< ירמיה 41 >

וַיְהִי ׀ בַּחֹדֶשׁ הַשְּׁבִיעִי בָּא יִשְׁמָעֵאל בֶּן־נְתַנְיָה בֶן־אֱלִישָׁמָע מִזֶּרַע הַמְּלוּכָה וְרַבֵּי הַמֶּלֶךְ וַעֲשָׂרָה אֲנָשִׁים אִתּוֹ אֶל־גְּדַלְיָהוּ בֶן־אֲחִיקָם הַמִּצְפָּתָה וַיֹּאכְלוּ שָׁם לֶחֶם יַחְדָּו בַּמִּצְפָּֽה׃ 1
ಏಳನೆಯ ತಿಂಗಳಲ್ಲಿ ಅರಸನ ಸಂತಾನದವನೂ, ಅರಸನ ಪ್ರಧಾನರಲ್ಲಿ ಒಬ್ಬನೂ ಆದಂಥ ಎಲೀಷಾಮನ ಮೊಮ್ಮಗನೂ, ನೆತನ್ಯನ ಮಗನೂ ಆದ ಇಷ್ಮಾಯೇಲನು ಅವನ ಸಂಗಡ ಹತ್ತು ಮಂದಿಯೂ ಮಿಚ್ಪದಲ್ಲಿದ್ದ ಅಹೀಕಾಮನ ಮಗ ಗೆದಲ್ಯನ ಬಳಿಗೆ ಬಂದರು. ಅವರು ಮಿಚ್ಪದಲ್ಲಿಯೇ ಊಟಮಾಡುತ್ತಿದ್ದಾಗ,
וַיָּקׇם יִשְׁמָעֵאל בֶּן־נְתַנְיָה וַעֲשֶׂרֶת הָֽאֲנָשִׁים ׀ אֲשֶׁר־הָיוּ אִתּוֹ וַיַּכּוּ אֶת־גְּדַלְיָהוּ בֶן־אֲחִיקָם בֶּן־שָׁפָן בַּחֶרֶב וַיָּמֶת אֹתוֹ אֲשֶׁר־הִפְקִיד מֶלֶךְ־בָּבֶל בָּאָֽרֶץ׃ 2
ನೆತನ್ಯನ ಮಗ ಇಷ್ಮಾಯೇಲನು ತನ್ನ ಸಂಗಡ ಇದ್ದ ಹತ್ತು ಜನರಸಹಿತವಾಗಿ ಎದ್ದು, ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಶಾಫಾನನ ಮೊಮ್ಮಗ ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಹೊಡೆದು ಕೊಂದುಹಾಕಿದನು.
וְאֵת כׇּל־הַיְּהוּדִים אֲשֶׁר־הָיוּ אִתּוֹ אֶת־גְּדַלְיָהוּ בַּמִּצְפָּה וְאֶת־הַכַּשְׂדִּים אֲשֶׁר נִמְצְאוּ־שָׁם אֵת אַנְשֵׁי הַמִּלְחָמָה הִכָּה יִשְׁמָעֵֽאל׃ 3
ಇದಲ್ಲದೆ ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಅಲ್ಲಿ ಸಿಕ್ಕಿದ ಯೆಹೂದ್ಯರೆಲ್ಲರನ್ನೂ, ಕಸ್ದೀಯರೆಲ್ಲರನ್ನೂ, ಸೈನಿಕರನ್ನೂ ಇಷ್ಮಾಯೇಲನು ಕೊಂದುಹಾಕಿದನು.
