< תהילים 49 >
למנצח לבני-קרח מזמור ב שמעו-זאת כל-העמים האזינו כל-ישבי חלד | 1 |
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೋರಹೀಯನ ಪುತ್ರರು ಸಂಯೋಜಿಸಿರುವ ಒಂದು ಕೀರ್ತನೆ. ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳೇ,
גם-בני אדם גם-בני-איש-- יחד עשיר ואביון | 2 |
ಸಾಮಾನ್ಯರೇ, ಉನ್ನತರೇ, ಐಶ್ವರ್ಯವಂತರೇ, ಬಡವರೇ ಎಲ್ಲರೂ ಕಿವಿಗೊಡಿರಿ.
פי ידבר חכמות והגות לבי תבונות | 3 |
ನನ್ನ ಬಾಯಿ ಜ್ಞಾನವನ್ನು ನುಡಿಯುವುದು, ನನ್ನ ಹೃದಯದ ಧ್ಯಾನವು ವಿವೇಕವಾಗಿರುವುದು.
אטה למשל אזני אפתח בכנור חידתי | 4 |
ಸಾಮ್ಯಕ್ಕೆ ನನ್ನ ಕಿವಿಗೊಟ್ಟು ಒಗಟನ್ನು ಕಿನ್ನರಿಯಿಂದ ಬಿಚ್ಚುವೆನು.
למה אירא בימי רע-- עון עקבי יסובני | 5 |
ಕೇಡಿನ ದಿವಸಗಳಲ್ಲಿ ನನಗೆ ಒಳಸಂಚು ಮಾಡುವವರ ಅಕ್ರಮವು ನನ್ನನ್ನು ಸುತ್ತಿಕೊಳ್ಳುವಾಗ ನಾನು ಏಕೆ ಭಯಪಡಬೇಕು?
הבטחים על-חילם וברב עשרם יתהללו | 6 |
ಅವರು ತಮ್ಮ ಸಂಪತ್ತಿನಲ್ಲಿ ಭರವಸೆಯಿಟ್ಟು, ತಮ್ಮ ಅಧಿಕ ಐಶ್ವರ್ಯಗಳಲ್ಲಿ ಜಂಭಪಡುವರು.
אח--לא פדה יפדה איש לא-יתן לאלהים כפרו | 7 |
ಯಾರೂ ಇನ್ನೊಬ್ಬರ ಜೀವವನ್ನು ವಿಮೋಚಿಸಲಾರರು; ಅಥವಾ ಇತರರಿಗಾಗಿ ಯಾರೂ ದೇವರಿಗೆ ಈಡು ಕೊಡಲಾರರು.
ויקר פדיון נפשם וחדל לעולם | 8 |
ಆತ್ಮದ ವಿಮೋಚನೆಯು ಬಹು ಬೆಲೆಯುಳ್ಳದ್ದು, ಅದಕ್ಕೆ ಸಾಕಷ್ಟು ಬೆಲೆಯನ್ನು ಕಟ್ಟಲು ಯಾರಿಗೂ ಸಾಧ್ಯವಿಲ್ಲ.
ויחי-עוד לנצח לא יראה השחת | 9 |
ಮನುಷ್ಯರು ಮರಣ ನಾಶವನ್ನು ಕಾಣದೆ, ಶಾಶ್ವತವಾಗಿ ಬದುಕುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ.
כי יראה חכמים ימותו-- יחד כסיל ובער יאבדו ועזבו לאחרים חילם | 10 |
ಏಕೆಂದರೆ, ಜ್ಞಾನಿಗಳು ಸಾಯುವುದನ್ನು ಕಾಣುತ್ತೇವೆ. ಹಾಗೆಯೇ ಮೂರ್ಖರೂ ಜ್ಞಾನಹೀನರೂ ಸಹ ನಾಶವಾಗುತ್ತಾರೆ. ಅವರ ಆಸ್ತಿಯನ್ನು ಇತರರು ಪಡೆಯುತ್ತಾರೆ.
קרבם בתימו לעולם-- משכנתם לדור ודר קראו בשמותם עלי אדמות | 11 |
ಜಮೀನುಗಳಿಗೆ ತಮ್ಮ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೂ ಸಮಾಧಿಯೇ ಅವರಿಗೆ ಶಾಶ್ವತಮಂದಿರವು. ಅದೇ ಅವರ ತಲತಲಾಂತರಕ್ಕೂ ನಿವಾಸಸ್ಥಾನ.
ואדם ביקר בל-ילין נמשל כבהמות נדמו | 12 |
ಮನುಷ್ಯನು ಎಷ್ಟು ಆಸ್ತಿ ಗೌರವ ಸಂಪಾದಿಸಿದ್ದರೂ, ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.
זה דרכם כסל למו ואחריהם בפיהם ירצו סלה | 13 |
ತಮ್ಮಲ್ಲಿಯೇ ಭರವಸೆ ಇಟ್ಟುಕೊಳ್ಳುವವರಿಗೂ ಇದೇ ಗತಿ. ಅಂಥವರ ಮಾತುಗಳನ್ನು ಒಪ್ಪಿ ಅನುಸರಿಸುವವರ ಗತಿಯೂ ಇದೆ.
כצאן לשאול שתו-- מות ירעם וירדו בם ישרים לבקר--וצירם (וצורם) לבלות שאול מזבל לו (Sheol ) | 14 |
ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ. ಮರಣವೇ ಅವರ ಕುರುಬ; ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು ಅವರ ರೂಪ ಕ್ಷಯವಾಗುವುದು. ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು. (Sheol )
אך-אלהים--יפדה נפשי מיד-שאול כי יקחני סלה (Sheol ) | 15 |
ಆದರೆ ದೇವರು ನನ್ನ ಪ್ರಾಣವನ್ನು ಮರಣದಿಂದ ವಿಮೋಚನೆ ಮಾಡುವರು. ದೇವರು ನನ್ನನ್ನು ತಮಗಾಗಿ ಅಂಗೀಕರಿಸುವರು. (Sheol )
אל-תירא כי-יעשר איש כי-ירבה כבוד ביתו | 16 |
ಒಬ್ಬನು ಐಶ್ವರ್ಯವಂತನಾದರೆ ಮತ್ತು ಅವನ ಮನೆಯ ಘನತೆ ದೊಡ್ಡದಾದರೆ ಕಳವಳ ಪಡಬೇಡ.
כי לא במותו יקח הכל לא-ירד אחריו כבודו | 17 |
ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.
כי-נפשו בחייו יברך ויודך כי-תיטיב לך | 18 |
ಸಿರಿ ಬಂದಾಗ ಜನರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, ಜನಸ್ತುತಿಯಿಂದಲೂ ಕೂಡಿದವನಾದರೂ
תבוא עד-דור אבותיו עד-נצח לא יראו-אור | 19 |
ಅವನು ತನ್ನ ಪೂರ್ವಿಕರ ಬಳಿಗೆ ಹೋಗುವನು; ಅವರು ಸದಾಕಾಲಕ್ಕೂ ಜೀವ ಬೆಳಕನ್ನು ಕಾಣುವುದಿಲ್ಲ.
אדם ביקר ולא יבין נמשל כבהמות נדמו | 20 |
ಮನುಷ್ಯನು ಎಷ್ಟು ಘನತೆಯಲ್ಲಿದ್ದು ವಿವೇಕವಿಲ್ಲದವರಾದರೆ ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.