< דברי הימים א 9 >
וְכׇל־יִשְׂרָאֵל הִתְיַחְשׂוּ וְהִנָּם כְּתוּבִים עַל־סֵפֶר מַלְכֵי יִשְׂרָאֵל וִיהוּדָה הׇגְלוּ לְבָבֶל בְּמַעֲלָֽם׃ | 1 |
ಇಸ್ರಾಯೇಲಿನ ಎಲ್ಲಾ ಜನರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ಪಟ್ಟಿಮಾಡಲಾಗಿದೆ. ಈ ಮಾಹಿತಿ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದ್ರೋಹಿಗಳಾದದರಿಂದ ಬಾಬೆಲಿಗೆ ಸೆರೆಯವರಾಗಿ ಹೋಗಬೇಕಾಯಿತು.
וְהַיּֽוֹשְׁבִים הָרִאשֹׁנִים אֲשֶׁר בַּאֲחֻזָּתָם בְּעָרֵיהֶם יִשְׂרָאֵל הַכֹּהֲנִים הַלְוִיִּם וְהַנְּתִינִֽים׃ | 2 |
ತಮ್ಮ ಸ್ವಾಸ್ತ್ಯಗಳಲ್ಲಿ, ತಮ್ಮ ಪಟ್ಟಣಗಳಲ್ಲಿ ಮೊದಲು ವಾಸವಾಗಿದ್ದವರಲ್ಲಿ ಕೆಲವರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ ಮತ್ತು ದೇವಾಲಯದ ಸೇವಕರೂ ಆಗಿದ್ದರು.
וּבִירוּשָׁלַ͏ִם יָשְׁבוּ מִן־בְּנֵי יְהוּדָה וּמִן־בְּנֵי בִנְיָמִן וּמִן־בְּנֵי אֶפְרַיִם וּמְנַשֶּֽׁה׃ | 3 |
ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ, ಬೆನ್ಯಾಮೀನನ ಮಕ್ಕಳೂ, ಎಫ್ರಾಯೀಮ್, ಮನಸ್ಸೆ ಎಂಬವರ ಮಕ್ಕಳು ಯಾರೆಂದರೆ:
עוּתַי בֶּן־עַמִּיהוּד בֶּן־עׇמְרִי בֶּן־אִמְרִי בֶן־(בנימן)־[בָּנִי מִן־]בְּנֵי־פֶרֶץ בֶּן־יְהוּדָֽה׃ | 4 |
ಯೆಹೂದನ ಮಗನಾದ ಪೆರೆಚನ ಮಕ್ಕಳಲ್ಲಿ ಒಬ್ಬನಾದ ಬಾನೀಯ ಮಗನಾದ ಇಮ್ರಿಯು, ಇವನ ಮಗನಾದ ಒಮ್ರಿ, ಇವನ ಮಗನು ಅಮ್ಮೀಹೂದನು, ಇವನ ಮಗನು ಉತೈ.
וּמִן־הַשִּׁילוֹנִי עֲשָׂיָה הַבְּכוֹר וּבָנָֽיו׃ | 5 |
ಶೇಲಾಹನರಲ್ಲಿ ಚೊಚ್ಚಲಮಗನಾದ ಅಸಾಯನು, ಅವನ ಪುತ್ರರು.
וּמִן־בְּנֵי־זֶרַח יְעוּאֵל וַאֲחֵיהֶם שֵׁשׁ־מֵאוֹת וְתִשְׁעִֽים׃ | 6 |
ಜೆರಹನ ಪುತ್ರರಲ್ಲಿ ಯೆಯೂವೇಲನೂ, ಅವನ ಸಹೋದರರೂ 690 ಮಂದಿ.
