ್ಲಿ ನಿಂತರು.
וַיַּֽעַמְדוּ אִישׁ תַּחְתָּיו סָבִיב לַֽמַּחֲנֶה וַיָּרׇץ כׇּל־הַֽמַּחֲנֶה וַיָּרִיעוּ (ויניסו) [וַיָּנֽוּסוּ]׃ | 21 |
ಆಗ ಪಾಳೆಯದವರಾದರೋ ಕೂಗುತ್ತಾ ಓಡಿಹೋದರು.
וַֽיִּתְקְעוּ שְׁלֹשׁ־מֵאוֹת הַשּׁוֹפָרוֹת וַיָּשֶׂם יְהֹוָה אֵת חֶרֶב אִישׁ בְּרֵעֵהוּ וּבְכׇל־הַֽמַּחֲנֶה וַיָּנׇס הַֽמַּחֲנֶה עַד־בֵּית הַשִּׁטָּה צְֽרֵרָתָה עַד שְׂפַת־אָבֵל מְחוֹלָה עַל־טַבָּֽת׃ | 22 |
ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು.
וַיִּצָּעֵק אִֽישׁ־יִשְׂרָאֵל מִנַּפְתָּלִי וּמִן־אָשֵׁר וּמִן־כׇּל־מְנַשֶּׁה וַֽיִּרְדְּפוּ אַחֲרֵי מִדְיָֽן׃ | 23 |
ಇಸ್ರಾಯೇಲರು ನಫ್ತಾಲಿಯಿಂದಲೂ, ಆಶೇರನಿಂದಲೂ, ಸಮಸ್ತ ಮನಸ್ಸೆಯವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.
וּמַלְאָכִים שָׁלַח גִּדְעוֹן בְּכׇל־הַר אֶפְרַיִם לֵאמֹר רְדוּ לִקְרַאת מִדְיָן וְלִכְדוּ לָהֶם אֶת־הַמַּיִם עַד בֵּית בָּרָה וְאֶת־הַיַּרְדֵּן וַיִּצָּעֵק כׇּל־אִישׁ אֶפְרַיִם וַיִּלְכְּדוּ אֶת־הַמַּיִם עַד בֵּית בָּרָה וְאֶת־הַיַּרְדֵּֽן׃ | 24 |
ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಬೆಟ್ಟದಲ್ಲೆಲ್ಲಾ ದೂತರನ್ನು ಕಳುಹಿಸಿ, “ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ, ಬೇತ್‌ಬಾರದವರೆಗಿರುವ ನೀರನ್ನೂ, ಯೊರ್ದನನ್ನೂ ಅವರಿಗೆ ಮುಂದಾಗಿ ಹಿಡಿಯಿರಿ,” ಎಂದು ಹೇಳಿದನು. ಹಾಗೆಯೇ ಎಫ್ರಾಯೀಮನ ಜನರೆಲ್ಲರೂ ಕೂಡಿಕೊಂಡು, ಬೇತ್‌ಬಾರದವರೆಗೆ ನೀರನ್ನೂ, ಯೊರ್ದನನ್ನೂ ಹಿಡಿದರು.
וַֽיִּלְכְּדוּ שְׁנֵֽי־שָׂרֵי מִדְיָן אֶת־עֹרֵב וְאֶת־זְאֵב וַיַּהַרְגוּ אֶת־עוֹרֵב בְּצוּר־עוֹרֵב וְאֶת־זְאֵב הָרְגוּ בְיֶֽקֶב־זְאֵב וַֽיִּרְדְּפוּ אֶל־מִדְיָן וְרֹאשׁ־עֹרֵב וּזְאֵב הֵבִיאוּ אֶל־גִּדְעוֹן מֵעֵבֶר לַיַּרְדֵּֽן׃ | 25 |
ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನನ್ನೂ, ಜೇಬನನ್ನೂ ಹಿಡಿದು, ಓರೇಬನನ್ನು ಓರೇಬೆಂಬ ಬಂಡೆಯಲ್ಲಿಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ, ಮಿದ್ಯಾನ್ಯರನ್ನು ಹಿಂದಟ್ಟಿ, ಓರೇಬ್, ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.