< תהילים 82 >
מזמור לאסף אלהים נצב בעדת-אל בקרב אלהים ישפט | 1 |
೧ಆಸಾಫನ ಕೀರ್ತನೆ. ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ, ದೇವರುಗಳೆಂದು ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ.
עד-מתי תשפטו-עול ופני רשעים תשאו-סלה | 2 |
೨“ನೀವು ಅನ್ಯಾಯವಾಗಿ ತೀರ್ಪುಕೊಡುವುದೂ, ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ? (ಸೆಲಾ)
שפטו-דל ויתום עני ורש הצדיקו | 3 |
೩ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ, ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ.
פלטו-דל ואביון מיד רשעים הצילו | 4 |
೪ಕುಗ್ಗಿದವರನ್ನು, ಬಡವರನ್ನು ದುಷ್ಟರ ಕೈಯಿಂದ ಬಿಡಿಸಿ ರಕ್ಷಿಸಿರಿ.”
לא ידעו ולא יבינו-- בחשכה יתהלכו ימוטו כל-מוסדי ארץ | 5 |
೫ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ.
אני-אמרתי אלהים אתם ובני עליון כלכם | 6 |
೬“ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು,
אכן כאדם תמותון וכאחד השרים תפלו | 7 |
೭ಆದರೂ ನರರಂತೆ ಸತ್ತೇ ಹೋಗುವಿರಿ, ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದು ಹೋಗುವಿರಿ” ಎಂದು ನಾನು ಹೇಳಿದೆನು.
קומה אלהים שפטה הארץ כי-אתה תנחל בכל-הגוים | 8 |
೮ದೇವರೇ, ಏಳು; ಭೂಲೋಕದಲ್ಲಿ ನ್ಯಾಯವನ್ನು ಸ್ಥಾಪಿಸು. ನೀನು ಎಲ್ಲಾ ಜನಾಂಗಗಳ ಒಡೆಯನು ಅಲ್ಲವೋ?