וּמִן־בְּנֵי בִּנְיָמִן סַלּוּא בֶּן־מְשֻׁלָּם בֶּן־הוֹדַוְיָה בֶּן־הַסְּנֻאָֽה׃ | 7 |
ಬೆನ್ಯಾಮೀನ್ಯರಲ್ಲಿ ಹಸ್ಸೆನುವಾಹನ ಮಗನು ಹೋದವ್ಯನ ಮಗನು ಮೆಷುಲ್ಲಾಮನ ಮಗ ಸಲ್ಲು,
וְיִבְנְיָה בֶּן־יְרֹחָם וְאֵלָה בֶן־עֻזִּי בֶּן־מִכְרִי וּמְשֻׁלָּם בֶּן־שְׁפַטְיָה בֶּן־רְעוּאֵל בֶּן־יִבְנִיָּֽה׃ | 8 |
ಯೆರೋಹಾಮನ ಮಗ ಇಬ್ನೇಯಾಹನೂ; ಮಿಕ್ರಿಯ ಮಗ ಉಜ್ಜೀಯ ಮಗ ಏಲಾನೂ; ಇಬ್ನಿಯನ ಮಗ ರೆಯೂವೇಲನ ಮಗ, ಶೆಫಟ್ಯನ ಮಗ ಮೆಷುಲ್ಲಾಮನೂ,
וַֽאֲחֵיהֶם לְתֹלְדוֹתָם תְּשַׁע מֵאוֹת וַחֲמִשִּׁים וְשִׁשָּׁה כׇּל־אֵלֶּה אֲנָשִׁים רָאשֵׁי אָבוֹת לְבֵית אֲבֹתֵיהֶֽם׃ | 9 |
ಅವರ ಸಹೋದರರೂ ತಮ್ಮ ವಂಶಗಳ ಪ್ರಕಾರ 956 ಮಂದಿ. ಇವರೆಲ್ಲರು ತಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದರು.
וּמִן־הַֽכֹּהֲנִים יְדַעְיָה וִיהוֹיָרִיב וְיָכִֽין׃ | 10 |
ಯಾಜಕರಲ್ಲಿ ಯಾರೆಂದರೆ ಯೆದಾಯನೂ, ಯೆಹೋಯಾರೀಬನೂ, ಯಾಕೀನನೂ;
וַעֲזַרְיָה בֶן־חִלְקִיָּה בֶּן־מְשֻׁלָּם בֶּן־צָדוֹק בֶּן־מְרָיוֹת בֶּן־אֲחִיטוּב נְגִיד בֵּית הָאֱלֹהִֽים׃ | 11 |
ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗ ಮೆರಾಯೋತನ ಮಗ ಚಾದೋಕನ ಮಗ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;
וַעֲדָיָה בֶּן־יְרֹחָם בֶּן־פַּשְׁחוּר בֶּן־מַלְכִּיָּה וּמַעְשַׂי בֶּן־עֲדִיאֵל בֶּן־יַחְזֵרָה בֶּן־מְשֻׁלָּם בֶּן־מְשִׁלֵּמִית בֶּן־אִמֵּֽר׃ | 12 |
ಮಲ್ಕೀಯನ ಮಗ ಪಷ್ಹೂರನ ಮಗ ಯೆರೋಹಾಮನ ಮಗ ಅದಾಯನು. ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ ಮೆಷುಲ್ಲಾಮನ ಮಗ ಯಹ್ಜೇರನ ಮಗ ಅದೀಯೇಲನ ಮಗ ಮಾಸೈಯನೂ;
וַאֲחֵיהֶם רָאשִׁים לְבֵית אֲבוֹתָם אֶלֶף וּשְׁבַע מֵאוֹת וְשִׁשִּׁים גִּבּוֹרֵי חֵיל מְלֶאכֶת עֲבוֹדַת בֵּית־הָאֱלֹהִֽים׃ | 13 |
ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು.
