< תהילים 84 >
למנצח על-הגתית לבני-קרח מזמור ב מה-ידידות משכנותיך-- יהוה צבאות | 1 |
೧ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ಕೋರಹೀಯರ ಕೀರ್ತನೆ. ಸೇನಾಧೀಶ್ವರನಾದ ಯೆಹೋವನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!
נכספה וגם-כלתה נפשי-- לחצרות יהוה לבי ובשרי-- ירננו אל אל-חי | 2 |
೨ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು, ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು. ಆದರೆ ಈಗ ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ.
גם-צפור מצאה בית ודרור קן לה-- אשר-שתה אפרחיה את-מזבחותיך יהוה צבאות-- מלכי ואלהי | 3 |
೩ಆಹಾ, ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಅರಸನೇ, ನಿನ್ನ ಯಜ್ಞವೇದಿಗಳ ಸಮೀಪದಲ್ಲಿಯೇ ಗುಬ್ಬಿಗೆ ಮನೆಯೂ, ಪಾರಿವಾಳಕ್ಕೆ ಮರಿಮಾಡುವ ಗೂಡೂ ದೊರಕಿತಲ್ಲಾ!
אשרי יושבי ביתך-- עוד יהללוך סלה | 4 |
೪ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು. ಅವರು ನಿತ್ಯವೂ ನಿನ್ನನ್ನು ಕೀರ್ತಿಸುತ್ತಾ ಇರುತ್ತಾರೆ. (ಸೆಲಾ)
אשרי אדם עוז-לו בך מסלות בלבבם | 5 |
೫ನಿನ್ನಲ್ಲೇ ಬಲವನ್ನು ಹೊಂದುವ ಮನುಷ್ಯರು ಧನ್ಯರು. ಅವರು ಯಾತ್ರಿಕರಾಗಿ,
עברי בעמק הבכא-- מעין ישיתוהו גם-ברכות יעטה מורה | 6 |
೬ಕಣ್ಣೀರಿನ ತಗ್ಗನ್ನು ದಾಟುವಾಗ, ಅಲ್ಲಿ ಒರತೆಗಳನ್ನು ತೋಡಿ ನೀರಿನ ಸ್ಥಳವಾಗ ಮಾಡುತ್ತಾರೆ. ಮುಂಗಾರು ಮಳೆಯು ಅದನ್ನು ಸಮೃದ್ಧಿಗೊಳಿಸುತ್ತದೆ.
ילכו מחיל אל-חיל יראה אל-אלהים בציון | 7 |
೭ಅವರು ಹೆಚ್ಚು ಹೆಚ್ಚಾಗಿ ಬಲಹೊಂದಿ, ಚೀಯೋನ್ ಗಿರಿಯಲ್ಲಿ ದೇವರ ಸನ್ನಿಧಿಯನ್ನು ಸೇರಿ,
יהוה אלהים צבאות שמעה תפלתי האזינה אלהי יעקב סלה | 8 |
೮“ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಮೊರೆಯನ್ನು ಕೇಳು; ಯಾಕೋಬ್ಯರ ದೇವರೇ, ಕಿವಿಗೊಡು” ಅನ್ನುತ್ತಾರೆ. (ಸೆಲಾ)
מגננו ראה אלהים והבט פני משיחך | 9 |
೯ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು; ನಿನ್ನ ಅಭಿಷಿಕ್ತನ ಮುಖವನ್ನು ಕಟಾಕ್ಷಿಸು.
כי טוב-יום בחצריך מאלף בחרתי--הסתופף בבית אלהי מדור באהלי-רשע | 10 |
೧೦ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು, ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಹೊಸ್ತಿಲಲ್ಲಿ ಬಿದ್ದುಕೊಂಡಿರುವುದೇ ಲೇಸು.
כי שמש ומגן-- יהוה אלהים חן וכבוד יתן יהוה לא ימנע-טוב להלכים בתמים | 11 |
೧೧ಯೆಹೋವ ದೇವರು ಸೂರ್ಯನೂ, ಗುರಾಣಿಯೂ ಆಗಿದ್ದಾನಲ್ಲಾ. ಯೆಹೋವನು ಕೃಪೆಯನ್ನೂ, ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನೋ?
יהוה צבאות-- אשרי אדם בטח בך | 12 |
೧೨ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.