< ירמיה 23 >

הוֹי רֹעִים מְאַבְּדִים וּמְפִצִים אֶת־צֹאן מַרְעִיתִי נְאֻם־יְהֹוָֽה׃ 1
“ನನ್ನ ಕಾವಲಿನ ಕುರಿಗಳನ್ನು ಚದುರಿಸಿ ಹಾಳು ಮಾಡುವ ಕುರುಬರ ಗತಿಯನ್ನು ಏನೆಂದು ಹೇಳಲಿ” ಎಂಬುದು ಯೆಹೋವನ ನುಡಿ.
לָכֵן כֹּֽה־אָמַר יְהֹוָה אֱלֹהֵי יִשְׂרָאֵל עַֽל־הָרֹעִים הָרֹעִים אֶת־עַמִּי אַתֶּם הֲפִֽצֹתֶם אֶת־צֹאנִי וַתַּדִּחוּם וְלֹא פְקַדְתֶּם אֹתָם הִנְנִי פֹקֵד עֲלֵיכֶם אֶת־רֹעַ מַעַלְלֵיכֶם נְאֻם־יְהֹוָֽה׃ 2
ಇಸ್ರಾಯೇಲರ ದೇವರಾದ ಯೆಹೋವನು ತನ್ನ ಜನರೆಂಬ ಕುರಿಗಳನ್ನು ಮೇಯಿಸುವ ಕುರುಬರ ದ್ರೋಹವನ್ನು ಕಂಡು ಅವರನ್ನು ಕುರಿತು ಇಂತೆನ್ನುತ್ತಾನೆ, “ನೀವು ನನ್ನ ಮಂದೆಯನ್ನು ಚದರಿಸಿ ಅಟ್ಟಿಬಿಟ್ಟಿದ್ದೀರಿ, ವಿಚಾರಿಸಲೇ ಇಲ್ಲ. ಆಹಾ, ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಾನು ನಿಮ್ಮನ್ನು ವಿಚಾರಿಸುವೆನು.
וַאֲנִי אֲקַבֵּץ אֶת־שְׁאֵרִית צֹאנִי מִכֹּל הָאֲרָצוֹת אֲשֶׁר־הִדַּחְתִּי אֹתָם שָׁם וַהֲשִׁבֹתִי אֶתְהֶן עַל־נְוֵהֶן וּפָרוּ וְרָבֽוּ׃ 3
ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು.
וַהֲקִמֹתִי עֲלֵיהֶם רֹעִים וְרָעוּם וְלֹא־יִֽירְאוּ עוֹד וְלֹא־יֵחַתּוּ וְלֹא יִפָּקֵדוּ נְאֻם־יְהֹוָֽה׃ 4
ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು. ಅವು ಇನ್ನು ಕಳವಳಗೊಳ್ಳುವುದಿಲ್ಲ, ಭಯಪಡುವುದಿಲ್ಲ ಮತ್ತು ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ; ಇದು ಯೆಹೋವನ ನುಡಿ” ಎಂಬುದೇ.
הִנֵּה יָמִים בָּאִים נְאֻם־יְהֹוָה וַהֲקִמֹתִי לְדָוִד צֶמַח צַדִּיק וּמָלַךְ מֶלֶךְ וְהִשְׂכִּיל וְעָשָׂה מִשְׁפָּט וּצְדָקָה בָּאָֽרֶץ׃ 5
ಯೆಹೋವನು, “ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು. ಅವನು ರಾಜನಾಗಿ ಆಳುತ್ತಾ, ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ, ದೇಶದಲ್ಲಿ ನೀತಿ, ನ್ಯಾಯಗಳನ್ನು ನಿರ್ವಹಿಸುವನು.
בְּיָמָיו תִּוָּשַׁע יְהוּדָה וְיִשְׂרָאֵל יִשְׁכֹּן לָבֶטַח וְזֶה־שְּׁמוֹ אֲֽשֶׁר־יִקְרְאוֹ יְהֹוָה ׀ צִדְקֵֽנוּ׃ 6
ಅವನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು, ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ನಮ್ಮ ಸದ್ಧರ್ಮ ಎಂಬ ಹೆಸರು ಅವನಿಗಾಗುವುದು” ಎಂದು ನುಡಿಯುತ್ತಾನೆ.
