< תהילים 66 >
למנצח שיר מזמור הריעו לאלהים כל-הארץ | 1 |
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಒಂದು ಗೀತೆ. ಒಂದು ಕೀರ್ತನೆ. ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹಧ್ವನಿ ಮಾಡಿರಿ.
זמרו כבוד-שמו שימו כבוד תהלתו | 2 |
ದೇವರ ಹೆಸರಿನ ಮಹಿಮೆಯನ್ನು ಕೊಂಡಾಡಿರಿ. ದೇವರ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
אמרו לאלהים מה-נורא מעשיך ברב עזך יכחשו לך איביך | 3 |
ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.
כל-הארץ ישתחוו לך--ויזמרו-לך יזמרו שמך סלה | 4 |
ಭೂಮಿಯೆಲ್ಲಾ ನಿಮ್ಮನ್ನು ಆರಾಧಿಸುವುದು. ನಿಮ್ಮನ್ನು ಕೀರ್ತಿಸುತ್ತಾ ಲೋಕವು ನಿಮ್ಮ ನಾಮವನ್ನು ಕೀರ್ತಿಸುತ್ತಿರುವುದು,” ಎಂದು ಹೇಳಿರಿ.
לכו וראו מפעלות אלהים נורא עלילה על-בני אדם | 5 |
ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ. ಮಾನವರ ಪರವಾಗಿ ಮಾಡಿರುವ ದೇವರ ಕಾರ್ಯಗಳು ಅತಿಶಯವಾಗಿವೆ.
הפך ים ליבשה--בנהר יעברו ברגל שם נשמחה-בו | 6 |
ದೇವರು ಸಮುದ್ರವನ್ನು ಒಣ ಭೂಮಿಯನ್ನಾಗಿ ಮಾಡಿದರು. ಜನರು ಕಾಲಿನಿಂದ ನದಿಯನ್ನು ದಾಟಿದರು. ಬನ್ನಿರಿ, ದೇವರಲ್ಲಿ ಆನಂದಿಸೋಣ.
משל בגבורתו עולם-- עיניו בגוים תצפינה הסוררים אל-ירימו (ירומו) למו סלה | 7 |
ದೇವರು ತಮ್ಮ ಶಕ್ತಿಯಿಂದ ಎಂದೆಂದಿಗೂ ಆಳುವವರಾಗಿದ್ದಾರೆ. ದೇವರ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ದೇವರಿಗೆ ವಿರೋಧವಾಗಿ ದಂಗೆಕೋರರು ಏಳದಿರಲಿ.
ברכו עמים אלהינו והשמיעו קול תהלתו | 8 |
ಸಮಸ್ತ ಜನರೇ, ನೀವು ನಮ್ಮ ದೇವರನ್ನು ಸ್ತುತಿಸಿರಿ. ದೇವರನ್ನು ಸ್ತುತಿಸುವ ಶಬ್ದವು ಕೇಳಿಸಲಿ.
השם נפשנו בחיים ולא-נתן למוט רגלנו | 9 |
ದೇವರು ನಮ್ಮ ಜೀವನವನ್ನು ಕಾಪಾಡಿ, ನಮ್ಮ ಕಾಲು ಎಡವದಂತೆ ಮಾಡಿದ್ದಾರೆ.
כי-בחנתנו אלהים צרפתנו כצרף-כסף | 10 |
ದೇವರೇ, ನೀವು ನಮ್ಮನ್ನು ಪರಿಶೋಧಿಸಿದ್ದೀರಿ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶುದ್ಧೀಕರಿಸಿದ್ದೀರಿ.
הבאתנו במצודה שמת מועקה במתנינו | 11 |
ನೀವು ಬಲೆಯೊಳಗೆ ನಮ್ಮನ್ನು ಸಿಕ್ಕಿಸಿದ್ದೀರಿ. ನಮ್ಮ ಬೆನ್ನಿನ ಮೇಲೆ ಭಾರವನ್ನು ಹೊರಿಸಿದ್ದೀರಿ.