וַיְהִי בַּיּוֹם הַשֵּׁנִי לְהָמִית אֶת־גְּדַלְיָהוּ וְאִישׁ לֹא יָדָֽע׃ 4
ಅವನು ಗೆದಲ್ಯನನ್ನು ಕೊಂದುಹಾಕಿದ ಎರಡನೆಯ ದಿನದಲ್ಲಿ, ಅದು ಯಾರಿಗೂ ತಿಳಿಯದ ವೇಳೆಯಲ್ಲಿ
וַיָּבֹאוּ אֲנָשִׁים מִשְּׁכֶם מִשִּׁלוֹ וּמִשֹּֽׁמְרוֹן שְׁמֹנִים אִישׁ מְגֻלְּחֵי זָקָן וּקְרֻעֵי בְגָדִים וּמִתְגֹּֽדְדִים וּמִנְחָה וּלְבוֹנָה בְּיָדָם לְהָבִיא בֵּית יְהֹוָֽה׃ 5
ಶೆಕೆಮಿನಿಂದಲೂ ಶೀಲೋವಿನಿಂದಲೂ ಸಮಾರ್ಯದಿಂದಲೂ ಎಂಬತ್ತು ಜನರು ಗಡ್ಡವನ್ನೂ ಕ್ಷೌರ ಮಾಡಿದವರಾಗಿಯೂ ವಸ್ತ್ರಗಳನ್ನು ಹರಿದುಕೊಂಡವರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಯೆಹೋವ ದೇವರ ಆಲಯಕ್ಕೆ ತರುವುದಕ್ಕೋಸ್ಕರ ಕಾಣಿಕೆಯನ್ನೂ, ಧೂಪವನ್ನೂ ಕೈಯಲ್ಲಿ ತೆಗೆದುಕೊಂಡು ಬಂದರು.
וַיֵּצֵא יִשְׁמָעֵאל בֶּן־נְתַנְיָה לִקְרָאתָם מִן־הַמִּצְפָּה הֹלֵךְ הָלֹךְ וּבֹכֶה וַֽיְהִי כִּפְגֹשׁ אֹתָם וַיֹּאמֶר אֲלֵיהֶם בֹּאוּ אֶל־גְּדַלְיָהוּ בֶן־אֲחִיקָֽם׃ 6
ಆಗ ನೆತನ್ಯನ ಮಗ ಇಷ್ಮಾಯೇಲನು ಮಿಚ್ಪದಿಂದ ಹೊರಟು, ಅಳುತ್ತಲೇ ಅವರ ಎದುರಿಗೆ ಹೋದನು. ಅವರನ್ನು ಎದುರುಗೊಂಡ ಮೇಲೆ ಅವರಿಗೆ, “ಅಹೀಕಾಮನ ಮಗ ಗೆದಲ್ಯನ ಬಳಿಗೆ ಬನ್ನಿ,” ಎಂದನು.
וַיְהִי כְּבוֹאָם אֶל־תּוֹךְ הָעִיר וַיִּשְׁחָטֵם יִשְׁמָעֵאל בֶּן־נְתַנְיָה אֶל־תּוֹךְ הַבּוֹר הוּא וְהָאֲנָשִׁים אֲשֶׁר־אִתּֽוֹ׃ 7
ಆಗ ಅವರು ಪಟ್ಟಣದ ಮಧ್ಯಕ್ಕೆ ಬಂದಾಗ, ನೆತನ್ಯನ ಮಗ ಇಷ್ಮಾಯೇಲನೂ ತನ್ನ ಸಂಗಡ ಇದ್ದ ಮನುಷ್ಯರೂ ಅವರನ್ನು ಕೊಂದು, ಬಾವಿಯೊಳಗೆ ಹಾಕಿಬಿಟ್ಟರು.
וַעֲשָׂרָה אֲנָשִׁים נִמְצְאוּ־בָם וַיֹּאמְרוּ אֶל־יִשְׁמָעֵאל אַל־תְּמִתֵנוּ כִּֽי־יֶשׁ־לָנוּ מַטְמֹנִים בַּשָּׂדֶה חִטִּים וּשְׂעֹרִים וְשֶׁמֶן וּדְבָשׁ וַיֶּחְדַּל וְלֹא הֱמִיתָם בְּתוֹךְ אֲחֵיהֶֽם׃ 8
ಆದರೆ ಆ ಎಂಬತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಂದು ಹಾಕಬೇಡ. ಏಕೆಂದರೆ ನಮಗೆ ಹೊಲದಲ್ಲಿ ಗೋಧಿ, ಜವೆಗೋಧಿ, ಎಣ್ಣೆ, ಜೇನು ಇವುಗಳನ್ನು ಬಚ್ಚಿಟ್ಟಿದ್ದೇವೆ” ಎಂದು ಬಿನ್ನವಿಸಿದರು. ಆದ್ದರಿಂದ ಅವನು ಹಿಂದೆಗೆದು ಅವರನ್ನು, ಅವರ ಸಹೋದರರ ಮಧ್ಯದಲ್ಲಿ ಕೊಂದುಹಾಕಲಿಲ್ಲ.