לָכֵן הִנֵּה־יָמִים בָּאִים נְאֻם־יְהֹוָה וְלֹא־יֹאמְרוּ עוֹד חַי־יְהֹוָה אֲשֶׁר הֶעֱלָה אֶת־בְּנֵי יִשְׂרָאֵל מֵאֶרֶץ מִצְרָֽיִם׃ 7
ಆಹಾ, ಮುಂದಿನ ಕಾಲದಲ್ಲಿ ಜನರು, “ಇಸ್ರಾಯೇಲರನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ ಎಂಬುದಾಗಿ ಪ್ರಮಾಣ ಮಾಡುವುದನ್ನು ಬಿಟ್ಟು,
כִּי אִם־חַי־יְהֹוָה אֲשֶׁר הֶעֱלָה וַאֲשֶׁר הֵבִיא אֶת־זֶרַע בֵּית יִשְׂרָאֵל מֵאֶרֶץ צָפוֹנָה וּמִכֹּל הָאֲרָצוֹת אֲשֶׁר הִדַּחְתִּים שָׁם וְיָשְׁבוּ עַל־אַדְמָתָֽם׃ 8
ಇಸ್ರಾಯೇಲ್ ಮನೆತನವೆಂಬ ಸಂತಾನವನ್ನು ಉತ್ತರ ದಿಕ್ಕಿನ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ, ಉದ್ಧರಿಸಿದ ಯೆಹೋವನ ಜೀವದಾಣೆ ಎಂದು ಪ್ರಮಾಣಮಾಡುವರು. ಅವರು ಸ್ವದೇಶದಲ್ಲಿ ಸುಖವಾಸಿಗಳಾಗುವರು.” ಇದು ಯೆಹೋವನ ನುಡಿ.
לַנְּבִאִים נִשְׁבַּר לִבִּי בְקִרְבִּי רָֽחֲפוּ כׇּל־עַצְמוֹתַי הָיִיתִי כְּאִישׁ שִׁכּוֹר וּכְגֶבֶר עֲבָרוֹ יָיִן מִפְּנֵי יְהֹוָה וּמִפְּנֵי דִּבְרֵי קׇדְשֽׁוֹ׃ 9
ಪ್ರವಾದಿಗಳ ವಿಷಯ: ನನ್ನ ಹೃದಯವು ನನ್ನೊಳಗೆ ಒಡೆದುಹೋಗಿದೆ; ನನ್ನ ಎಲುಬುಗಳೆಲ್ಲಾ ಕರಗಿಹೋಗಿವೆ. ನಾನು ಯೆಹೋವನಿಗೂ ಆತನ ಪರಿಶುದ್ಧ ವಾಕ್ಯಗಳಿಗೂ ವಶನಾಗಿ ಅಮಲೇರಿದವನಂತಿದ್ದೇನೆ. ಹೌದು, ದ್ರಾಕ್ಷಾರಸಕ್ಕೆ ಸೋತವನ ಹಾಗಿದ್ದೇನೆ.
כִּי מְנָֽאֲפִים מָלְאָה הָאָרֶץ כִּֽי־מִפְּנֵי אָלָה אָבְלָה הָאָרֶץ יָבְשׁוּ נְאוֹת מִדְבָּר וַתְּהִי מְרֽוּצָתָם רָעָה וּגְבוּרָתָם לֹא־כֵֽן׃ 10
೧೦ಸೀಮೆಯು ವ್ಯಭಿಚಾರಿಗಳಿಂದ ತುಂಬಿದೆ, ದೈವಶಾಪದ ನಿಮಿತ್ತ ದೇಶವು ದುಃಖಿಸುತ್ತದೆ. ಅಡವಿಯ ಹುಲ್ಗಾವಲು ಬಾಡಿದೆ; ದೇಶದವರು ತ್ವರೆಪಡುವ ಮಾರ್ಗವು ದುರ್ಮಾರ್ಗ, ಅವನ ಶೌರ್ಯವು ಅನ್ಯಾಯಸಾಧಕ.