וּמִֽן־הַלְוִיִּם שְׁמַֽעְיָה בֶן־חַשּׁוּב בֶּן־עַזְרִיקָם בֶּן־חֲשַׁבְיָה מִן־בְּנֵי מְרָרִֽי׃ | 14 |
ಲೇವಿಯರಲ್ಲಿ ಯಾರೆಂದರೆ: ಮೆರಾರೀಯ ಪುತ್ರರಲ್ಲಿ ಒಬ್ಬನಾದ ಹಷ್ಷೂಬನ ಮಗ ಅಜ್ರೀಕಾಮನ ಮಗ ಹಷಬ್ಯನ ಮಗ ಶೆಮಾಯನೂ;
וּבַקְבַּקַּר חֶרֶשׁ וְגָלָל וּמַתַּנְיָה בֶּן־מִיכָא בֶּן־זִכְרִי בֶּן־אָסָֽף׃ | 15 |
ಬಕ್ಬಕ್ಕರನೂ, ಹೆರೆಷನೂ, ಗಲಾಲನೂ, ಆಸಾಫನ ಮಗ, ಜಿಕ್ರಿಯ ಮಗ, ಮೀಕನ ಮಗ ಮತ್ತನ್ಯನೂ;
וְעֹֽבַדְיָה בֶּֽן־שְׁמַעְיָה בֶּן־גָּלָל בֶּן־יְדוּתוּן וּבֶרֶכְיָה בֶן־אָסָא בֶּן־אֶלְקָנָה הַיּוֹשֵׁב בְּחַצְרֵי נְטוֹפָתִֽי׃ | 16 |
ಯೆದುತೂನನ ಮಗ, ಗಲಾಲನ ಮಗ, ಶೆಮಾಯನ ಮಗ, ಓಬದ್ಯನೂ; ಎಲ್ಕಾನನ ಮಗ ಆಸನ ಮಗ ಬೆರೆಕ್ಯನೂ ಇವರು ನೆಟೋಫದವರ ಊರುಗಳಲ್ಲಿ ವಾಸವಾಗಿದ್ದರು.
וְהַשֹּֽׁעֲרִים שַׁלּוּם וְעַקּוּב וְטַלְמֹן וַאֲחִימָן וַאֲחִיהֶם שַׁלּוּם הָרֹֽאשׁ׃ | 17 |
ದ್ವಾರಪಾಲಕರು ಯಾರೆಂದರೆ: ಶಲ್ಲೂಮನೂ, ಅಕ್ಕೂಬನೂ, ಟಲ್ಮೋನನೂ, ಅಹೀಮನ್‌ನೂ, ಅವರ ಸಹೋದರರೂ. ಅವರಲ್ಲಿ ಶಲ್ಲೂಮನು ಮುಖ್ಯಸ್ಥನಾಗಿದ್ದನು.
וְֽעַד־הֵנָּה בְּשַׁעַר הַמֶּלֶךְ מִזְרָחָה הֵמָּה הַשֹּׁעֲרִים לְמַחֲנוֹת בְּנֵי לֵוִֽי׃ | 18 |
ಇವರು ಈವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲಲ್ಲಿ ಕಾದುಕೊಂಡಿದ್ದರು. ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು.
וְשַׁלּוּם בֶּן־קוֹרֵא בֶּן־אֶבְיָסָף בֶּן־קֹרַח וְֽאֶחָיו לְבֵית־אָבִיו הַקׇּרְחִים עַל מְלֶאכֶת הָעֲבוֹדָה שֹׁמְרֵי הַסִּפִּים לָאֹהֶל וַאֲבֹֽתֵיהֶם עַל־מַחֲנֵה יְהֹוָה שֹׁמְרֵי הַמָּבֽוֹא׃ | 19 |
ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮೊಮ್ಮಗನೂ ಕೋರೇಯನ ಮರಿಮಗನಾದ ಶಲ್ಲೂಮನೂ, ಅವನ ತಂದೆಯ ಮನೆಯವರಾಗಿರುವ ತನ್ನ ಸಹೋದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲಿದ್ದು, ದೇವದರ್ಶನ ಗುಡಾರದ ಬಾಗಿಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಯೆಹೋವ ದೇವರ ಗುಡಾರದ ದ್ವಾರಗಳ ಕಾವಲಿನವರಾಗಿದ್ದರು.