הרכבת אנוש לראשנו באנו-באש ובמים ותוציאנו לרויה | 12 |
ಮನುಷ್ಯರು ನಮ್ಮ ತಲೆ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀರಿ. ನಾವು ಬೆಂಕಿಯನ್ನೂ ನೀರನ್ನೂ ದಾಟುವಂತೆ ಮಾಡಿದ್ದೀರಿ. ಆದರೆ ನೀವು ನಮ್ಮನ್ನು ಸಮೃದ್ಧಿಯ ಸ್ಥಳದೊಳಗೆ ಬರಮಾಡಿದ್ದೀರಿ.
אבוא ביתך בעולות אשלם לך נדרי | 13 |
ನಾನು ದಹನಬಲಿಯೊಂದಿಗೆ ನಿಮ್ಮ ಆಲಯಕ್ಕೆ ಬರುವೆನು.
אשר-פצו שפתי ודבר-פי בצר-לי | 14 |
ನನ್ನ ಇಕ್ಕಟ್ಟಿನಲ್ಲಿ ತುಟಿ ಬಿಚ್ಚಿ ನನ್ನ ಬಾಯಿಂದ ನುಡಿದ ನನ್ನ ಹರಕೆಗಳನ್ನು ನಾನು ನಿಮಗೆ ಸಲ್ಲಿಸುವೆನು.
עלות מיחים אעלה-לך עם-קטרת אילים אעשה בקר עם-עתודים סלה | 15 |
ಕೊಬ್ಬಿದ ದಹನಬಲಿಗಳನ್ನು ಕಾಣಿಕೆಯಾಗಿ ಟಗರುಗಳನ್ನು; ಹೋತ ಹೋರಿಗಳ ಯಜ್ಞವನ್ನು ಅರ್ಪಿಸುವೆನು.
לכו-שמעו ואספרה כל-יראי אלהים אשר עשה לנפשי | 16 |
ಸಮಸ್ತ ದೇವಭಕ್ತರೇ, ಬಂದು ಕೇಳಿರಿ. ದೇವರು ನನಗೆ ಮಾಡಿದ್ದನ್ನು ನಾನು ನಿಮಗೆ ತಿಳಿಸುವೆನು.
אליו פי-קראתי ורומם תחת לשוני | 17 |
ನನ್ನ ದೇವರಿಗೆ ಮೊರೆಯಿಟ್ಟೆನು, ನನ್ನ ನಾಲಿಗೆಯಲ್ಲಿ ದೇವರ ಸ್ತೋತ್ರವಿತ್ತು.
און אם-ראיתי בלבי-- לא ישמע אדני | 18 |
ಪಾಪವನ್ನು ನಾನು ನನ್ನ ಹೃದಯದಲ್ಲಿ ಬೆಳೆಸಿಕೊಂಡಿದ್ದರೆ, ಯೆಹೋವ ದೇವರು ನನ್ನ ಪ್ರಾರ್ಥನೆಯನ್ನು ಕೇಳುತ್ತಿರಲಿಲ್ಲ.
אכן שמע אלהים הקשיב בקול תפלתי | 19 |
ಆದರೆ ಈಗ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾರೆ.
ברוך אלהים-- אשר לא-הסיר תפלתי וחסדו מאתי | 20 |
ನನ್ನ ಪ್ರಾರ್ಥನೆಯನ್ನು ತಿರಸ್ಕರಿಸದ ದೇವರಿಗೆ ಸ್ತೋತ್ರವಾಗಲಿ. ತಮ್ಮ ಪ್ರೀತಿಯನ್ನು ನನ್ನಿಂದ ತೊಲಗಿಸದೆ ಇರುವೆ. ದೇವರಿಗೆ ಸ್ತೋತ್ರವಾಗಲಿ.