כִּֽי־גַם־נָבִיא גַם־כֹּהֵן חָנֵפוּ גַּם־בְּבֵיתִי מָצָאתִי רָעָתָם נְאֻם־יְהֹוָֽה׃ 11
೧೧ಪ್ರವಾದಿಗಳು ಭ್ರಷ್ಟರು, ಯಾಜಕರೂ ಭ್ರಷ್ಟರು. ಹೌದು ನನ್ನ ಆಲಯದಲ್ಲಿಯೇ ಅವರ ಕೆಟ್ಟತನವನ್ನು ಕಂಡಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ.
לָכֵן יִהְיֶה דַרְכָּם לָהֶם כַּחֲלַקְלַקּוֹת בָּאֲפֵלָה יִדַּחוּ וְנָפְלוּ בָהּ כִּֽי־אָבִיא עֲלֵיהֶם רָעָה שְׁנַת פְּקֻדָּתָם נְאֻם־יְהֹוָֽה׃ 12
೧೨ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಸ್ಥಳಗಳಿಗೆ ಸಮಾನವಾಗುವುದು. ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರ್ಷದ ಕೇಡನ್ನು ಬರಮಾಡುವೆನು ಎಂದು ಯೆಹೋವನು ನುಡಿಯುತ್ತಾನೆ.
וּבִנְבִיאֵי שֹׁמְרוֹן רָאִיתִי תִפְלָה הִנַּבְּאוּ בַבַּעַל וַיַּתְעוּ אֶת־עַמִּי אֶת־יִשְׂרָאֵֽל׃ 13
೧೩ನಾನು ಸಮಾರ್ಯದ ಪ್ರವಾದಿಗಳಲ್ಲಿ ಅನೈತಿಕತೆಯನ್ನು ನೋಡಿದ್ದೇನೆ; ಅವರು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ, ಇಸ್ರಾಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದ್ದಾರೆ.
וּבִנְבִאֵי יְרֽוּשָׁלַ͏ִם רָאִיתִי שַׁעֲרוּרָה נָאוֹף וְהָלֹךְ בַּשֶּׁקֶר וְחִזְּקוּ יְדֵי מְרֵעִים לְבִלְתִּי־שָׁבוּ אִישׁ מֵרָעָתוֹ הָיוּ־לִי כֻלָּם כִּסְדֹם וְיֹשְׁבֶיהָ כַּעֲמֹרָֽה׃ 14
೧೪ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ. ಅವರು ವ್ಯಭಿಚಾರಮಾಡಿ, ಮೋಸದಲ್ಲಿ ನಡೆದು, ದುಷ್ಟರಲ್ಲಿ ಯಾರೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ. ಅವರೆಲ್ಲರು ಸೊದೋಮಿನಂತೆ, ಆ ಪಟ್ಟಣದ ನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.
לָכֵן כֹּה־אָמַר יְהֹוָה צְבָאוֹת עַל־הַנְּבִאִים הִנְנִי מַאֲכִיל אוֹתָם לַעֲנָה וְהִשְׁקִתִים מֵי־רֹאשׁ כִּי מֵאֵת נְבִיאֵי יְרוּשָׁלַ͏ִם יָצְאָה חֲנֻפָּה לְכׇל־הָאָֽרֶץ׃ 15
೧೫ಆದಕಾರಣ ಸೇನಾಧೀಶ್ವರನಾದ ಯೆಹೋವನು ಪ್ರವಾದಿಗಳ ವಿಷಯದಲ್ಲಿ, “ಆಹಾ, ನಾನು ಇವರಿಗೆ ಕಹಿಯಾದ ಆಹಾರ ಮತ್ತು ಪಾನಗಳನ್ನು ಕೊಡುವೆನು; ಯೆರೂಸಲೇಮಿನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲೆಲ್ಲಾ ಹರಡಿದೆಯಷ್ಟೆ” ಎಂದು ನುಡಿಯುತ್ತಾನೆ.
כֹּה־אָמַר יְהֹוָה צְבָאוֹת אַֽל־תִּשְׁמְעוּ עַל־דִּבְרֵי הַנְּבִאִים הַנִּבְּאִים לָכֶם מַהְבִּלִים הֵמָּה אֶתְכֶם חֲזוֹן לִבָּם יְדַבֵּרוּ לֹא מִפִּי יְהֹוָֽה׃ 16
೧೬ಸೇನಾಧೀಶ್ವರನಾದ ಯೆಹೋವನು, “ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಮನಸ್ಸಿಗೆ ಬಂದದ್ದನ್ನೇ ಹೇಳುತ್ತಾರೆ.