וּפִֽינְחָס בֶּן־אֶלְעָזָר נָגִיד הָיָה עֲלֵיהֶם לְפָנִים יְהֹוָה ׀ עִמּֽוֹ׃ | 20 |
ಎಲಿಯಾಜರನ ಮಗನಾದ ಫೀನೆಹಾಸನು ಮುಂಚೆ ಅವರ ಮೇಲೆ ಅಧಿಕಾರಿಯಾಗಿದ್ದನು. ಯೆಹೋವ ದೇವರು ಅವರ ಸಂಗಡ ಇದ್ದರು.
זְכַרְיָה בֶּן מְשֶֽׁלֶמְיָה שֹׁעֵר פֶּתַח לְאֹהֶל מוֹעֵֽד׃ | 21 |
ಮೆಷೆಲೆಮ್ಯನ ಮಗನಾದ ಜೆಕರ್ಯನು ದೇವದರ್ಶನ ಗುಡಾರದ ದ್ವಾರಪಾಲಕನಾಗಿದ್ದನು.
כֻּלָּם הַבְּרוּרִים לְשֹׁעֲרִים בַּסִּפִּים מָאתַיִם וּשְׁנֵים עָשָׂר הֵמָּה בְחַצְרֵיהֶם הִתְיַחְשָׂם הֵמָּה יִסַּד דָּוִיד וּשְׁמוּאֵל הָרֹאֶה בֶּאֱמוּנָתָֽם׃ | 22 |
ಬಾಗಿಲುಗಳಲ್ಲಿ ದ್ವಾರಪಾಲಕರಾಗಿರಲು ಆಯ್ಕೆಯಾದ ಇವರೆಲ್ಲರು 212 ಮಂದಿಯಾಗಿದ್ದರು. ಇವರು ಹೆಸರುಗಳು ಅವರವರ ಗ್ರಾಮಗಳಲ್ಲಿ ಅವರ ವಂಶಾವಳಿಯ ಪ್ರಕಾರ ಲಿಖಿತವಾಗಿದ್ದವು. ಇವರು ನಂಬಿಗಸ್ತರಾದ್ದರಿಂದ ದಾವೀದನೂ, ದರ್ಶಿಯಾದ ಸಮುಯೇಲನೂ ಇವರನ್ನು ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಿದರು.
וְהֵם וּבְנֵיהֶם עַל־הַשְּׁעָרִים לְבֵית־יְהֹוָה לְבֵית הָאֹהֶל לְמִשְׁמָרֽוֹת׃ | 23 |
ಹೀಗೆಯೇ ಅವರಿಗೂ, ಅವರ ಮಕ್ಕಳಿಗೂ ಯೆಹೋವ ದೇವರ ಮನೆಯ ಬಾಗಿಲು ಕಾವಲಿತ್ತು. ಅದು ದೇವದರ್ಶನ ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರರಿಂದ ಕಾಯಬೇಕಾಗಿತ್ತು.
לְאַרְבַּע רוּחוֹת יִהְיוּ הַשֹּׁעֲרִים מִזְרָח יָמָּה צָפוֹנָה וָנֶֽגְבָּה׃ | 24 |
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು.
וַאֲחֵיהֶם בְּחַצְרֵיהֶם לָבוֹא לְשִׁבְעַת הַיָּמִים מֵעֵת אֶל־עֵת עִם־אֵֽלֶּה׃ | 25 |
ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು.
כִּי בֶאֱמוּנָה הֵמָּה אַרְבַּעַת גִּבֹּרֵי הַשֹּׁעֲרִים הֵם הַלְוִיִּם וְהָיוּ עַל־הַלְּשָׁכוֹת וְעַל הָאֹצְרוֹת בֵּית הָאֱלֹהִֽים׃ | 26 |
ಏಕೆಂದರೆ ದ್ವಾರಪಾಲಕರಲ್ಲಿರುವ ನಾಲ್ಕು ಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯದ ಉಗ್ರಾಣಗಳ ಮೇಲೆಯೂ ಬೊಕ್ಕಸಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು.