וְהַבּוֹר אֲשֶׁר הִשְׁלִיךְ שָׁם יִשְׁמָעֵאל אֵת ׀ כׇּל־פִּגְרֵי הָאֲנָשִׁים אֲשֶׁר הִכָּה בְּיַד־גְּדַלְיָהוּ הוּא אֲשֶׁר עָשָׂה הַמֶּלֶךְ אָסָא מִפְּנֵי בַּעְשָׁא מֶלֶךְ־יִשְׂרָאֵל אֹתוֹ מִלֵּא יִשְׁמָעֵאל בֶּן־נְתַנְיָהוּ חֲלָלִֽים׃ 9
ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದುಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಬಾವಿಯು, ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ತೋಡಿಸಿದ್ದ ಬಾವಿಯೇ ಆಗಿತ್ತು. ಇದನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದು ಹಾಕಿದವರಿಂದ ತುಂಬಿಸಿದನು.
וַיִּשְׁבְּ ׀ יִשְׁמָעֵאל אֶת־כׇּל־שְׁאֵרִית הָעָם אֲשֶׁר בַּמִּצְפָּה אֶת־בְּנוֹת הַמֶּלֶךְ וְאֶת־כׇּל־הָעָם הַנִּשְׁאָרִים בַּמִּצְפָּה אֲשֶׁר הִפְקִיד נְבֽוּזַרְאֲדָן רַב־טַבָּחִים אֶת־גְּדַלְיָהוּ בֶּן־אֲחִיקָם וַיִּשְׁבֵּם יִשְׁמָעֵאל בֶּן־נְתַנְיָה וַיֵּלֶךְ לַעֲבֹר אֶל־בְּנֵי עַמּֽוֹן׃ 10
ಇಷ್ಮಾಯೇಲನು ಮಿಚ್ಪದಲ್ಲಿದ್ದ ಜನರ ಉಳಿದವರನ್ನೆಲ್ಲಾ ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟು, ಉಳಿದ ಜನರೆಲ್ಲರನ್ನು ಸೆರೆಯಾಗಿ ಒಯ್ದನು. ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು, ಅಮ್ಮೋನ್ಯರ ಬಳಿಗೆ ದಾಟಿಹೋಗುವುದಕ್ಕೆ ಹೊರಟನು.
וַיִּשְׁמַע יוֹחָנָן בֶּן־קָרֵחַ וְכׇל־שָׂרֵי הַחֲיָלִים אֲשֶׁר אִתּוֹ אֵת כׇּל־הָרָעָה אֲשֶׁר עָשָׂה יִשְׁמָעֵאל בֶּן־נְתַנְיָֽה׃ 11
ಆದರೆ ಕಾರೇಹನ ಮಗ ಯೋಹಾನಾನನೂ, ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ನೆತನ್ಯನ ಮಗನಾದ ಇಷ್ಮಾಯೇಲನು ಮಾಡಿದ್ದ ಕೇಡನ್ನೆಲ್ಲಾ ಕೇಳಿದ ಮೇಲೆ,
וַיִּקְחוּ אֶת־כׇּל־הָאֲנָשִׁים וַיֵּלְכוּ לְהִלָּחֵם עִם־יִשְׁמָעֵאל בֶּן־נְתַנְיָה וַיִּמְצְאוּ אֹתוֹ אֶל־מַיִם רַבִּים אֲשֶׁר בְּגִבְעֽוֹן׃ 12
ಆ ಮನುಷ್ಯರನ್ನೆಲ್ಲಾ ಕರೆದುಕೊಂಡು ನೆತನ್ಯನ ಮಗ ಇಷ್ಮಾಯೇಲನ ಸಂಗಡ ಯುದ್ಧಮಾಡುವುದಕ್ಕೆ ಹೋಗಿ, ಗಿಬ್ಯೋನಿನಲ್ಲಿರುವ ದೊಡ್ಡ ಕೆರೆಯ ಬಳಿಯಲ್ಲಿ ಅವನನ್ನು ಕಂಡರು.
וַיְהִי כִּרְאוֹת כׇּל־הָעָם אֲשֶׁר אֶת־יִשְׁמָעֵאל אֶת־יֽוֹחָנָן בֶּן־קָרֵחַ וְאֵת כׇּל־שָׂרֵי הַחֲיָלִים אֲשֶׁר אִתּוֹ וַיִּשְׂמָֽחוּ׃ 13
ಆಗ ಇಷ್ಮಾಯೇಲನ ಸಂಗಡ ಇದ್ದ ಜನರೆಲ್ಲರೂ, ಕಾರೇಹನ ಮಗ ಯೋಹಾನಾನನನ್ನೂ, ಅವನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರನ್ನೂ ನೋಡಿದಾಗ, ಸಂತೋಷಪಟ್ಟರು.