אֹמְרִים אָמוֹר לִֽמְנַאֲצַי דִּבֶּר יְהֹוָה שָׁלוֹם יִהְיֶה לָכֶם וְכֹל הֹלֵךְ בִּשְׁרִרוּת לִבּוֹ אָֽמְרוּ לֹא־תָבוֹא עֲלֵיכֶם רָעָֽה׃ 17
೧೭ನನ್ನನ್ನು ಅಸಡ್ಡೆಮಾಡುವವರಿಗೆ, ‘ನಿಮಗೆ ಶುಭವಾಗುವುದು ಎಂಬುದಾಗಿ ಯೆಹೋವನು ನುಡಿದಿದ್ದಾನೆ’ ಎಂದು ಹೇಳುತ್ತಲೇ ಇದ್ದಾರೆ. ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ, ‘ನಿಮಗೆ ಯಾವ ಕೇಡೂ ಸಂಭವಿಸದು’ ಎಂದು ನುಡಿಯುತ್ತಾರೆ.
כִּי מִי עָמַד בְּסוֹד יְהֹוָה וְיֵרֶא וְיִשְׁמַע אֶת־דְּבָרוֹ מִי־הִקְשִׁיב (דברי) [דְּבָרוֹ] וַיִּשְׁמָֽע׃ 18
೧೮ಅವರಲ್ಲಿ ಯಾರು ಯೆಹೋವನ ಆಲೋಚನಾಸಭೆಯಲ್ಲಿ ನಿಂತು ಆತನ ಮಾತನ್ನು ಕೇಳಿ ತಿಳಿದುಕೊಂಡಿದ್ದಾರೆ? ಯಾರು ಆತನ ನುಡಿಗೆ ಕಿವಿಗೊಟ್ಟು ಗಮನಿಸಿದ್ದಾರೆ?
הִנֵּה ׀ סַעֲרַת יְהֹוָה חֵמָה יָֽצְאָה וְסַעַר מִתְחוֹלֵל עַל רֹאשׁ רְשָׁעִים יָחֽוּל׃ 19
೧೯ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಸುಂಟರಗಾಳಿಯು ಹೊರಟಿದೆ. ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
לֹא יָשׁוּב אַף־יְהֹוָה עַד־עֲשֹׂתוֹ וְעַד־הֲקִימוֹ מְזִמּוֹת לִבּוֹ בְּאַֽחֲרִית הַיָּמִים תִּתְבּוֹנְנוּ בָהּ בִּינָֽה׃ 20
೨೦ಯೆಹೋವನು ತನ್ನ ಹೃದಯದ ಆಲೋಚನೆಗಳನ್ನು ಸಾಧಿಸಿ, ನೆರವೇರಿಸುವ ತನಕ ಆತನ ರೋಷವು ತಣ್ಣಗಾಗುವುದಿಲ್ಲ. ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸುವಿರಿ.
לֹא־שָׁלַחְתִּי אֶת־הַנְּבִאִים וְהֵם רָצוּ לֹא־דִבַּרְתִּי אֲלֵיהֶם וְהֵם נִבָּֽאוּ׃ 21
೨೧ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ, ತಾವೇ ಆತುರಗೊಂಡರು; ನಾನು ಇವರಿಗೆ ಏನೂ ಹೇಳಲಿಲ್ಲ, ಅವರೇ ಪ್ರವಾದಿಸಿದರು.
וְאִם־עָמְדוּ בְּסוֹדִי וְיַשְׁמִעוּ דְבָרַי אֶת־עַמִּי וִֽישִׁבוּם מִדַּרְכָּם הָרָע וּמֵרֹעַ מַעַלְלֵיהֶֽם׃ 22
೨೨ಇವರು ಆಲೋಚನಾಸಭೆಯಲ್ಲಿ ನಿಂತಿದ್ದರೆ, ನನ್ನ ಮಾತುಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸಿ, ಅವರನ್ನು ಅವರ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ತಪ್ಪಿಸುತ್ತಿದ್ದರು” ಎಂದು ಹೇಳುತ್ತಾನೆ.