וּסְבִיבוֹת בֵּית־הָאֱלֹהִים יָלִינוּ כִּֽי־עֲלֵיהֶם מִשְׁמֶרֶת וְהֵם עַל־הַמַּפְתֵּחַ וְלַבֹּקֶר לַבֹּֽקֶר׃ | 27 |
ಅವರು ದೇವರ ಆಲಯದ ಸುತ್ತಲೂ ರಾತ್ರಿಯನ್ನು ಕಳೆಯುತ್ತಿದ್ದರು, ಏಕೆಂದರೆ ಅವರು ಅದನ್ನು ಕಾವಲು ಕಾಯಬೇಕಾಗಿತ್ತು. ಮತ್ತು ಪ್ರತಿದಿನ ಬೆಳಿಗ್ಗೆ ಬಾಗಿಲುಗಳನ್ನು ತೆರೆಯುತ್ತಿದ್ದರು.
וּמֵהֶם עַל־כְּלֵי הָעֲבוֹדָה כִּֽי־בְמִסְפָּר יְבִיאוּם וּבְמִסְפָּר יוֹצִיאֽוּם׃ | 28 |
ಸೇವೆಯ ಸಲಕರಣೆಗಳನ್ನು ಒಳಗೆ ಲೆಕ್ಕದ ಪ್ರಕಾರ ತರುವುದಕ್ಕೂ, ಹೊರಗೆ ಲೆಕ್ಕದ ಪ್ರಕಾರ ತರುವುದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು.
וּמֵהֶם מְמֻנִּים עַל־הַכֵּלִים וְעַל כׇּל־כְּלֵי הַקֹּדֶשׁ וְעַל־הַסֹּלֶת וְהַיַּיִן וְהַשֶּׁמֶן וְהַלְּבוֹנָה וְהַבְּשָׂמִֽים׃ | 29 |
ಅವರಲ್ಲಿ ಕೆಲವರು ಸಲಕರಣೆಗಳನ್ನೂ, ಪರಿಶುದ್ಧ ಸ್ಥಾನದಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ, ನಯವಾದ ಹಿಟ್ಟನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ, ಸಾಂಬ್ರಾಣಿಯನ್ನೂ, ಸುಗಂಧಗಳನ್ನೂ ಕಾಯಲು ನೇಮಕರಾಗಿದ್ದರು.
וּמִן־בְּנֵי הַכֹּהֲנִים רֹקְחֵי הַמִּרְקַחַת לַבְּשָׂמִֽים׃ | 30 |
ಯಾಜಕರ ಪುತ್ರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು.
וּמַתִּתְיָה מִן־הַלְוִיִּם הוּא הַבְּכוֹר לְשַׁלֻּם הַקׇּרְחִי בֶּאֱמוּנָה עַל מַעֲשֵׂה הַחֲבִתִּֽים׃ | 31 |
ಕೋರಹಿಯನಾದ ಶಲ್ಲೂಮನ ಚೊಚ್ಚಲಮಗನಾದ ಮತ್ತಿತ್ಯನು ಲೇವಿಯರಲ್ಲಿ ಒಬ್ಬನಾಗಿದ್ದು, ತಟ್ಟೆಗಳ ಮೇಲೆ ಮಾಡುವ ಭಕ್ಷ್ಯಗಳ ಕೆಲಸದ ಮೇಲ್ವಿಚಾರಕನಾಗಿದ್ದನು.
וּמִן־בְּנֵי הַקְּהָתִי מִן־אֲחֵיהֶם עַל־לֶחֶם הַֽמַּעֲרָכֶת לְהָכִין שַׁבַּת שַׁבָּֽת׃ | 32 |
ಕೊಹಾತ್ಯರ ಪುತ್ರರಾದ ಅವರ ಸಹೋದರರಲ್ಲಿ ಇನ್ನೂ ಕೆಲವರು ಸಮ್ಮುಖದ ರೊಟ್ಟಿಯನ್ನು ಪ್ರತಿ ಸಬ್ಬತ್ ದಿನದಲ್ಲಿ ಸಿದ್ಧಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.
וְאֵלֶּה הַמְשֹׁרְרִים רָאשֵׁי אָבוֹת לַלְוִיִּם בַּלְּשָׁכֹת (פטירים) [פְּטוּרִים] כִּֽי־יוֹמָם וָלַיְלָה עֲלֵיהֶם בַּמְּלָאכָֽה׃ | 33 |
ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.