וַיָּסֹבּוּ כׇּל־הָעָם אֲשֶׁר־שָׁבָה יִשְׁמָעֵאל מִן־הַמִּצְפָּה וַיָּשֻׁבוּ וַיֵּלְכוּ אֶל־יוֹחָנָן בֶּן־קָרֵֽחַ׃ 14
ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ತಂದ ಜನರೆಲ್ಲರು ಸುತ್ತಿಕೊಂಡು ತಿರುಗಿಕೊಂಡು, ಕಾರೇಹನ ಮಗನಾದ ಯೋಹಾನಾನನ ಬಳಿಗೆ ಬಂದರು.
וְיִשְׁמָעֵאל בֶּן־נְתַנְיָה נִמְלַט בִּשְׁמֹנָה אֲנָשִׁים מִפְּנֵי יוֹחָנָן וַיֵּלֶךְ אֶל־בְּנֵי עַמּֽוֹן׃ 15
ಆದರೆ ನೆತನ್ಯನ ಮಗನಾದ ಇಷ್ಮಾಯೇಲನು ಎಂಟು ಜನರ ಸಂಗಡ ಯೋಹಾನಾನನಿಗೆ ತಪ್ಪಿಸಿಕೊಂಡು, ಅಮ್ಮೋನ್ಯರ ಬಳಿಗೆ ಹೋದನು.
וַיִּקַּח יוֹחָנָן בֶּן־קָרֵחַ וְכׇל־שָׂרֵי הַחֲיָלִים אֲשֶׁר־אִתּוֹ אֵת כׇּל־שְׁאֵרִית הָעָם אֲשֶׁר הֵשִׁיב מֵאֵת יִשְׁמָעֵאל בֶּן־נְתַנְיָה מִן־הַמִּצְפָּה אַחַר הִכָּה אֶת־גְּדַלְיָה בֶּן־אֲחִיקָם גְּבָרִים אַנְשֵׁי הַמִּלְחָמָה וְנָשִׁים וְטַף וְסָרִסִים אֲשֶׁר הֵשִׁיב מִגִּבְעֽוֹן׃ 16
ಆಗ ಕಾರೇಹನ ಮಗನಾದ ಯೋಹಾನಾನನೂ, ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗ ಗೆದಲ್ಯನನ್ನು ಕೊಂದುಹಾಕಿದ ತರುವಾಯ, ತಪ್ಪಿಸಿಬಿಟ್ಟಿದ್ದ ಉಳಿದ ಜನರೆಲ್ಲರನ್ನು ಎಂದರೆ, ಗಿಬ್ಯೋನನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಕಂಚುಕಿಯರನ್ನೂ ಮಿಚ್ಪದಿಂದ ಕರೆದುಕೊಂಡು ಹೊರಟು,
וַיֵּֽלְכוּ וַיֵּֽשְׁבוּ בְּגֵרוּת (כמוהם) [כִּמְהָם] אֲשֶׁר־אֵצֶל בֵּית לָחֶם לָלֶכֶת לָבוֹא מִצְרָֽיִם׃ 17
ಈಜಿಪ್ಟಿಗೆ ಹೋಗುವುದಕ್ಕೆ ಬೇತ್ಲೆಹೇಮಿನ ಬಳಿಯಲ್ಲಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು.
מִפְּנֵי הַכַּשְׂדִּים כִּי יָֽרְאוּ מִפְּנֵיהֶם כִּֽי־הִכָּה יִשְׁמָעֵאל בֶּן־נְתַנְיָה אֶת־גְּדַלְיָהוּ בֶּן־אֲחִיקָם אֲשֶׁר־הִפְקִיד מֶלֶךְ־בָּבֶל בָּאָֽרֶץ׃ 18
ಬಾಬಿಲೋನಿನ ಅರಸನು ದೇಶದ ಮೇಲೆ ನೇಮಿಸಿದ್ದ ಅಹೀಕಾಮನ ಮಗ ಗೆದಲ್ಯನನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದುಹಾಕಿದ್ದರಿಂದಲೇ, ಅವರಿಗೆ ಭಯಪಟ್ಟರು.

< ירמיה 41 >