הַאֱלֹהֵי מִקָּרֹב אָנִי נְאֻם־יְהֹוָה וְלֹא אֱלֹהֵי מֵרָחֹֽק׃ 23
೨೩ಯೆಹೋವನು ಇಂತೆನ್ನುತ್ತಾನೆ, “ನಾನು ಸಮೀಪದಲ್ಲಿ ಮಾತ್ರ ಇರುವ ದೇವರೋ?
אִם־יִסָּתֵר אִישׁ בַּמִּסְתָּרִים וַאֲנִי לֹֽא־אֶרְאֶנּוּ נְאֻם־יְהֹוָה הֲלוֹא אֶת־הַשָּׁמַיִם וְאֶת־הָאָרֶץ אֲנִי מָלֵא נְאֻם־יְהֹוָֽה׃ 24
೨೪ದೂರದಲ್ಲಿಯೂ ಇರುವವನಲ್ಲವೋ? ನನ್ನ ಕಣ್ಣಿಗೆ ಬೀಳದಂತೆ ಯಾರಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ತಾನೇ ಮರೆಮಾಡಿಕೊಂಡಾನೇ? ನಾನು ಭೂಮ್ಯಾಕಾಶಗಳಲ್ಲಿಯೂ ವ್ಯಾಪಿಸಿರುವವನಲ್ಲವೆ.”
שָׁמַעְתִּי אֵת אֲשֶׁר־אָֽמְרוּ הַנְּבִאִים הַֽנִּבְּאִים בִּשְׁמִי שֶׁקֶר לֵאמֹר חָלַמְתִּי חָלָֽמְתִּי׃ 25
೨೫ನನಗೆ ಕನಸು ಬಿತ್ತು, ಕನಸು ಬಿತ್ತು ಎಂದು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ.
עַד־מָתַי הֲיֵשׁ בְּלֵב הַנְּבִאִים נִבְּאֵי הַשָּׁקֶר וּנְבִיאֵי תַּרְמִת לִבָּֽם׃ 26
೨೬ಇವರ ಪೂರ್ವಿಕರು ಬಾಳನನ್ನು ಪೂಜಿಸಿ, ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ, ತಾವು ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ.
הַחֹשְׁבִים לְהַשְׁכִּיחַ אֶת־עַמִּי שְׁמִי בַּחֲלוֹמֹתָם אֲשֶׁר יְסַפְּרוּ אִישׁ לְרֵעֵהוּ כַּאֲשֶׁר שָׁכְחוּ אֲבוֹתָם אֶת־שְׁמִי בַּבָּֽעַל׃ 27
೨೭ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಈ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವುದು?
הַנָּבִיא אֲשֶׁר־אִתּוֹ חֲלוֹם יְסַפֵּר חֲלוֹם וַאֲשֶׁר דְּבָרִי אִתּוֹ יְדַבֵּר דְּבָרִי אֱמֶת מַה־לַתֶּבֶן אֶת־הַבָּר נְאֻם־יְהֹוָֽה׃ 28
೨೮ಕನಸು ಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ. ನನ್ನ ಮಾತನ್ನು ಕೇಳಿದವನೋ ನನ್ನ ಮಾತನ್ನು ಯಥಾರ್ಥವಾಗಿ ನುಡಿಯಲಿ.
הֲלוֹא כֹה דְבָרִי כָּאֵשׁ נְאֻם־יְהֹוָה וּכְפַטִּישׁ יְפֹצֵֽץ סָֽלַע׃ 29
೨೯ಹೊಟ್ಟೆಲ್ಲಿ? ಕಾಳೆಲ್ಲಿ? ನನ್ನ ವಾಕ್ಯವು ಬೆಂಕಿಗೂ, ಬಂಡೆಯನ್ನು ಒಡೆದುಬಿಡುವ ಚಮಟಿಗೆಗೂ ಸಮಾನವಾಗಿದೆಯಲ್ಲಾ. ಯೆಹೋವನೇ ಇದನ್ನು ನುಡಿದಿದ್ದಾನೆ.
לָכֵן הִנְנִי עַל־הַנְּבִאִים נְאֻם־יְהֹוָה מְגַנְּבֵי דְבָרַי אִישׁ מֵאֵת רֵעֵֽהוּ׃ 30
೩೦ಆಹಾ, ನನ್ನ ಮಾತುಗಳನ್ನು ತಮ್ಮ ತಮ್ಮ ನೆರೆಯವರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧನಾಗಿದ್ದೇನೆ. ಇದು ಯೆಹೋವನ ನುಡಿ.