אֵלֶּה רָאשֵׁי הָאָבוֹת לַלְוִיִּם לְתֹלְדוֹתָם רָאשִׁים אֵלֶּה יָשְׁבוּ בִירוּשָׁלָֽ͏ִם׃ | 34 |
ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿನಲ್ಲಿ ವಾಸವಾಗಿದ್ದರು.
וּבְגִבְעוֹן יָשְׁבוּ אֲבִי־גִבְעוֹן (יעואל) [יְעִיאֵל] וְשֵׁם אִשְׁתּוֹ מַעֲכָֽה׃ | 35 |
ಇದಲ್ಲದೆ ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.
וּבְנוֹ הַבְּכוֹר עַבְדּוֹן וְצוּר וְקִישׁ וּבַעַל וְנֵר וְנָדָֽב׃ | 36 |
ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು.
וּגְדוֹר וְאַחְיוֹ וּזְכַרְיָה וּמִקְלֽוֹת׃ | 37 |
ಗೆದೋರನು, ಅಹಿಯೋನು, ಜೆಕರೀಯನು, ಮಿಕ್ಲೋತನು.
וּמִקְלוֹת הוֹלִיד אֶת־שִׁמְאָם וְאַף־הֵם נֶגֶד אֲחֵיהֶם יָשְׁבוּ בִירוּשָׁלַ͏ִם עִם־אֲחֵיהֶֽם׃ | 38 |
ಮಿಕ್ಲೋತನು ಶಿಮಾಮನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.
וְנֵר הוֹלִיד אֶת־קִישׁ וְקִישׁ הוֹלִיד אֶת־שָׁאוּל וְשָׁאוּל הוֹלִיד אֶת־יְהֽוֹנָתָן וְאֶת־מַלְכִּישׁוּעַ וְאֶת־אֲבִינָדָב וְאֶת־אֶשְׁבָּֽעַל׃ | 39 |
ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.
וּבֶן־יְהוֹנָתָן מְרִיב בָּעַל וּמְרִי־בַעַל הוֹלִיד אֶת־מִיכָֽה׃ | 40 |
ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.
וּבְנֵי מִיכָה פִּיתֹן וָמֶלֶךְ וְתַחְרֵֽעַ׃ | 41 |
ಮೀಕನ ಪುತ್ರರು: ಪಿತೋನನು, ಮೇಲಕನು, ತಹ್ರೀಯನು ಮತ್ತು ಆಹಾಜನು.
וְאָחָז הוֹלִיד אֶת־יַעְרָה וְיַעְרָה הוֹלִיד אֶת־עָלֶמֶת וְאֶת־עַזְמָוֶת וְאֶת־זִמְרִי וְזִמְרִי הוֹלִיד אֶת־מוֹצָֽא׃ | 42 |
ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು; ಜಿಮ್ರಿಯು ಮೋಚನನ್ನು ಪಡೆದನು;
וּמוֹצָא הוֹלִיד אֶת־בִּנְעָא וּרְפָיָה בְנוֹ אֶלְעָשָׂה בְנוֹ אָצֵל בְּנֽוֹ׃ | 43 |
ಮೋಚನು ಬಿನ್ನನನ್ನು ಪಡೆದನು; ಅವನ ಮಗನು ರೆಫಾಯನು; ಅವನ ಮಗನು ಎಲ್ಲಾಸನು; ಅವನ ಮಗನು ಆಚೇಲನು.
וּלְאָצֵל שִׁשָּׁה בָנִים וְאֵלֶּה שְׁמוֹתָם עַזְרִיקָם ׀ בֹּכְרוּ וְיִשְׁמָעֵאל וּשְׁעַרְיָה וְעֹבַדְיָה וְחָנָן אֵלֶּה בְּנֵי אָצַֽל׃ | 44 |
ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು: ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು; ಇವರೆಲ್ಲರು ಆಚೇಲನ ಪುತ್ರರು.