הִנְנִי עַל־הַנְּבִיאִם נְאֻם־יְהֹוָה הַלֹּקְחִים לְשׁוֹנָם וַֽיִּנְאֲמוּ נְאֻֽם׃ 31
೩೧ಆಹಾ, ತಮ್ಮ ನಾಲಿಗೆಗಳನ್ನು ಚಾಚಿ “ಯೆಹೋವನು ನುಡಿಯುತ್ತಾನೆ” ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ.
הִנְנִי עַֽל־נִבְּאֵי חֲלֹמוֹת שֶׁקֶר נְאֻם־יְהֹוָה וַֽיְסַפְּרוּם וַיַּתְעוּ אֶת־עַמִּי בְּשִׁקְרֵיהֶם וּבְפַחֲזוּתָם וְאָנֹכִי לֹֽא־שְׁלַחְתִּים וְלֹא צִוִּיתִים וְהוֹעֵיל לֹא־יוֹעִילוּ לָעָם־הַזֶּה נְאֻם־יְהֹוָֽה׃ 32
೩೨ಆಹಾ, ಸುಳ್ಳು ಕನಸುಗಳನ್ನು ಪ್ರಕಟಿಸಿ, ವಿವರಿಸಿ ತಮ್ಮ ಸುಳ್ಳು ಮಾತುಗಳಿಂದಲೂ, ನಿರ್ಲಕ್ಷದಿಂದಲೂ ನನ್ನ ಜನರಿಗೆ ದಾರಿತಪ್ಪಿಸುವ ಪ್ರವಾದಿಗಳನ್ನು ಎದುರಿಸುವವನಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಆಜ್ಞಾಪಿಸಲಿಲ್ಲ. ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಇದು ಯೆಹೋವನ ನುಡಿ.
וְכִֽי־יִשְׁאָלְךָ הָעָם הַזֶּה אֽוֹ־הַנָּבִיא אֽוֹ־כֹהֵן לֵאמֹר מַה־מַּשָּׂא יְהֹוָה וְאָמַרְתָּ אֲלֵיהֶם אֶת־מַה־מַּשָּׂא וְנָטַשְׁתִּי אֶתְכֶם נְאֻם־יְהֹוָֽה׃ 33
೩೩ಪ್ರವಾದಿಯಾಗಲಿ ಅಥವಾ ಯಾಜಕನಾಗಲಿ ಈ ಜನರಲ್ಲಿ ಯಾರೇ ಆಗಲಿ “ಯೆಹೋವನು ದಯಪಾಲಿಸಿರುವ ವಾಕ್ಯದ ಆಧಾರವೇನು?” ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು, “ಯೆಹೋವನು ಇಂತೆನ್ನುತ್ತಾನೆ, ನೀವೇ ನನ್ನ ಹೊರೆ, ನಾನು ನಿಮ್ಮನ್ನು ಎಸೆದುಬಿಡುವೆನು.
וְהַנָּבִיא וְהַכֹּהֵן וְהָעָם אֲשֶׁר יֹאמַר מַשָּׂא יְהֹוָה וּפָקַדְתִּי עַל־הָאִישׁ הַהוּא וְעַל־בֵּיתֽוֹ׃ 34
೩೪ಪ್ರವಾದಿ, ಯಾಜಕ, ಸಾಧಾರಣ ಜನ, ಇವರಲ್ಲಿ ಯಾರೂ, ‘ಯೆಹೋವನ ಹೊರೆ’ ಎಂದು ಉಚ್ಚರಿಸುವನೋ ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.
כֹּה תֹאמְרוּ אִישׁ עַל־רֵעֵהוּ וְאִישׁ אֶל־אָחִיו מֶה־עָנָה יְהֹוָה וּמַה־דִּבֶּר יְהֹוָֽה׃ 35
೩೫ನೀವು ನಿಮ್ಮ ನಿಮ್ಮ ನೆರೆಹೊರೆಯವರನ್ನೂ ಮತ್ತು ಅಣ್ಣತಮ್ಮಂದಿರನ್ನೂ, ‘ಯೆಹೋವನ ಉತ್ತರವೇನು, ಯೆಹೋವನು ಏನು ನುಡಿದಿದ್ದಾನೆ?’
וּמַשָּׂא יְהֹוָה לֹא תִזְכְּרוּ־עוֹד כִּי הַמַּשָּׂא יִֽהְיֶה לְאִישׁ דְּבָרוֹ וַהֲפַכְתֶּם אֶת־דִּבְרֵי אֱלֹהִים חַיִּים יְהֹוָה צְבָאוֹת אֱלֹהֵֽינוּ׃ 36
೩೬ಎಂದು ಕೇಳಬೇಕೇ ಹೊರತು ಯೆಹೋವನ ಹೊರೆ ಎಂಬ ಮಾತನ್ನು ಇನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿಯೇ ಅವನವನಿಗೆ ಹೊರೆಯಾಗಿರುವುದು; ಜೀವಸ್ವರೂಪನಾದ ದೇವರ ನುಡಿಗಳನ್ನು, ಹೌದು, ನಮ್ಮ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿಗಳನ್ನು ತಲೆ ಕೆಳಗೆ ಮಾಡಿದ್ದೀರಷ್ಟೆ.
כֹּה תֹאמַר אֶל־הַנָּבִיא מֶה־עָנָךְ יְהֹוָה וּמַה־דִּבֶּר יְהֹוָֽה׃ 37
೩೭ನೀವು ‘ಯೆಹೋವನಿಂದ ನಿನಗೆ ಯಾವ ಉತ್ತರವಾಯಿತು, ಯೆಹೋವನು ಏನು ನುಡಿದಿದ್ದಾನೆ’ ಎಂದು ಪ್ರವಾದಿಯನ್ನು ಕೇಳಿರಿ.
וְאִם־מַשָּׂא יְהֹוָה תֹּאמֵרוּ לָכֵן כֹּה אָמַר יְהֹוָה יַעַן אֲמׇרְכֶם אֶת־הַדָּבָר הַזֶּה מַשָּׂא יְהֹוָה וָאֶשְׁלַח אֲלֵיכֶם לֵאמֹר לֹא תֹאמְרוּ מַשָּׂא יְהֹוָֽה׃ 38
೩೮ಒಂದು ವೇಳೆ ನೀವು ‘ಯೆಹೋವನ ಹೊರೆ’ ಎಂದು ಉಚ್ಚರಿಸಿದರೆ ಯೆಹೋವನು ಇಂತೆನ್ನುತ್ತಾನೆ, ‘ನಾನು ನಿಮಗೆ ಯೆಹೋವನ ಹೊರೆ ಎಂಬ ಮಾತನ್ನು ಎತ್ತಲೇ ಕೂಡದು ಎಂದು ಹೇಳಿಕಳುಹಿಸಿರುವಲ್ಲಿ ನೀವು ಯೆಹೋವನ ಹೊರೆ ಎಂದು ಹೇಳಿದ ಕಾರಣ ಇಗೋ,
לָכֵן הִנְנִי וְנָשִׁיתִי אֶתְכֶם נָשֹׁא וְנָטַשְׁתִּי אֶתְכֶם וְאֶת־הָעִיר אֲשֶׁר נָתַתִּי לָכֶם וְלַאֲבוֹתֵיכֶם מֵעַל פָּנָֽי׃ 39
೩೯ಖಂಡಿತವಾಗಿ ನಿಮ್ಮನ್ನೂ ನಾನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ದಯಪಾಲಿಸಿದ ಪಟ್ಟಣವನ್ನೂ ಹೊರೆಯೆಂದು ಎತ್ತಿ ನನ್ನೆದುರಿನಿಂದ ಎಸೆದುಬಿಡುವೆನು.
וְנָתַתִּי עֲלֵיכֶם חֶרְפַּת עוֹלָם וּכְלִמּוּת עוֹלָם אֲשֶׁר לֹא תִשָּׁכֵֽחַ׃ 40
೪೦ಮತ್ತು ನಾನು ನಿತ್ಯನಿಂದೆಯನ್ನೂ ಎಂದಿಗೂ ಮರೆಯದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.’”

< ירמיה 23 >